Saturday, June 29, 2013

Daily Crimes Report dated:28/06/2013


ಮನುಷ್ಯ ಕಾಣೆ
ತರೀಕೆರೆ ಪೊಲೀಸ್‌ ಠಾಣೆ ಮೊ.ಸಂ. 162/2013 – ಕಲಂ: ಮನುಷ್ಯ ಕಾಣೆ  ಪಿರ್ಯಾದಿ ಈಶ್ವರನಾಯ್ಕ ಗೋಣಿಬೀಡು ವಾಸಿ ಇವರ ಮಗಳಾದ ಕಾವ್ಯ 19 ವರ್ಷ ಇವಳೊಂದಿಗೆ ಪಿರ್ಯಾದಿ ಅಕ್ಕನ ಮಗಳಾದ 19 ವರ್ಷ ಪ್ರಾಯದ ವಿದ್ಯಾ ಇವಳು ತರೀಕೆರೆ ತಾಲ್ಲೋಕು ಎರೆಹಳ್ಳಿ ತಾಂಡ್ಯದ ಬೀಮಾನಾಯ್ಕರ ಮನೆಯಿಂದಾ ತರೀಕೆರೆ ಸರ್ಕಾರಿ ಆಸ್ಪತ್ರಗೆ ಚಿಕಿತ್ಸೆಗೆ ಬಂದಿದ್ದು   ಆಸ್ಪತ್ರೆಯಲ್ಲಿ ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ವಿದ್ಯಾ  ಇವಳು ಕಾವ್ಯಳಿಗೆ ಹೇಳದೆ ಆಸ್ಪತ್ರೆಯ ಒಳಗಡೆ ಹೋದವಳು ವಾಪಸ್ಸು ಬಂದಿರುವುದಿಲ್ಲಾ ಈ ವಿಚಾರವನ್ನು ಕಾವ್ಯ ಪಿರ್ಯಾದಿಗೆ ಫೊನ್ ಮೂಲಕ ತಿಳಿಸಿದ್ದು ಈ ಸಮಯದಲ್ಲಿ ಎರೆಹಳ್ಳಿ ತಾಂಡ್ಯಾ ವಾಸಿಗಳಾದ ನವೀನಾ, ಮಹೇಶ, ಮುರಳಿ ರವರು ಇದ್ದು ಮಹೇಶ್ ಇವರೊಂದಿಗೆ ಹೋಗಿರುವ ಬಗ್ಗೆ ಪಿರ್ಯಾದಿಗೆ ಅನುಮಾನ ಇದ್ದು ಪ್ರಾಪ್ತ ವಯಸ್ಸಿನ ವಿದ್ಯಾಳನ್ನು ಪತ್ತೆಮಾಡಿಕೊಬೇಕಾಗಿ ಕೋರಿ,
ಜೂಜಾಟ ಪ್ರಕರಣ
ಅಜ್ಜಂಫುರ ಪೊಲೀಸ್‌ ಠಾಣೆ ಮೊ.ಸಂ. 135/2013 – ಕಲಂ: 87 ಕೆ.ಪಿ. ಆಕ್ಟ್  ದಿನಾಂಕ 28/06/2013 ರಂದು 2225 ಗಂಟೆಯಲ್ಲಿ ಬುಕ್ಕಾಂಬೂದಿಯಲ್ಲಿ ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಜನರು ಸೇರಿಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ಎಂಬ ಇಸ್ಪೀಟ್ ಆಟವನ್ನು