Sunday, December 29, 2013

Daily Crimes Report Dated:28/12/2013ಮತೀಯ ಗಲಭೆ ಪ್ರಕರಣ
ನಗರ ಪೊಲೀಸ್‌ ಠಾಣೆ ಮೊ.ಸಂ.241/2013 – ಕಲಂ: 153 295 ಐಪಿಸಿ – ಪಿರ್ಯಾದುದಾರರಾದ ಸಯ್ಯದ್ ಮೀರ್‌ ಗೌಸ್‌ ರವರು ಸಯ್ಯದ್‌ ಯಖೀನ್‌ ಅಲಿಶ್‌ ದರ್ಗಾವನ್ನು ದಿನಾಂಕ 27-12-2013 ರಂದು ರಾತ್ರಿ 09-00 ಗಂಟೆಗೆ ಪ್ರಾರ್ಥನೆಯನ್ನು ಮುಗಿಸಿ ದರ್ಗಾಕ್ಕೆ ಬೀಗವನ್ನು ಹಾಕಿಕೊಂಡು ಹೋಗಿದ್ದು ಈ ದಿವಸ ದಿನಾಂಕ 28-12-2013 ರಂದು ಬೆಳಗ್ಗೆ 06-00 ಗಂಟೆಗೆ ದರ್ಗಾದ ಮುಜಾವರ್ ರವರು ಬೀಗವನ್ನು ತೆರೆಯಲು ಬಂದಾಗ  ಬಾಗಿಲ ಮುಂಭಾಗದಲ್ಲಿ ಯಾರೋ ಕಿಡಿಗೇಡಿಗಳು ಹಂದಿಯನ್ನು ಕತ್ತರಿಸಿ ಒಂದು ಕಡೆ ತಲೆ ಇನ್ನೊಂದುಕಡೆ ದೇಹವನ್ನು ಹಾಕಿ ಗೋಡೆಯ ಮೇಲೆ ರಕ್ತವನ್ನು ಲೇಪಿಸಿ ದರ್ಗಾವನ್ನು ಅಪವಿತ್ರ ಗೊಳಿಸಿ ಒಂದು ಸಮುದಾಯದ ಜನರಿಗೆ ಅತೀವ ನೋವುಂಟು ಮಾಡಿರುತ್ತಾರೆ. ಇತ್ಯಾದಿ
ಮತೀಯ ಗಲಭೆಗೆ ಸಂಬಂದಿಸಿದಂತೆ ದೊಂಬಿ ಪ್ರಕರಣ
ನಗರ ಪೊಲೀಸ್‌ ಠಾಣೆ ಮೊ.ಸಂ.242/2013 – ಕಲಂ: 143.147.148.353.332.333.149 ಐಪಿಸಿ ಪಿರ್ಯಾದುದಾರರಾದ ಸಿಪಿಐ ಸಿ.ಮಧುಸೂಧನ್ ರವರು 1330 ಗಂಟೆಯಲ್ಲಿ ಐಸಿಐಸಿಐ ಬ್ಯಾಂಕ್‌ ಹತ್ತಿರ ಸಿಬ್ಬಂದಿಗಳೊಂದಿಗೆ ಕರ್ತವ್ಯವನ್ನು ನಿರ್ವಹಿಸುತ್ತಿರುವಾಗ ಮುಸ್ಲಿಂ ಭಾಂದವರು ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತಿದ್ದಾರೆಂಬ ವದಂತಿಗೆ  ಇನ್ನೊಂದು ಗುಂಪಿನ ಹಿಂದು ಸಮುದಾಯದ ಜನರು ಮತ್ತು ಅಂಗಡಿ ಮುಂಗಟ್ಟು ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚಿಸುವವರ ವಿರುದ್ದವಾಗಿ ಎಂಜಿ ರಸ್ತೆಯಲ್ಲಿ ಹನುಮಂತಪ್ಪ ಸರ್ಕಲ್ ಕಡೆ ಸುಮಾರು 500 ಜನರು ಪ್ರತಿಭಟಿಸುತ್ತಾ ಬರುತಿದ್ದು. ಇನ್ನೊಂದು ಕಡೆಯಿಂದ ಮುಸ್ಲಿಂ ಸಮುದಾಯದವರು ಹನುಮಂತಪ್ಪ ಸರ್ಕಲ್ ಕಡೆಯಿಂದ ಸುಮಾರು 1 ಸಾವಿರ ಜನರು ಪ್ರತಿಭಟಿಸುತ್ತಾ ಚಿಕ್ಕಮಗಳೂರು ನಗರದ ಎಂಜಿ ರಸ್ತೆಯ ಐಸಿಐಸಿಐ ಬ್ಯಾಂಕ್ ಹತ್ತಿರ  ಬರುತಿದ್ದಾಗ  ನಗರದ ಸುತ್ತ ಮುತ್ತ 6 ಕಿ,ಮೀ ವ್ಯಾಪ್ತಿಯಲ್ಲಿ ಹಾಗೂ ಆಲ್ದೂರು ಪಟ್ಟಣದಲ್ಲಿ ಕಲಂ 144 ಸಿಆರ್‌ಪಿಸಿ ರೀತ್ಯಾ ನಿಷೇದಾಜ್ಷೆ ಜಾರಿ ಇದೆ ಎಂಬ ಬಗ್ಗೆ ಪ್ರಚಾರ ಪಡಿಸುತಿದ್ದರು ಸಹ ಅದನ್ನು ಲೆಕ್ಕಿಸದೇ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಅಲ್ಲದೇ ಅಷ್ಟರಲ್ಲಿ ಎರಡು ಕಡೆಯಿಂದ ಪೊಲೀಸರ ಮೇಲೆ ಕಲ್ಲುತೂರಾಟವಾಗಿದ್ದು ಸ್ಥಳದಲ್ಲಿದ್ದ  ಪಿರ್ಯಾದುದಾರರ ಕುತ್ತಿಗೆಗೆ ಕಲ್ಲುತಾಗಿ ನೋವುಂಟಾಗಿರುತ್ತದೆ. ಅದೇ ಸಮಯದಲ್ಲಿ ಪಿರ್ಯಾದುದಾರರ ಜೊತೆ ಕರ್ತವ್ಯ ನಿರ್ವಹಿಸುತಿದ್ದ  ಮ ಎಎಸ್‌ಐ ಕೆ,ಆರ್ ,ಸುನೀತಾ ರವರ ಬಲ ಕಿವಿಗೆ ಕಲ್ಲುತಾಗಿ ಕಿವಿ ಹರಿದು ಹೋಗಿರುತ್ತೆ. ತಕ್ಷಣ ಅವರನ್ನು ಸಿಬ್ಬಂದಿಗಳೊಂದಿಗೆ ಚಿಕಿತ್ಸೆಗೆ ಕಳುಹಿಸಿ ಕೊಟ್ಟಿರುತ್ತೆ. ಎರಡು ಗುಂಪಿನವರ ಮೇಲೆ ಲಘು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಲಾಯಿತು. ಎರಡು ಗುಂಪಿನವರು ಕಲ್ಲು ತೂರಾಟ ಮಾಡಿದ್ದರಿಂದ ಕೆಲ ಪೊಲೀಸರಿಗೆ ಗಾಯಗಳಾಗಿದ್ದು ಹೆಸರು ತಿಳಿದಿರುವುದಿಲ್ಲಾ.  ಮೇಲ್ಕಂಡ ಎರಡು ಗುಂಪಿನವರು ಅಕ್ರಮ ಕೂಟ ಸೇರಿ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಗಾಯಗೊಳಿಸಿದ್ದು  ಅವರ ಕ್ರಮ ಸೂಕ್ತ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.
ಮತೀಯ ಗಲಭೆಗೆ ಸಂಬಂದಿಸಿದಂತೆ ದೊಂಬಿ ಪ್ರಕರಣ
ನಗರ ಪೊಲೀಸ್‌ ಠಾಣೆ ಮೊ.ಸಂ.243/2013 – ಕಲಂ: 143.147.504.427.149 ಐಪಿಸಿ ಪಿರ್ಯಾದುದಾರರಾದ ಪ್ರಕಾಶ್ ಮಯೂರ ಬೇಕರಿ ಮಾಲಿಕರು ವ್ಯಾಪಾರ ಮಾಡುತ್ತಿದ್ದಾಗ ಸುಮಾರು ಬೆಳಿಗ್ಗೆ 9-30 ಗಂಟೆಯ ಸಮಯದಲ್ಲಿ 50-60 ಜನರಿದ್ದ ಮುಸ್ಲಿಂ ಜನರ ಗುಂಪು ಪಿಯಾದುದಾರರ ಅಂಗಡಿಗೆ ಬಂದು ಗಲಾಟೆ ಮಾಡಿ ಅಂಗಡಿಯನ್ನು ಮುಚ್ಚಲು ಬಂದು ಬಲವಂತವಾಗಿ ನಮ್ಮ ಅಂಗಡಿಯ ಮುಂಭಾಗದಲ್ಲಿ ನ ಶೋಕೇಸ್ ಗ್ಲಾಸನ್ನು ಒಡೆದು  ಸುಮಾರು ಐವತ್ತು ಸಾವಿರ ರೂ ಲುಕ್ಸಾನು ಮಾಡಿರುತ್ತಾರೆ.ಹೋಗುವಾಗ ನಮ್ಮ ಪವಿತ್ರ ಸ್ಥಳಕ್ಕೆ ಅಪಮಾನ ಮಾಡಿರುತ್ತಾರೆ.ಬೋಳಿಮಗನೆ ಎಂದು ಬೈದು ಅಂಗಡಿ ಬಾಗಿಲನ್ನು  ಬಲವಂತವಾಗಿ ಮುಚ್ಚಿಸಿರುತ್ತಾರೆ.ಇತ್ಯಾದಿ
