Saturday, September 29, 2012

Daily Crimes Report Dated:28/09/2012

ದರೋಡೆ ಪ್ರಕರಣ
ಆಲ್ದೂರು ಪೊಲೀಸ್ ಠಾಣೆ ಮೊ.ಸಂ.116/2012 ಕಲಂ 395 ಐಪಿಸಿ – ದಿನಾಂಕ 27/09/2012 ರಂದು 2345 ಗಂಟೆಯಲ್ಲಿ ಕಣತಿ ಬಳಿ ಪಿರ್ಯಾದುದಾರರಾದ ಹರೀಶ ಇವರು ಕೆ ಎ-18.ಎ-7226 ವಾಹನದಲ್ಲಿ ಚಾಲಕನಾಗಿ  ಶೃಂಗೇರಿಗೆ ಹೋಗಿ ತರಕಾರಿ ಲೋಡ್‌ ಮಾಡಿಕೊಂಡು ವಾಪಸ್ಸ್ ಬರುತ್ತಿರುವಾಗ ಆರೋಪಿತರುಗಳಾದ ಪ್ರವೀಣ್‌ಖಾಂಡ್ಯ ಹಾಗೂ ಇತರೆ 7 ಜನರು ಸೇರಿ  ಅಡ್ಡಹಾಕಿ  ನನ್ನ ಬಳಿ ಇದ್ದ  21.700 ರೂ ತರಕಾರಿ ವ್ಯಾಪಾರದ ಹಣ ಮತ್ತು ಮೊಬೈಲ್‌ನ್ನು ಕಿತ್ತುಕೊಂಡು ಏಕಾಏಕಿ ಎಲ್ಲರು ಸೇರಿ ನನಗೆ ದೊಣ್ಣೆಯಿಂದ  ಹೊಡೆದಿರುತ್ತಾರೆ.

Friday, September 28, 2012

Daily Crimes Report Dated:27/09/2012

ಮನುಷ್ಯ ಕಾಣೆ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.309/2012 ಕಲಂ ಮನುಷ್ಯ ಕಾಣೆ – ದಿನಾಂಕ 26/09/2012 ರಂದು 2030 ಗಂಟೆಯಲ್ಲಿ ಪಿರ್ಯಾದುದಾರರಾದ ಮಂಜುನಾಥ ಇವರ ಮಗಳು ಸೌಮ್ಯ. 18 ವರ್ಷ. ಈಕೆಯು ಎಮ್ಮೆಖಾನ್‌ ಗಾಳಿಕೆರೆ ಗ್ರಾಮದಲ್ಲಿ ಶೌಚಾಲಯಕ್ಕೆ ಹೋಗುತ್ತೇನೆಂದು ಹೇಳೆ ಹೋದವಳು ನಾಪತ್ತೆಯಾಗಿರುತ್ತಾಳೆ.ಚಹರೆ ಗುರುತು 5 ಅಡಿ ಎತ್ತರ. ಕನ್ನಡ. ತುಳು ಮಾಡನಾಡುತ್ತಾಳೆ. ಎಣ್ಣೆಗೆಂಪು ಬಣ್ಣ. ಸಾದಾರಣ ಮೈಕಟ್ಟು. ಹೋಗುವಾಗ ಸಿಮೆಂಟ್ ಕಲರ್ ಚೂಡಿದಾರ್ ಹಾಗೂ ಕೆಂಪು ಬಣ್ಣದ ಟೀ ಶರ್ಟ್‌ ಧರಿಸಿರುತ್ತಾಳೆ. ಪತ್ತೆ ಮಾಡಿಕೊಡಬೇಕಾಗಿ ಕೋರಿಕೊಂಡ ಮೇರೆಗೆ ಪ್ರ.ವ.ವರದಿ ಸಲ್ಲಿಸಿದೆ.   
ಮನುಷ್ಯ ಕಾಣೆ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.310/2012ಕಲಂ ಮನುಷ್ಯ ಕಾಣೆ – ದಿನಾಂಕ 26/09/2012 ರಂದು ಬ್ಯಾಗದಹಳ್ಳಿ ಗ್ರಾಮದಿಂದ ಪಿರ್ಯಾದುದಾರರಾದ ಶ್ರೀಮತಿ ಜಾನಕಿ ಇವರ  ಗಂಡ ನಾಗರಾಜ ಬಿನ್ ರಂಗನಾಥ. 37 ವರ್ಷ. ಈತನು ಸಂತೆಗೆ ಚಿಕ್ಕಮಗಳೂರಿಗೆ ಹೋಗಿ ಬರುವುದಾಗಿ ಹೇಳಿ ಹೋದವರು  ವಾಪಸ್ ಮನೆಗೆ ಬಂದಿರುವುದಿಲ್ಲ. ನಾಗರಾಜನ ಚಹರೆ ಎತ್ತರ 5 1/2 ಅಡಿ. ಕನ್ನಡ. ಮಲಿಯಾಳಂ. ತಮಿಳು ಮಾಡನಾಡುತ್ತಾನೆ. ಎಣ್ಣೆಗೆಂಪು ಬಣ್ಣ. ಕಪ್ಪು ಪ್ಯಾಂಟ್. ನೀಲಿ ತುಂಬು ತೋಳಿನ ಶರ್ಟ್‌ ಧರಿಸಿರುತ್ತಾನೆ. ಇತ್ಯಾದಿ ಇದ್ದ ಈತನನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ ಸಲ್ಲಿಸಿದೆ.
ಮನುಷ್ಯ ಕಾಣೆ
ಮಲ್ಲಂದೂರು ಪೊಲೀಸ್ ಠಾಣೆ ಮೊ.ಸಂ.94/2012ಕಲಂ ಹುಡುಗ ಕಾಣೆ –ದಿನಾಂಕ 23/09/2012ರಂದು ಪಿರ್ಯಾದುದಾರರಾದ ಗೌರಮ್ಮ ಮೈಲಿಮನೆ ವಾಸಿ ಇವರ ಮೊಮ್ಮಗ ಸುನಿಲ್‌ 11 ವರ್ಷ ಈತನು ಮನೆಯಿಂದ ಹೊರಗೆಡೆ ಹೋದವನು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾನೆ ಪತ್ತೆಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ.
ದಲಿತರ ಮೇಲೆ ದೌರ್ಜನ್ಯ ಪ್ರಕರಣ
ಕಳಸ ಪೊಲೀಸ್ ಠಾಣೆ ಮೊ.ಸಂ.55/2012 ಕಲಂ 354 34 ಐಪಿಸಿ ಸಹಿತ 3 ಕ್ಲಾಸ್‌‌(1)(11)ಎಸ್‌‌ಸಿಎಸ್‌‌ಟಿ ಆಕ್ಟ್‌‌:- ದಿನಾಂಕ 26/09/2012 ರಂದು 2020 ಗಂಟೆಯಲ್ಲಿ ಮಾವಿನಕೆರೆ ಗ್ರಾಮದಲ್ಲಿ ಪಿರ್ಯಾದುದಾರರಾದ ಶ್ರೀಮತಿ ಶೈಲಾ ಇವರು  ಮಲ್ನಾಡ್ ಟ್ರೇಡರ್ಸ್ ಅಂಗಡಿಯಿಂದ ಮನೆಗೆ ಬರುತ್ತಿರುವಾಗ ವೆಂಕಟೇಶ ಎಂಬುವನು ಮನೆಗೆ ಬಿಡುವುದಾಗಿ ಬೈಕಿನಲ್ಲಿ ಕರೆದು ಕೊಂಡು ಹೊರಟು ಮನೆಯ ಕಡೆ ಹೋಗದೆ ಹೊರನಾಡು ಅಂಭಾತೀರ್ಥದ ರಸ್ತೆಯ ಕಾಡಿಗೆ ಕರೆದು ಕೊಂಡು ಹೋಗಿದ್ದು ಅಲ್ಲಿಗೆ ಮೇಹೇಶ,ಮತ್ತು ರಾಜೇಶ ಎಂಬುವರು ಬಂದಿದ್ದು ಮೂರು ಜನರು ಬಲಾತ್ಕಾರ ಮಾಡಲು ಉದ್ದೇಶ ಪೂರ್ವಕವಾಗಿ ಚೂಡಿದಾರ್ ಪ್ಯಾಂಟನ್ನು ಬಲವಂತವಾಗಿ ಎಳೆದು ತೆಗೆದಿದ್ದು ಕಿರುಚಿದಾಗ ಮೂರು ಜನರು ಅಲ್ಲಿಂದ ಪರಾರಿಯಾಗಿರುತ್ತಾರೆ. ಮನೆಗೆ ಹೋಗಿ ತನ್ನ ತಂದೆ ಮತ್ತು ತಮ್ಮರವರಿಗೆ ವಿಚಾರ ತಿಳಿಸಿ  ಠಾಣೆಗೆ ಬಂದು ಪಿರ್ಯಾದು ನೀಡಿರುತ್ತಾರೆ ಇತ್ಯಾದಿ.