ಆಡುತ್ತಿದ್ದಾರೆಂಬ ವರ್ತಮಾನದ ಮೇರೆಗೆ ಕುಳಿತು  ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ಎಂಬ ಇಸ್ಪೀಟ್ ಆಟವನ್ನು ಕಾನೂನು ಬಾಹಿರವಾಗಿ ಆಡುತ್ತಿರುವುದು ಖಚಿತಗೊಂಡು, ಸ್ಥಳದಲ್ಲಿ ಕೆ.ಎ.18 ಎಲ್ 3149 ನಂಬರಿನ ಟಿ.ವಿ.ಎಸ್. ವಿಕ್ಟರ್ ಮೋಟಾರ್ ಸೈಕಲ್ ಇದ್ದು ಒಟ್ಟು ನಗದು ಹಣ 2370/-ರೂಗಳನ್ನು ಮತ್ತು 5 ಮೊಬೈಲ್ ಗಳನ್ನು  ವಶಪಡಿಸಿಕೊಂrgÀÄvÉÛ ಪಿಎಸ್‌‌ಐ ರವರು ದಾಳಿ ನಡೆಸಿರುವುದಾಗಿರುತ್ತೆ
ದಲಿತರ ಮೇಲೆ ದೌರ್ಜನ್ಯ ಪ್ರಕರಣ
ತರೀಕೆರೆ ಪೊಲೀಸ್‌ ಠಾಣೆ ಮೊ.ಸಂ. 161 /2013 – ಕಲಂ: 504 506 ಐಪಿಸಿ ಜೊತೆಗೆ 3 ಕ್ಲಾಸ್‌(1) (10) ಎಸ್‌ಸಿ ಎಸ್‌ಟಿ ಆಕ್ಟ್  ಪಿರ್ಯಾದುದಾರರು ರವಿ ತರೀಕೆರೆ ವಾಸಿ ಇವರು ದಿನಾಂಕ 27/06/2013 ರಂದು 2000 ಗಂಟೆಯಲ್ಲಿ  ಆರೋಪಿ ನರಸಿಂಹಣ್ಣ ರವರ ಬಳಿ 35,000/- ರೂ ಹಣವನ್ನು ಸಾಲವಾಗಿ ತೆಗೆದುಕೊಂಡಿದ್ದು,  ಬಡ್ಡಿಯನ್ನು ಕಟ್ಟಿಕೊಂಡು ಬರುತ್ತಿದ್ದು, ಹೀಗಿರುವಾಗ್ಗೆ ಆರೋಪಿಯು, ಪಿರ್ಯಾದಿಯ ಮನೆಯ ಬಳಿ ಬಂದು ಜಾತಿ ನಿಂದನೆ ಮಾಡಿ, ಪಿರ್ಯಾದಿ ಬಾಬ್ತು ಕೆಎ-18. ಕ್ಯೂ- 601 ಬೈಕ್ ಅನ್ನು ತೆಗೆದುಕೊಂಡು ಹೋಗಿದ್ದು, ಅಲ್ಲದೆ, ಪಿರ್ಯಾದಿಯ ಮನೆಯ ಬಳಿ ಬಂದು ರಸ್ತೆಯಲ್ಲಿ ನಿಂತುಕೊಂಡು ಅವಾಚ್ಯ ಶಬ್ದಗಳಿಂದ ಬೈದು, ಮಾದಿಗರಿಗೆಲ್ಲ ಹಣವನ್ನು ಕೊಟ್ಟರೆ ಸರಿಯಾಗಿ ಕೊಡುವುದಿಲ್ಲ ಎಂದು ಹೇಳಿ ಜಾತಿ ನಿಂದನೆ ಮಾಡಿದ್ದಲ್ಲದೆ, ಎಂದು ಪ್ರಾಣ ಬೆದೆರಿಕೆ ಹಾಕಿದ್ದು, ದೌರ್ಜನ್ಯ ಎಸಗಿರುತ್ತಾರೆ.

