Sunday, February 02, 2014

Daily Crimes Report Dated:01-02/02/2014ಅಕ್ರಮ ಮದ್ಯ ವಶ
ಬಸವನಹಳ್ಳಿ  ಪೊಲೀಸ್‌ ಠಾಣೆ ಮೊ.ಸಂ.27/2014ಕಲಂ:34 ಕೆ.ಇ. ಆಕ್ಟ್ – ದಿನಾಂಕ 01/02/2014 ರಂದು1730 ಗಂಟೆಯಲ್ಲಿ ಡಿಸಿಐಬಿ ಇನ್ಸ್ಪೆಕ್ಟರ್‌ ಮತ್ತು  ತಮ್ಮ ಸಿಬ್ಬಂದಿ ಮತ್ತು ಪಂಚಾಯಿತದಾರರೊಂದಿಗೆ ಸಂಜೆ ಉಪ್ಪಳ್ಳಿ ದರ್ಗಾ ಬಳಿ ಹೋಗಿ ಕಾಯುತ್ತಿದ್ದಾಗ ಎರಡು ಜನರು ಕೆಎ.18 ಕ್ಯೂ.1843 ಮೋಟಾರ್ ಸೈಕಲ್ಲಿನಲ್ಲಿ ಚಿಕ್ಕಮಗಳೂರು ಕಡೆಯಿಂದ ಬರುತ್ತಿದ್ದು ಪಿಐ ರವರು  ಅವರನ್ನು ತಡೆದು ಪರಿಶೀಲಿಸಲಾಗಿ  ಅವರು ಯಾವುದೇ ಪರವಾನಗಿ ಇಲ್ಲದೆ 180 ಎಂ.ಎಲ್. ಕ್ಯಾಪ್ಟನ್ ಮಾರ್ಟಿನ್ 30 ವಿಸ್ಕಿ ಬಾಟಲಿಗಳು, ಕ್ಯಾಪ್ಟನ್ ಮಾರ್ಟಿನ್ ವಿಸ್ಕಿಯ 90 ಎಂ.ಎಲ್.ನ 36 ಸ್ಯಾಚೆಟ್ ಗಳು ಇದ್ದು ರಟ್ಟಿನ ಬಾಕ್ಸಿನಲ್ಲಿ  330 ಎಂ.ಎಲ್.ನ  ಕಿಂಗ್ ಫೀಶರ ಬೀರ್ ಬಾಟಲಿಗಳಿರುವುದು ಕಂಡು ಬಂದ ಮೇರೆಗೆ ಅವರುಗಳನ್ನು ವಿಚಾರ ಮಾಡಲಾಗಿ  ಮಧ್ಯವನ್ನು ಉಪ್ಪಳ್ಳಿಯಲ್ಲಿ ಮಾರಾಟ ಮಾಡಲು ಅಕ್ಷಯ ಬಾರ್ ಮಾಲೀಕರಾದ ಗ್ಲಾಡ್ಸನ್ ಪಿಂಟೋರವರು ಕಳುಹಿಸಿಕೊಟ್ಟಿರುತ್ತಾರೆಂದು ತಿಳಿಸಿರುತ್ತಾರೆ.   ಆರೋಪಿಗಳಾದ ಯೂಸಪ್‌ ಹಾಗೂ ಗಂಗಾಧರ ಇವರನ್ನು ದಸ್ತಗಿರಿ ಮಾಡಿ  ಅವರ ವಶದಲ್ಲಿದ್ದ  3500ರೂ ಬೆಲೆಯ ಮಧ್ಯವನ್ನು  ಮಹಜರ್ ಮುಖೇನ ವಶಪಡಿಸಿಕೊಂಡಿರುತ್ತೆ.