ಮತೀಯ ಗಲಭೆಗೆ ಸಂಬಂದಿಸಿದಂತೆ ದೊಂಬಿ ಪ್ರಕರಣ
ನಗರ ಪೊಲೀಸ್‌ ಠಾಣೆ ಮೊ.ಸಂ.244/2013 – ಕಲಂ: 143.147.504.427.149 ಐಪಿಸಿ ಪಿರ್ಯಾದುದಾರರಾದ ಗಣೇಶ ನಾಯ್ಕ ರವರು ಚಿಕ್ಕಮಗಳೂರು ಬೇಕರಿಯನ್ನು ತೆರೆದು  ವ್ಯಾಪಾರ ಮಾಡುತ್ತಿರುವಾಗ ದಿನಾಂಕ 28/12/2013  ಬೆಳಗ್ಗೆ ಸುಮಾರು 09-15 ಗಂಟೆಗೆ 50-60 ಜನರ ಗುಂಪು ಅಂಗಡಿಗೆ ಬಂದು ನಮ್ಮ ಪವಿತ್ರ ಸ್ಥಳವನ್ನು ಅಪವಿತ್ರ  ಗೊಳಿಸಿರುತ್ತಾರೆ.  ಆದ್ದರಿಂದ  ಈ ದಿನ ಚಿಕ್ಕಮಗಳೂರು ಬಂದ್ ಇದೆ  ಎಂದು ಹೇಳಿ  ಸೂಳೇಮಗನೆ ಅಂಗಡಿ ಬಾಗಿಲನ್ನು  ಹಾಕು ಎಂದವರೆ  ಗುಂಪಿನಲ್ಲಿ ಇದ್ದವರು  ಶೋಕೇಸ್ ಗ್ಲಾಸ್ ಅನ್ನು  ಹೊಡೆದು  ಸುಮಾರು 50 ಲಕ್ಷ ಲುಕ್ಸಾನ್ ಮಾಡಿರುತ್ತಾರೆ.  ಗಲಾಟೆ ಇದ್ದುದರಿಂದ ಗಲಾಟೆ ತಿಳಿಯಾಗುವವರೆಗೆ  ಕಾದು ತಡವಾಗಿ ಬಂದು ದೂರು ನೀಡಿರುತ್ತಾರೆ. ಇತ್ಯಾದಿ.
ಮತೀಯ ಗಲಭೆಗೆ ಸಂಬಂದಿಸಿದಂತೆ ದೊಂಬಿ ಪ್ರಕರಣ
ನಗರ ಪೊಲೀಸ್‌ ಠಾಣೆ ಮೊ.ಸಂ.245/2013 – ಕಲಂ: 143.147.504.427.149 ಐಪಿಸಿ ಪಿರ್ಯಾದುದಾರರು ವಿವೇಕ್‌ ಯಾಜಿ ಇವರು ಮಲ್ನಾಡ್‌ ಪ್ರಸ್‌ ಎಂಜಿರಸ್ತೆ ಯಲ್ಲಿ ತನ್ನ  ಅಂಗಡಿಯನ್ನು ತೆರೆದಿದ್ದು ದಿನಾಂಕ 28/12/2013 ರಂದು ಸುಮಾರು 10-30 ಗಂಟೆ ಸಮಯದಲ್ಲಿ ಪಿರ್ಯಾದುದಾರರು ಮತ್ತು ಲಕ್ಷ್ಮಣ ರಾಜು ಹಾಗೂ ಇತರೆ ಕೆಲಸಗಾರರು ಅಂಗಡಿಯಲ್ಲಿರುವಾಗ ಸುಮಾರು 100 ಜನರಿದ್ದ ಮುಸ್ಲಿಮರ ಗುಂಪು ಬಂದು ಗಲಾಟೆ ಮಾಡಿ ಅಂಗಡಿ ಬಾಗಿಲನ್ನು ಮುಚ್ಚುವಂತೆ ತಿಳಿಸಿ ಅಂಗಡಿಯ ಒಳಗೆ ನುಗ್ಗಿ ಶೋಕೇಶ್ ಗ್ಲಾಸನ್ನು ಒಡೆದು ಸುಮಾರು 25000 ರೂಪಾಯಿಗಳನ್ನು ಲುಕ್ಸಾನು ಮಾಡಿರುತ್ತಾರೆ ಇತ್ಯಾದಿ.
