Tuesday, July 09, 2013

Daily Crimes Report Dated:08/07/2013


ಎಟಿಎಂ ಕಳುವು ಯತ್ನ
ತರೀಕೆರೆ  ಪೊಲೀಸ್‌ ಠಾಣೆ ಮೊ.ಸಂ. 172/2013 – ಕಲಂ: 457 380 511 ಐಪಿಸಿ  – ದಿನಾಂಕ 08/07/2013 ರಂದು ರಾತ್ರಿ ವೇಳೆಯಲ್ಲಿ ತರೀಕೆರೆ ಪಟ್ಟಣದ ಕೋಡಿಕ್ಯಾಂಪ್ ನ ಲಕ್ಷ್ಮೀ ವೆಂಕಟೇಶ್ವರ ಕಾಂಪ್ಲೆಕ್ಸ್‌ ನಲ್ಲಿರುವ ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾ ಬ್ಯಾಂಕಿನ ಕಟ್ಟಡಕ್ಕೆ ಹೊಂದಿಕೊಂಡಿರುವ ತಮ್ಮದೇ ಬ್ಯಾಂಕಿನದೇ ಆದ ಎ.ಟಿ.ಎಂ ಮಿಷನ್‌ ಅಳವಡಿಸಿರುವ ಕಟ್ಟಡದೊಳಗೆ ಯಾರೋ ಕಳ್ಳರು ಬಂದು ಎ.ಟಿ.ಎಂ ಮಿಷನ್‌ ಮುರಿದು ಹಾಳು ಮಾಡಿ ಅದರಲ್ಲಿದ್ದ ಹಣ ಕಳವು ಮಾಡಲು ಪ್ರಯತ್ನ ಪಟ್ಟಿದ್ದು ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರಿ ದೂರು ನೀಡಿದ್ದಾಗಿರುತ್ತೆ ಈ ಬಗ್ಗೆ ಶಿವನಾಗಪ್ಪ ಸ್ಟೇಟ್‌ ಬ್ಯಾಂಕ್‌ ಆಪ್‌ ಮೈಸೂರುನ ಮ್ಯಾನೇಜರ್‌ ಇವರು ದೂರು ನೀಡಿರುತ್ತಾರೆ.
ಅಪಹರಣ ಪ್ರಕರಣ  
ಬಾಳೂರು ಪೊಲೀಸ್‌ ಠಾಣೆ ಮೊ.ಸಂ. 26/2013 – ಕಲಂ: 363 ಐಪಿಸಿ  – ದಿನಾಂಕ 28/05/2013 ರಂದು ¦gÁåzÀÄzÁgÀರಾದ ಬಾಬು ಹಿರೇಬೈಲು ವಾಸಿ ಇವರ  JgÀqÀ£Éà ªÀÄUÀ¼ÁzÀ ¢ªÁå¼ÀÄ ತ£Àß CvÉÛ ±ÁAvÀgÀªÀgÀ ªÀÄ£ÉAiÀiÁzÀ eÁªÀ½AiÀİègÀĪÀ ¸ÉÊmïªÀÄ£ÉUÉ ºÉÆÃV §gÀÄvÉÛãÉAzÀÄ ºÉý ºÉÆÃzÀ¼ÀÄ. ªÀÄÆrUÉgÉ PÁ¯ÉÃfUÉ ºÉÆÃV §gÀÄvÉÛãÉAzÀÄ vÀ£Àß CvÉÛAiÀÄ ºÀwÛgÀ ºÉý ºÉÆÃzÀªÀ¼ÀÄ ªÁ¥À¸ÀÄì ªÀÄ£ÉUÉ ¨ÁgÀzÉà EzÀÄÝ PÁuÉAiÀiÁVgÀÄvÁÛ¼É. ¸ÀA§A¢PÀgÀ ªÀÄ£ÉUÀ¼À°è ºÀÄqÀÄQzÀgÀÆ EzÀĪÀgÉUÀÆ ¥ÀvÉÛAiÀiÁVgÀĪÀÅ¢®è. C®èzÉà ¢ªÁå¼ÀÄ 17 ªÀµÀðzÀ C¥Áæ¥ÀÛ ªÀAiÀĹì£ÀªÀ¼ÁVzÀÄÝ  C®èzÉà FPÉUÉ DgÉÆÃUÀå ¸Àj¬Ä®èzÉà gÀPÀۻãÀvɬÄAzÀ §¼À®ÄwÛzÀÄÝ F §UÉÎ aPÀ̪ÀÄUÀ¼ÀÆgÀÄ ¸ÀPÁðj D¸ÀàvÉæAiÀÄ ªÉÊzÀågÀ°è vÉÆÃj¹zÀÄÝ aQvÉìAiÀÄ£ÀÄß ¸ÀºÀ PÉÆr¹zÀÄÝ EªÀ¼À£ÀÄß AiÀiÁgÉÆÃ C¥ÀºÀj¹PÉÆAqÀÄ ºÉÆÃVgÀÄvÁÛgÉAzÀÄ PÀAqÀħgÀÄvÉÛ. DzÀÝjAzÀ PÁuÉAiÀiÁzÀ £À£Àß ªÀÄUÀ¼ÀÄ ¢ªÁå¼À£ÀÄß J¯Áè PÀqÉ ºÀÄqÀÄPÁr §AzÀÄ F zÀÆgÀ£ÀÄß PÉÆqÀ®Ä vÀqÀªÁVgÀÄvÀÛzÉ.
ಅಪಘಾತದಲ್ಲಿ ಸಾವು
ಅಜ್ಜಂಪುರ ಪೊಲೀಸ್‌ ಠಾಣೆ ಮೊ.ಸಂ. 142/2013 – ಕಲಂ: 279 304(ಎ) ಐಪಿಸಿ – ದಿನಾಂಕ 08/07/2013 ರಂದು ಪಿರ್ಯಾದಿ ಕುಬೇರಪ್ಪನ ದೊಡ್ಡಮ್ಮನ ಮಗ ವೀರಭದ್ರಪ್ಪನು ತನ್ನ ಬಾಬ್ತು ಮೋಟಾರ್‌ ಸೈಕಲ್‌ ನಂ. ಕೆಎ 17 ವಿ 6802 ರಲ್ಲಿ ಶಿವಲಿಂಗಮ್ಮನನ್ನು ಕೂರಿಸಿಕೊಂಡು ಅಜ್ಜಂಪುರ ರಸ್ತೆಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಪಕ್ಕಕ್ಕೆ ಬಿದ್ದಿದ್ದು ಹಿಂದೆ ಕುಳಿತಿದ್ದ ಶಿವಲಿಂಗಮ್ಮನಿಗೆ ತೀವ್ರ ತರಹದ ಪೆಟ್ಟಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿರುತ್ತೆ