Thursday, September 27, 2012

Daily Crimes Report Dated:26/09/2012

ಜೂಜಾಟ ಪ್ರಕರಣ
ಬಸವನಹಳ್ಳಿ ಪೊಲೀಸ್ ಠಾಣೆ ಮೊ.ಸಂ.82/2012 ಕಲಂ 79 80 ಕೆ.ಪಿ.ಆಕ್ಟ್‌‌ – ದಿನಾಂಕ 26/09/2012 ರಂದು 1800 ಗಂಟೆಯಲ್ಲಿ  ಡಿಸಿಐಬಿ ಪಿಐ ರವರು ¥Éưøï C¢üÃPÀëPÀgÀÄ aPÀ̪ÀÄUÀ¼ÀÆgÀÄ f¯Éè, gÀªÀgÀ ªÀiËTPÀ CzÉñÀzÀAvÉ G¥Àà½î avÁUÁgÀ zÀUÁðzÀ §½ EgÀĪÀ UɼÉAiÀÄgÀ §¼ÀUÀ JA§ PÀè¨ïUÉ ºÉÆÃV ¹§âA¢UÀ¼ÀÄ ºÁUÀÆ £Á£ÀÄ ¸ÀÄvÀÄÛªÀjzÀÄ zsÁ½ ªÀiÁr PÁ®A £ÀA. 7 gÀ°è PÀAqÀ DgÉÆæUÀ¼ÀÄ ºÀtªÀ£ÀÄß ¥ÀtªÁVlÄÖ PÁ£ÀÆ£ÀÄ ¨Á»gÀªÁV E¹àÃlÄ dÆeÁl DqÀÄwÛzÀݪÀgÀ£ÀÄß »rzÀÄPÉÆAqÀÄ PÁ£ÀÆ£ÀÄ ¨Á»gÀªÁV E¹àÃlÄ dÆeÁl DqÀÄwÛzÀÝ  31 d£ÀgÀ£ÀÄß, MAzÀÄ mÉç¯ï, 4 bÉÃgïUÀ¼À£ÀÄß, MlÄÖ 152 J¯ÉUÀ¼ÀÄ, 20450/- gÀÆ. £ÀUÀzÀÄ ºÀtªÀ£ÀÄß CªÀiÁ£ÀvÀÄÛ¥Àr¹PÉÆAqÀÄ PÉøÀÄ zÁR°¹gÀÄvÉÛ EvÁå¢ ಆರೋಪಿಗಳಾದ ಕುಮಾರ್‌ ಕೋಟೆ ಹಾಗೂ ಇತರೆ 28 ಜನರನ್ನು ದಸ್ತಗಿರಿ ಮಾಡಿರುತ್ತೆ.
ಕೊಲೆ ಪ್ರಕರಣ
ಬಣಕಲ್‌‌ ಪೊಲೀಸ್ ಠಾಣೆ ಮೊ.ಸಂ.92/2012 ಕಲಂ 302 ಐಪಿಸಿ – ದಿನಾಂಕ 26/09/2012 ರಂದು 1130 ಗಂಟೆಯಲ್ಲಿ ಈ ಕೃತ್ಯ ನಡೆದಿದ್ದು ಪಿರ್ಯಾದಿ ಬಿ.ಬಿ.ಮಂಜಯ್ಯ ಇವರು ತನ್ನ ಸಂಸಾರದೊಂದಿಗೆ ಬಡವನದಿಣ್ಣೆ ಗ್ರಾಮದಲ್ಲಿ ವಾಸವಿದ್ದು ಇವರಿಗೆ 3ಜನ ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳು ಇದ್ದು ಎಲ್ಲಾರಿಗೂ ಮದುವೆ ಮಾಡಿಸಿರುತ್ತಾರೆ.  ಚಂದ್ರೇಶನ ಹಿಂಭಾಗದಲ್ಲಿ ಪ್ರಕಾಶ ಪ್ರತ್ಯೇಕವಾಗಿ ತನ್ನ ಸಂಸಾರದೊಂದಿಗೆ ವಾಸವಿದ್ದನು. ಈಗ್ಗೆ 1 ವಾರದ ಹಿಂದೆ ನನ್ನ 2 ನೇ ಮಗ ಚಂದ್ರೇಶ ಕೊನೆಯ ಮಗ ಪ್ರಕಾಶನಿಗೆ ನಾನು ತಂದೆಯಿರುವ ಮನೆಯನ್ನು ನಾನು ಮಾಡಿಕೊಳ್ಳುತ್ತೇನೆ. ಪಕ್ಕದಲ್ಲಿ ಖಾಲಿ ಇರುವ ಕಣದ ಜಾಗದಲ್ಲಿ ಅರ್ಧ ಭಾಗ ಅಣ್ಣ ಮಾಡಿಕೊಳ್ಳಲಿ ಇನ್ನು ಅರ್ಧ ಭಾಗ ನೀನು ಮಾಡಿಕೋ ಎಂದು ಪ್ರಕಾಶನಿಗೆ ಚಂದ್ರೇಶ ಹೇಳಿದ್ದನು.ಪ್ರಕಾಶನಿಗೆ ಗ್ರಾಮ ಪಂಚಾಯ್ತಿ ವತಿಯಿಂದ ಮನೆ ಕಟ್ಟಿ ಕೊಳ್ಳಲು ಅನುದಾನ ಮಂಜೂರು ಆಗಿದ್ದು ನಾನು ಕೂಡ ಪ್ರಕಾಶನಿಗೆ 2ಗುಂಟೆ ಜಾಗ ಬರೆದು ಕೊಟ್ಟಿದ್ದೆ. ಮನೆಯ ಪಕ್ಕದಲ್ಲಿ ಸೈಟ್ ಮಾಡಿಕೊಳ್ಳುವ ವಿಚಾರದಲ್ಲಿ ಮಾತನಾಡುತ್ತಾ ನಾನು ಪ್ರಕಾಶ ಚಂದ್ರೇಶ ಇದ್ದೆವು. ಆಗ ಚಂದ್ರಶೇನು ತೆಂಗಿನ ಸಸಿ ಇರುವ ಜಾಗ ನಮಗೆ ಬೇಕು ನೀನು ಪಕ್ಕದ ಜಾಗ ಕಟ್ಟಿಕೋ ಎಂದು ಹೇಳಿದ ಅದಕ್ಕೆ ಪ್ರಕಾಶನಿಗೆ ಸಿಟ್ಟು ಬಂದು ಎಲ್ಲಾ ಜಾಗವನ್ನು ನೀವೇ ಕಟ್ಟಿಕೊಳ್ಳಿ ಮನೆಯನ್ನು ಕಟ್ಟಲು ಕಿತಾಪತಿ ಮಾಡುತ್ತೀಯಾ ಅಂತ ಚಂದ್ರೇಶನಿಗೆ ಕೈಯಿಂದ ಎರಡು ಪೆಟ್ಟು ಹೊಡೆದನು ಮತ್ತು ಮನೆಯ ಹಿಂಭಾಗದಿಂದ ಓಳಗೆ ಹೋಗಿ ಕತ್ತಿಯನ್ನು ತೆಗೆದುಕೊಂಡು ಬಂದನು. ಆಗ ಚಂದ್ರೇಶನು ಮನೆಯ ಮುಂದೆ ಓಡಿ ಹೋಗುವಾಗ ಪ್ರಕಾಶನು ಕತ್ತಿಯನ್ನು ಹಿಡಿದುಕೊಂಡು ಬೆನ್ನತ್ತಿ ಹೋಗಿ ಚಂದ್ರೇಶನ ಕುತ್ತಿಗೆ, ತಲೆಯ ಭಾಗಕ್ಕೆ ಕತ್ತಿಯಿಂದ ಕಡಿದು ಕೊಲೆ ಮಾಡಿದನು.

