Friday, November 09, 2012

Daily Crimes Report Dated:08/11/2012

ಜೂಜಾಟ ಪ್ರಕರಣ
ಎನ್‌ಆರ್‌ಪುರ ಪೊಲೀಸ್ ಠಾಣೆ ಮೊ.ಸಂ.134/2012 ಕಲಂ 87 ಕೆ.ಪಿ.ಆಕ್ಟ್‌‌-  ದಿನಾಂಕ 08/11/2012 ರಂದು 1830 ಗಂಟೆಯಲ್ಲಿ ವೃತ್ತದ  ನಿರೀಕ್ಷಕರವರಿಗೆ ಬಂದ ಖಚಿತ ವರ್ತಮಾನದಂತೆ  ಹಿಳುವಳ್ಳಿ ಗ್ರಾಮದ  ಸರ್ಕಾರಿ ಕಾಡಿನಲ್ಲಿ  ಯಾವುದೇ ಪರವಾನಗಿ ಇಲ್ಲದೆ ಇಸ್ಪಿಟ್ ಜುಜಾಟ ಆಡುತ್ತಿದ್ದ 5 ಜನರನ್ನು  ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಇಸ್ವೀಟ್‌ ಜೂಜಾಟಕ್ಕೆ ಬಳಿಸಿದ್ದ 900 ರೂಗಳನ್ನು ಹಾಗೂ ಒಂದು ಪ್ಲಾಸ್ಟಿಕ್‌ ಚೀಲ, 52 ಇಸ್ವೀಟ್‌ ಎಲೆ, ಹಾಗೂ ಒಂದು ಮೇಣದ ಬತ್ತಿಯನ್ನು ಅಮಾನತ್ತು ಪಡಿಸಿಕೊಂಡಿರುತ್ತೆ. ಆರೋಪಿಗಳಾದ ಉಮರ್‌ ಹಾಗೂ ಇತರೆ 5 ಜನರನ್ನು ದಸ್ತಗಿರಿ ಮಾಡಿರುತ್ತೆ.
ಮೋಸ ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ.168/2012 ಕಲಂ 420 ಐಪಿಸಿ :- ದಿನಾಂಕ 07/11/2012 ರಂದು ಪಿರ್ಯಾದುದಾರರಾದ ರಾಮಣ್ಣ ನರಿಗುಡ್ಡುನಹಳ್ಳಿ ವಾಸಿ ಇವರು ಐಜಿ ರಸ್ತೆಯಲ್ಲಿರುವ ಎಸ್‌ಬಿಎಂ ಬ್ಯಾಂಕಿಗೆ ಬೆಳಿಗ್ಗೆ 1100 ಗಂಟೆ ಸಮಯದಲ್ಲಿ ತನ್ನ ಬಳಿ ಇದ್ದ 500000/- ರೂ ಗಳ ಪೈಕಿ 250000/- ಹಣವನ್ನು ಡಿಪಾಸಿಟ್ಟ ಮಾಡಿ ಉಳಿದ 250000/- ಹಣವನ್ನು ಬ್ಯಾಗಿನಲ್ಲಿ ತೆಗೆದುಕೊಂಡು ಇಂಡಿಯನ್‌‌ ಬ್ಯಾಂಕ್‌ ಗೆ ಡಿಪಾಸಿಟ್‌‌ ಮಾಡಲು ತನ್ನ ಬೈಕ್‌ನಲ್ಲಿ ಇಟ್ಟುಕೊಳ್ಳುವಾಗ ಬ್ಯಾಂಕಿನ ಒಳಗಡೆಯಿಂದ ಬಂದ ಅನಾಮದೇಯ ವ್ಯಕ್ತಿ ನಿಮ್ಮ ಜೇಬಿನಿಂದ ಹಣ ಕೆಳಗೆ ಬಿದ್ದಿದಿ ಎಂದು ಹೇಳಿ ನಾನು ಕೆಳಗೆ ಬಗ್ಗಿ ಹಣ ತೆಗೆಯುವಷ್ಟರಲ್ಲಿ ಬೈಕ್‌ನ ಮೇಲಿದ್ದ ಬ್ಯಾಗ್‌ ಸಮೇತ ಹಣವನ್ನು ತೆಗೆದುಕೊಂಡು ಪರಾರಿಯಾಗಿರುತ್ತಾನೆ.