ದೇವಸ್ಥಾನದ ವಿಗ್ರಹ ಕಳುವು ಪ್ರಕರಣ
ಗೋಣಿಬೀಡು  ಪೊಲೀಸ್‌ ಠಾಣೆ ಮೊ.ಸಂ.14/2014ಕಲಂ:454 457 380 ಐಪಿಸಿ – ಶ್ರೀ ಕ್ಷೇತ್ರ ಅಂಗಡಿಯ ಸಂಚಾಲಕರಾದ ಎ.ಎಸ್ ನಾಗರಾಜ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:01/02/2014 ರಂದು ಅಂಗಡಿ ಗ್ರಾಮದ ಜೈನ ಬಸದಿಯ 3 ತೀರ್ಥಂಕರ ವಿಗ್ರಹ ಹಾಗೂ ಒಂದು ನೇಮಿನಾಥ ವಿಗ್ರಹ ಕಳ್ಳತನವಾಗಿದೆ ಎಂದು ಬಸದಿಯ ಅರ್ಚಕರಾದ ಧರಣೇಂದ್ರಭಟ್ ರವರು ಪೋನ್ ಮುಖಾಂತರ ತಿಳಿಸಿದ ಮೇರೆಗೆ  ಹೋಗಿ ನೋಡಲಾಗಿ ಹೊಯ್ಸಳರ ಕಾಲದಲ್ಲಿ ಸ್ಥಾಪನೆಯಾದ ಸುಮಾರು 900 ವರ್ಷಗಳ ಪುರಾತನ ಕಾಲದ ತೀರ್ಥಂಕರ ಬಸದಿಯಲ್ಲಿದ್ದ 22 ನೇ ತೀರ್ಥಂಕರ ನೇಮಿನಾಥ ಸ್ವಾಮಿ, 23 ನೇ ತೀರ್ಥಂಕರ ಆದಿನಾಥ ಸ್ವಾಮಿ, 24 ನೇ ತೀರ್ಥಂಕರ  ಮಲ್ಲಿನಾಥ ಸ್ವಾಮಿ ವಿಗ್ರಹಗಳು, ಹಾಗೂ ಮಹಾವೀರ ಬಸದಿಯಲ್ಲಿದ್ದ ನೇಮಿನಾಥ ವಿಗ್ರಹ ಕಳ್ಳತನವಾಗಿರುತ್ತೆ.ದಿನಾಂಕ:29/01/2014 ರಂದು ಬುಧವಾರ ಬೆಳಿಗ್ಗೆ  ಅರ್ಚಕರು ಕೊನೆಯದಾಗಿ ನೋಡಿರುತ್ತಾರೆ.ಸದರಿ ದೇವಸ್ಥಾನದ ನಾಲ್ಕು ವಿಗ್ರಹಗಳನ್ನು ಗರ್ಭಗುಡಿಯ ಬಾಗಿಲು ತೆಗೆದು ಒಳನುಗ್ಗಿ  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಅವುಗಳ  ಅಂದಾಜು ಬೆಲೆ 70 ಲಕ್ಷ ರೂ ಗಳಾಗಿರುತ್ತೆ.