Friday, June 28, 2013

Daily Crimes Report Dated:27/06/2013


ಹೆಂಗಸು ಕಾಣೆ
ಕಳಸ ಪೊಲೀಸ್‌ ಠಾಣೆ ಮೊ.ಸಂ. 73/2013 – ಕಲಂ: ಹೆಂಗಸು ಕಾಣೆ  ಫಿರ್ಯಾದಿ ಮಧುಕರ ಮಾವಿನಕೆರೆ ಗ್ರಾಮ ಇವರ ಪತ್ನಿ ಶ್ರೀಮತಿ ಆಶಾ 22 ವರ್ಷ ಗಣಪತಿಕಟ್ಟೆ ವಾಸಿ ಇವರು ದಿನಾಂಕ 26/06/2013 ರಂದು  ತನ್ನ ಮೊಬೈಲ್‌ ತೆಗೆದುಕೊಂಡು ಎಲ್ಲಿಯೋ ಹೋಗಿರುತ್ತಾಳೆ. ಎಲ್ಲಾಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ.  ಕಾಣೆಯಾದ ಶ್ರೀಮತಿ ಆಶಾ ರವರನ್ನು ಪತ್ತೆಮಾಡಿಕೊಡಬೇಕಾಗಿ ನೀಡಿದ ದೂರಾಗಿರುತ್ತೆ.
ಅಪಘಾತದಲ್ಲಿ ಸಾವು
ತರೀಕೆರೆ ಪೊಲೀಸ್‌ ಠಾಣೆ ಮೊ.ಸಂ. 160/2013 – ಕಲಂ: 279 304(ಎ) ಐಪಿಸಿ  ಪಿರ್ಯಾದುದಾರರಾದ ನಿತೇಶ ರಂಗಾಪುರ ವಾಸಿ  ಹಾಗು ಅವರ ಸ್ನೇಹಿತ ಹರೀಶ್ ರವರು ದಿನಾಂಕ 27/05/2013 ರಂದು 1440 ಗಂಟೆಯಲ್ಲಿ ತರೀಕೆರೆ ಕಡೆಗೆ ನಡೆದು ಕೊಂಡು ಹೋಗುತ್ತಿದ್ದಾಗ ತರೀಕೆರೆ ಕಡೆಯಿಂದ ಭದ್ರಾವತಿ ಕಡೆಗೆ ಕೆಎ-06-9095 ರ ಈಚರ್ ಕ್ಯಾಂಟರ್ ಲಾರಿ ಚಾಲಕನು ತನ್ನ ಬಾಬ್ತು ವಾಹನವನ್ನು ಜೋರಾಗಿ ಮತ್ತು ಬೇಜವಾಬ್ದಾರಿಯಿಂದ ಚಾಲನೆ ಮಾಡಿಕೊಂಡು ಬಂದವನೆ ನಡೆದುಕೊಂಡು ಹೋಗುತ್ತಿದ್ದ ಕಾಳಯ್ಯಗೆ ಡಿಕ್ಕಿ ಹೊಡೆಯಿಸಿ ಅಪಘಾತ ಮಾಡಿದ ಪರಿಣಾಮ ಕಾಳಯ್ಯ ರಸ್ತೆಯ ಮೇಲೆ ಬಿದ್ದಿದ್ದು  ತಕ್ಷಣ ಕ್ಯಾಂಟರ್ ಚಾಲಕನು ವಾಹನವನ್ನು ನಿಲ್ಲಿಸಿ ಕೆಳಗೆ ಬಿದ್ದ ಗಾಯಾಳುವನ್ನು  ಎಬ್ಬಿಸಿ ಉಪಚರಿಸುತ್ತಿದ್ದಾಗ ಪಿರ್ಯಾದಿ  ಮತ್ತು ಹರೀಶ ಇಬ್ಬರು ಸೇರಿ ತಕ್ಷಣ ಸ್ಥಳಕ್ಕೆ ಬಂದು ನೋಡಿದಾಗ ಕಾಳಯ್ಯನ  ಬಲ ಕಾಲಿನ ಮೇಲೆ ವಾಹನದ ಚಕ್ರ ಹರಿದು ರಕ್ತಗಾಯವಾಗಿದ್ದು ,ತಲೆಗೆ ಮತ್ತು ಮೈ ಕೈ ಪೆಟ್ಟು ಬಿದ್ದಿರುತ್ತೆ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲು ಮಾಡಿದ್ದು . ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಕಾಳಯ್ಯ @ ಅಣ್ಣಯ್ಯಪ್ಪ ಇವರು ಈ ದಿನ ಸಂಜೆ 5-30 ಗಂಟೆಯ ಸಮಯಕ್ಕೆ ಮೃತ ಪಟ್ಟಿರುತ್ತಾರೆ.