ಮತೀಯ ಗಲಭೆಗೆ ಸಂಬಂದಿಸಿದಂತೆ ದೊಂಬಿ ಪ್ರಕರಣ
ನಗರ ಪೊಲೀಸ್‌ ಠಾಣೆ ಮೊ.ಸಂ.246/2013 – ಕಲಂ: 143.147.504.323,427.149 ಐಪಿಸಿ ಪಿರ್ಯಾದುದಾರರು ಕೌಶಿಕ್‌ ಕಾಮದೇನು ಪ್ರಾವಿಜನ್‌ ಸ್ಟೋರಸ್ ಎಂಜಿ ರಸ್ತೆ ಇವರು ದಿನಾಂಕ 28/10/2013  ಬೆಳಿಗ್ಗೆ 10.45 ಗಂಟೆ ಸಮಯದಲ್ಲಿ ಚಿಕ್ಕಮಗಳೂರಿನ ಸುಮಾರು 50-60 ರ ಜನರ ಮುಸ್ಲಿಂ ಯುವಕರು ಏಕಾಏಕಿ ಅಂಗಡಿ ಹತ್ತಿರ ಬಂದವರೇ ಅಂಗಡಿ ಬಾಗಿಲು ಮುಚ್ಚುವಂತೆ ಬಲವಂತ ಪಡಿಸಿದರು.ಆಯಿತು ಏನು ಕಾರಣ ಎಂದು ಪಿರ್ಯಾದುದಾರರು ಕೇಳುವಷ್ಟರಲ್ಲಿ ಮುಸ್ಲಿಂರ ಪವಿತ್ರ ಸ್ಥಳವನ್ನು ಯಾರೋ ದುಷ್ಕರ್ಮಿಗಳು ಅಪವಿತ್ರಗೊಳಿಸಿರುತ್ತಾರೆ.ಬಂದ್ ಆಚರಣೆ ಮಾಡಬೇಕು ಎಂದು ಹೇಳಿದರು. ಆಗ  ಅಂಗಡಿಯಲ್ಲಿದ್ದ  ಪಿರ್ಯಾದುದಾರರು ಮತ್ತು ಅವರ ಅಣ್ಣ ಪ್ರಶಾಂತ ಬಾಗಿಲು ಮುಚ್ಚುತ್ತೇವೆ ಎನ್ನುವಷ್ಟರಲ್ಲಿ ಬಾಗಿಲು ಹಾಕಿರೋ ಸೂಳೇಮಕ್ಕಳ ಎಂದು  ಅವಾಚ್ಯ ಶಬ್ದಗಳಂದ ಬೈದು ರೋಲಿಂಗ್ ಶೆಟರ್ ಎಳೆದಾಡಿ ಅಂಗಡಿ ಮುಂದೆ ನೇತಾಕಿದ್ದ ವಸ್ತುಗಳನ್ನು ಎಳೆದು ಹಾಕಿ ಪಿರ್ಯಾ್ದುದಾರರಿಗೆ ಗುಂಪಿನಲ್ಲಿದ್ದ ಒಂದಿಬ್ಬರು ಕೈಗಳಿಂದ ನನ್ನ ಮೈಗೆ ಗುದ್ದಿರುತ್ತಾರೆ.ಸಾಮಾನುಗಳನ್ನು ಎಳೆದು ಹಾಕಿದ್ದರಿಂದ ಮತ್ತು ಕೇಸು ಗ್ಲಾಸನ್ನು ಹೊಡೆದು ಹಾಕಿದ್ದರಿಂದ ಸುಮಾರು 1000/- ರೂ ಲುಕ್ಸಾನು ಉಂಟಾಗಿರುತ್ತೆ.