Saturday, February 01, 2014

Daily Crimes Report Dated:31-01/02/2013ಮನುಷ್ಯ ಕಾಣೆ
ಬಸವನಹಳ್ಳಿ  ಪೊಲೀಸ್‌ ಠಾಣೆ ಮೊ.ಸಂ.26/2014ಕಲಂ:ಮನುಷ್ಯ ಕಾಣೆ – ಪಿರ್ಯಾದುದಾರರಾದ ಸಂಗೀತಾ ಬಸವನಹಳ್ಳಿ ವಾಸಿ ಇವರ ಮಗಳಾದ ಗಾಯಿತ್ರಿ 18 ವರ್ಷ  ಇವಳಿಗೆ ವಿಜಯಪುರ ಆದಿ ಬೂತಪ್ಪ ದೇವಸ್ಥಾನ ರಸ್ತೆಯ ವಾಸಿ ಲೋಕೇಶ್ ರವರ ಮಗಳಾದ ಐಶ್ವರ್ಯ 17 ವರ್ಷ  ಇಬ್ಬರೂ ಸ್ನೇಹಿತರಾಗಿದ್ದು ಅವಳೂ ಸಹ ಎಸ್.ಟಿ.ಜೆ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಓದುತ್ತಿದ್ದು ಇಬ್ಬರೂ ಒಬ್ಬರನ್ನು ಬಿಟ್ಟು ಒಬ್ಬರು ಇರದೇ ಇದ್ದು ಐಶ್ವರ್ಯ ಮನೆಯಲ್ಲಿ ನಾವು ಮನೆಬಿಟ್ಟು ಹೋಗುತ್ತಿದ್ದು ಹುಡುಕಬೇಡಿ ಎಂದು ಹೇಳಿ  ಪತ್ರ ಬರೆದಿಟ್ಟು ಕಾಣೆಯಾಗಿದ್ದು ಪತ್ತೆಮಾಡಿಕೊಡಿ ಎಂದು ನೀಡಿದ ದೂರನ್ನು ಸ್ವೀಕರಿಸಿ ಕೇಸು ದಾಖಲಿಸಿರುತ್ತೆ.
ಜೂಜಾಟ ಪ್ರಕರಣ
ಮೂಡಿಗೆರೆ  ಪೊಲೀಸ್‌ ಠಾಣೆ ಮೊ.ಸಂ.07/2014ಕಲಂ:87 ಕೆ.ಪಿ. ಆಕ್ಟ್ -  ದಿನಾಂಕ 31/01/2014 ರಂದು 1730 ಗಂಟೆಗೆ ಹಳೇಕೋಟೆ ಪ್ಲಾಂಟೇಷನ್‌ ಬಳಿ ಜೂಜಾಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಪಿಎಸ್‌ಐ ರವರು ಸ್ಥಳಕ್ಕೆ ಹೋಗಿ ನೋಡಲಾಗಿ ಆರೋಪಿಗಳು ಹಣವನ್ನು ಪಣವನ್ನಾಗಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದವರಲ್ಲಿ ಇಬ್ಬರನ್ನು ವಶಕ್ಕೆ ಪಡೆದು, ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ 2,450-00 ರೂ ನಗದು ಹಣ, 52 ಇಸ್ಪಿಟ್ ಎಲೆಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿಗಳಾದ ರಮೇಶ್‌ ಹಾಗೂ ಇತರೆ 7 ಜನರನ್ನು ದಸ್ತಗಿರಿ ಮಾಡಿರುತ್ತೆ.
ಕೊಲೆ ಪ್ರಕರಣ