Wednesday, September 26, 2012

Daily Crimes Report Dated:25/09/2012

ಅಪಘಾತದಲ್ಲಿ ಸಾವು
ಯಗಟಿ ಪೊಲೀಸ್ ಠಾಣೆ ಮೊ.ಸಂ.72/2012 ಕಲಂ 279 304(ಎ) ಐಪಿಸಿ – ದಿನಾಂಕ 24/09/2012 ರಂದು 1830 ಗಂಟೆಯಲ್ಲಿ ವಕ್ಕಲಗೆರೆ ಬಳಿ ಪಿರ್ಯಾದಿ ವೀರಭದ್ರಪ್ಪ ಇವರ ತಮ್ಮನ ಮಗ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ನಮ್ಮ ಬಾಬ್ತು ಟ್ರ್ಯಾಕ್ಟರ್ ಕೆಎ-18-ಟಿಎ-4549/4550ನ್ನು ಭೂತಾಬೋವಿಯು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಘುವಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಮುಖ ಎದೆಗೆ ಮೈಕೈಗೆ ಪೆಟ್ಟಾಗಿ ರಕ್ತಗಾಯಗಳಾಗಿದ್ದು ನಮ್ಮ ಊರಿನ ಆಟೋದಲ್ಲಿ ಪಂಚನಹಳ್ಳಿ ಆಸ್ಪತ್ರೆಗೆ ಚಿಕಿತ್ಸೆಯ ಸಲುವಾಗಿ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯೆ ಮೃತಪಟ್ಟಿರುತ್ತಾನೆ.
ಅಕ್ರಮ ಮದ್ಯ ಪತ್ತೆ
ಸಿಂಗಟಗೆರೆ ಪೊಲೀಸ್ ಠಾಣೆ ಮೊ.ಸಂ.39/2012 ಕಲಂ 34 ಕೆ.ಇ,ಆಕ್ಟ್‌ – ದಿನಾಂಕ 25/09/2012 ರಂದು 0015 ಗಂಟೆಯಲ್ಲಿ ಸಿಂಗಟಗೆರೆ ಬಸ್‌‌ನಿಲ್ದಾಣದಲ್ಲಿರಮೇಶ ಎಂಬ ಆಸಾಮಿಯು ಕುಳಿತಿದ್ದು, ,ಈತನು ಅವೇಳೆಯಲ್ಲಿ ಆ ಸ್ಥಳದಲ್ಲಿದ್ದು , ಸರಿಯಾಗಿ ಕಾರಣ ನೀಡದೇ ಇದ್ದು, ಆತನ ಪಕ್ಕದಲ್ಲಿ  ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಇದ್ದು, ನೋಡಲಾಗಿ ಸದರಿ ಕವರ್ ನಲ್ಲಿ    No.1 Highway Fine Whisky  90 ಎಂ.ಎಲ್.ನ 23  ಪ್ಲಾಸ್ಟಿಕ್ ಪ್ಯಾಕೇಟ್ ಗಳು, ಒಟ್ಟು ಬೆಲೆ 424.12 ರೂ. ಗಳು ಹಾಗೂ Raja Whisky  90 ಎಂ.ಎಲ್.ನ 18  ಪ್ಲಾಸ್ಟಿಕ್ ಪ್ಯಾಕೇಟ್ ಗಳು, ಒಟ್ಟು ಬೆಲೆ 392.04 ರೂ.ಗಳು. ಮೇಲ್ಕಂಡ ಎಲ್ಲಾ ಮಧ್ಯದ ಪ್ಯಾಕೇಟ್ ಗಳ ಒಟ್ಟು ಬೆಲೆ 816.16 ರೂ.ಗಳಾಗಿರುತ್ತ
ಅನಾಮದೇಯ ಗಂಡಸಿನ ಶವ ಪತ್ತೆ
ಅಜ್ಜಂಪುರ ಪೊಲೀಸ್ ಠಾಣೆ ಯುಡಿಆರ್‌ಸಂ./2012 ಕಲಂ 174 (ಸಿ) ಸಿಆರ್‌ಪಿಸಿ – ಹುಣಸಘಟ್ಟದ ಗ್ರಾಮಪಂಚಾಯ್ತಿಯ ಅದ್ಯಕ್ಷರಾದ ತಿಪ್ಪೇಶ ಇವರು ದಿನಾಂಕ 25/09/2012 1000 ಗಂಟೆಯಲ್ಲಿ  ದಾರಿಯ ಮಧ್ಯ ಇರುವ ಫಾರೆಸ್ಟ ಬಂಗಲೆ ಹತ್ತಿರವಿರುವ ಸೇತುವೆ ಹತ್ತಿರ ಬಂದು ನೋಡಲಾಗಿ ಸಾಕಷ್ಟು ಜನ ಸೇರಿದ್ದು, ತಾನೂ ಪರಿಶೀಲಿಸಲಾಗಿ ಸದರಿ ಸೇತುವೆ ಕೆಳಗೆ ಒಂದು ಅಪರಿಚಿತ ಗಂಡಸಿನ ಶವ ಕಂಡು ಬಂದಿದ್ದು, ಮೈಪೂರ್ತಿ ಕಪ್ಪಗೆ , ಪೂರ್ತಿ ಕೊಳೆತು ಹೋಗಿರುವ ಸ್ಥಿತಿಯಲ್ಲಿದ್ದು, ಗುರುತು ಸಿಗದ ರೀತಿಯಲ್ಲಿದ್ದು, ಆತ ಯಾವ ಊರಿನವನು, ಎಲ್ಲಿಯವನು ತಿಳಿದು ಬರುವುದಿಲ್ಲ, ಯಾವಗ ಮೃತಪಟ್ಟಿರಬಹುದೆಂದು ತಿಳಿದಿರುವುದಿಲ್ಲ ಕಾನೂನು ರೀತಿ ಕ್ರಮಕೈಗೊಳ್ಳಿ ಎಂದು ದೂರು ನೀಡಿರುವುದಾಗಿರುತ್ತೆ.