Thursday, November 08, 2012

Daily Crimes Report Dated:07/11/2012

ದರೋಡೆ ಪ್ರಕರಣ
ಕೊಪ್ಪ ಪೊಲೀಸ್ ಠಾಣೆ ಮೊ.ಸಂ.76/2012 ಕಲಂ 395 ಐಪಿಸಿ-  ಪಿರ್ಯಾದುದಾರರಾದ ವಿನಯ ವಿಟಲಮಕ್ಕಿ ವಾಸಿ ಇವರು ದೂರು ನೀಡಿದ್ದು ದಿನಾಂಕ 07/11/2012 ರಂದು ರಾತ್ರಿ 0100 ಗಂಟೆ ಸಮಯದಲ್ಲಿ ಯಾರೋ ಅಪರಿಚಿತ 6 ಜನ ಮುಸುಕುಧಾರಿಗಳು ಬಂದು ಬಾಗಿಲು ತೆಗಿಸಿ ಮನೆಯೊಳಗೆ ಬಂದಿದ್ದು, ತುಳುವಿನಲ್ಲಿ ಮಾತನಾಡುತ್ತಿದ್ದು, ನಿಮ್ಮ ಬಳಿ ಹಣ ಇದೆ ನಮಗೆ ಗೊತ್ತು ಎಂದು ಹೇಳಿ ಹೆದರಿಸಿ ಗಾಡ್ರೆಜ್‌ ಬೀರುವಿನ ಕೀಯನ್ನು ಪಡೆದು ಗಾಡ್ರೆಜ್‌ ಬೀರುವಿನಲ್ಲಿದ್ದ, ನಗದು ಹಣ, ನೋಕಿಯಾ ಮೊಬೈಲ್‌,ಮತ್ತು ವಡವೆ ವಸ್ತುಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದು,ದರೋಡೆ ಮಾಡಿಕೊಂಡು ಹೋದ ವಸ್ತುಗಳ ಒಟ್ಟು ಬೆಲೆ 75 ಲಕ್ಷ ಆಗುತ್ತದೆ.
ಮನುಷ್ಯ ಕಾಣೆ
ಅಜ್ಜಂಪುರ ಪೊಲೀಸ್ ಠಾಣೆ ಮೊ.ಸಂ.147/2012 ಕಲಂ ಮನುಷ್ಯ ಕಾಣೆ-  ಪಿರ್ಯಾದಿ ಕೆಂಚಮ್ಮ ಗಡಿಹಳ್ಳಿ ವಾಸಿ ಇವರು ನೀಡಿದ ದೂರಿನ ಸಾರಾಂಶವೆನೆಂದರೆ, ಅಜ್ಜಂಪುರದ ಕಿತ್ತೂರು ರಾಣಿ ಚನ್ನಮ್ಮ ವಿದ್ಯಾರ್ಥಿನಿಲಯದಲ್ಲಿ ನನ್ನ ಮೊಮ್ಮಗಳಾದ ಟಿ.ಎಂ.ರಂಜಿತಾ 12ವರ್ಷ ಇವಳು ವ್ಯಾಸಂಗ ಮಾಡತ್ತಿದ್ದು ರಂಜಿತಳ ಆನಾರೋಗ್ಯ ನಿಮಿತ್ತ ದಿನಾಂಕ 05/11/2012 ರಂದು 0800 ಗಂಟೆಯಲ್ಲಿ ಅಜ್ಜಯೊಂದಿಗೆ ಮೆಡಿಕಲ್ ಗೆ ಬಂದು ಮೆಡಿಕಲ್ ಅಂಗಡಿಯಿಂದ ಔಷದಿಯನ್ನು ಪಡೆದು ವಸತಿ ನಿಲಯಕ್ಕೆ ಬರುವ ಸಮಯದಲ್ಲಿ ಸಂತೆ ಮಾರ್ಕೆಟ್ ನ ಹೋರಿ ಸಂತೆಯ ಆವರಣದಲ್ಲಿ ಬರುವ ಸಮಯದಲ್ಲಿ ನನ್ನ  ಮೊಮ್ಮಗಳು ಕಳೆದು ಹೋಗಿರುತ್ತಾಳೆ. ಪತ್ತೆಮಾಡಿಕೊಡಬೇಕಾಗಿ ಕೋರಿಕೆ.

Wednesday, November 07, 2012

Daily Crimes Report Dated:06/11/2012

ಅಪಘಾತ ಪ್ರಕರಣ
ಸಂಚಾರ ಪೊಲೀಸ್ ಠಾಣೆ ಮೊ.ಸಂ.125/2012 ಕಲಂ 279 427 ಐಪಿಸಿ-  ದಿನಾಂಕ 06/11/2012 ರಂದು 1330 ಗಂಟೆಯಲ್ಲಿ ಬೇಲೂರು ರಸ್ತೆಯಲ್ಲಿ ಕೆಎ-18-ಎಂ-6188ರ ಮಾರುತಿ ಓಮ್ನಿ ಕಾರಿನ ಚಾಲಕ ಅತೀವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಕಾರು ನಿಲ್ಲಿಸಲು ಬಲಬದಿಗೆ ತಿರುಗಿಸಿದಾಗ, ಆಜಾದ್ ಪಾರ್ಕ್ ಕಡೆಯಿಂದ ಬಂದ ಕೆಎ-03-.ಇ.ವಿ-7620ರ ಮೋಟರ್ ಸೈಕಲ್ ಚಾಲಕ ಅತೀವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆಸಿದ್ದು,ಕಾರು ಚಾಲಕ ವೇಗದಲ್ಲಿ ಚಾಲನೆ ಮಾಡಿ, ಪಿರ್ಯಾದುದಾರರಾದ ಗಿರೀಶ ಪಿಡಬ್ಲುಡಿ  ಕ್ವಾರ್ಟಸ್‌‌ನಲ್ಲಿ ವಾಸವಿರುವ ವಸತಿ ಗೃಹದ ಕಾಂಪೌಂಡ್ ಗೆ ಡಿಕ್ಕಿ ಹೊಡೆದು, ಕಾಂಪೌಂಡ್ ಹಾನಿಗೊಂಡು ಸುಮಾರು 18000/- ರೂ ನಷ್ಠ ಉಂಟಾಗಿರುತ್ತೆ.