Monday, July 08, 2013

Daily Crimes Report Dated:07/07/2013


ಕಳುವು ಪ್ರಕರಣ
ಬಾಳೆಹೊನ್ನುರು ಪೊಲೀಸ್‌ ಠಾಣೆ ಮೊ.ಸಂ. 139/2013 – ಕಲಂ: 457 380 ಐಪಿಸಿ  – ಪಿರ್ಯಾದುದಾರರಾದ ವೆಂಕಟರಮಣ ಹೇರೂರು ಗ್ರಾಮ ಅವರ ಸಂಸಾರದೊಂದಿಗೆ  ತನ್ನ ಹೆಂಡತಿಯ ತವರು ಮನೆಯಾದ ಬಸ್ರಿಕಟ್ಟೆಯ ಬಳಿ ಇರುವ ನಂದಿ ಕುಣಿಗೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ವಾಪಸ್ಸು ಮನೆಗೆ  ಬಂದು ನೋಡಲಾಗಿ ಯಾರೋ ಕಳ್ಳರು  ಮನೆಯ ಮುಂದಿನ  ಡೋರಿನ  ಚಿಲಕದ ಕೊಂಡಿ ಮುರಿದು ಮನೆಯೊಳಗೆ ಪ್ರವೇಶಿಸಿ   ಗಾಡ್ರೇಜ್ ಬೀರುವಿನ ಸೀಕ್ರೇಟ್ ಲಾಕರ್  ನಲ್ಲಿದ್ದ   1)   02  ಜೊತೆ ಚಿನ್ನದ  ಓಲೆ   ಸುಮಾರು  10 ಗ್ರಾಂ    ಅಂದಾಜು ಬೆಲೆ    20.000/-   ರೂ    2)  ಒಂದು ಬೆಳ್ಳಿಯ  ತಟ್ಟೆ,   3)  ಒಂದು   ಬೆಳ್ಳಿಯ ಕಳಸದ  ಚೊಂಬು,   4)  ಒಂದು  ಬೆಳ್ಳಿಯ ಕೌವಳಿಗೆ   5)   02 ಬೆಳ್ಳಿಯ ಕವಳಿಗೆ ಸೌಟು,   6)  ಬೆಳ್ಳಿಯ  ಹರಿಶಿಣ ಕುಂಕುಮದ 02 ಬಟ್ಟಲು,  7) 05 ಬೆಳ್ಳಿಯ ದೊಡ್ಡ ಲೋಟಗಳು    8)  ಬೆಳ್ಳಿಯ  05  ಚಿಕ್ಕದಾದ ಲೋಟಗಳು,  9)  ಒಂದು  ಜೊತೆ  ಬೆಳ್ಳಿಯ  ಕಾಲು  ಚೈನುಗಳು,   10)    02 ಜೊತೆ  ಬೆಳ್ಳಿಯ ಕಾಲುಂಗರಗಳು,    ಈ ಬೆಳ್ಳಿಯ  ವಸ್ತುಗಳ ಅಂದಾಜು ತೂಕ   01  ಕೆ.ಜಿ   100 ಗ್ರಾಂ ಇರುತ್ತೆ,    ಇವುಗಳ  ಅಂದಾಜು ಬೆಲೆ  30.000 /- ರೂ ಆಗಿರುತ್ತೆ,     ಹಾಗೂ   11) 25.000 /-   ರೂ ನಗದು ಹಣವನ್ನು ಯಾರೋ  ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಇವುಗಳನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ಇತ್ಯಾದಿ.

