Wednesday, May 08, 2013

Daily Crimes Report Dated:07/05/2013

ಅಪಘಾತದಲ್ಲಿ ಸಾವು
ಸಂಚಾರ ಪೊಲೀಸ್ ಠಾಣೆ ಮೊ.ಸಂ- 44/2013 ಕಲಂ- 279 304(ಎ) ಐಪಿಸಿ; ಪಿರ್ಯಾದಿನ ಸಾರಾಂಶವೆನೆಂದರೆ ದಿನಾಂಕ 07/05/2013ರಂದು ಸಂಜೆ 0630ಗಂಟೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಪಿ.ಸಿ-530 ವಿಜಯಕುಮಾರ ರವರು ಚುನಾವಣಾಮತ ಎಣಿಕೆ ಬ್ರೀಪಿಂಗ್ ಮುಗಿಸಿಕೊಂಡು,ತಮ್ಮ ಬಾಬ್ತು ಕೆಎ-18-ಎಸ್-3030 ರ ಮೋಟರ್ ಸೈಕಲ್ ನಲ್ಲಿ, ಬೈಪಾಸ್ ರಸ್ತೆಯಿಂದ ದೀಪ ನರ್ಸಿಂಗ್ ಹೋಂ ಕಡೆಗಿನ ರಸ್ತೆಗೆ ತಿರುಗಿದಾಗ,ಬೈಪಾಸ್ ರಸ್ತೆಯಲ್ಲಿ ಎದರುಗಡೆಯಿಂದ ಬಂದ ಕೆಎ-14-ಬಿ-0877ರ ಪಿಕಪ್ ಗೂಡ್ಸ್ ವಾಹನದ ಚಾಲಕ ಅತೀವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು,ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ, ಪಿಕಪ್ ಗೂಡ್ಸ್ ವಾಹನದ ಚಕ್ರ ವಿಜಯಕುಮಾರ ರವರ ಮೇಲೆ ಹತ್ತಿರುತ್ತೆ. ವಿಜಯಕುಮಾರ ರವರು ಅಪಘಾತದಿಂದ ಮೃತಪಟ್ಟಿರುತ್ತಾರೆ.ಈ ಬಗ್ಗೆ ಪ್ರಕಾಶ್‌‌ ಗ್ರಾಮಾಂತರ ಠಾಣೆ ಕಾನ್ಸೆಟಬಲ್‌ ಇವರು ದೂರು ನೀಡಿರುವುದಾಗಿರುತ್ತೆ.
ದಲಿತರ ಮೇಲೆ ದೌರ್ಜನ್ಯ ಪ್ರಕರಣ
ಮಲ್ಲಂದೂರು ಪೊಲೀಸ್ ಠಾಣೆ ಮೊ.ಸಂ- 52/2013 ಕಲಂ- 141 143 144 147  341 323 504 506 149 ಐಪಿಸಿ ಜೊತೆಗೆ3 ಕ್ಲಾಸ್‌‌(1)(10)ಎಸ್‌‌ಸಿಎಸ್‌‌ಟಿ ಆಕ್ಟ್‌; ದಿನಾಂಕ 05/05/2013 ರಂದು 1730 ಗಂಟೆಯಲ್ಲಿ ಗ್ರಾಮಪಂಚಾಯಿತಿ ಎದುರಗಡೆ ಆರೋಪಿಗಳಾದ ಪ್ರವೀಣ್‌ಖಾಂಡ್ಯ ಹಾಗೂ ಇತರೆ 5 ಜನರು ಸೇರಿಕೊಂಡು ºÀ¼Éà zÉéõÀ¢AzÀ  ¦gÁå¢ ಸುರೇಶ್‌‌ ಹೊಸಪೇಟೆ ವಾಸಿ ಇವರನ್ನು ತಡೆದು  eÁw ¤AzÀ£É ªÀiÁr PÀ°è¤AzÀ,  PÉÊUÀ½AzÀ  JzÉUÉ,¨É¤ßUÉ, vÀ¯ÉUÉ,  ºÉÆqÉzÀÄ PÉÆ¯É ¨ÉzÀjPÉ  ಹಾಕಿರುತ್ತಾರೆ.