ಹರಿಹರಪುರ  ಪೊಲೀಸ್‌ ಠಾಣೆ ಮೊ.ಸಂ.03/2014ಕಲಂ:302 ಐಪಿಸಿ -  ಪಿರ್ಯಾದುದಾರರಾದ ಶೋಭ ಚಿಕ್ಕಮಗಳೂರು ವಾಸಿ ಇವರು  ಮತ್ತು ದಿಲೀಪ್ ಕುಮಾರ್ ಪ್ರೀತಿಸಿ  ಮದುವೆಯಾಗಿ 13 ವರ್ಷಗಳಾಗಿದ್ದು ದಿನಾಂಕ29/01/2014 ರಂದು ಪೀರ್ಯಾದುದಾರರ ಗಂಡ ದಿಲೀಪ್ ಕುಮಾರ್  ಸ್ವಂತ ಊರಾದ  ಕೊಪ್ಪ ತಾಲ್ಲೂಕು ಭಂಡಿಗಡಿ  ಗ್ರಾಮಕ್ಕೆ ಹೋಗಿ ಬರುತ್ತೇನೆಂದು  ಹೇಳಿ  ಹೋದವರು ದಿನಾಂಖ 31/01/2014 ರಂದು ಪೀರ್ಯಾದುದಾರರು ಮನೆಯಲ್ಲಿದ್ದಾಗ  ರಾತ್ರಿ 10-00 ಗಂಟೆಗೆ  ತನ್ನ ಗಂಡನ ಅಕ್ಕ ಮಲ್ಲಿಕಾರವರು  ಪೋನ್ ಮಾಡಿ ದಿಲೀಪ್ ಕುಮಾರ್ ನನ್ನು  ಕಮ್ಮರಡಿಯಲ್ಲಿ ಯಾರೋ ಕೊಲೆ ಮಾಡಿರುತ್ತಾರೆ.ಎಂದು ವಿಚಾರ ತಿಳಿಸಿದ ಮೇರೆಗೆ  ಸಹ್ಯಾದ್ರಿ ಹೋಟೆಲ್ ನ ಆರ್ ಸಿ ಸಿ  ಮೇಲೆ ನೋಡಲಾಗಿ  ಪೀರ್ಯಾದುದಾರರ ಗಂಡ ಶವವಾಗಿ ಬಿದ್ದಿದ್ದು ಹರಿತವಾದ ಆಯುದದಿಂದ ತಲೆಯ  ಹಿಂಭಾಗದಲ್ಲಿ 3-4 ಕಡೆ  ಕೊಚ್ಚಿ ಯಾರೋ ಕೊಲೆ ಮಾಡಿರುತ್ತಾರೆ.
ಮನುಷ್ಯ ಕಾಣೆ
ಲಕ್ಕವಳ್ಳಿ  ಪೊಲೀಸ್‌ ಠಾಣೆ ಮೊ.ಸಂ.26/2014ಕಲಂ:ಮನುಷ್ಯ ಕಾಣೆ -  ಪಿರ್ಯಾದಿ ಲೋಕೇಶಪ್ಪ ಕರಕುಚ್ಚಿ ವಾಸಿ ಇವರ ಮಗ ಜಯರಾಜ ಈತನು ದಿನಾಂಕ 10/01/2014 ರಂದು ಕರಕುಚ್ಚಿ ಗ್ರಾಮದಿಂದ ಹೋದವನು ಮನಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾನೆ ಪತ್ತೆಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ.
ಮೋಟಾರ್‌ ಸೈಕಲ್‌ ಕಳ್ಳತನ
ಕಡೂರು ಪೊಲೀಸ್‌ ಠಾಣೆ ಮೊ.ಸಂ.31/2014ಕಲಂ:379 ಐಪಿಸಿ -ಪಿರ್ಯಾದುದಾರರಾದ ಸುಕುಮಾರ್‌ ಕಡೂರು ವಾಸಿ ಇವರ  ಬಾಬ್ತು ನಂ ಕೆಎ-18-ವಿ-7302 ರ   ಹೀರೊ ಹೊಂಡಾ ಸ್ಪ್ಲೆಂಡರ್ ಪ್ರೋ ಬೈಕ್ ನ್ನು ದಿನಾಂಕ 29/01/2014 ರಂದು ಮನೆಯ ಮುಂದೆ ನಿಲ್ಲಿಸಿದ್ದು ಬೆಳಗ್ಗೆ ಎದ್ದು.  ನೋಡಿದಾಗ ಮನೆ ಮುಂದೆ ನಿಲ್ಲಿಸಿದ ಬೈಕ್ ಇರಲಿಲ್ಲ. ಚೇತನನ ಸ್ನೇಹಿತರು ಯಾರಾದರೂ ತೆಗೆದುಕೊಂಡು ಹೋಗಿರಬಹುದೆಂದು ತಿಳಿದು ವಿಚಾರಿಸಿದ್ದು ಎಲ್ಲೂ  ಸಿಗದೆ ಇದ್ದ ಕಾರಣ ಈ ದಿನ ತಡವಾಗಿ,   ಹುಡುಕಿಕೊಡಲು ಕೋರಿ ನೀಡಿದ ದೂರು ಇತ್ಯಾದಿ.