ಮೋಟಾರ್ ಸೈಕಲು ಕಳುವು
ಎನ್‌ಆರ್‌ಪುರ ಪೊಲೀಸ್ ಠಾಣೆ ಮೊ.ಸಂ- 88/2013 ಕಲಂ – 379 ಐಪಿಸಿ- ಫಿರ್ಯಾದುದಾರರಾದ ಸುಂದರೇಶ ಬಡಗಬೈಲು ವಾಸಿ ಇವರು ದಿನಾಂಕ;11/05/2013 ರಂದು ಸಂಜೆ 19:00 ಗಂಟೆಯ ಸಮಯದಲ್ಲಿ ತನ್ನ ಅಕ್ಕನಿಗೆ ಹುಷಾರಿಲ್ಲದ ಕಾರಣ ನ.ರಾ.ಪುರ ಸರ್ಕಾರಿ ಆಸ್ಪತ್ರೆಗೆ ಊಟ ಕೊಡಲು ತನ್ನ ಬಾಬ್ತು ಕೆ.ಎ 18 ಯು 1876 ರ ನಂಬರಿನ ಕಪ್ಪು ಮಿಶ್ರಿತ ಸಿಲ್ವರ್ ಬಣ್ಣದ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕನ್ನು ಆಸ್ಪತ್ರೆಯ ಹೊರಗೆ ನಿಲ್ಲಿಸಿ ಆಸ್ಪತ್ರೆಯ ಒಳಗೆ ಹೋಗಿ ಊಟಕೊಟ್ಟ ವಾಪಸ್ ಬಂದು 20:45 ಗಂಟೆ ಸಮಯದಲ್ಲಿ ನೋಡಲಾಗಿ ತನ್ನ ಬೈಕನ್ನು ಯಾರೋ ಕಳ್ಳರು ತೆಗೆದುಕೊಂಡು ಹೋಗಿದ್ದು, ನಿನ್ನೆ ದಿನ ಎಲ್ಲಾ ಕಡೆ ಹುಡುಕಲಾಗಿ ಸಿಗದಿದ್ದರಿಂದ ಈ ದಿನ ಠಾಣೆಗೆ ಬಂದು ಕಳೆದು ಹೋಗಿರುವ ಬೈಕನ್ನು ಪತ್ತೆ ಮಾಡಿಕೊಡಲು ಕೊಟ್ಟ ದೂರಾಗಿರುತ್ತೆ. ಬೈಕ್‌ನ ಇಂಜಿನ್ ನಂಬರ್-HA10EFAHH60784, ಚಾಸೀಸ್ ನಂ- MBLHA10EZAHH22976, ಆಗಿರುತ್ತೆ. ಸದರಿ ಬೈಕ್‌ನ ಅಂದಾಜು ಮೊತ್ತ 35.000/- ರೂಗಳಾಗಿರುತ್ತೆ.
ಮನುಷ್ಯ ಕಾಣೆ
ಕುದುರೆಮುಖ ಪೊಲೀಸ್ ಠಾಣೆ ಮೊ.ಸಂ- 16/2013 ಕಲಂ – ಮನುಷ್ಯ ಕಾಣೆ- ಕುದುರೆಮುಖ ಸಿ ಐ ಎಸ್ ಎಫ್ ಯುನಿಟ್ ನಲ್ಲಿ ಕಾನ್ಸಟೇಬಲ್ ( ಸ್ವೀಪರ್) ಆಗಿ ಕೆಲಸ ನಿರ್ವಹಿಸಿಕೊಂಡಿದ್ದ ಅನಿಲ್ ಕುಮಾರ್ ಎಂಬುವವರು ದಿನಾಂಕ:-05.05.2013 ರಂದು ಒಂದು ದಿವಸ ಆಕಸ್ಮಿಕ ರಜೆ ಮತ್ತು ದಿನಾಂಕ:-06.05.2013 ಮತ್ತು 07.05.2013 ರಂದು ಎರೆಡು ದಿವಸ ಅನುಮತಿ ಪಡೆದುಕೊಂಡು ತನ್ನ ಸ್ವಂತ ಊರಿಗೆ ಹೋಗಿ ಬರುತ್ತೇನೆಂದು ಹೋಗಿದ್ದವರು ಈವರೆಗೆ ಮನೆಗೂ ಹೋಗದೇ ರಜೆ ಮುಗಿಸಿ ವಾಪಾಸ್ ಕರ್ತವ್ಯಕ್ಕೂ ಹಾಜರಾಗದೇ ಕಾಣೆಯಾಗಿರುತ್ತಾರೆ ಪತ್ತೆಮಾಡಿಕೊಡಬೇಕೆಂದು ರಂಜಿತ್ ಕುಮಾರ್ ಸಿಐಎಸ್‌ಎಫ್ ಇನ್ಸ್‌ಪೆಕ್ಟರ್ ಇವರು ದೂರು ನೀಡಿರುತ್ತಾರೆ.