Sunday, July 07, 2013

Daily Crimes Report Dated:06/07/2013


ಕಳುವು ಪ್ರಕರಣ
ಅಜ್ಜಂಪುರ ಪೊಲೀಸ್‌ ಠಾಣೆ ಮೊ.ಸಂ. 141/2013 – ಕಲಂ: 457 380 ಐಪಿಸಿ  – ಪಿರ್ಯಾದಿ ಜಯಪ್ರಕಾಶ್‌ ಉಗ್ರನರಸಿಂಹ ಸ್ವಾಮಿ ದೇವಸ್ಥಾನ ಬಗ್ಗುವಳ್ಳಿ ಇವರು  ಬಗ್ಗವಳ್ಳಿ ಗ್ರಾಮದ ಚನ್ನಬಸವ ರವರೊಂದಿಗೆ ದೇವಸ್ಥಾನದ ಬಾಗಿಲು ತೆಗೆದು ಒಳಹೋಗಿ ನೋಡಿದಾಗ 2 ಗಾಡ್ರೇಜ್ ಓಪನ್ ಆಗಿದ್ದು ಬಟ್ಟೆಗಳೆಲ್ಲ ಚಲ್ಲಾಪಿಲ್ಲಿಯಾಗಿದ್ದು ಶ್ರೀ ಶಾರದಾಂಬ ದೇವಿಯ ಕುತ್ತಿಗೆಯಲ್ಲಿದ್ದ ಸುಮಾರು 8 ಗ್ರಾಂ ಚಿನ್ನದ ತಾಳಿ ಹಾಗೂ ಚಿನ್ನದ ಅಷ್ಟಪಟ್ಟಿ ಹಾಗೂ ಗುಂಡುಗಳು ಕಾಣೆಯಾಗಿದ್ದು ಎದುರುಗಡೆ ಇರುವ ಯೋಗನರಸಿಂಹ ಸ್ವಾಮಿಗೆ ಹಾಕಲಾಗಿದ್ದ ಎರಡು ಬೆಳ್ಳಿ ಕಣ್ಣುಗಳು ಕಿವಿಯ ಕವಚಗಳು ಮತ್ತು ಮಿನಿ ಯುಪಿಎಸ್ ಕಾಣೆಯಾಗಿರುತ್ತೆ ಇವುಗಳ ಬಟ್ಟು ಬೆಲೆ 23.000/- ರೂ ಗಳಾಗಿದ್ದು ಇವುಗಳನ್ನು ರಾತ್ರಿ ಯೋರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಅಪಘಾತದಲ್ಲಿ ಸಾವು
ತರೀಕೆರೆ  ಪೊಲೀಸ್‌ ಠಾಣೆ ಮೊ.ಸಂ. 169/2013 – ಕಲಂ: 279 304(ಎ) ಐಪಿಸಿ ರೆ.ವಿ 134(ಎ)&(ಬಿ) ಐಎಂವಿ ಆಕ್ಟ್   – ಪಿರ್ಯಾದಿ ವಿಜಯ್‌ಕುಮಾರ್‌ ಎಂಸಿಹಳ್ಳಿ ಗ್ರಾಮದ ವಾಸಿ ಇವರು ದಿನಾಂಕ 05/07/2013 ರಂದು ರಾತ್ರಿ ಸಮಯದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದಾಗ ಎನ್‌ಹೆಚ್‌‌ 206 ರ ರಸ್ತೆಯಲ್ಲಿ ಒಬ್ಬ ವ್ಯಕ್ತಿಯ ಶವ ಬಿದ್ದಿದ್ದು  ಸದರಿ ಶವವು ಗುರುತು ಸಿಗದ ಹಾಗೆ ಇದ್ದು ಯಾವುದೋ ವಾಹನ ಪಾದಚಾರಿಗೆ ಅಪಘಾತ ಮಾಡಿ ವಾಹನವನ್ನು ನಿಲ್ಲಿಸದೆ ಹೋಗಿದ್ದು ಕಂಡುಬರುತ್ತದೆ