Tuesday, September 25, 2012

Daily Crimes Report Dated:24/09/2012

ಆಕಸ್ಮಿಕ ಸಾವು ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.306/2012 ಕಲಂ 304(ಎ) ಐಪಿಸಿ – ದಿನಾಂಕ 24/09/2012 ರಂದು 1130 ಗಂಟೆಯಲ್ಲಿ  ಗೌಡನಹಳ್ಳಿ ಗ್ರಾಮದ ರಸೂಲ್ ಡೆಕೋರ್ ಲಿಮಿಟೆಡ್  ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಶಿವಪ್ಪ. ನನ್ನು  ಸೌದೆ ತುಂಬುವ ಯಂತ್ರದ ಬಳಿ ಕೆಲಸಕ್ಕೆ ನೇಮಿಸಿದ್ದು,  ಕನ್‌ವೆನ್ಷನ್ ಮಿಷನ್ ನಲ್ಲಿ ಚೆಕ್ಕೆಯ ಪೀಸ್ ಗಳು ಕಟ್ಟಿಕೊಂಡಿದ್ದು ತೆಗೆದು ಸ್ವಚ್ಚಗೊಳಿಸುವಂತೆ ಶಿವಪ್ಪ ಮತ್ತು ಇತರರನ್ನು ನೇಮಕ ಮಾಡಿದ್ದು ಮಿಷನ್ ಒಳಗೆ ತಲೆ ಹಾಕಿ ಚೆಕ್ಕೆ ಪೀಸ್ ಗಳನ್ನು ತೆಗೆಯುತ್ತಿರುವಾಗ ಒಮ್ಮೆಲೆ ಯಂತ್ರವು ಚಾಲನೆಗೊಂಡ ಪರಿಣಾಮ ಶಿವಪ್ಪನ ಬಲಗೈ ಮತ್ತು ತಲೆ ಯಂತ್ರಕ್ಕೆ ಸಿಕ್ಕಿಹಾಕಿಕೊಂಡು ಶಿವಪ್ಪನು ಮೃತಪಟ್ಟಿರುತ್ತಾನೆ. ಸದರಿ ಯಂತ್ರದ ನಿಯಂತ್ರಕ. ಕಂಪನಿಯ ಮ್ಯಾನೇಜರ್. ಮತ್ತು ಮಾಲೀಕರ ಅಜಾಗರೂಕತೆಯಿಂದ ಶವಪ್ಪನು ಯಂತ್ರಕ್ಕೆ ಸಿಕ್ಕಿ ಮೃತಪಟ್ಟಿರುತ್ತಾನೆ.ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಮುದ್ದುರಾಜು ಎಂಬುವರು ದೂರು ನೀಡಿರುವುದಾಗಿರುತ್ತೆ.,
ಜೂಜಾಟ ಪ್ರಕರಣ
ಗೋಣಿಬೀಡು ಪೊಲೀಸ್ ಠಾಣೆ ಮೊ.ಸಂ.62/2012 ಕಲಂ 87 ಕೆ.ಪಿ.ಆಕ್ಟ್‌‌ – ದಿನಾಂಕ 24/09/2012 ರಂದು 1745 ಗಂಟೆಯಲ್ಲಿ ಹಂಡುಗುಳಿ ಗ್ರಾಮದ  ಸಮುದಾಯ ಭವನದ ಪಕ್ಕದ ಕಾಲು ದಾರಿಯಲ್ಲಿ  ಇಸ್ಪೀಟ್ ಜೂಜಾಟ ಆಡುತ್ತಿದ್ದವರನ್ನು  ಪಂಚರ ಸಮಕ್ಷಮ  ಸಿಬ್ಬಂದಿಯವರ ಸಹಾಯದಿಂದ ದಾಳಿ ನೆಡೆಸಿದ್ದು,  ಒಳಗೆ ಹೊರಗೆ ಎಂದು  ಸುತ್ತು ಕಟ್ಟಿಕೊಂಡು  ಇಸ್ಪೀಟ್ ಜೂಜಾಟ ಆಡುತ್ತಿದ್ದ  ಒಟ್ಟು 4 ಜನರನ್ನು  ಹಿಡಿದು  ಇವರುಗಳು ಇಸ್ಪೀಟ್ ಆಟ ಆಡಲು ಉಪಯೋಗಿಸುತ್ತಿದ್ದ ಒಟ್ಟು  470/- ರೂ ಹಣವನ್ನು ಹಾಗೂ  52 ಇಸ್ಪೀಟ್ ಎಲೆಗಳನ್ನು ಮತ್ತು  ನೆಲಕ್ಕೆ ಹಾಸಿದ್ದ  ನ್ಯೂಸ್ ಪೇಪರ್ ಅನ್ನು  ಪಂಚರ ಸಮಕ್ಷಮ  17-45 ಗಂಟೆಯಿಂದ 18-45 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಆರೋಪಿಗಳಾದ ಸುರೇಶ ಹಾಗು ಇತರೆ ಇಬ್ಬರನ್ನು ಠಾಣೆಗೆ 19-15 ಗಂಟೆಗೆ ಬಂದು  ಸ್ವ ಪಿರ್ಯಾದನ್ನು ತಯಾರಿಸಿ  ಪ್ರಕರಣ ದಾಖಲಿಸಿರುತ್ತದೆ.