Tuesday, May 07, 2013

Daily Crimes Report Dated:06/05/2013

ಜೂಜಾಟ ಪ್ರಕರಣ
ಯಗಟಿ ಪೊಲೀಸ್ ಠಾಣೆ ಮೊ.ಸಂ- 55/2013 ಕಲಂ- 87 ಕೆ.ಪಿ.ಆಕ್ಟ್‌ ; ದಿನಾಂಕ 06/05/2013 ರಂದು 1600 ಗಂಟೆಯಲ್ಲಿ ಮುಗಳಿಕಟ್ಟೆ ಗ್ರಾಮದ ಸಮೀಪ ಮಾವಿನ ತೋಪಿನಲ್ಲಿ   ಹಣವನ್ನು ಪಣವಾಗಿಟ್ಟುಕೊಂಡು ಅಂದರ್‌ ಬಾಹರ್ ಜೂಜಾಟ ಆಡುತ್ತಿದ್ದ ಒಟ್ಟು 6 ಜನ ಅಸಾಮಿಗಳ ಪೈಕಿ ರಮೇಶ ಹಾಗೂ ಇತರೆ 5 ಜನ ಅಸಾಮಿಗಳನ್ನು ಸುತ್ತುವರಿದು ಹಿಡಿದುಕೊಂಡಿದ್ದು ಒಬ್ಬ  ಅಸಾಮಿ ಪರಾರಿಯಾಗಿದ್ದು  ಆಟಕ್ಕೆ ಪಣವಾಗಿ ಕಟ್ಟಿ ಆಖಾಡದಲ್ಲಿದ್ದ 720/- ನಗದು ಹಣವನ್ನು ಮತ್ತು 52 ಇಸ್ಪೀಟು ಎಲೆಗಳನ್ನು ಹಾಗೂ ಒಂದು ಪ್ಲಾಸ್ಟೀಕ್‌ ಚೀಲವನ್ನು ಅಮಾನತ್ತು ಪಡಿಸಿಕೊಂಡು  ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಕೇಸು ನೊಂದಾಯಿಸಿರುತ್ತೆನೆ.ಪಿಎಸ್‌‌ಐ ರವರು ದಾಳಿ ನಡೆಸಿರುವುದಾಗಿರುತ್ತೆ.

Monday, May 06, 2013

Daily Crimes Report Dated:05/05/2013

ಕೊಲೆ ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ- 113/2013 ಕಲಂ- 302 ಐಪಿಸಿ ಜೊತೆಗೆ 3 ಕ್ಲಾಸ್‌‌‌(1)(10)ಎಸ್‌‌ಸಿಎಸ್‌‌ಟಿ ಆಕ್ಟ್‌ ; ಪಿರ್ಯಾದುದಾರರಾದ ಉಷಾ ಎಂ, ರವರು ಠಾಣೆಗೆ ಹಾಜರಾಗಿ  ನಾನು ಈಗ್ಗೆ 2.1/2 ವರ್ಷಗಳಹಿಂದೆ  ಅನಿಲ್ ಕುಮಾರ್ ನ ಜೊತೆ ಮದುವೆಯಾಗಿದ್ದು  3 ತಿಂಗಳ ಒಂದು ಗಂಡು ಮಗು ಇರುತ್ತೆ. ತನ್ನ ಗಂಡ ಅನಿಲ್ ಕುಮಾರ್ ಈಗ್ಗೆ 4 ವರ್ಷಗಳಿಂದ ನಗರ ಸಭೆ ಪೌರಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದರು . ಅವರು ಈ ಹಿಂದೆ ಬಾರ್ ಬೆಂಡಿಂಗ್ ಕೆಲಸ ಮಾಡುತಿದ್ದರು  ಅವರಿಗೆ ಆ ಕೆಲಸ ಗೊತ್ತಿತ್ತು.  ಅವರು ರಜಾ ದಿನಗಳಲ್ಲಿ  ಶಂಕರಪುರ  ಚಿಕ್ಕಮ್ಮ ದೇವಸ್ಥಾನದ ಹತ್ತಿರ  ವಾಸವಾಗಿರುವ  ಕುಮಾರ ಎಂಬುವವರ ಹತ್ತಿರ  ಬಾರ್ ಬೆಂಡಿಗ್ ಕೆಲಸಕ್ಕೆ  ಹೋಗುತಿದ್ದರು  ತನ್ನ ಗಂಡ  ಕೆಲಸ ಮಾಡಿದ ಬಾಬ್ತು ಕುಮಾರ 6000 ರೂ ಕೊಡಬೇಕಾಗಿತ್ತು. ಪ್ರತಿ ಬಾರಿ ಹಣ ಕೇಳಿದಾಗ ನಿನಗೆ ಯಾವ ಹಣ ಕೊಡಬೇಕು ಎಂದು ಬೈದು ಕಳುಹಿಸುತಿದ್ದನು.