Saturday, July 06, 2013

Daily Crimes Report Dated:05/07/2013


ಮನುಷ್ಯ ಕಾಣೆ
ಬಣಕಲ್‌ ಪೊಲೀಸ್‌ ಠಾಣೆ ಮೊ.ಸಂ. 96/2013 – ಕಲಂ: ಮನುಷ್ಯ ಕಾಣೆ – ದಿನಾಂಕ 22/06/2013 ರಂದು ಅತ್ತಿಗೆರೆ ಗ್ರಾಮದಿಂದ ಪಿರ್ಯಾದುದಾರರಾದ ಉದಯ್‌ಕುಮಾರ್ ಇವರ  ತಂಗಿ ಬಿ ಸುಜಾತ 27 ವರ್ಷ ಕಾಫಿ ಎಸ್ಟೇಟಿನಲ್ಲಿ ಕೂಲಿಕೆಲಸ ಮಾಡಿಕೊಂಡು ಇರುತ್ತಾಳೆ. ಪಿರ್ಯಾದುದಾರರು ಬಣಕಲ್ ಗೆಂದು ಬಂದಿದ್ದು, ಸುಜಾತ ಕೂಲಿಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದು ಪಿರ್ಯಾದುದಾರರು ಅದೆ ದಿನ ಮದ್ಯಾಹ್ನ ಮನೆಗೆ ಹೋಗಿ ಮನೆಯಲ್ಲಿ ಸುಜಾತ ಇಲ್ಲದೆ ಇದ್ದು ತಮ್ಮ ಸಂತೋಷ ಹಾಗೂ ತಾಯಿ ಸುಶೀಲರವರನ್ನು ಕೇಳಿದಾಗ ಸುಜಾತಳು ಬಾಳೆಹೊನ್ನೂರಿನ ತನ್ನ ಚಿಕ್ಕಪ್ಪ ರವಿ ಮನೆಗೆ ಹೋಗುತ್ತೇನೆಂದು 11-00 ಗಂಟೆಗೆ ಹೋದಳು ಎಂದೂ ತಿಳಿಸಿದ್ದು ಪಿರ್ಯಾದುದಾರರು ಬಾಳೆಹೊನ್ನೂರು ಚಿಕ್ಕಪ್ಪನ ಮನೆಯಲ್ಲಿ ವಿಚಾರಿಸಲಾಗಿ ಅಲ್ಲಿಗೆ ಬಂದಿಲ್ಲವೆಂದು ತಿಳಿಸಿದ್ದು, ಸಂಭಂದಿಕರ ಊರುಗಳಾದ ಎಲ್ಲಾ ಕಡೆ ಹುಡುಕಾಡಿದ್ದು ಪಿರ್ಯಾದುದಾರರ ತಂಗಿ ಸುಜಾತಳು ಎಲ್ಲಿಯು ಪತ್ತೆಯಾಗದೆ ಇದ್ದು ಸುಜಾತಳನ್ನು ಪತ್ತೆ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ. 