Saturday, December 28, 2013

Daily Crimes Report Dated:27/12/2013ಗಾಂಜ ವಶ
ಬೀರೂರು ಪೊಲೀಸ್‌ ಠಾಣೆ ಮೊ.ಸಂ.163/2013 – ಕಲಂ: 20(ಬಿ) ಎನ್‌ಡಿಪಿಎಸ್‌ ಆಕ್ಟ್ – ದಿನಾಂಕ 27/12/2013 ರಂದು  ಪಿರ್ಯಾದುದಾರರಾದ ಜಿ.ಎಸ್‌. ವಿಶ್ವನಾಥ್‌, ಸಿ.ಪಿ.ಐ. ಬೀರೂರು. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಖಚಿತ ಮಾಹಿತಿ ಮೇರೆಗೆ ಬೀರೂರು ನಿಂದ ಲಿಂಗದಹಳ್ಳಿಗೆ ಹೋಗುವ ಟಾರು ರಸ್ತೆಯ ಮಲ್ಲಪ್ಪರವರ ತೆಂಗಿನ ತೋಟದ ಬಳಿ ಇರುವ ರಸ್ತೆಯಲ್ಲಿ ಆರೋಪಿ ಪ್ರದೀಪ, ಜಯಮ್ಮ ಹಾಗೂ ಸತೀಶ್‌ ಹೊಗರಖಾನ್‌ ವಾಸಿಗಳು ಕಾನೂನು ಬಾಹಿರವಾಗಿ 01 ಕೆ.ಜಿ 700 ಗ್ರಾಂ ತೂಕದ ಗಾಂಜಾ ಸೊಪ್ಪನ್ನು ಇಟ್ಟುಕೊಂಡು ಮಾರಾಟಮಾಡುತಿದ್ದು, ಆರೋಪಿ 02 ಮತ್ತು 03 ರವರು ಕಾನೂನು ಬಾಹಿರವಾಗಿ 4 ಕೆ.ಜಿ. 450 ಗ್ರಾಂ ತೂಕದ ಗಾಂಜಾ ಸೊಪ್ಪನ್ನು ಹೊಗರೇಖಾನ್‌ ಗಿರಿಯ ಮನೆಯಲ್ಲಿ ಇಟ್ಟುಕೊಂಡು ಕಾನೂನು ಬಾಹಿರವಾಗಿ ಮಾರಾಟ ಮಾಡುತಿದ್ದವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ 06 ಕೆ.ಜಿ. 150 ಗ್ರಾಂ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡು ಮಹಜರ್ ಕ್ರಮ ಜರುಗಿಸಿರುತ್ತೆ, ಇದರ ಅಂದಾಜು ಬೆಲೆ ಒಂದು ಲಕ್ಷದ ಐದು ಸಾವಿರ ರೂಗಳಾಗಿರುತ್ತೆ.
ಸುಲಿಗೆ ಪ್ರಕರಣ
ನಗರ ಪೊಲೀಸ್‌ ಠಾಣೆ ಮೊ.ಸಂ.240/2013 – ಕಲಂ: 392 ಐಪಿಸಿ – ಪಿರ್ಯಾದುದಾರರು ಮಲ್ಲರಾಜ್‌ಅರಸ್‌ ಕೋಟೆ ವಾಸಿ ಇವರು ಸುಗ್ಗಿಕಲ್ ರಸ್ತೆಯಲ್ಲಿರುವ ಮನೆಯಲ್ಲಿ ಅವರ ತಾಯಿ ರಂಗಮ್ಮ 95 ವರ್ಷ ,ರವರೊಂದಿಗೆ ವಾಸವಾಗಿದ್ದು ದಿನಾಂಕ:27-12-2013 ರಂದು ಸಂಜೆ 5-00 ಗಂಟೆಗೆ ಪಿರ್ಯಾದುದಾರರು ಪೇಟೆ ಕಡೆಗೆ ಬಂದಿದ್ದು ರಾತ್ರಿ ಸುಮಾರು 8-30 ಗಂಟೆಗೆ ಹಿಂದಿರುಗಿ ಮೆನಗೆ ಬಂದಾಗ ತಾಯಿ ಸುಸ್ತಾಗಿ ಗಾಬರಿಯಿಂದ ಕುಳಿತಿದ್ದು ವಿಚಾರಿಸಿದಾಗ 7-00 ರಿಂದ 7-15  ಗಂಟೆ ಸಮಯದಲ್ಲಿ ಅಪರಿಚಿತನೋರ್ವ ಮನೆಯೊಳಗೆ ಬಂದು ವಿದ್ಯುತ್ ಆಫ್ ಮಾಡಿ ಬಾಯಿಗೆ ಬಟ್ಟೆ ಕಟ್ಟಿ ಸುಮಾರು 15 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ತಿಳಿಸಿದ್ದು ಅದರ ಬೆಲೆ ಅಂದಾಜು 37.500/- ರೂ ಇರುತ್ತದೆ ಇತ್ಯಾದಿ.