Tuesday, November 06, 2012

Daily Crimes Report Dated:05/11/2012

ಕಳುವು ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ.164/2012 ಕಲಂ 379 ಐಪಿಸಿ-  ದಿನಾಂಕ 04/11/2012 ರಂದು ರಾತ್ರಿ ವೇಳೆಯಲ್ಲಿ ಪಿರ್ಯಾದುದಾರರಾದ ಸೋಮಶೇಖರ್‌ ಕೋಟೆ ವಾಸಿ ಇವರು ತಮ್ಮ ಬಾಬ್ತು ಕಾರ್‌ ನಂ, ಕೆಎ03 ಝಡ್‌‌ 3964 ನ್ನು ನಿಲ್ಲಿಸಿದ್ದು ಬೆಳಿಗ್ಗೆ ಎದ್ದು ನೋಡಿದಾಗ ಕಾರು ಸ್ಥಳದಲ್ಲಿ ಇರಲಿಲ್ಲ ಎಲ್ಲಾ ಕಡೆ ಹುಡುಕಾಡುತ್ತಿದ್ದು, ನಂತರ ಮಂಜಣ್ಣ ಎಂಬುವರು ಪೋನ್‌ ಮಾಡಿ ತಿಳಿಸಿದ್ದು, ನಿಮ್ಮ ಕಾರು ಎಬಿಸಿ ಚೆಕ್‌ಪೋಸ್ಟ್‌ ಹತ್ತಿರ ನಿಂತಿದೆ ಎಂದು ಹೋಗಿ ನೋಡಲಾಗಿ ಕಾರಿನ ನಾಲ್ಕು ಚಕ್ರಗಳು ಡಿಸ್ಕ್‌ ಸಮೇತ ಕಳುವು ಮಾಡಿಕೊಂಡು ಹೋಗಿದ್ದು, ಬೆಲೆ 32000/-ರೂ ಗಳಾಗಿರುತ್ತೆ.
ಕಾಳುಮೆಣಸು ಕಳುವು
ನಗರ ಪೊಲೀಸ್ ಠಾಣೆ ಮೊ.ಸಂ.165/2012 ಕಲಂ 454 457 380  ಐಪಿಸಿ-  ದಿನಾಂಕ 03/11/2012 ರಂದು ಪಿರ್ಯಾದುದಾರರಾದ ಅನಿಲ್‌ಕುಮಾರ್‌ ಅಗಸರಬೀದಿ ವಾಸಿ ಇವರು ತಮ್ಮ ಬಾಬ್ತು  ಕಾಳು ಮೆಣಸು ಅಂಗಡಿಗೆ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ 05/11/2012 ರಂದು ಬೆಳಿಗ್ಗೆ ಅಂಗಡಿಗೆ ಬಂದು ನೋಡಿದಾಗ ಅಂಗಡಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು  ಹೊಡೆದು ಒಳಪ್ರವೇಶಿಸಿ ಒಳಗಡೆ ಇದ್ದ ಕಾಳು ಮೆಣಸು ಪೈಕಿ ಸುಮಾರು 86 ಕೆಜಿಯಷ್ಟು ಕಾಳು ಮೆಣಸನ್ನು ಕಳುವು ಮಾಡಿಕೊಂಡು ಹೋಗಿದ್ದು, ಬೆಲೆ ರೂ 40000/- ಗಳಾಗಿರುತ್ತೆ ಪತ್ತೆಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ.
ಮನುಷ್ಯ ಕಾಣೆ ಪ್ರಕರಣ
ಕೊಪ್ಪ ಪೊಲೀಸ್ ಠಾಣೆ ಮೊ.ಸಂ.75/2012 ಕಲಂ ಮನುಷ್ಯ ಕಾಣೆ-  ದಿನಾಂಕ 04/11/2012 ರಂದು ಎಎಲ್‌ಎನ್‌‌  ಸ್ಮಾರಕ ಆರ್ಯುವೇದ ಕಾಲೇಜು ಕೊಪ್ಪ ಪಟ್ಟಣದಲ್ಲಿ ದ್ವಿತೀಯ ಬಿಎಎಂಎಸ್‌‌‌ ವ್ಯಾಸಂಗ ಮಾಡುತ್ತಿದ್ದ  ವಿಶಾಕ್‌‌, 19 ವರ್ಷ ಮತ್ತು ಕು ತಸ್ಲೀಮಾ 21` ವರ್ಷ ಎಂಬುವರುಗಳು ಕಾಲೇಜಿನ ಕ್ಯಾಂಪಸ್‌‌ನಿಂದ ಹೊರಗಡೆ ಹೋದವರು ಕಾಲೇಜಿಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ರಮೇಶ್‌‌ಗೌಡ ಕಾಲೇಜಿನ ವಾರ್ಡನ್‌ ಇವರು ದೂರು ನೀಡಿರುತ್ತಾರೆ.
 ಅಪಘಾತದಲ್ಲಿ ಸಾವು
ತರೀಕೆರೆ  ಪೊಲೀಸ್ ಠಾಣೆ ಮೊ.ಸಂ.228/2012 ಕಲಂ 279 304(ಎ) ಐಪಿಸಿ-  ದಿನಾಂಕ 05/11/2012 ರಂದು 0330 ಗಂಟೆಯಲ್ಲಿ  ಪಿರ್ಯಾದಿ ನಾಗರಾಜ ಸ್ಯಾಂಟ್ರೋಕಾರಿನಲ್ಲಿ ಹಾಗು ಅವರ ಪತ್ನಿ ನಾಗವಲ್ಲಿ ನಾಗರಾಜು ರವರು ಕೆ.ಎ.14-ಎನ್.1238 ರ ಇಂಡಿಕಾ ಕಾರಿನಲ್ಲಿ ಬೆಂಗಳೂರಿನಿಂದ ಬದ್ರಾವತಿಗೆ ಬರುತ್ತಿರುವಾಗ ಬೆಟ್ಟದಹಳ್ಳಿ-ಕೋರನಹಳ್ಳಿ ಮದ್ಯೆ ಇರುವ ಬ್ರಿಡ್ಜ್ ಮೇಲೆ ಹಾದುಹೋಗಿರುವ ಎನ್.ಹೆಚ್.206 ರಸ್ತೆಯಲ್ಲಿ ರಸ್ತೆಯಲ್ಲಿ ತುಂಬಾ ಮಂಜು ಬೀಳುತ್ತಿದ್ದ ಪರಿಣಾಮ ನಾಗರಾಜು ರವರು ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ತಪ್ಪಿ ಬ್ರಡ್ಜ್ ನಿಂದ ಕಾರು ಕೆಳಕ್ಕೆ ಮಗಚಿಬಿದ್ದು ನಾಗರಜು ರವರಿಗೆ ಮೂಗಿಗೆ ಕಣ್ಣಿನ ಬಾಗಕ್ಕೆ ತಲೆಗೆ ತೀವ್ರತರ ಪೆಟ್ಟುಬಿದ್ದು ಅವರ ಪತ್ನಿ ನಾಗವಲ್ಲಿ ರವರಿಗೆ ಸೊಂಟಕ್ಕೆ ಹಣೆಗೆ ಮೈ ಕೈ ಕಾಲುಗಳಿಗೆ ತೀವ್ರತರ ಪೆಟ್ಟು ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಈ ಅಪಘಾತಕ್ಕೆ ನಾಗರಾಜುರವರ ನಿರ್ಲಕ್ಷವೇ ಕಾರಣವಾಗಿದ್ದು ಕಾನೂನು ಕ್ರಮ ಕೈಗೊಳ್ಳಲು ಕೋರಿಕೆ.