Friday, July 05, 2013

Daily Crimes Report Dated:04/07/2013


ಮಟ್ಕಾ ಜೂಜಾಟ ಪ್ರಕರಣ
ಬಸವನಹಳ್ಳಿ  ಪೊಲೀಸ್‌ ಠಾಣೆ ಮೊ.ಸಂ. 131/2013 – ಕಲಂ: 78 ಕ್ಲಾಸ್‌(3) ಕೆಪಿ ಆಕ್ಟ್ – ದಿನಾಂಕ 04/07/2013 ರಂದು 1600 ಗಂಟೆಯಲ್ಲಿ ಮಂಜುನಾಥ ಉಪ್ಪಳ್ಳಿ ವಾಸಿ ಈತನು ಉಪ್ಪಳ್ಳಿಯ ಬಸ್ ನಿಲುಗಡೆ ಬಳಿ  ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜೂಜಾಟ ಆಡುತ್ತಿದ್ದಾನೆ  ಎಂದು ಬಂದ ಖಚಿತ ವರ್ತಮಾನದ ಮೇರೆಗೆ    ಸಿಬ್ಬಂದಿ ಹಾಗೂ ಪಂಚರೊಂದಿಗೆ 16-00  ಗಂಟೆಯ ಸಮಯಕ್ಕೆ    ದಾಳಿ ನಡೆಸಿ ಕಾಲಂ ನಂ 07 ರಲ್ಲಿ ಕಂಡ ಆಸಾಮಿ  ಸಾರ್ವಜನಿಕರ  ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೆ   ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಜೂಜಾಟ ಆಡುತ್ತಿದ್ದವನನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದು  ಆತನ ಬಳಿ ಇದ್ದ ಒಂದು ಮಟ್ಕಾ ಚೀಟಿ,  ಒಂದು ಪೆನ್ನು, ನಗದು 2450/- ರೂಗಳನ್ನು  ಅಮಾನತ್ತು ಪಡಿಸಿಕೊಂಡಿರುತ್ತೆ. 
ಕಳುವು ಮಾಲು ವಶ
ನಗರ ಪೊಲೀಸ್‌ ಠಾಣೆ ಮೊ.ಸಂ. 141/2013 – ಕಲಂ: 102 41 ಕ್ಲಾಸ್‌(ಡಿ) ಸಿಆರ್‌ಪಿಸಿ ರೆ.ವಿ 379 ಐಪಿಸಿ – ದಿನಾಂಕ 04/07/2013 ರಂದ 1200 ಗಂಟೆಯಲ್ಲಿ ಪಿಎಸ್‌‌ಐ ರವರು ಗಸ್ತಿನಲ್ಲಿದ್ದಾಗ ರಂಗನಾಥ ಎಂಬುವನ ವಾಹನ ತಡೆದು ಪರಿಶೀಲಿಸಿದಾಗ ವಾಹನದ ಸಂಖ್ಯೆ.ಕೆ.ಎ-18 ಎಲ್-3597 ಇಂಜೀನ್ ನಂ.05C15E31452 ಮತ್ತು ಚಾರ್ಸಿ ನಂ05C16E31823 ಅಗಿರುತ್ತದೆ.ಹಾಗು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಸದರಿ ಬೈಕನ್ನು  ಈಗ್ಗೆ ಒಂದು ವಾರದ ಹಿಂದೆ ಕಡೂರು ನಗರದ ನ್ಯಾಯಾಲಯದ ಮುಂಬಾಗ ನಿಲ್ಲಿಸಿದ್ದನ್ನು ಕದ್ದುಕೊಂಡು ಬಂದಿರುವುದಾಗಿ  ನುಡಿದಿದ್ದು ಸದರಿ ವಾಹನವನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿದ್ದು ವಾಹನದ ಅಂದಾಜು ಬೆಲೆ-25.000/- ರೂ ಎಂದು ಪಂಚರು ಅಭಿಪ್ರಾಯ ಪಟ್ಟಿದ್ದಾಗಿರುತ್ತೆ.ಸದರಿ ಆಸಾಮಿಯನ್ನು ಠಾಣೆಗೆ ಕರೆತಂದು ದಸ್ತಗಿರಿ ಕ್ರಮ ಜರುಗಿಸಿರುತ್ತೆ.
ಅತ್ಯಚಾರ ಪ್ರಕರಣ