Monday, December 23, 2013

Daily Crimes Report Dated:22/12/2013ಜೂಜಾಟ ಪ್ರಕರಣ
ಎನ್‌ಆರ್‌ಪುರ ಪೊಲೀಸ್‌ ಠಾಣೆ ಮೊ.ಸಂ.179/2013 – ಕಲಂ: 87 ಕೆ.ಪಿ ಆಕ್ಟ್ – ದಿನಾಂಕ 22/12/2013 ರಂದು 1700 ಗಂಟೆಯಲ್ಲಿ  ನ.ರಾ.ಪುರ ವೃತ್ತ ನಿರೀಕ್ಷಕರವರಿಗೆ ಬಂದ ಖಚಿತ ಮಾಹಿತಿಯಂತೆ ಕಾನೂರು ಗ್ರಾಮದ ಕೆರೆಮನೆಯ ಬಸ್ಸ್‌‌ ನಿಲ್ದಾಣದ ಹಿಂಭಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ  ಇಸ್ವೀಟ್‌‌ ಜೂಜಾಟವಾಡುತ್ತಿದ್ದ ಆರೋಪಿಗಳಾದ 1) ವಿಜಯಕುಮಾರ್ 2] ಕೆ.ಎಂ. ಸತೀಶ 3] ಅಯ್ಯಪ್ಪ 4] ಚಂದ್ರಶೇಖರ 5] ಸಂದೀಪ 6] ಶಿವದಾಸ್ 7] ಪ್ರಮೋದ್ ವಿ ರವರುಗಳನ್ನು ಹಿಡಿದಿದ್ದು. ಪಂಚರ ಸಮಕ್ಷಮದಲ್ಲಿ ಒಟ್ಟು ಜೂಜಾಟವಾಡಲು ಬಳಸಿದ 52 ಇಸ್ಪೀಟ್‌ ಎಲೆಗಳು, ಒಟ್ಟು 4205/- ರೂಗಳು ಹಾಗೂ ಒಂದು ನ್ಯೂಸ್‌ ಪೇಪರ್‌ನ್ನು  ಮಾನತ್ತುಪಡಿಸಿಕೊಂಡಿದ್ದಾಗಿರುತ್ತೆ.
 ಜೂಜಾಟ ಪ್ರಕರಣ
ಲಿಂಗದಹಳ್ಳಿ  ಪೊಲೀಸ್‌ ಠಾಣೆ ಮೊ.ಸಂ.80/2013 – ಕಲಂ: 87 ಕೆ.ಪಿ ಆಕ್ಟ್ – ದಿನಾಂಕ 22/12/2013 ರಂದು 1530 ಗಂಟೆಯಲ್ಲಿ ಬಂದ ಖಚಿತ ಮಾಹಿತಿ ಮೇರೆಗೆ  ತಣಿಗೆಬೈಲು  ಗ್ರಾಮಕ್ಕೆ ಹೋಗಿ  ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು  ಖಾತ್ರಿ ಪಡಿಸಿಕೊಂಡು ತಣಿಗೆ ಬೈಲು ಸಾರ್ವಜನಿಕ  ಸ್ಥಳಕ್ಕೆ  ಹೋಗಿ ನೋಡಲಾಗಿ 7 ಜನರು  ದುಂಡಾಗಿ ಕುಳಿತು ಇಸ್ಪೀಟ್ ಎಲೆಗಳ ಸಹಾಯದಿಂದ ಒಳಗೆ ಹೊರಗೆ ಎಂದು ಜೂಜಾಟ ಆಡುತ್ತಿದ್ದು ಕಂಡು ಬಂದಿತು ಜೂಜಾಟ ಆಡುತ್ತಿದ್ದವರನ್ನು ಹಿಡಿಯಲು ಹೋದಾಗ ಓಡಲು ಪ್ರಯತ್ನ ಪಟ್ಟವರನ್ನು ಹಿಡಿಯುವಾಗ್ಗೆ  3  ಜನ   ಪರಾರಿಯಾಗಿದ್ದು ಉಳಿದ 4   ಜನರನ್ನು ಹಿಡಿದು  ಓಡಿ ಹೋದವರ ಹೆಸರುಗಳನ್ನು ಸಿಕ್ಕ ಬಿದ್ದ ವರಿಂದ ಕೇಳಲಾಗಿ  1] ರಾಮಲಿಂಗ @ ರಾಮಚಂದ್ರ  ಬಿನ್ ರಂಗಪ್ಪ   ವಾಸ ಗೋಪಾಲಪುರ  2] ಮುಂಗಸಿ  ವಾಸ  ಕಲ್ಶೆಡ್  3] ಸುಬ್ರಮಣಿ ಕೃಷ್ಣಾಪುರ  ಎಂದು ತಿಳಿಸಿದ್ದು ಇವರುಗಳು ಜೂಜಾಟ ಆಡಲು ಬಳಸಿದ್ದ ಒಂದು ಹಳೆಯ ನ್ಯೂಸ್ ಪೇಪರ್  52 ಇಸ್ಪೀಟ್ ಎಲೆಗಳು ಹಾಗೂ  4085/- ರೂ.ಗಳು.[ನಾಲ್ಕು ಸಾವಿರದ  ಎಂಬತ್ತೈದು] ನಗದು ಹಣ, ಕೆ.ಎ-15 ಇ-7078 ಸುಜುಕಿ ಆರ್.ಎಕ್ಸ್-100 ಬೈಕ್ ಇವುಗಳನ್ನು ಮಹಜರನಲ್ಲಿ ಅಮಾನತ್ತು ಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತೆ.