ಈ ದಿವಸ ದಿನಾಂಖ 05/05/2013 ರಂದು 1530 ಗಂಟೆಯಲ್ಲಿ  ತಾನು ಮತ್ತು ತನ್ನ ಗಂಡ  ಅನಿಲ್ ಕುಮಾರ್ ಇದೇ ವಿಷಯವಾಗಿ  ಕುಮಾರನನ್ನು ಹಣ ಕೇಳಲು ಹೋದಾಗ ಕುಮಾರ ನಿನಗೆ ಯಾವ ಹಣ ಕೊಡಬೇಕು  ಹೋಗೋ ಸೂಳೇಮಗನೆ. ಹೊಲೆಮಾದಿಗ , ಎಂದು ಹೇಳಿ ಜಾತಿ ನಿಂದನೆ ಮಾಡಿ  ಮನೆಯೊಳಗೆ  ಹೋಗಿ ಕಬ್ಬಿಣ ಬಗ್ಗಿಸುವ ಲೀವರ್ ಅನ್ನು ತಂದು  ತನ್ನ ಗಂಡನ ತಲೆಗೆ  2 -3 ಬಾರಿ ಹೊಡೆದನು ಆಗ ತನ್ನ ಗಂಡ ಕುಸಿದು ಕೆಳಗೆ ಬಿದಿದ್ದು ಅವರ ತಲೆಯಿಂದ  ರಕ್ತ ಸುರಿಯುತಿತ್ತು. ಆಗ ನಾನು ಜೋರಾಗಿ ಕೂಗಿಕೊಂಡಾಗ  ಆಗ ಅಲ್ಲಿಗೆ  ಬಾರ್ ಬೆಂಡಿಂಗ್ ಕೆಲಸ ಮಾಡುವ  ಕುಮಾರ್, ಹಾಗೂ ಅರುಣ  ಎಂಬುವವರು ಬಂದು ತನ್ನ ಗಂಡನನ್ನು  ಆಟೋರಿಕ್ಷಾದಲ್ಲಿ  ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು  ಹೋಗಿ ತೋರಿಸಿದಾಗ  ಡಾಕ್ಟರ್ ಪರೀಕ್ಷಿಸಿ  ತನ್ನ ಗಂಡ ಮೃತಪಟ್ಟಿರುವುದಾಗಿ ತಿಳಿಸಿದರು. 
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ
ನಗರ ಪೊಲೀಸ್ ಠಾಣೆ ಮೊ.ಸಂ- 112/2013 ಕಲಂ- 171(ಬಿ) 34 ಐಪಿಸಿ; ಎಂಸಿಸಿ ತಂಡದ ಮುಖ್ಯಸ್ಥ ಉಮೇಶ  ಜಾಗರ ಹೋಬಳಿ ರವರು ದಿನಾಂಕ 04/05/2013 ರಂದು 1830 ಗಂಟೆಯಲ್ಲಿ ಶ್ರೀ ಎಸ್.ಎಲ್ ಭೋಜೇಗೌಡ ಜೆಡಿಎಸ್ ಚುನಾವಣಾ ಅಭ್ಯರ್ಥಿ ರವರ ತಮ್ಮ ಇವರ ನಿವಾಸವನ್ನು ತಹಶೀಲ್ದಾರರು ತಾಲೂಕು ಕಛೇರಿ ಚಿಕ್ಕಮಗಳೂರು ರವರ ನಿರ್ದೇಶನದಂತೆ ಪರೀಶೀಲಿಸಲಾಗಿ ಎಸ್.ಎಲ್ ಬೋಜೇಗೌಡ ರವರ ಮನೆಯಲ್ಲಿ  ಛಾಯಾಗ್ರಾಹಕ ರೊಂದಿಗೆ  ಪರಿಶೀಲಿಸಲಾಗಿ  ಬೆಡ್‌ರೂಂ ನಲ್ಲಿ  ರೂ 50000/- ರೂಪಾಯಿಗಳು  ಸಿಕ್ಕಿರುತ್ತದೆ.  ಅಲ್ಲದೇ 4 ಎಪಿಕ್ ಕಾರ್ಡ್‌ ಗಳು  ಸಿಕ್ಕಿದ್ದು ಅವುಗಳು ಜೆಡಿಎಸ್  ಕಾರ್ಯಕರ್ತರು  ಹಣಕ್ಕೋಸ್ಕರ  ತಮ್ಮ ಕಾರ್ಡ್‌ಗಳನ್ನು ಕೊಟ್ಟಿರುವುದು ಕಂಡು ಬಂದಿರುತ್ತದೆ.  ಸುಮಾರು  30 ಜನ ಈ ರೀತಿ ಮನೆಯ ಮುಂದೆ  ನಿಂತಿದ್ದು ನಮ್ಮ ಕ್ಯಾಮರಾವನ್ನು  ಬಾಗಿಲ ಬಳಿ  ಬರುವಷ್ಟರಲ್ಲಿ  ಓಡಿ ಹೋಗಿದ್ದು ಅದರಲ್ಲಿ ಇಬ್ಬರು ಮಾತ್ರ ಸಿಕ್ಕಿರುತ್ತಾರೆ.  ಮತದಾರರ 4 ಎಪಿಕ್ ಕಾರ್ಡ್‌ ಗಳು ಸಿಕ್ಕಿರುತ್ತದೆ. ಹಾಗೂ 1] ದಾನಪ್ಪ  ಬಿನ್ ಸಿದ್ದಯ್ಯ  48 ವರ್ಷ  ಕೂಲಿಕೆಲಸ ವಾಸ ನಲ್ಲೂರು ಕಾಲೋನಿ  ಚಿಕ್ಕಮಗಳೂರು ತಾಲೂಕು 2] ರಮೇಶ ಬಿನ್ ದಿ ಹೊನ್ನಯ್ಯ  51 ವರ್ಷ  ಕೂಲಿಕೆಲಸ ವಾಸ ನಲ್ಲೂರು ಕಾಲೋನಿ  ,ಮೇಲ್ಕಂಡ ಸ್ಥಳದಲ್ಲಿ  ದೊರೆತ ನಗದು ಹಣ ಮತ್ತು ಚಿತ್ರೀಕರಿಸಿದ್ದ  ಸಿಡಿ  ಮತ್ತು 4 ಎಪಿಕ್ ಕಾರ್ಡ್‌ ಗಳೊಂದಿಗೆ  ಮುಂದಿನ ಕ್ರಮದ ಬಗ್ಗೆ  ಹಾಜರುಪಡಿಸಿರುತ್ತೇನೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ
ಲಕ್ಕವಳ್ಳಿ ಪೊಲೀಸ್ ಠಾಣೆ ಮೊ.ಸಂ- 43/2013 ಕಲಂ- 143 147 332 323 504 353 171(ಜಿ) 149 ಐಪಿಸಿ ಮತ್ತು 131 132  ಆರ್‌ಪಿ ಆಕ್ಟ್‌; ದಿನಾಂಕ 05/05/2013 ರಂದು 1050 ಗಂಟೆಯಲ್ಲಿ ಕರಕುಚ್ಚಿ ಗ್ರಾಮದಲ್ಲಿ ಆರೋಪಿಗಳಾದ ಮಂಜನಾಯ್ಕ ಹಾಗೂ ಇತರೆ 17 ಜನರು  ಕರಕುಚ್ಚಿ ಗ್ರಾಮದ ಮತಗಟ್ಟೆಯಲ್ಲಿ ಓಟು ಹಾಕಲು ನಿಂತಿದ್ದ ಮತದಾರರಿಗೆ ಪ್ರಚೋದನೆ ಮಾಡುತ್ತ ಇದನ್ನು ವಿರೋದಿಸಿದ ಜನರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಗಲಾಟೆ ಮಾಡುತ್ತಿದ್ದು, ಇದನ್ನು ಕೇಳಲು ಹೋದ ಪೊಲೀಸ್ ಸಿಬ್ಬಂದಿಯವರಿಗೆ ಮತ್ತು ಪ್ರೊಸಿಡಿಂಗ್‌‌ ಆಫೀಸರ್‌‌ ಶಿವನಂಜಪ್ಪ ಇವರಿಗೆ  ಬೈದು ನೂಕಾಡಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುತ್ತಾರೆ.

Thursday, May 02, 2013

Daily Crimes Report Dated:01/05/2013

ಮನುಷ್ಯ ಕಾಣೆ
ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ- 79/2013 ಕಲಂ- ಮನುಷ್ಯ ಕಾಣೆ ; ದಿನಾಂಕ 08/04/2013 ರಂದು ಫಿರ್ಯಾದಿ ಸುಶೀಲಾ ತನೂಡಿ ಗ್ರಾಮದ ವಾಸಿ ಇವರ ಇವರ ತಂಗಿಯ ಮಗಳಾದ ಸುಪ್ರೀತ ಎಂಬುವಳನ್ನು ಚಿಕ್ಕಂದಿನಿಂದಲೂ ಫಿರ್ಯಾದಿಯೇ ಸಾಕಿದ್ದು, ಆಕೆಗೆ 18 ವರ್ಷ. ವಯಸ್ಸಾಗಿರುತ್ತೆ. ದಿನಾಂಕ 08.04.2013 ರಂದು ಮನೆಯನ್ನು ಬಿಟ್ಟು ಹೋಗಿರುತ್ತಾಳೆ. ಇದುವರೆವಿಗೂ ಮನೆಗೆ ವಾಪಾಸು ಬಂದಿರುವುದಿಲ್ಲ. ಸಂಬಂಧಿಕರ ಮನೆ, ಸ್ನೇಹಿತರ ಮನೆಗಳಲ್ಲಿ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ಯಾರೋ ಒಬ್ಬ ಹುಡುಗನ ಜೊತೆ ಹೋಗಿರುವ ಸಂಶಯ ವಿರುತ್ತೆ. ಕಾಣೆಯಾದ ಸುಪ್ರೀತಾಳಿಗೆ 18 ವರ್ಷ ವಯಸ್ಸಾಗಿರುತ್ತೆ. 4.6 ಅಡಿ ಎತ್ತರವಿರುತ್ತಾಳೆ. ಕಪ್ಪು ಬಣ್ಣ ಹೊಂದಿದ್ದು, ತುಳು,ಕನ್ನಡ ಬಾಷೆ ಮಾತನಾಡುತ್ತಾಳೆ. ಎಂಬ ವಿವರವನ್ನು ನೀಡಿ ಸುಪ್ರೀತಳನ್ನು ಪತ್ತೆಮಾಡಿಕೊಡಬೆಕಾಗಿ ನೀಡಿದ ದೂರಾಗಿರುತ್ತೆ.