ಆಲ್ದೂರು ಪೊಲೀಸ್‌ ಠಾಣೆ ಮೊ.ಸಂ. 144/2013 – ಕಲಂ: 376 417  ಐಪಿಸಿ – ಪಿರ್ಯಾದುದಾರರಾದ 28 ವರ್ಷದ ಹುಡುಗಿ ಹುಣಸೆಮಕ್ಕಿ ವಾಸಿ ಇವರು ಗ್ರಾಮದ ಉಮೇಶ್‌  ಗೌಡರ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, , ನಮ್ಮ ಗ್ರಾಮದ ವಾಸಿ ರವಿ ಬಿನ್ ಉದ್ದಯ್ಯ, ಎಂಬುವವನು ಕೂಲಿ ಕೆಲಸಕ್ಕೆ ಬರುತಿದ್ದ ರವಿಯವರ ಹೆಂಡತಿ ಹೆರಿಗೆಗೆ ತವರಿಗೆ ಹೋಗಿದ್ದು  ಹೀಗಾಗಿ ಉಮೇಶ್‌ ಗೌಡರ ತೋಟದಲ್ಲಿ ರವಿ ಮತ್ತು ತಾನು ಇಬ್ಬರೆ ಕೆಲಸ ಮಾಡುತ್ತಿರುವಾಗ 8 ತಿಂಗಳ ಹಿಂದೆ ಅಂದರೆ ನವೆಂಬರ್‌ ತಿಂಗಳ 2012 ರಂದು ದಿನಾಂಕ ಸರಿಯಾಗಿ ಗೊತ್ತಿರುವುದಿಲ್ಲ,  ರವಿ ತನ್ನನ್ನು ಬಲತ್ಕಾರವಾಗಿ ಅತ್ಯಾಚಾರ ಮಾಡಿದ್ದು ತಾನು  ಈ ವಿಷಯವನ್ನು ಮನೆಯವರಿಗೆ ಹೇಳುತ್ತೇನೆ ಎಂದು ತಿಳಿಸಿದಾಗ ತನ್ನನ್ನು ಮದುವೆ ಮಾಡಿಕೊಳ್ಳುವುದಾಗಿ ಅಲ್ಲಿಂದ ನಿರಂತರವಾಗಿ ತನ್ನ ಮೇಲೆ ದೈಹಿಕ ಸಂಪರ್ಕ ಹೊಂದುತ್ತಲೆ ಬಂದಿರುತ್ತಾನೆ, ಈಗ ತಾನು 8 ತಿಂಗಳ ಗರ್ಭಿಣಿಯಾಗಿದ್ದು ಸದರಿ ವಿಷಯವನ್ನು ಮನೆಯವರ ಮತ್ತು ಊರಿನವರ ಗಮನಕ್ಕೆ ತಂದಾಗ ರವಿ ತನ್ನನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದು ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದು  ತನ್ನನ್ನು ಮದುವೆಯಾಗದೆ ವಂಚಿಸಿದ್ದಾನೆ  ಆದ್ದರಿಂದ ರವಿಯ ಮೇಲೆ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಿ ಇತ್ಯಾದಿ,
ಕಳುವು ಪ್ರಕರಣ
ಎನ್‌ಆರ್‌ಪುರ ಪೊಲೀಸ್‌ ಠಾಣೆ ಮೊ.ಸಂ. 111/2013 – ಕಲಂ: 457 380 ಐಪಿಸಿ – ದಿನಾಂಕ 03/07/2013 ರಂದು ರಾತ್ರಿ ವೇಳೆಯಲ್ಲಿ ಪಿರ್ಯಾದುದಾರರಾದ ರಾಜನಾಯ್ಕ ಇವರ ಮೊಬೈಲ್‌ಶಾಪ್‌ಗೆ ಯಾರೋ ಕಳ್ಳರು ಫಿರ್ಯಾದುದಾರರ ಅಂಗಡಿಯ ಹಿಂಭಾಗದ  ವೆಂಟಿಲೆಂಟರ್‌‌ಗೆ ಹಾಕಿದ್ದ ಮೆಶ್‌ ಕಿತ್ತು,  ಅಂಗಡಿಯ ಒಳಗೆ ಗ್ಲಾಸ್ ಮೇಲೆ ಇಟ್ಟಿದ್ದ ಸುಮಾರು 21 ಹ್ಯಾಂಡ್‌ ಸೆಟ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಇವುಗಳ ಒಟ್ಟು ಅಂದಾಜು ಬೆಲೆ 23,800/- ರೂಗಳಾಗಿರುತ್ತೆಂದು, ಕಳುವಾಗಿರುವ ಇನ್ನು ಕೆಲವು ಮೊಬೈಲ್‌ ಸೆಟ್‌ಗಳ ಬೆಲೆ ಮತ್ತು ಐ.ಎಂ.ಇ.ಐ ನಂಬರ್‌ಗಳು ತಿಳಿಯದಿದ್ದರಿಂದ ನಂತರ ತಿಳಿಸುವುದಾಗಿ ಹಾಗೂ  ಕಳುವಾದ ಮಾಲನ್ನು ಪತ್ತೆ ಮಾಡಿಕೊಡಲು ಕೊಟ್ಟ ದೂರಾಗಿರುತ್ತೆ.