Saturday, December 21, 2013

Daily Crimes Report Dated:20/12/2013ಕಳುವು ಪ್ರಕರಣ
ನಗರ ಪೊಲೀಸ್‌ ಠಾಣೆ ಮೊ.ಸಂ.232/2013 – ಕಲಂ: 380 ಐಪಿಸಿ – ಪಿರ್ಯಾದುದಾರರು ವಿಶ್ವನಾಥ್‌ ಸಂಗೀತಾ ಶೋ ರೂಂ ಎಂಜಿರಸ್ತೆ ಇವರು ದಿನಾಂಕ 15/12/2013 ರಂದು 1420 ಗಂಟೆಯಲ್ಲಿ  ಒಬ್ಬರೇ ಶೋ ರೂಮ್ ನಲ್ಲಿ ಇರುವಾಗ್ಗೆ ಯಾರೋ 5 ಜನ ಅಪರಿಚಿತರು ಶೋ ರೂಂ ನ ಸೆಟ್ ಗಳನ್ನು ನೋಡಲು ಮತ್ತು ವಿಚಾರಿಸಲು ಆರಂಬಿಸಿದರು.ಅವರಲ್ಲಿ ಯಾರೂ ಸಹ ಯಾವುದೇ ಮೊಬೈಲ್ ಖರೀದಿಸದೇ ಹಿಂತಿರುಗಿದರು ನಂತರ ಸ್ಟಾಕ್ ಚೆಕ್ ಮಾಡಿ ನೋಡಿದಾಗ ಹೆಚ್ಚು ಕಡಿಮೆ ಬಂದಾಗ ಎರಡು ಸೋನಿ ಎರಿಕ್ಸನ್  ಕಂಪನಿಯ ಮೊಬೈಲ್ ಗಳು ಕಾಣದಿರುವುದನ್ನು ಮನಗಂಡು ಭಾನುವಾರದ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾದ ವೀಡಿಯೋ ಕ್ಲಿಪ್ ವೀಕ್ಷಿಸಿದಾಗ ಎರಡು ಜನರ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಯು ನಮ್ಮ ಶೋ ರೂಂ ನಲ್ಲಿದ್ದ ಎರಡು ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಕಳ್ಳತನ ಮಾಡಿ ಅದನ್ನು ಮಗುವನ್ನು ಎತ್ತಿಕೊಂಡ ವ್ಯಕ್ತಿಗೆ ನೀಡಿದ ದೃಶ್ಯ ನಮ್ಮ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿವೆ ಕಳ್ಳತನ ವಾದ ಮೊಬೈಲ್ ಗಳ.ಬೆಲೆ-27,989/-
ಮೋಟಾರ್‌ ಸೈಕಲ್‌ ಕಳುವು ಪ್ರಕರಣ
ಯಗಟಿ ಪೊಲೀಸ್‌ ಠಾಣೆ ಮೊ.ಸಂ.107/2013 – ಕಲಂ: 379 ಐಪಿಸಿ – ಫಿರ್ಯಾದಿ ಈಶ್ವರಪ್ಪ ಚಿಕ್ಕಬಾಸೂರು ಗ್ರಾಮ ¤ÃrzÀ ದೂರಿನ ಸಾರಾಂಶವೇನೆಂದರೆ ತಿಮ್ಮಯ್ಯ ರವರ ಬಾಬ್ತು ಕೆ.ಎ-18-ಜೆ-6775 ಹಿರೋಹೊಂಡ ಸ್ಪೇಂಡರ್‌ ಮೊಟಾರ್‌ ಸೈಕಲನ್ನು ದಿನಾಂಕ 20/11/2013 ರಂದು 2200 ಗಂಟೆಯಲ್ಲಿ  ಮನೆಯ ಮುಂದೆ ನಿಲ್ಲಿಸಿ ಲಾಕ್‌ ಮಾಡಿದ್ದು ಯಾರೋ ಸಂಬಂದಿಕರು ಸ್ನೇಹಿತರು ತೆಗೆದುಕೊಂಡು ಹೋಗಿರುತ್ತಾರೆಂದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಬಂದಿಕರುಗಳ ಮನೆಗಳಲ್ಲಿ ಹುಡುಕಾಡಿದ್ದು ಸಿಕ್ಕಿರುವುದಿಲ್ಲ. ಬೆಲೆ ಅಂದಾಜು 25,000/- ರೂ ಗಳಾಗಿರುತ್ತೆ.