ಚುನಾವಣೆಗೆ ಸಂಬಂದಿಸಿದಂತೆ ಪ್ರಕರಣ
ಬಸವನಹಳ್ಳಿ ಪೊಲೀಸ್ ಠಾಣೆ ಮೊ.ಸಂ- 99/2013 ಕಲಂ- 143 147 341 354 504 506 149 ಐಪಿಸಿ ; ಪಿರ್ಯಾದುದಾರರಾದ ಗಾಯಿತ್ರಿ ಶಾಂತೆಗೌಡ ಇವರು ದಿನಾಂಕ 05-05-13 ರಂದು ನಡೆಯುವ ವಿದಾನ ಸಭಾ ಚುನಾವಣೆ ನಿಮಿತ್ತ ಚುನಾವಣಾ ಪ್ರಚಾರಕ್ಕೆ ಚಿಕ್ಕಮಗಳೂರು ನಗರಲ್ಲಿ ಬನಶಂಕರಿ ಮಹಿಳಾ ಸಂಘದ ಸದಸ್ಯರೊಂದಿಗೆ ದಿನಾಂಕ 01/05/2013 ರಂದು ರಾತ್ರಿ 2000 ಗಂಟೆಯಲ್ಲಿ ಮಾತನಾಡುತ್ತ  ಚುನಾವಣಾ ಪ್ರಚಾರ ಮಾಡುತ್ತಿದ್ದಾಗ  ಬಿ.ಜಿ.ಪಿ ಕಾರ್ಯಕರ್ತರಾದ ಕೋಟೆ ಅನಿಲ್‌ ಇತರೆ 15 ರಿಂದ 16 ಜನ ಹುಡುಗರನ್ನು ಕರೆದು  ಕೊಂಡು ಬಂದು ಪಿರ್ಯಾದುದಾರರ ವಾಹನವನ್ನು ಅಡ್ಡಗಟ್ಟಿ  ಚುನಾವಣಾ ಪ್ರಚಾರ ಮಾಡದಂತೆ ತಡೆದು  ಈ ಬಗ್ಗೆ ಪಿರ್ಯಾದುದಾರರು  ಯಾವುದೇ ಚುನಾವಣೆಯ ಅಕ್ರಮ  ನಡೆಸುತ್ತಿಲ್ಲವೆಂದು ತಿಳಿಸಿದರೂ  ಸಹ ಅವಾಚ್ಯ ಶಬ್ದಗಳಿಂದ ಬೈಯ್ದು  ಕೊಲೆ ಬೆದರಿಕೆ ಹಾಕಿರುತ್ತಾರೆ ಇತ್ಯಾದಿ.       
ಚುನಾವಣೆಗೆ ಸಂಬಂದಿಸಿದಂತೆ ಪ್ರಕರಣ
ಬಸವನಹಳ್ಳಿ ಪೊಲೀಸ್ ಠಾಣೆ ಮೊ.ಸಂ- 100/2013 ಕಲಂ- 143 147 332 149 ಐಪಿಸಿ ; ಪಿರ್ಯಾದುದಾರರಾದ ಸಿ.ಪಿ ಯೋಗೀಶ್‌ ಪಿಸಿ 692 ಬಾಳೂರು ಠಾಣೆ ಇವರು ಮಾನ್ಯ ಪೊಲೀಸ್ ಉಪಾಧೀಕ್ಷಕರ ಜೊತೆಯಲ್ಲಿ  ಬಸವನಹಳ್ಳಿ  ಪೊಲೀಸ್ ಠಾಣೆಯ ಮುಂಭಾಗ  ಕರ್ತವ್ಯದಲ್ಲಿ ಸಮವಸ್ತ್ರದಲ್ಲಿರುವಾಗ  ಬಿ.ಜಿ.ಪಿ ಮತ್ತು ಕಾಂಗ್ರೇಸ್ ಪಕ್ಷದ  ಸುಮಾರು 200 ಜನ ಕಾರ್ಯಕರ್ತರು ಹಾಗೂ ಸಾರ್ವಜನಿಕರು  ಸೇರಿಕೊಂಡಿದ್ದು  ಅವರುಗಳು ಠಾಣೆಯ ಹತ್ತಿರ ಬರಲು ಪ್ರಯತ್ನಿಸುತ್ತಿರುವಾಗ  ಪಿರ್ಯಾದುದಾರರು  ಠಾಣೆಯನ್ನು ಬಿಟ್ಟು ಸ್ವಲ್ಪ ದೂರ ಹೋಗಿ  ಎಂದು ಹೇಳುತ್ತ  ಕಳುಹಿಸುತ್ತಿರುವಾಗ ಯಾರೋ ಒಬ್ಬ ಪಿರ್ಯಾದುದಾರರಿಗೆ  ಕಲ್ಲಿನಿಂದ ಹೊಡೆದಿದ್ದು,  ಬಲಭುಜಕ್ಕೆ  ಪೆಟ್ಟಾಗಿ ನೋವುಂಟಾಗಿದ್ದು ಪಿರ್ಯಾದುದಾರರು ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿವಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಕಲ್ಲಿನಿಂದ ಹೊಡೆದು  ಗಾಯಗೊಳಿಸಿದ್ದು ಇತ್ಯಾದಿ.