ಜೂಜಾಟ ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ.203/2012 ಕಲಂ 87 ಕೆ.ಪಿ.ಆಕ್ಟ್‌‌ – ದಿನಾಂಕ 24/09/2012 ರಂದು 1600 ಗಂಟೆಯಲ್ಲಿ ತರೀಕೆರೆ ನಗರದ ಗಾಳಿಹಳ್ಳಿ ಕ್ರಾಸ್ ನ ಜನತಾ ಬಡಾವಣೆಗೆ ಆರೋಪಿತರುಗಳು  ಸಾರ್ವಜನಿಕ ಸ್ಥಳದಲ್ಲಿ 4 ಜನರು ನೆಲದ ಮೇಲೆ ಸುತ್ತುವರಿದು ಕುಳಿತು ಅದರಲ್ಲಿ ಒಬ್ಬ ತೂರೆಬಿಲ್ಲೆಯಿಂದಾ ಜೂಜಾಟವಾಡುತ್ತಿದ್ದವರ ಮೇಲೆ ಸಿಬ್ಬಂದಿಗಳ ಸಹಾಯದಿಂದ ದಾಳಿನಡೆಸಿ 4 ಜನರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಆರೋಪಿಗಳು ಸಯ್ಯದ್‌‌ ಎಂದು ತಿಳಿಸಿದ್ದು ಜೂಜಾಟಕ್ಕೆ ಬಳಸಿದ ಹೆಂಚಿನ ತುಂಡು,  1 ರೂನ 2 ನಾಣ್ಯ,  1125/- ರೂ ಹಣವನ್ನು ಪಂಚರ ಸಮಕ್ಷಮ ಮಹಜರ್ ಕ್ರಮ ಜರುಗಿಸಿ ಅಮಾನತ್ತು ಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕೆ ವರದಿ ನೀಡಿದ್ದಾಗಿದೆ,
ಅಪಹರಣ ಪ್ರಕರಣ
ಬಣಕಲ್‌‌ ಪೊಲೀಸ್ ಠಾಣೆ ಮೊ.ಸಂ.88/2012 ಕಲಂ 363 506 ಐಪಿಸಿ  ದಿನಾಂಕ 24/09/2012 ರಂದು 0930 ಗಂಟೆಯಲ್ಲಿ ಪಿರ್ಯಾದುದಾರರಾದ ಶರಣ್ಯ ಬಂಟ್ವಾಳ ವಾಸಿ ಇವರು ಈ ದಿನ ಮನೆಯಿಂದ ಬಿ.ಸಿ ರೋಡ್ ಜಂಕ್ಷನ್ ಗೆ ಬಂದಿದ್ದು ಪರಿಚಯದ ಅಫೀಜ್ ಸಾಲೇತ್ತೂರು ಹತ್ತಿರ ಬಂದು ನೀನು ನನ್ನನ್ನು ಮದುವೆಯಾಗಬೇಕು ಅಂತ ಹೇಳಿದ್ದು  ನಾನು ಮದುವೆಯಾಗುವುದಿಲ್ಲ ಅಂತ ಹೇಳಿದಕ್ಕೆ ಈಗ ನೀನು ದುಬೈಗೆ ಬರಬೇಕು ಬರದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆ ಮದುವೆಯಾಗಲಿಕ್ಕೆ ಧರ್ಮಸ್ಥಳಕ್ಕೆ ಬರಬೇಕು ಅಪಹರಿಸಿಕೊಂಡು ಧರ್ಮಸ್ಥಳಕ್ಕೆಂದು ಹೇಳಿ ಮೂಡಿಗೆರೆಗೆ ಕರೆದುಕೊಂಡು ಹೋಗುತಿದ್ದು ಕೊಟ್ಟಿಗೆಹಾರದ ಬಸ್ಸ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಆರೋಪಿ ಅಫೀಸನು ತನ್ನನ್ನೂ ಮದುವೆ ಮಾಡಿ ಕೊಳ್ಳಲು ಅಪಹರಿಸಿ ಕೊಂಡು ಬಂದ ಬಗ್ಗೆ ತಿಳಿಸಿದಾಗ  ಅಲ್ಲಿಯ ಜನರು ಆಫೀಸನ್ನು  ಹಿಡಿದುಕೊಂಡು ಬಣಕಲ್ ಠಾಣೆಗೆ ಒಪ್ಪಿಸಿದ್ದು ಆಫೀಜನ ವಿರುದ್ದ ಕಾನುನು ರೀತ್ಯಾ ಕ್ರಮ ತೆಗೆದುಕೊಳ್ಳಲು ಕೇಸು ದಾಖಲಿಸಿರುತ್ತೆನೆ.

Monday, September 24, 2012

Daily Crimes Report Dated:23/09/2012

ದಲಿತರ ಮೇಲೆ ದೌರ್ಜನ್ಯ ಪ್ರಕರಣ
ಬಾಳೆಹೊನ್ನುರು ಪೊಲೀಸ್ ಠಾಣೆ ಮೊ.ಸಂ.120/2012 ಕಲಂ 324 341  ಐಪಿಸಿ ಜೊತೆಗೆ 3 ಕ್ಲಾಸ್‌‌(1) (10) ಎಸ್‌‌ಸಿಎಸ್‌‌ಟಿ ಆಕ್ಟ್‌ – ದಿನಾಂಕ 21/09/2012 ರಂದು 0800 ಗಂಟೆಯಲ್ಲಿ ಪಿರ್ಯಾದಿ ಹೂವಪ್ಪ ಮೇಗರಮಕ್ಕಿ ವಾಸಿ ಇವರು ಕೊಳಲೆ  ಕೈಮರದ ಬಸ್ ನಿಲ್ದಾಣಕ್ಕೆ ಬರುತ್ತಿರುವಾಗ ಹಿಂದೂಗಡೆಯಿಂದ ಆರೋಪಿಗಳಾದ ಅರವಿಂದ ಮತ್ತು ಇತರೆ ಇಬ್ಬರುÀ¼ÀÄ  ಪಿಕಪ್ ವಾಹನದಲ್ಲಿ  ಬಂದು  ಅಣ್ಣಯ್ಯ ರವರು   ಹತ್ತಿರಕ್ಕೆ ಬಂದು  ಅಡ್ಡಗಟ್ಟಿ ಏನೋ ಹೊಲೆಯ ಸೂಳೆಮಗನೆ ಮೊನ್ನೆ ರಾತ್ರಿ ಗಣಪತಿ ಕಾರ್ಯಕ್ರಮದಲ್ಲಿ ನೀವೇಲ್ಲಾ ಸೇರಿಕೊಂಡು ಗಲಾಟೆ ಮಾಡುತ್ತಿರೆನೋ ಎಂದು  ಅವಾಚ್ಯ ಶಬ್ದಗಳಿಂದ ಬೈಯ್ದು ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿ ಬಟ್ಟೆಯ ಗುಂಡಿಗಳನ್ನು ಕಿತ್ತುಹಾಕಿ ಕೆಳಗೆ ಬೀಳಿಸಿಕೊಂಡು ಕಲ್ಲಿನಿಂದ  ಕಾಲಿಗೆ  ಜಜ್ಜಿ  ರಕ್ತಗಾಯ ಮಾಡಿರುತ್ತಾರೆಂದು  ಇತ್ಯಾದಿ

Sunday, September 23, 2012

Daily Crimes Report Dated:22/09/2012

ಮೊಪೆಡ್‌ ಕಳುವು
ನಗರ ಪೊಲೀಸ್ ಠಾಣೆ ಮೊ.ಸಂ.151/2012 ಕಲಂ 379 ಐಪಿಸಿ  ದಿನಾಂಕ 13/09/2012 ರಂದು 0915 ಗಂಟೆಯಲ್ಲಿ ಮಥಾಯಿಸ್‌ ಟವರ್‌ ಬಳಿ ಪಿರ್ಯಾದಿ ಇಮ್ತಿಯಾಜ್‌‌ ರವರು vÀ£Àß n « J¸ï ªÉÆ¥Éqï £ÀA PÉJ 18 qÀ§Æè 4448 £ÀÄß ¤°è¹ ºÉÆÃV ¸Àé®à¸ÀªÀÄAiÀÄzÀ £ÀAvÀgÀ §AzÀÄ £ÉÆÃrzÁUÀ C°è EgÀzÉà PÀ¼ÀĪÁVgÀÄvÀÛzÉ  ಪತ್ತೆಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ.
ದಲಿತರ ಮೇಲೆ ದೌರ್ಜನ್ಯ ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ.152/2012 ಕಲಂ ಐಪಿಸಿ 3 & 4 ಡಿಪಿ ಆಕ್ಟ್‌‌ ರೆ.ವಿ 3(1)(11) ಎಸ್‌‌ಸಿಎಸ್‌‌ಟಿ ಆಕ್ಟ್‌‌ –ಪಿರ್ಯಾದಿ ಗಾಯಿತ್ರಿ ಕ್ರಿಶ್ಚಿಯಲ್‌ ಕಾಲೋನಿ ವಾಸಿ ಇವರು ಪ್ರವೀಣ್‌ಕುಮಾರ್‌ ಎಂಬುವರನ್ನು ಪ್ರೀತಿಸಿ  ದಿನಾಂಕ 10-08-2006 ರಲ್ಲಿ ಚಿಕ್ಕಮಗಳೂರು ನೊಂದಣಿ ಕಛೇರಿಯಲ್ಲಿ ವಿವಾಹವಾಗಿ  ಒಂದು ಗಂಡು ಚಿನ್ಮಯ್ ಎಂಬುವನು ಜನಿಸಿದ ನಂತರ  ಬಿಟ್ಟುಹೋಗಿ  ಒಂದು ವರ್ಷದ  ನಂತರ ಇಂದಿನ ದಿನಗಳಲ್ಲಿ  ಮೊಬೈಲ್ ಗೆ ಪೋನ್ ಮಾಡಿ  ಐವತ್ತು ಸಾವಿರ , ಒಂದು ಲಕ್ಷ ಹಣ ಕೊಡು  ಆಗ ಬರುತ್ತೇನೆ.  ಎಂದು  ಮಾನಸಿಕ ವಾಗಿ ದೈಹಿಕವಾಗಿ ಹಿಂಸೆ ನೀಡುತ್ತಾ  ನೀನು ಕೆಳ ಜಾತಿಯವಳು ನನ್ನ ಮನೆಯಲ್ಲಿ  ನಿನ್ನೊಂದಿಗೆ ಇರಲು ಬಿಡುತ್ತಿಲ್ಲ  ನಿನ್ನೊಂದಿಗೆ ಸಂಸಾರ ನಡೆಸುವುದಿಲ್ಲ ಎಂದೆಲ್ಲಾ ಪೀಡಿಸಿ  ಅಮೇರಿಕಾಕ್ಕೆ ಹೋಗಿ ನನ್ನ ಒಪ್ಪಿಗೆ ಇಲ್ಲದೆ ಇನ್ನೊಂದು ಮದುವೆಯಾಗಿ  ನೀನು ಕೀಳು ಜಾತಿಯವಳು ಎಂದು ಅಸ್ಪೃಶ್ಯತೆ ಮಾಡುತ್ತಾ  vÉÆAzÀgÉ ¤ÃrgÀÄvÁÛ£É