ಕಳುವು ಮಾಲು ವಶ
ಅಜ್ಜಂಪುರ ಪೊಲೀಸ್ ಠಾಣೆ ಮೊ.ಸಂ.146/2012 ಕಲಂ 41 ಕ್ಲಾಸ್‌‌(ಡಿ) 102 ಸಿಆರ್‌ಪಿಸಿ ರೆ.ವಿ. 380 ಐಪಿಸಿ-  ದಿನಾಂಕ 05/11/2012 ರಂದು ರಾತ್ರಿ ವೇಳೆಯಲ್ಲಿ ಪಿಎಸ್‌‌‌ಐ ರವರು ಗಸ್ತು ಮಾಡುತ್ತಿರುವಾಗ ಭವಾನಿ ಜ್ಯೂಯಲರ್ಸ್ ಅಂಗಡಿಯ ಬಳಿ ಮೂರು ಜನ ಆಸಾಮಿಗಳು ನಿಂತ್ತಿದ್ದು ಸದರಿ ಆಸಾಮಿಗಳು ಪೊಲೀಸ್ ಜೀಪನ್ನು ನೋಡಿ ಗಾಬರಿಗೊಂಡು ಮರೆಮಾಚಿಕೊಳ್ಳಲು ಪ್ರಯತ್ನಿಸಿದ್ದು ನನಗೆ ಅನುಮಾನ ಬಂದು ಜೀಪ್ ನಿಲ್ಲಿಸಿದ್ದನ್ನು ನೋಡಿ ಓಡಿಹೋದರು, ಆಗ ಸಿಬ್ಬಂದಿಯವರು ಅವರುಗಳನ್ನು ಬೆನ್ನತ್ತಿ ಇಬ್ಬರುಆಸಾಮಿಗಳನ್ನು ಹಿಡಿದುಕೊಂಡು ಬಂದಿದ್ದು ಒಬ್ಬ ಆಸಾಮಿಯು ತಪ್ಪಿಸಿಕೊಂಡು ಓಡಿ ಹೋದನು.  ಸದರಿ ಆಸಾಮಿಗಳನ್ನು ಚೆಕ್ ಮಾಡಿದಾಗ ಪರಮೇಶ ಎಂಬುವನ ಪ್ಯಾಂಟ್ ಜೇಬಿನಲ್ಲಿ ಬಂಗಾರದಂತಹ ಒಂದು ಉಂಗುರ ಇದ್ದು ಸದರಿ ಉಂಗುರ ಬಗ್ಗ ವಿಚಾರಿಸಿದಾಗ ಸರಿಯಾದ ಮಾಹಿತಿ ನೀಡದೆ ಇದ್ದುದರಿಂದ ಇದನ್ನು ಎಲ್ಲಿಯೋ ಕಳವು ಮಾಡಿರಬಹುದೆಂಬ ಸಂಶಯದಿಂದ ಸದರಿ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಸದರಿ ಆಸಾಮಿಗಳಿಬ್ಬರನ್ನು ಠಾಣೆಗೆ ಕರೆದುಕೊಂಡು ಬಂದು ಕೂಲಂಕುಶವಾಗಿ ವಿಚಾರ ಮಾಡಲಾಗಿ ಸದರಿ ಆರೋಪಿಗಳು ಈ ಹಿಂದೆ ಕರಕುಚ್ಚಿ, ಹಾಗೂ ರಂಗೇನಹಳ್ಳಿ ಗ್ರಾಮಗಳಲ್ಲಿ  ಬೀಗ ಹಾಕಿದ್ದ ಮನೆಗಳಿಗೆ ನುಗ್ಗಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದು,ಕರಕುಚ್ಚಿ ಗ್ರಾಮದಲ್ಲಿ ಕಳವು ಮಾಡಿದ್ದ ಬಂಗಾರದ ವಡವೆಗಳ ಪೈಕಿ ಒಂದು ಬಂಗಾರದ ಉಂಗುರವನ್ನು ಭವಾನಿ ಜ್ಯೂಯಲರ್ಸ್ ಅಂಗಡಿಗೆ ಮಾರಾಟ ಮಾಡಲು ಬಂದಿದ್ದಾಗಿ ತಿಳಿಸಿದ್ದರಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ. ಪರಮೇಶ ಮತ್ತು ರಮೇಶ ಎಂಬುವರನ್ನು ದಸ್ತಗಿರಿ ಮಾಡಿರುವುದಾಗಿರುತ್ತೆ.
ದಲಿತರ ಮೇಲೆ ದೌರ್ಜನ್ಯ ಪ್ರಕರಣ
ಬೀರೂರು ಪೊಲೀಸ್ ಠಾಣೆ ಮೊ.ಸಂ.125/2012 ಕಲಂ 504 323 324 34  ಐಪಿಸಿ & 3 ಕ್ಲಾಸ್‌‌(1) (10)ಎಸ್‌‌ಸಿಎಸ್‌‌ಟಿ ಆಕ್ಟ್‌‌-  ದಿನಾಂಕ 05/11/2012 ರಂದು 1400 ಗಂಟೆಯಲ್ಲಿ ಪಿರ್ಯಾದುದಾರರಾದ ಕೃಷ್ಣಮೂರ್ತಿ ಇವರ ತೋಟಕ್ಕೆ ಹೋಗಲು ಅದೇ ಊರಿನ ವಾಸಿ ಜಯಪ್ಪರವರ ತೋಟದ ದಾರಿಯಲ್ಲಿ ಹೋಗುತ್ತಿದ್ದಾಗ ಜಯಪ್ಪ ಮತ್ತು ಪ್ರಕಾಶ ನಮ್ಮ ತೋಟದ ದಾರಿಯಲ್ಲಿ ಓಡಾಡಬೇಡ ಎಂದು ಹೇಳಿದರೂ ಯಾಕೇ ಬರುತ್ತೀಯ ಬೋಳಿಮಗನೇ, ಎಂದು  ಬೈದವರೆ ಏಕಾಏಕಿ ಬಂದು ಜಯಪ್ಪರವರು ಹೊಂಗೆಮರದ ಕೋಲಿನಿಂದ ನನ್ನ ಎಡಬಾಗದ ಪಾದದ ಮೇಲ್ಬಾಗಕ್ಕೆ ಹಾಗೂ ಎಡಕೈನ  ಮುಂಗೈಗೆ  ಹೊಡದನು, ಪ್ರಕಾಶ ಎಂಬುವವನು  ನನ್ನ ಷರಟಿನ ಕೊರಳಪಟ್ಟಿ ಹಿಡಿದು ಎಳೆದಾಡಿ ಕೈಯಿಂದ ಬೆನ್ನಿಗೆ  ಹೊಡೆದನು, ಎರಡು ಕಾಲುಗಳನ್ನು ಹಿಡಿದು ಎಳೆದಾಗ ನೆಲದ ಮೇಲೆ ಬಿದ್ದಿದ್ದು  ಆಗ ಎಡಕಾಲಿನ ಮಂಡಿಚಿಪ್ಪು ಕಿತ್ತು ಗಾಯವಾಗಿರುತ್ತೆ ಇತ್ಯಾದಿ