Wednesday, May 01, 2013

Daily Crimes Report Dated:30/04/2013

ಮನುಷ್ಯ ಕಾಣೆ
ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ- 79/2013 ಕಲಂ- ಮನುಷ್ಯ ಕಾಣೆ- ¢£ÁAPÀ:27-04-2013 gÀAzÀÄ ಪಿರ್ಯಾದುದಾರರಾದ ಶ್ರೀಮತಿ ಖಮನ್ನುರಿಸಾ  ಇವರ ªÀÄUÀ¼ÀÄ ©.J¸ï.±À©Ã£Á ªÀÄvÀÄÛ C½AiÀÄ ±ÀA±ÀÄ¢Ýãï gÀªÀgÀÄ ªÀÄ£ÉAiÀİè MAzÀÄ ¥ÀvÀæªÀ£ÀÄß §gÉ¢zÀÄÝ ªÀÄ£ÉAiÀÄ£ÀÄß ©lÄÖ ºÉÆÃVgÀÄvÁÛgÉ. J¯Áè PÀqÉ ºÀÄqÀÄPÁrzÀgÀÆ ºÁUÀÄ ¸ÀA§A¢üPÀgÀ ªÀÄ£ÉAiÀÄ°è «ZÁj¹zÀgÀÆ ¸ÀºÁ CªÀgÀ EgÀÄ«PÉAiÀÄ §UÉÎ £ÀªÀÄUÉ ¸ÀĽªÀÅ ¹QÌgÀĪÀÅ¢®è. DzÀÄzÀjAzÀ zÀAiÀÄ«lÄÖ vÀ£Àß ªÀÄUÀ¼ÀÄ ªÀÄvÀÄÛ C½AiÀÄ ±ÀA±ÀÄ¢Ýãï gÀªÀgÀ£ÀÄß ¥ÀvÉÛ ªÀiÁrPÉÆqÀ®Ä ಕೋರಿಕೊಂಡಿರುವುದಾಗಿರುತ್ತೆ.
ಕೊಲೆ ಪ್ರಕರಣ
ಆಲ್ದೂರು ಪೊಲೀಸ್ ಠಾಣೆ ಮೊ.ಸಂ- 105/2013 ಕಲಂ- ಕೊಲೆ ಪ್ರಕರಣ: ಪಿರ್ಯಾದುದಾರರಾದ ನಿರ್ವಾಣೆಗೌಡ ಇವರು ಕಡವಂತಿ ಗ್ರಾಮದಲ್ಲಿ ವಾಸವಾಗಿರದ್ದು,ಇವರ ಜೊತೆಗೆ ಇವರ ಮಗ ಕನಕ ರಾಜ ಜಿರಾಯ್ತು ಕೆಲಸ ಮಾಡಿಕೊಂಡಿರುತ್ತಾನೆ,  ನಮ್ಮ ಊರಿನ ವಾಸಿ ಮಲ್ಲೇಶ್ ಈತನು ಆಗ್ಗಾಗೆ ದಾರಿಯ ವಿಚಾರದಲ್ಲಿ ತೊಂದರೆ ಕೊಡುತ್ತಿದ್ದ ಈಗ ನಾವು ನಮ್ಮ ಹಳೆಯ ಮನೆಯನ್ನು ರೀಪೇರಿ ಮಾಡುತ್ತಿದ್ದು ಈ ದಿನ ಬೆಳಗ್ಗೆ ಬಾಸಪುರದಿಂದ ಮರಳನ್ನು ತಂದು ಮಲ್ಲೇಶನ  ಮನೆಯ ಹತ್ತಿರ ಹಾಕಿಕೊಂಡು ನಾನು ನನ್ನ ಹೆಂಡತಿ ಮತ್ತು ನನ್ನ ಮಗ ಕನಕರಾಜ್‌ ಮೂರು ಜನರು ಪ್ಲಾಸ್ಟಿಕ್‌ ಚೀಲಗಳಲ್ಲಿ ಮರಳನ್ನು ನಮ್ಮ ಮನೆಯ ಹತ್ತಿರ ಹಾಕುತ್ತಿದ್ದೆವು, ಆಗ ಮಲ್ಲೇಶನು ಅವನ ಮನೆಯ ಒಳಗಡೆಯಿಂದ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಬಂದು ನಮ್ಮ ಜಾಗಕ್ಕೆ ಯಾಕೆ ಮರಳನ್ನು ಹಾಕಿದ್ದಿಯ ಎಂದು ಕೇಳಿದ ಅದಕ್ಕೆ ನನ್ನ ಮಗ ಕನಕರಾಜ ಗಲಾಟೆ ಮಾಡ ಬೇಡ ಮರಳನ್ನು ತೆಗದು ಜಾಗ ಖಾಲಿ ಮಾಡಿಕೊಡುತ್ತವೆ ಎಂದು ಹೇಳಿದ ಆಗ ಮಲ್ಲೇಶನು ಕೈಯಲ್ಲಿ ಇದ್ದ ಕತ್ತಿಯಿಂದ ನನ್ನ ಮಗನ ಕುತ್ತಿಗೆಗೆ ಕಡಿದ  ಆಗ  ನನ್ನ ಮಗ ತಪ್ಪಿಸಿಕೊಳ್ಳಲು ಓಡಿದ ಆಗ ನನ್ನ ಮಗನನ್ನು ಅಟ್ಟಿಸಿಕೊಂಡು 300 ಮೀಟರ್‌ ದೂರ  ಹೋದ ಮಲ್ಲೇಶ ಶಂಕರೆಗೌಡರವರ ಪಾಳು ಜಮೀನಿನ  ಹತ್ತಿರ ಪುನಃ ನನ್ನ ಮಗನನ್ನು ತಡೆದು ಕತ್ತಿಯಲ್ಲಿ ತಲೆಗೆ, ಕುತ್ತಿಗೆಗೆ ಮೇಲ್ಬಾಗಕ್ಕೆ , ಎಡಕಾಲಿನ ಮೊಣಕಾಲಿಗೆ, ಎಡಕೈನ 4 ಬೆರಳುಗಳಿಗೆ  ಕತ್ತಿಯಿಂದ ಕಡಿದ ಆಗ ನನ್ನ ಮಗ ನೆಲಕ್ಕೆ ಕುಸಿದು  ಬಿದ್ದ ಆಗ ನಾವುಗಳು  ಸೇರಿ ಆಸ್ಪತ್ರೆಗೆ ಸೇರಿಸಲು ಕಡವಂತಿ  ರಸ್ತೆಯಲ್ಲಿರು  ರಾಮಶೆಟ್ರು  ಮನೆಯ ಮುಂದಿನ ರಸ್ತೆಗೆ ಕರೆದುಕೊಂಡು ಬಂದು ಮಲಗಿಸಿದೆವು ಅಷ್ಟರಲ್ಲಿ  ನನ್ನ  ಮಗನ ಪ್ರಾಣ ಹೋಗಿತ್ತು  ಅಗ ಸಮಯ 11.30 ಗಂಟೆ ಆಗಿತ್ತು ಹೀಗೆ ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕಡಿದು ಕೊಲೆ ಮಾಡಿದ ಮಲ್ಲೇಶನ ಮೇಲೆ ಕ್ರಮ ಕೈಗೊಳ್ಳಿ  ಇತ್ಯಾದಿ. 
ಕಳುವು ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ- 105/2013 ಕಲಂ- 457 380 ಐಪಿಸಿ: ದಿನಾಂಕ: 29-04-2013 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಹಾದಿಕರೆ ಗ್ರಾಮದ ಸರ್ಕಾರಿ ಪ್ರೌಡಶಾಲೆ ಬೀಗವನ್ನು ಮುರಿದು,ಕಂಪ್ಯೂಟರ್ ಕೊಠಡಿಯಲ್ಲಿ ಚೀಲಕ ಇಲ್ಲದ ಕಿಟಕಿಗೆ ಕಟ್ಟಿದ್ದ ತಂತಿಯನ್ನು ಕಿತ್ತು ಕಿಟಕಿಯ ಬಾಗಿಲಿನಿಂದ ಕೈ ಹಾಕಿ ಕಂಪ್ಯೂಟರ್ ಟೇಬಲ್‌ನ ಮೇಲೆ ಇಟ್ಟಿದ್ದ ಒಟ್ಟು 03 ಥಿನ್‌ಕ್ಲೈಂಟ್‌ಗಳನ್ನು ಕಳವು ಮಾಡಿ ಕೊಂಡು ಹೋಗಿರುತ್ತಾರೆ ಆದ್ದರಿಂದ ಕಾನೂನು ಕ್ರಮ ಜರುಗಿಸಿ ಕಳವು ಆಗಿರುವ ಕಂಪ್ಯೂಟರಿನ ಒಟ್ಟು 03 ಥಿನ್‌ಕ್ಲೈಂಟ್‌ಗಳನ್ನು ಪತ್ತೆ ಮಾಡಿಕೊಡಲು ಕೋರಿ  ಅವುಗಳ ಒಟ್ಟು ಬೆಲೆ ಸುಮಾರು 8500/-ಆಗಿರುತ್ತೆಂದು ದೂರು ನೀಡಿದ್ದಾಗಿರುತ್ತೆ  ಈ ಬಗ್ಗೆ ಶ್ರೀಮತಿ ಸರಸ್ವತಿ ಮುಖ್ಯೋಪಾದ್ಯಯರು ಇವರು ದೂರು ನೀಡಿರುವುದಾಗಿರುತ್ತೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ
ಅಜ್ಜಂಪುರ ಪೊಲೀಸ್ ಠಾಣೆ ಮೊ.ಸಂ- 199/2013 ಕಲಂ- 171(ಹೆಚ್‌‌) 188 ಐಪಿಸಿ ಮತ್ತು 123(ಎ) ಆರ್‌ಪಿ ಆಕ್ಟ್: ದಿನಾಂಕ 30/04/2013 ರಂದು 1130 ಗಂಟೆಯಲ್ಲಿ ಪಿಎಸ್‌‌ಐ ರವರು ಹುಣಸಘಟ್ಟ ಊರಿನ ಕಡೆಯಿಂದ ಬಂದ ಬುಲೇರೊನಂ ಕೆ ಎ 18 ಎ 6731 ರ ಜೀಪ್ ನ್ನು ನಿಲ್ಲಿಸಿ 11.30 ಗಂಟೆಗೆ ತಪಾಸಣೆ ಮಾಡಿದಾಗ ಸದರಿ ವಾಹನದಲ್ಲಿ ಯಾವುದೆ ಲೆಕ್ಕಪತ್ರ ಇಲ್ಲದೆ ಸುಮಾರು 50.000ಸಾವಿರ ಹಣ ಇದ್ದು ಮತ್ತು ಕರಪತ್ರಗಳು ಸಹ ಸಿಕ್ಕಿದ್ದು ಹಣದ ಬಗ್ಗೆ ವಾಹನದಲ್ಲಿದ್ದ ಚಾಲಕ 1) ಹರೀಶ ಬಿನ್ ಮಲ್ಲೇಶಪ್ಪ ಅಜ್ಜಂಪುರ 2) ಆಶೋಕ ಬಿನ್ ಹಾಲಪ್ಪ ಹುಣಸಘಟ್ಟ ಗ್ರಾಮ 3) ರಘುಕುಮಾರ ಬಿನ್ ಸುರೇಶ ವಾಸ ಸೊಕ್ಕೆತಿಮ್ಮಾಪುರ ಗ್ರಾಮ 4)ನಾಗರಾಜ @ ನಾಗು ಬಿನ್ ಗೋವಿಂದಪ್ಪ ವಾಸ ಭಕ್ತನಕಟ್ಟೆ ಗ್ರಾಮ 5) ನೂರುಲ್ಲಾ ಬಿನ್ ಅಬ್ದುಲ್ಲ್ ಅನಿಮ್ ವಾಸ ಕಲ್ಲೇನಹಳ್ಳಿ ಗ್ರಾಮ   ರವರುಗಳನ್ನು ಇಟ್ಟುಕೊಂಡಿದ್ದ ಬಗ್ಗೆ ದಾಖಲೆ ಕೇಳಿದಾಗ ದಾಖಲೆಯನ್ನು ಹಾಜರು ಪಡಿಸಲು ವಿಪಲರಾಗಿದ್ದಲ್ಲದೆ ವಾಹನಕ್ಕೆ ಚುನಾವಣಾ ಅದಿಕಾರಿಗಳ ಅನುಮತಿಯನ್ನು ಪಡೆಯದೆ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಿರುವುದರಿಂದ ಸದರಿ ಸ್ಥಳಕ್ಕೆ ಪಂಚರಾದ 1)ಮಧು ಬಿನ್ ದೇವರಾಜ 25ವರ್ಷ ವ್ಯಾಪಾರಿ ಶಿವಾಜಿ ರಸ್ತೆ ಅಜ್ಜಂಪುರ 2)ರಮೇಶ ಬಿನ್ ಲಕ್ಷ್ಮಣ 30 ವರ್ಷ ಜಿರಾಯ್ತು ಕೆಲಸ ವಾಸ ರೈಲ್ವೆ ಸ್ಟೇಷನ್ ಹತ್ತಿರ ಅಜ್ಜಂಪುರ ರವರ ಸಮಕ್ಷಮದಲ್ಲಿ ಮಹಜರ್ ಕ್ರಮ ಜರುಗಿಸಿ ವಾಹನ ಹಣ ಮತ್ತು ಕರಪತ್ರಗಳನ್ನುವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿರುವುದಾಗಿರುತ್ತೆ.