Thursday, June 27, 2013

Daily Crimes Report Dated:26/06/2013


ಕೊಲೆ ಪ್ರಕರಣ
ತರೀಕೆರೆ ಪೊಲೀಸ್‌ ಠಾಣೆ ಮೊ.ಸಂ. 158/2013 – ಕಲಂ: 302 ಐಪಿಸಿ – ದಿನಾಂಕ 22/05/2013 ರಂದು ರಾತ್ರಿ ಸಮಯದಲ್ಲಿ ಕೃತ್ಯ ನಡೆದಿದ್ದು ಪಿರ್ಯಾದುದಾರರಾದ ಆರ್. ರಾಜಗೋಪಾಲ ಇವರ ಮಗಳಾದ ಲಕ್ಷ್ಮೀ @ ದೇವಿ ಬಾಯಿ ಇವಳನ್ನು ಈಗ್ಗೆ 20 ವರ್ಷಗಳ ಹಿಂದೆ ದಾರವಾಡ ಜಿಲ್ಲೆ  ಹೊಸಕಟ್ಟೆ ಗ್ರಾಮದ ವಾಸಿ ನೀಲಪ್ಪ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು  ಅವಳಿಗೆ ಎರಡು ಜನ ಹೆಣ್ಣ ಮಕ್ಕಳು ಇರುತ್ತಾರೆ.ಪಿರ್ಯಾದುದಾರರ ಮಗಳ ಗಂಡ ನೀಲಪ್ಪ ಈತನು ಈಗ್ಗೆ 17 ವರ್ಷಗಳ ಹಿಂದೆ ಮೃತ ಪಟ್ಟಿದ್ದು ನಂತರ ಬಾಂಬೆಗೆ  ಹೋಗಿ ಅಲ್ಲಿ ಅಜಯ ಎಂಬುವನೊಂದಿಗೆ ಮದುವೆಯಾಗಿ ಸಂಸಾರ ಮಾಡಿಕೊಂಡು ಅಲ್ಲಿಯೇ ವಾಸವಿದ್ದು ಆಗಾಗ್ಗೆ ನಮ್ಮ ಮನೆಗ ಬಂದು ಹೋಗುತ್ತಿರುತ್ತಾಳೆ. ಪಿರ್ಯಾದುದಾರರ ಮಗನಾದ ಲಿಂಗದಹಳ್ಳಿಯಲ್ಲಿ ವಾಸವಿರುವ ಶೇಖರ ನಾಯ್ಕ ಈತನ ಮನೆಗೆ ಈಗ್ಗೆ ಎರಡು ತಿಂಗಳ ಹಿಂದೆ ಬಂದು ವಾಸವಿದ್ದು  ಗಂಡ ದೂರವಾಣಿ ಮೂಲಕ ನಾನು ಬೀರೂರಿಗೆ ಬರುತ್ತೇನೆ ಬಾ ಎಂದು ಹೇಳಿದ್ದು ನಂತರ ಪಿರ್ಯಾದುದಾರರ ಮಗಳು ತನ್ನ ಮಕ್ಕಳಿಗೆ ಅಂಗಡಿಯಲ್ಲಿ ತಿಂಡಿ ತರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದವಳು ರಾತ್ರಿಯಾದರು ವಾಪಾಸ್ ಮನೆಗೆ ಬಂದಿರುವುದಿಲ್ಲ. ಕ್ಯಾಂಟಿನ್ ಪ್ರಕಾಶ ಎಂಬುವರು ಪಿರ್ಯಾದುದಾರರಿಗೆ ನಿನ್ನ ಮಗಳು ಹಳಿಯೂರು ರೈಲ್ಷೇ ಹಳಿಯ ಹತ್ತಿರ ಕೊಲೆಯಾಗಿರುವುದಾಗಿ ತಿಳಿಸಿದ ಮೇರೆಗೆ ಹೋಗಿ ನೋಡಿದಾಗ ಪಿರ್ಯಾದುದಾರರ ಮಗಳನ್ನು ಯಾರೋ ಯಾವುದೋ ಆಯುಧದಿಂದ ಕತ್ತನ್ನು ಕಡಿದು ಕೊಲೆ ಮಾಡಿರುತ್ತಾರೆ ಇತ್ಯಾದಿ.