Monday, November 05, 2012

Daily Crimes Report Dated:04/11/2012

ಕೊಲೆ ಪ್ರಕರಣ
ಮಲ್ಲಂದೂರು ಪೊಲೀಸ್ ಠಾಣೆ ಮೊ.ಸಂ.102/2012 ಕಲಂ 302 ಐಪಿಸಿ–  ದಿನಾಂಕ 04/11/2012 ರಂದು  ಈ ಕೃತ್ಯ ನಡೆದಿದ್ದು, ಪಿರ್ಯಾದುದಾರರಾದ ಮಲ್ಲಿಕಮ್ಮ ಕೊಳಗಾಮೆ ವಾಸಿ ಇವರ ªÀÄUÀ¼ÀÄ PÀÄ/ gÉÃtÄPÁ ¼À£ÀÄß ಆರೋಪಿ ರಾಜೇಶ ಮೂಡಿಗೆರೆ ವಾಸಿ ಈತನು EµÀÖ¥ÀnÖzÀÄÝ vÀ£ÀUÉ ªÀÄzÀÄªÉ ªÀiÁrPÉÆqÀĪÀAvÉ ¥ÀzÉÃ¥ÀzÉà ¥ÉÆÃ£ï ªÀiÁr §®ªÀAvÀ ªÀiÁqÀÄwÛzÀÄÝ DgÉÆÃ¦UÉ F ªÉÆzÀ¯É ªÀÄzÀĪÉAiÀiÁV JgÀqÀÄ ªÀÄPÀ̼ÀÄ EzÀÄÝzÀjAzÀ. gÉÃtÄPÁ½UÉ ªÀÄzÀÄªÉ ªÀiÁvÀÄPÀvÉ £ÀqÉAiÀÄÄwÛzÀÄÝ F «ZÁgÀ DgÉÆÃ¦UÉ w½zÀÄè ªÀÄ£ÉAiÀİè gÉÃtÄPÀ M§â¼É EzÁÝUÀ gÉÃtÄPÁ¼ÉÆA¢UÉ UÀ¯ÁmÉ ªÀiÁr DgÉÆÃ¦AiÀÄÄ ¦AiÀiÁð¢AiÀÄ ªÀÄ£ÉAiÀİzÀÝ MAzÀÄ M£ÀPɬÄAzÀ gÉÃtÄPÁ¼À vÀ¯ÉUÉ ºÉÆqÉzÀÄ PÉÆ¯ÉªÀiÁrgÀÄvÁÛ£É.
ಮನುಷ್ಯ ಕಾಣೆ
ಬಾಳೆಹೊನ್ನುರು ಪೊಲೀಸ್ ಠಾಣೆ ಮೊ.ಸಂ.141/2012 ಕಲಂ ಮನುಷ್ಯ ಕಾಣೆ–  ಪಿರ್ಯಾದುದಾರರಾದ ಯಲ್ಲಯ್ಯ ಕಣಬೂರು ಗ್ರಾಮದ ವಾಸಿ ಇವರ ಮಗಳಾದ ಗೀತಾ 20ವರ್ಷ ಇವಳು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಿದ್ದು,ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ ಪತ್ತೆಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ
ಕಳುವು ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ.227/2012 ಕಲಂ 454 457 380 ಐಪಿಸಿ– ದಿನಾಂಕ 02/11/2012 ರಂದು ಈ ಕೃತ್ಯ ನಡೆದಿದ್ದು, ಪಿರ್ಯಾದಿ ಕಲೈಮಣಿ ಬಸವೇಶ್ವರಬೀದಿ ವಾಸಿ  ಇವರು ಮನೆಗೆ ಬೀಗ ಹಾಕಿ ಹೋಗಿದ್ದು, ದಿನಾಂಕ 04/11/2012 ರಂದು ತಮ್ಮ ಮನೆಗೆ ಹೋದಾಗ ಮನೆಯ ಹಿಂಬಾಗಿಲು ತೆಗೆದಿದ್ದು ಯಾರೋ ಕಳ್ಳರು ಅಲ್ಮೇರಾದ ಬೀಗ ಹೊಡೆದು  ಬೀರ್‌ನಲ್ಲಿದ್ದ ವಸ್ತಗಳು ಸ್ಟೇರ್ ಕೇಸ್ ಮೇಲೆ ಇದ್ದು ಬೀರುವಿನಲ್ಲಿ ಇದ್ದ ವಡವೆ ಬಾಕ್ಸ್ ಕಾಣೆಯಾಗಿದ್ದು ಹಾಗು ವಡೆವೆಬಾಕ್ಸ್ ಮೇಲೆ ಇಟ್ಟಿದ್ದ ನಗದು ಎರಡು ಲಕ್ಷದ ಐದು ಸಾವಿರ ಹಣ ಕಂಡುಬಂದಿರುವುದಿಲ್ಲಾ ಎಲ್ಲಾ ವಡವೆಗಳು ಬಂಗಾರದವುಗಾಳಾಗಿದ್ದು 250ಗ್ರಾಂ ಬಂಗಾರ ಮತ್ತು ನಗದು ಸೇರಿ ರೂ 938000/- ಗಳಾಗಿದ್ದು ಪತ್ತೆಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ.

