ಅಪಘಾತದಲ್ಲಿ ಸಾವು
ಎನ್‌ಆರ್‌ಪುರ ಪೊಲೀಸ್ ಠಾಣೆ ಮೊ.ಸಂ.120/2012 ಕಲಂ 279 337 :- ದಿನಾಂಕ 12/09/2012 ರಂದು 0900 ಫಿರ್ಯಾದುದಾರರಾದ ರವಿಚಂದ್ರ ಹಾಗೂ ಸುರೇಶ ಇಬ್ಬರು ಹೀರೋ ಸ್ಪ್ಲೆಂಡರ್‌ಪ್ರೋ ಬೈಕಿನ್ನು ಸುರೇಶನು ಓಡಿಸುತ್ತಿದ್ದು, ಎದುರುಗಡೆಯಿಂದ ಬಂದ ಗೂಡ್ಸ್ ಆಟೋ ಚಾಲಕ ತನ್ನ ಬಾಬ್ತು ಗೂಡ್ಸ್‌ಆಟೋವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಬೈಕಿಗೆ ಡಿಕ್ಕಿಹೊಡೆಸಿ ಪರಿಣಾಮ, ಸುರೇಶನ ಮುಖಕ್ಕೆ ಪೆಟ್ಟುಬಿದ್ದು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.
ಮೋಟಾರ್ ಸೈಕಲ್ ಕಳುವು
ಬೀರೂರು ಪೊಲೀಸ್ ಠಾಣೆ ಮೊ.ಸಂ.108/2012 ಕಲಂ 379 ಐಪಿಸಿ;- ದಿ:10-01-2012 ರಂದು ರಾತ್ರಿ ಪಿರ್ಯಾದುದಾರರಾದ ಲೋಕೇಶಪ್ಪ ಇವರು ತನ್ನ ಬಾಬ್ತು KA 18/K 972 ಹೀರೋಂಹೊಂಡಾ ಪ್ಯಾಷನ್ ಮೋಟಾರ್ ಬೈಕನ್ನು ಮನೆಯ ಮುಂದಿನ ಬಾಗಿಲಿನ ಹತ್ತಿರ ನಿಲ್ಲಿಸಿದ್ದನ್ನು ರಾತ್ರಿ ಯಾರೋ ಕಳ್ಳಲು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಪತ್ತೆಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ.
ಅಕ್ರಮ ಮದ್ಯ ವಶ
ಸಖರಾಯಪಟ್ಟಣ ಪೊಲೀಸ್ ಠಾಣೆ 89/2012 ಕಲಂ 34 ಕೆ.ಇ.ಆಕ್ಟ್ಃ- ದಿನಾಂಕ 12/09/2012 ರಂದು 0900 ಗಂಟೆಗೆ ಖಚಿತ ವರ್ತಮಾನದ ಮೇರೆಗೆ ಬಾಳೇನಹಳ್ಳಿ ಗ್ರಾಮಕ್ಕೆ ಹೋಗಿ ಇಬ್ಬರು ಅಸಾಮಿಗಳು ಹಿಡಿದುಕೊಂಡು ವಿಚಾರಿಸಲಾಗಿ ಮದ್ಯ ತುಂಬಿದ 180 ಎಂ ಎಲ್ ನ ಕ್ವಾರ್ಟರ್ ಬಾಟಲಿಗಳು ಇದ್ದವು 24 ಸ್ಯಾಶೆಟ್ ಗಳು ಇದ್ದವು ಒಟ್ಟು 14 ಕ್ವಾರ್ಟರ್ ಬಾಟಲಿಗಳು ಮಾರಾಟ ಮಾಡಲು ಇಟ್ಟುಕೊಂಡಿರುವುದಾಗಿ ತಿಳಿಸಿರುತ್ತಾರೆ. ಮಧ್ಯದ ಅಂದಾಜು ಬೆಲೆ 1200 ರೂಗಳಾಗಬಹುದು. ಆರೋಪಿಗಳ ಹೆಸರು ನಾರಾಯಣಶೆಟ್ಟಿ ಮತ್ತು ಕೆಂಚಶೆಟ್ಟಿ ಎಂಬುದಾಗಿರುತ್ತೆ.