ಅಪಘಾತದಲ್ಲಿ ಸಾವು
ಲಿಂಗದಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 47/2013 – ಕಲಂ: 279 304(ಎ) ಐಪಿಸಿ – ಪಿರ್ಯಾದುದಾ ರರಾದ  ಆಕಾಶ್‌‌ ಮತ್ತು ಆತನ  ಸ್ನೇಹಿತರಾದ ಸಂಕೇಶ್ .ನರೇಶ್ ,ಸುಖೇಶ್ . ರವರೊಂದಿಗೆ  ಕೆಎ-20 ಎನ್-5238 ನೇ ಕಾರಿನಲ್ಲಿ ನಾವು ಹಾಗು ಕೆಎ-18 ಎನ್-3998 ನೇ ಕಾರಿನಲ್ಲಿ  ಗಣೇಶ್ ಶಿವಪ್ರಸಾದ್ . ಸೂರಜ್ ಹಾಗು ವಿನಾಯಕ ರವರೊಂದಿಗೆ  ಅತ್ತಿಗುಂಡಿಯಲ್ಲಿ ರಾತ್ರಿ ತಂಗಿದ್ದು  ಕೆಮ್ಮಣ್ಣುಗುಂಡಿಗೆ ಬಂದು  ಬೀರೂರಿಗೆ ವಾಪಸ್ ಬರುತ್ತಿರುವಾಗ ಕೆಎ-18 ಎನ್-3998 ನೇ ಕಾರನ್ನು ವಿನಾಯಕ ಚಾಲನೆ ಮಾಡುತ್ತಿದ್ದು ನಮ್ಮ ಮುಂದೆ ಕಾರು ಲಿಂಗದಹಳ್ಳಿ ಸಮೀಪ ಕಲ್ಲತ್ತಿಗಿರಿ ರಸ್ತೆಯಲ್ಲಿ ತನ್ನ ಕಾರನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಬಲ ಭಾಗದ ಮರಕ್ಕೆ ಡಿಕ್ಕಿ ಹೊಡೆಸಿದ್ದು  ಹೊಡೆಯಿಸಿದ ಪರಿಣಾಮ ವಿನಾಯಕ .ಗಣೇಶ್ .ಶಿವಪ್ರಸಾದ್ ಮತ್ತು  ಸೂರಜ್ . ಈ ನಾಲ್ಕು ಜನರಿಗೆ ತಲೆಗೆ ಮೈಕೈಗೆ ತೀವ್ರ ತರವಾದ ಗಾಯಗಳಾಗಿದ್ದು  ನಾವುಗಳು ಗಾಯಾಳುಗಳನ್ನು ಒಂದು ವಾಹನದಲ್ಲಿ ತರೀಕೆರೆ ಸರ್ಕಾರಿ  ಆಸ್ಪತ್ರೆಗೆ ಚಿಕಿತ್ಸೆ ಸೇರಿಸಿದ್ದು  ವೈದ್ಯರು ಗಾಯಾಳುಗಳನ್ನು ಪರೀಕ್ಷಿಸಿ  ವಿನಾಯಕ ಶಿವಪ್ರಸಾದ್. ರವರುಗಳು ಮೃತಪಟ್ಟಿರುವುದಾಗಿ  ತಿಳಿಸಿದರು