Sunday, November 04, 2012

Daily Crimes Report Dated:03/11/2012

ಹುಡುಗಿ ಕಾಣೆ
ಜಯಪುರ ಪೊಲೀಸ್ ಠಾಣೆ ಮೊ.ಸಂ.58/2012 ಕಲಂ ಹುಡುಗಿ ಕಾಣೆ– ದಿನಾಂಕ 02/11/2012 ರಂದು ಬಸರಿಕಟ್ಟೆಯಿಂದ ಪಿರ್ಯಾದುದಾರರಾದ ವಾಸು ಇವರ ಮೊದಲನೇ ಮಗಳಾದ ಕು|| ಪುಷ್ಪ, 14 ವರ್ಷ ಈಕೆಯು ದಿನಾಂಕ 02-11-12 ರಂದು ಮನೆಯಿಂದ ಹೊರಟು ಅಂಗಡಿಗೆ ಬಸರೀಕಟ್ಟೆ ಹೋಗಿಬರುತ್ತೇನೆಂದು  ಹೇಳಿ ಹೋದವಳು ಇದುವರೆಗೂ ಹಿಂತಿರುಗಿ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ,ಪರಿಚಯದವರ ಮತ್ತು ಸಂಭಂದಿಕರ ಮನೆಯಲ್ಲಿ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲಾ.

Saturday, November 03, 2012

Daily Crimes Report Dated:02/11/2012

ಮೊಬೈಲ್‌ ಸೆಟ್‌‌ ಕಳುವು
ತರೀಕೆರೆ  ಪೊಲೀಸ್ ಠಾಣೆ ಮೊ.ಸಂ.225/2012 ಕಲಂ 379 ಐಪಿಸಿ– ದಿನಾಂಕ 02/11/2012 ರಂದು 1900 ಗಂಟೆಯಲ್ಲಿ ಶಾಂತಲಾ ವೈನ್ಸ್ ಸ್ಟೋರ್ ನಲ್ಲಿ ಪಿರ್ಯಾದುದಾರರಾದ ಶೇಖರ್‌‌ ಮದ್ಯಮರಾಟ ಮಾಡುತ್ತಿದ್ದು ಆರೋಪಿ ವಸಂತಕುಮಾರ ಈತನು ಕ್ಯಾಷ್ ಟೇಬಲ್ ಹತ್ತಿರ ನಿಂತುಕೊಂಡು ಮದ್ಯಕೇಳುತ್ತಾ ಪಿರ್ಯಾದಿಯ ಕಣ್ಣು ತಪ್ಪಿಸಿ ಪಿರ್ಯಾದಿ ಅಂಗಿಯ  ಜೇಬಿನಲ್ಲಿ ಇದ್ದ  ಓರಿಯನ್ ಕಂಪನಿಯ ಮೊಬೈಲ್ ಸೆಟ್ ಅನ್ನು ಕಳ್ಳತನ ಮಾಡಿದ್ದು ಈ ಮೊಬೈಲ್ ಸೆಟ್ ಬೆಲೆ 2000/- ರೂ ಆಗಿರುತ್ತೆ ಆರೋಪಿಯನ್ನು  ಗಂಗಾದರ, ಮತ್ತು ಶ್ರೀನಿವಾಸ ರವರು ಓಡಿಹೋಗಿ ಹಿಡಿದುಕೊಟ್ಟಿರುತ್ತಾರೆ,