ಮನುಷ್ಯ ಕಾಣೆ
ಕಡೂರು ಪೊಲೀಸ್‌ ಠಾಣೆ ಮೊ.ಸಂ.280/2013 – ಕಲಂ: ಮನುಷ್ಯ ಕಾಣೆ – ಪಿರ್ಯಾದುದಾರರಾದ ಗಂಗೀಬಾಯಿ ಶ್ರಿರಾಂಪುರ ವಾಸಿ ಇವರ  ಮಗ ಜಯರಾಮನು 25 ವರ್ಷ ಗಂಡ-ಹೆಂಡತಿಯರಲ್ಲಿ ವೈಮನಸ್ಸು ಉಂಟಾಗಿ ಹೆಂಡತಿ ಅನಿತಾಳು ಮನೆ ಬಿಟ್ಟು ಹೋಗಿರುತ್ತಾಳೆ.  ಇದೇ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು  ಬೇಜಾರ  ಮಾಡಿಕೊಂಡು ಜಯರಾಮನು  ಮನೆಯಲ್ಲಿ ಯಾರಿಗೂ ಹೇಳದೆ, ಕಾಣೆಯಾಗಿರತ್ತಾನೆ.
ಕೊಲೆ ಪ್ರಕರಣ
ಕಡೂರು ಪೊಲೀಸ್‌ ಠಾಣೆ ಮೊ.ಸಂ.281/2013 – ಕಲಂ: 302 201 392 120(ಬಿ) ಐಪಿಸಿ –    ಕಡೂರು  ಪಟ್ಟಣದಿಂದ  ಬಾಡಿಗೆಗೆಂದು, ಚವರ್‌ಲೆಟ್ ಕಾರ್ ನಂ ಕೆಎ-41-ಎಂ-5186 ನ್ನು  03 ಜನ ಆಸಾಮಿಗಳು.  ಚಾಲಕ ರುದ್ರೇಶನೊಂದಿಗೆ ಕರೆದುಕೊಂಡು ಹೋಗಿದ್ದು, ದಿನಾಂಕ:12-12-2013 ರ ವರೆಗೆ ವಾಪಸ್ ಬಾರದೇ ಇದ್ದುದರಿಂದ ಈ  ಬಗ್ಗೆ ಠಾಣೆಯಲ್ಲಿ  ಮೊ.ನಂ 276/2013 ಮನುಷ್ಯ ಕಾಣೆ ರೀತ್ಯಾ ಪ್ರಕರಣ ದಾಖಲಾಗಿದ್ದು. ಈ ಕೇಸಿನ  ತನಿಖೆ ಕಾಲದಲ್ಲಿ ರುದ್ರೇಶನನ್ನು ಬಾಡಿಗೆ ಕರೆದುಕೊಂಡು ಹೋದವರಲ್ಲೊಬ್ಬನಾದ  ಎಸ್. ಕಿರಣ @ ಪುಟ್ಟ, ಈತನನ್ನು ಹಿಡಿದುಕೊಂಡು ವಿಚಾರ ಮಾಡಿದಾಗ ಸುರೇಶ, ಉಮೇಶ, ಮತ್ತು ಕಿರಣ 03 ಜನ  ಸೇರಿ  ರುದ್ರೇಶನನ್ನು ಕಾರನ್ನು ಸುಲಿಗೆ ಮಾಡುವ ಉದ್ದೇಶದಿಂದ ಬಾಡಿಗೆಗೆ ಕಾರ್ ಸಮೇತ ದಿನಾಂಕ:06-12-2013  ರಂದು ಕಡೂರಿನಿಂದ ಕರೆದುಕೊಂಡು ಹೋಗಿ  ಬೆಳಗಿನ  ಜಾವ 04-30 ಗಂಟೆಗೆ ಬೆಂಗಳೂರು ಹೊಸೂರು ರಸ್ತೆಯಲ್ಲಿ ತಲಘಟ್ಟ ಪುರ ಹತ್ತಿರ   ಕಾರ್ ನಲ್ಲಿ ಆರೋಪಿತರು ಚಾಕುವಿನಿಂದ ಇರಿದು,  ರುದ್ರೇಶನನ್ನು ಕೊಲೆ ಮಾಡಿ  ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ  ಶವವನ್ನು ರಸ್ತೆ ಬದಿಯ ಗುಂಡಿಯಲ್ಲಿ ಎಸೆದು, ನಂತರ ಮೃತನ ಮೈ ಮೇಲಿದ್ದ ಚಿನ್ನ ಮತ್ತು ವಾಚ ನ್ನು ಕಾರ್ ಸಮೇತ ಸುಲಿಗೆ ಮಾಡಿಕೊಂಡು ಹೋಗಿರುತ್ತೇವೆಂದು ತಿಳಿಸಿದ ಮೇರೆಗೆ   ಪ್ರಕರಣ ದಾಖಲಿಸಿರುತ್ತೆ.