Wednesday, June 26, 2013

Daily Crimes Report Dated:25/06/2013


ಮನುಷ್ಯ ಕಾಣೆ
ಆಲ್ದೂರು ಪೊಲೀಸ್‌ ಠಾಣೆ ಮೊ.ಸಂ. 138/2013 – ಕಲಂ: ಮನುಷ್ಯ ಕಾಣೆ   ಪಿರ್ಯದಿ ಅಣ್ಣೇಗೌಡ ವಿಜಯಪುರ ವಾಸಿ ಇವರ ಭಾವ ಮಲ್ಲೇಶ್‌‌ ಇವರು ದಿನಾಂಕ 15/06/2013 ರಂದು ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ
ವರದಕ್ಷಿಣೆ ಕಿರುಕುಳ ಸಾವು
ಸಿಂಗಟಗೆರೆ ಪೊಲೀಸ್‌ ಠಾಣೆ ಮೊ.ಸಂ. 39/2013 – ಕಲಂ: 302 304(ಬಿ) 34 ಐಪಿಸಿ    ಪಿರ್ಯಾದುದಾರರಾದ ಸುನಿಲ್‌ನಾಯ್ಕ ಗುತ್ತಿಗಟ್ಟೆ ವಾಸಿ ಇವರು ತಂಗಿಯಾದ ಸುಮಿತ್ರಾಬಾಯಿ 21 ವರ್ಷ ವರನ್ನು  ರಾಮನಹಳ್ಳಿತಾಂಡ್ಯ ವಾಸಿ ತಾವರನಾಯ್ಕ ರವರ ಮಗನಾದ ನವೀನ್ ಕುಮಾರ್ ಇವರಿಗೆ ದಿನಾಂಕ  22 08-2012 ರಂದು ಮದುವೆ ಮಾಡಿಕೊಟ್ಟಿದ್ದು ಸಮಯದಲ್ಲಿ 50.000/- ರೂ ನಗದು  ಮತ್ತು ಒಂದು ಬಂಗಾರದ ಕೊರಳ  ಸರವನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟು ಮದುವೆ ಮಾಡಿಸಿದ್ದು ಆದರೂ ಸದರಿ ನವೀನ್ ಕುಮಾರ್ ಇವನು ಪದೇ ಪದೇ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದು ದಿನಾಂಕ 24-06-2013 ರಂದು ಅವಳು ಪಿರ್ಯಾದಿಗೆ  ದೂರವಾಣಿ ಮುಖಾಂತರ ತಿಳಿಸಿದ್ದೆನೇಂದರೆ ದಿನ ನವೀನ್ ಕುಮಾರ್ ಮತ್ತು ಆತನ  ತಂದೆ ತಾವರನಾಯ್ಕ,  ಗಂಡನ ಅಕ್ಕ  ಅನ್ನಪೂರ್ಣ ಬಾಯಿ ಮತ್ತು ಅತ್ತೆ ನಾಗೀಬಾಯಿ ಇವರೆಲ್ಲಾ ಸೇರಿ ತನಗೆ ತವರುಮನೆಗೆ ಹೋಗಿ ವರದಕ್ಷಿಣೆ ತರುವಂತೆ ಪೀಡಿಸಿ ಹಿಂಸೆ ನೀಡುತ್ತಿದ್ದಾರೆಂದು ತಿಳಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಪಕ್ಕದ ಮನೆಯವರು ಪೋನ್ ಮಾಡಿ ಪಿರ್ಯಾದಿಯ  ತಂಗಿ ಸತ್ತಿರುವ ವಿಷಯವನ್ನು ಹೇಳಿರುತ್ತಾರೆ. ಪಿರ್ಯಾದಿ  ಮತ್ತು ಅವರ ಊರಿನಿಂದ ಕೆಲವರು ಬಂದು ದಿನ  ದಿನಾಂಕ 25-06-2013 ರಂದು ಹೆಣವನ್ನು ನೋಡಿದಾಗ ಹೆಣದ ಮೇಲೆ ಅಲ್ಲಲ್ಲಿ ಗಾಯಗಳಿರುವುದು  ಕಂಡುಬಂದಿರುತ್ತೆ. ಇದರಿಂದ ಮೇಲ್ಕಂಡವರು ಪಿರ್ಯಾದಿಯ  ತಂಗಿಯನ್ನು ಹೊಡೆದು ಸಾಯಿಸಿ ನೇಣು ಹಾಕಿರುತ್ತಾರೆ