Friday, November 02, 2012

Daily Crimes Report Dated:01/11/2012

ಕಳುವು ಪ್ರಕರಣ
ಬಸವನಹಳ್ಳಿ ಪೊಲೀಸ್ ಠಾಣೆ ಮೊ.ಸಂ.98/2012 ಕಲಂ 457 380 ಐಪಿಸಿ– ದಿನಾಂಕ 31/10/2012 ರಂದು ರಾತ್ರಿ ವೇಳೆಯಲ್ಲಿ ಕಳುವು ಆಗಿದ್ದು, ಪಿರ್ಯಾದುದಾರರಾದ ಕುಮಾರ ಇವರು ಕೆ.ಸಿಒಜಿಎಪ್ ನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದು  ಈ ದಿನ ಬೆಳಗ್ಗೆ ಅಂಗಡಿಗೆ ಕೆಲಸಕ್ಕೆ ಹೋಗಿದ್ದು ಅವರು ಕೆಲಸ ಮಾಡುವ ಅಂಗಡಿಯ ರೋಲಿಂಗ್ ಶೆಟರ್ ಬಾಗಿಲು ಅರ್ಧ ತೆರೆದಿದ್ದು ಅಂಗಡಿಗೆ ಹಾಕಿದ್ದ ಬೀಗಗಳು ಪಕ್ಕದಲ್ಲಿ ಬಿದ್ದಿದ್ದು ಗಾಬರಿಯಿಂದ ಒಳಗೆ ಹೋಗಿ ನೋಡಲಾಗಿ ನೆನ್ನೆ ದಿನ ಸಂಜೆ ವ್ಯಾಪಾರ ಮಾಡಿದ ಹಣ ಸುಮಾರು 11,807-00ವನ್ನು ಕ್ಯಾಶ್ ಟೇಬಲ್ ನಲ್ಲಿ ಇಟ್ಟಿದ್ದು ಅದನ್ನು ನೋಡಲಾಗಿ ಅದು ಕಂಡು ಬಂದಿರುವುದಿಲ್ಲ, ಅಕ್ಕಪಕ್ಕದಲ್ಲಿ ವಿಚಾರ ಮಾಡಲಾಗಿ ಎಲ್ಲಿಯೂ ಹಣವು ಸಿಕ್ಕಿರುವುದಿಲ್ಲ ನೆನ್ನೆ ದಿನ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರುಅಂಗಡಿಯ ರೋಲಿಂಗ್ ಶೆಟರ್ ಗೆ ಹಾಕಿದ್ದ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ಸದರಿ ಹಣವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿ ಕೊಡಿಕೊಡಬೇಕಾಗಿ ಕೋರಿ ಇತ್ಯಾದಿ
ಕೊಲೆ ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.335/2012 ಕಲಂ 302 201 ಐಪಿಸಿ– ಪಿರ್ಯಾದುದಾರರಾದ ಶ್ರೀಮತಿ ಗೀತಾ ಗೋಕಾಕ್‌ ವಾಸಿ ಇವರ  ಗಂಡ ಅನಿಲ್  ಮಾರುತಿ ಕಂಬಾರ, ಪ್ರಾಯ 35 ವರ್ಷ,  ಎಂಬುವರು ದಿನಾಂಕ:26-10-2012 ರಂದು  ಬೆಳಗಾಂ ಜಿಲ್ಲೆ ಗೋಕಾಕ್ ನಿಂದ  ಚನ್ನೈಗೆ ಚಿನ್ನಾ ಬೆಳ್ಳಿ ವ್ಯವಹಾರದ ಬಗ್ಗೆ ಹೋಗಿದ್ದು,  ದಿನಾಂಕ:30-10-2012 ರಂದು  ಮದ್ಯಾಹ್ನ 03-30 ಗಂಟೆಯಲ್ಲಿ ಮೃತ  ತನ್ನ ಪತ್ನಿ ಶ್ರೀಮತಿ ಗೀತಾ ಇವರಿಗೆ ಫೋನ್ ಮಾಡಿ ತಾನು ಹುಬ್ಬಳ್ಳಿಯಲ್ಲಿ  ಇರುವುದಾಗಿ ಸ್ನೇಹಿತರ ಕಾರಿದೆ ನಂತರ ಅದರಲ್ಲೆ ಬರುವುದಾಗಿ ತಿಳಿಸಿದ್ದು, ನಂತರ  ಫೋನ್ ಸ್ವಿಚ್ ಆಫ್ ಆಗಿದ್ದು, ಯಾರೋ ದುರಾತ್ಮರು  ಪಿರ್ಯಾದುದಾರರ ಗಂಡ ಅನಿಲ್  ಮಾರುತಿ ಕಂಬಾರ್ ಎಂಬಾತನ ಹತ್ತಿರ ಇದ್ದ ಚಿನ್ನದ ಆಸೆಗಾಗಿ ಎಲ್ಲೋ ಕೊಲೆ ಮಾಡಿ ಶವವನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ  ಕೆ.ಎಂ.ರಸ್ತೆಯ ಕಣಿವೆ ತಗ್ಗಿನಲ್ಲಿ ಹಾಕಿ, ಕೃತ್ಯ ಮರೆಮಾಚಿರುತ್ತಾರೆ.
ಅಪಘಾತದಲ್ಲಿ ಸಾವು
ತರೀಕೆರೆ ಪೊಲೀಸ್ ಠಾಣೆ ಮೊ.ಸಂ.224/2012 ಕಲಂ 279 337 304(ಎ) ಐಪಿಸಿ ರೆ.ವಿ. 134 (ಎ) ಐಎಂವಿ ಆಕ್ಟ್‌‌– ಪಿರ್ಯಾದಿ ಸತ್ಯನಾರಯಣ ತರೀಕೆರೆ ನಗರ ವಾಸಿ ಇವರು ಹಾಗು ಅವರ ತಮ್ಮ ಸೋಮಶೇಖರ ರವರು ಅವರ ಬಾಬ್ತು ಅಡಿಕೆ ತೋಟಕ್ಕೆ ಹೋಗಿ ಕೆಲಸ ಮುಗಿಸಿ ವಾಪಸ್ಸು ಬಂದು ತರೀಕೆರೆ- ಲಕ್ಕವಳ್ಳಿ ರಸ್ತೆಯಲ್ಲಿ ನಿಂತಿರುವಾಗ್ಗೆ ತರೀಕೆರೆ ಕಡೆಯಿಂದಾ ಕೆ.ಎ.18-ಎನ್.698 ಆಲ್ಟೋಕಾರು ರಸ್ತೆಯ ಎಡಬಾಗದಲ್ಲಿ ಬರುತ್ತಿದ್ದು ಲಕ್ಕವಳ್ಳಿ ಕಡೆಯಿಂದಾ ಟಿ.ಎನ್.21-6525 ನೇ ಲಾರಿಯನ್ನು ಅದರ  ಚಾಲಕನು ಅತಿವೇಗ ಹಾಗು ನಿರ್ಲಕ್ಷತನದಿಂದ ಚಾಲನೆಮಾಡಿಕೊಂಡು ಬಂದು ಕಾರಿಗೆ ಅಪಘಾತಪಡಿಸಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿಗೆ ಪರಿಚಯವಿರುವ ಗೀತಾ ಕೊಂ ಕರುಣಾಕರ 32 ªÀµÀð ರವರಿಗೆ ಮೈ ಕೈಗೆ ತೀವ್ರತರ ಪೆಟ್ಟುಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು ಸಚ್ಚಿನ್ ರವರಿಗೆ ಬಲದೇ ಕಣ್ಣಿನ ಹುಬ್ಬಿನ ಮೇಲ್ಬಾಗ ಬಲದೇ ಕಾಲಿನ ಮಂಡಿಯ ಕೆಳಬಾಗಕ್ಕೆ ಪಟ್ಟುಬಿದ್ದು ಹಾಗು  ಕಾರುಚಾಲಕ ಗುಂಡನಿಗೆ ಎಡಕಣ್ಣಿನ ಹತ್ತಿರ ಹಾಗು ಮೈ ಕೈಗೆ ಪೆಟ್ಟುಬಿದ್ದು ರಕ್ತಗಾಯವಾಗಿರುತ್ತೆ,