Saturday, September 22, 2012

Daily Crimes Report Dated:21/09/2012

ಅಪಘಾತದಲ್ಲಿ ಸಾವು
ಸಂಚಾರ ಪೊಲೀಸ್ ಠಾಣೆ ಮೊ.ಸಂ.108/2012 ಕಲಂ 279 304(ಎ)ಐಪಿಸಿ  ದಿನಾಂಕ 21/09/2012 ರಂದು 0615 ಗಂಟೆಯಲ್ಲಿ ಬೈಪಾಸ್‌‌ ರಸ್ತೆಯ ನರಿಗುಡ್ಡನಹಳ್ಳಿ ಕ್ರಾಸ್‌‌ ಬಳಿ ಪಿರ್ಯಾದುದಾರರಾದ ಶಂಕರಪ್ಪ ಇವರ ದೊಡ್ಡಪ್ಪ ಲಕ್ಷ್ಮಣಗೌಡ ರವರ ಮಗನಾದ ಜಯಣ್ಣ, ಸುಮಾರು 41 ವರ್ಷ, ಇವರು ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಲು ತಮ್ಮ ಬಾಬ್ತು ಕೆಎ-18-ಎಲ್-3262 ರ ಟಿವಿಎಸ್ ಎಕ್ಸ್ಎಲ್.ನಲ್ಲಿ ಹೋಗುತ್ತಿರುವಾಗ,..ಟಿ ಸರ್ಕಲ್ ಕಡೆಯಿಂದ ಬಂದ ಕೆಎ-18-ಎನ್-7891 ರ ಇಂಡಿಕಾ ವಿಸ್ಟಾ ಕಾರಿನ ಚಾಲಕ ಜಿ. ಸತೀಶ್ ನಾಯ್ಕರವರು ಅತೀವೇಗ ಮತ್ತು ಆಜಾಗರೂಕತೆಯಿಂದ ಕಾರನ್ನು ಚಾಲನೆ ಮಾಡಿಕೊಂಡು ಬಂದು ಜಯಣ್ಣ ಚಾಲನೆ ಮಾಡುತ್ತಿದ್ದ ಟಿವಿಎಸ್ ಎಕ್ಸ್ಎಲ್ ಗೆ ಎದುರಿನಿಂದ ಡಿಕ್ಕಿ ಹೊಡೆಸಿದ ಪರಿಣಾಮ,ಜಯಣ್ಣ ರವರು ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಟಿ.ವಿ.ಎಸ್ ಜಖಂಗೊಂಡಿರುತ್ತೆ.
ಕಳುವು ಪ್ರಕರಣ
ಬಸವನಹಳ್ಳಿ ಪೊಲೀಸ್ ಠಾಣೆ ಮೊ.ಸಂ.81/2012 ಕಲಂ 457 380 ಐಪಿಸಿ  ದಿನಾಂಕ 20/09/2012 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಉಪ್ಪಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಬೀಗ ಮುರಿದು ಶಾಲೆಯ ಒಳಗೆ ಅಕ್ಷರ ದಾಸೋಹದ ಅಡುಗೆ ಮನೆಯಲ್ಲಿ ಇಟ್ಟಿದ್ದ  2 ಹೆಚ್.ಪಿ ಸಿಲಿಂಡರ್ ಹಾಗೂ 1 ಕ್ವಿಂಟಾಲ್  ಅಕ್ಕಿ 50 ಕಿಲೋ ಬೇಳೆ ಹಾಗೂ 10ಲೀಟರ್ ಎಣ್ಣೆಯನ್ನು ಕಳುವು ಮಾಡಿಕೊಂಡು ಹೋಗಿದ್ದು ಅವುಗಳ ಬೆಲೆ ಸುಮಾರು 12000-00 ರೂ ಗಳಾಗಿರುತ್ತೆ ಇತ್ಯಾದಿ  ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಶಾಲೆಯ ಪ್ರಾದ್ಯಾಪಕ ಮಾನಪ್ಪ ಇವರು ದೂರು ನೀಡಿರುವುದಾಗಿರುತ್ತೆ.
ಜೂಜಾಟ ಪ್ರಕರಣ
ಗೋಣಿಬೀಡು ಪೊಲೀಸ್ ಠಾಣೆ ಮೊ.ಸಂ.61/2012 ಕಲಂ 87 ಕೆ.ಪಿ.ಆಕ್ಟ್‌‌  ದಿನಾಂಕ 21/09/2012 ರಂದು 1900 ಗಂಟೆಯಲ್ಲಿ ಉಗ್ಗೇನಹಳ್ಳಿ ಗ್ರಾಮದಲ್ಲಿ ಪಿಎಸ್‌‌ಐ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆಇಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ಖಚಿತ ವರ್ತಮಾನ ಮೇರೆಗೆ ದಾಳಿ ನೆಡೆಸಿದ್ದು, ಇವರುಗಳು ಇಸ್ಪೀಟ್ ಆಟ ಆಡಲು ಉಪಯೋಗಿಸುತ್ತಿದ್ದ ಒಟ್ಟು  480/- ರೂ ಹಣವನ್ನು ಹಾಗೂ  52 ಇಸ್ಪೀಟ್ ಎಲೆಗಳನ್ನು ಮತ್ತು  ನೆಲಕ್ಕೆ ಹಾಸಿದ್ದಬಿಳಿಯ ಪ್ಲಾಸ್ಟಿಕ್ ಚೀಲವನ್ನು ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತದೆ.ಆರೋಪಿಗಳಾದ ನಿಂಗಯ್ಯ ಹಾಗೂ ಇತರೆ 3 ಜನರನ್ನುದಸ್ತಗಿರಿ ಮಾಡಿರುತ್ತೆ.