Thursday, November 01, 2012

Daily Crimes Report Dated:31/10/2012

ಮಟ್ಕಾ ಜೂಜಾಟ ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ.162/2012 ಕಲಂ 78 ಕ್ಲಾಸ್‌‌(3) ಕೆಪಿಆಕ್ಟ್‌‌ ರೆ.ವಿ 420 ಐಪಿಸಿ– ದಿನಾಂಕ 31/10/2012 ರಂದು 1230 ಗಂಟೆಯಲ್ಲಿ ಶರೀಪ್‌ ಗಲ್ಲಿಯಲ್ಲಿ  ಆರೋಪಿ ಅಮ್ಜದ್‌‌ಖಾನ್‌‌ ಈತನು ನಿಂತುಕೊಂಡು  ಸಾರ್ವಜನಿಕರಿಗೆ ಬನ್ನಿ ಇದು  ಬಾಂಬೆ ಮಟ್ಕಾ  ಯಾರು ಬೇಕಾದರು ಹಣ ಕಟ್ಟಬಹುದು 1 ರೂಗೆ 10 ರೂ 10 ರೂಗೆ 80 ರೂಪಾಯಿ ಹಣ ಬರುತ್ತೆ ಹಣ ಕಟ್ಟಿ ಎಂದು ಸಾರ್ವಜನಿಕರನ್ನು ಪುಸಾಲಾಯಿಸಿ ಹಣ ಕಟ್ಟಿಸಿಕೊಳ್ಳುತ್ತಿದ್ದವನನ್ನು ದಸ್ತಗಿರಿ ಮಾಡಿ ಆತನಿಂದ ಮಟ್ಕಾ ಚೀಟಿ, ಒಂದು ಲೆಡ್‌ಪೆನ್‌‌ ಹಾಗೂ ರೂ 2445/- ಹಣವನ್ನು ಅಮಾನತ್ತುಪಡಿಸಿಕೊಂಡು ಕ್ರಮಕೈಗೊಂಡಿರುವುದಾಗಿರುತ್ತೆ.
ಅಪಘಾತದಲ್ಲಿ ಸಾವು
ಲಕ್ಕವಳ್ಳಿ ಪೊಲೀಸ್ ಠಾಣೆ ಮೊ.ಸಂ.66/2012 ಕಲಂ 279 304(ಎ) ಐಪಿಸಿ ರೆ.ವಿ 134 ಎ & ಬಿ ಐಎಂವಿ ಆಕ್ಟ್‌‌– ದಿನಾಂಕ 30/10/2012 ರಂದು 2230 ಗಂಟೆಯಲ್ಲಿ ಟಿಎಂ ರಸ್ತೆಯಲ್ಲಿ  ಪಿರ್ಯಾದಿ ಲೋಕೇಶ್‌ ಇವರ ತಂದೆ ನಾರಾಯಣರಾವ್ ರವರು ಅವರ ಸ್ನೇಹಿತರಾದ ಡಾ!! ಟಿ.ವಿ.ಪ್ರಸಾದ್ ರವರ ಜೊತೆಯಲ್ಲಿ ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿರುವಾಗ್ಗೆ ಬಿ.ಆರ್.ಪಿ ಕಡೆಯಿಂದ ಕೆ.ಎ.14 ಎ.2427 ರ ಕ್ರೂಜರ್ ವಾಹನದ ಚಾಲಕ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ಪಿರ್ಯಾದಿಯ ತಂದೆ ನಾರಾಯಣರಾವ್ ರವರಿಗೆ ಡಿಕ್ಕಿಯೊಡೆಸಿದ ಪರಿಣಾಮ ನಾರಾಯಣರಾವ್ ರವರು ರಸ್ತೆಗೆ ಬಿದ್ದಾಗ ತಲೆಗೆ ಬೆನ್ನಿಗೆ ಬಲವಾದ ಪೆಟ್ಟುಬಿದ್ದು ಆಸ್ಪತ್ರೆಗೆ ಸಾಗಿಸುತ್ತಿರುವಾಗ್ಗೆ ನಾರಾಯಣರಾವ್ ರವರು ಮೃತಪಟ್ಟಿರುತ್ತಾರೆ. ವಾಹನದ ಚಾಲಕ ವಾಹವನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ.
ಅಪರಿಚಿತ ಗಂಡಸಿನ ಶವ ಪತ್ತೆ
ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್‌‌ ಸಂಖ್ಯೆ 53/2012 ಕಲಂ 174 (ಸಿ) ಸಿಆರ್‌ಪಿಸಿ‌– ದಿನಾಂಕ 30/10/2012 ರಿಂದಿ 31/10/2012 ರ  ಮದ್ಯದ ಅವಧಿಯಲ್ಲಿ ಘಟನೆ ನಡೆದಿದ್ದು,  ಕಣಿವೆ ದೇವಸ್ಥಾನದ ತಗ್ಗಿನಲ್ಲಿ ಯಾರೋ ಒಬ್ಬ ಆಸಾಮಿ ಮೃತಪಟ್ಟಿರುವುದಾಗಿ ವಿಷಯ ತಿಳಿದು ಪಿರ್ಯಾದುದಾರರಾದ ಪರುಶರಾಮ ಎಂಬುವರು  ಹೋಗಿ ಪರಿಶೀಲಿಸಲಾಗಿ ಸುಮಾರು 40 ವರ್ಷ ಪ್ರಾಯದ ಎಣ್ಣೆಗೆಂಪು ಬಣ್ಣದ ಸುಮಾರು 5 ಅಡಿ ಎತ್ತರವಿರುವ. ಅಪರಿಚಿತ ವ್ಯಕ್ತಿ ಯ ಮೃತದೇಹವಾಗಿದ್ದು, ಕ್ರಮಕೈಗೊಳ್ಳುವಂತೆ ದೂರು ನೀಡಿರವುದಾಗಿರುತ್ತೆ.