ಮಟ್ಕಾಜೂಜಾಟ ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ.201/2012 ಕಲಂ 78 ಕ್ಲಾಸ್‌‌(3) ಕೆ.ಪಿ.ಆಕ್ಟ್‌‌  ದಿನಾಂಕ 21/09/2012 ರಂದು 1945 ಗಂಟೆಯಲ್ಲಿ ಪಿಎಸ್‌‌ಐ ರವರು ಕರ್ತವ್ಯದಲ್ಲಿ ಇದ್ದಾಗ ಮಟ್ಕಾಜೂಜಾಟ ನಡೆಯುತ್ತಿದೆ ಎಂದು ಬಂದ ಖಚಿತ ವರ್ತಮಾನದ ಮೇರೆಗೆ ಎಪಿಎಂಸಿ ಯಾರ್ಡ್‌ ಬಳಿಯ ಸ್ಥಳಕ್ಕೆ ಹೋದಾಗ ದಾದು ಎಂಬ ಆಸಾಮಿ ಜನರನ್ನು ಗುಂಪುಕಟ್ಟಿಕೊಂಡು ಸಿಂಗಲ್ ನಂಬರ್ ಗೆ 10/- ರೂ ಕಟ್ಟಿದರೆ 80/- ರೂ ಕೊಡುವುದಾಗಿ ಜನರಿಂದ ಹಣಪಡೆದು ಮಟ್ಕಾಜೂಜಾಟ ಆಡುತ್ತಿದ್ದವನನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದು ಆಟಕ್ಕೆ ಬಳಸಿದ ಮಟ್ಕಾ ಚೀಟಿ ಬಾಲ್ ಪೆನ್ 350/- ರೂ ಹಣ ವಶಪಡಿಸಿಕೊಂಡು ಮುಂದಿನ ಕ್ರಮಕ್ಕೆ ವರದಿ ನೀಡಿದ್ದಾಗಿದೆ
ದಲಿತರ ಮೇಲೆ ದೌರ್ಜನ್ಯ ಪ್ರಕರಣ
ಅಜ್ಜಂಪುರ ಪೊಲೀಸ್ ಠಾಣೆ ಮೊ.ಸಂ.123/2012 ಕಲಂ 143 144 341 323 324 504 149 ಐಪಿಸಿ ಜೊತೆಗೆ 3 ಕ್ಲಾಸ್‌‌(1)(10)&(11) ಎಸ್‌‌ಸಿಎಸ್‌‌ಟಿ ಆಕ್ಟ್‌   ದಿನಾಂಕ 21/09/2012 ರಂದು 1945 ಗಂಟೆಯಲ್ಲಿ ಕಾಟಿಗನೆರೆ ಗ್ರಾಮದ ಪರಿಷಿಷ್ಠ ಕಾಲನಿಯಲ್ಲಿ ಇರಿಸಲಾಗಿದ್ದ ಗಣಪತಿ ವಿಸರ್ಜನೆ ಪ್ರಯುಕ್ತ ಮೆರವಣಿಗೆಯಲ್ಲಿ ಪಿರ್ಯಾದುದಾರರಾದ ಮಂಜುನಾಥ ಇವರು ಫಿರ್ಯಾದುದಾರರು ಮತ್ತು ಇತರೆಯವರು ಮೆರವಣಿಗೆಯಲ್ಲಿ ಗಣಪತಿಯನ್ನು ತೆಗೆದುಕೊಂಡು ಗ್ರಾಮದ ಲಿಂಗಾಯಿತರ ಬೀದಿಯಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಹತ್ತಿರ ಪೂಜೆ ಸಲ್ಲಿಸಿ ವಾಪಾಸು ಬರುತ್ತಿರುವಾಗ್ಗೆ ಆರೋಪಿತರುಗಳಾದ ರಾಜಪ್ಪ ಹಾಗೂ ಇತರೆ 7 ಜನರು ಅಕ್ರಮ ಕೂಟ ಕಟ್ಟಿಕೊಂಡು ಬಂದು ಪರಿಷಿಷ್ಟ ಜಾತಿಯವರನ್ನು ತಡೆದು ಡ್ರಂ ಬಡಿಯಬಾರದೆಂದು, ಪಟಾಕಿ ಹೊಡೆಯಬಾರದೆಂದು ಗಲಾಟೆ ಮಾಡಿ ಕಲ್ಲುಗಳನ್ನು ತೂರಿದ್ದರಿಂದ ಕೇಸಿನ ಫಿರ್ಯಾದಿ ಮತ್ತು ಕೆ.ಆರ್ ರಾಜಪ್ಪ, ಅಣ್ಣಪ್ಪ ಇವರಿಗೆ ತಲೆಗೆ ರಕ್ತಗಾಯವಾಗಿದ್ದು,ಅಲ್ಲದೇ ಗಂಗಾಧರಪ್ಪನಿಗೆ ಆರೋಪಿತರಾದ ರಾಜಪ್ಪ ಪ್ರೇಂಕುಮಾರ ಮತ್ತು ಪರಮೇಶ್ವರಪ್ಪ ಇವರುಗಳು ಹಿಡಿದು ಎಳೆದಾಡಿ ನಮ್ಮ ಬೀದಿಗೆ ನಿಮ್ಮ ಗಣಪತಿ ತಂದಿರುತ್ತೀರಾ, ಮಾದಿಗ ಸೂಳೇಮಕ್ಕಳಾ ಎಂದು ಬೈದು ಕೈಯಿಂದ ಹೊಡೆದು ಬೀಳಿಸಿ ಕಾಲುಗಳಿಂದ ತುಳಿದು ಸೂಳೇಮಕ್ಕಳಾ, ನಿಮ್ಮನ್ನು ಮುಗಿಸುತ್ತೇವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ಲಿಂಗಾಯಿತ ಸಮುದಾಯದವರಿಗೂ ಪರಿಷಿಷ್ಟ ಜಾತಿಯವರಿಗೂ ಗ್ರಾಮದ ಗೋಮಾಳಿನ ವಿಚಾರದಲ್ಲಿ 02 ವರ್ಷಗಳಿಂದ ತಕರಾರು ನಡೆಯುತ್ತಿದ್ದು ತರೀಕೆರೆ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದ್ದು ವಿಚಾರದಲ್ಲಿ ಅರೋಪಿತರುಗಳು ಪರಿಶೀಷ್ಠ ಜಾತಿಯವರ ಮೇಲೆ ಗಲಾಟೆ ಮಾಡಿದ್ದಾಗಿದ್ದು ಇತ್ಯಾದಿ .