Thursday, July 04, 2013

Daily Crimes Report Dated:03/07/2013


ಮಟ್ಕಾ ಜೂಜಾಟ ಪ್ರಕರಣ
ಯಗಟಿ  ಪೊಲೀಸ್‌ ಠಾಣೆ ಮೊ.ಸಂ. 74/2013 – ಕಲಂ: 87 ಕೆ.ಪಿ. ಆಕ್ಟ್ – ದಿನಾಂಕ 03/07/2013 ರಂದು 1500 ಗಂಟೆಯಲ್ಲಿ ಚೌಳಿ ಹಿರಿಯೂರು ಗ್ರಾಮದಲ್ಲಿ ಅಂದರ್‌ ಬಾಹಾರ್‌ ಜೂಜಾಟ ಆಡುತ್ತಿದ್ದ ಒಟ್ಟು 5 ಜನ ಅಸಾಮಿಗಳನ್ನು ಹಿಡಿದುಕೊಂಡಿದ್ದು ಸದರಿ ಜೂಜಾಟ ಆಡಲು ಪರವಾನಿಗೆ ವಗೈರೆ ಕೇಳಲಾಗಿ ಅಸಾಮಿಗಳ ತಮ್ಮ ಬಳಿ ಯಾವುದು ಇಲ್ಲವೆಂದು ತಿಳಿಸಿದ್ದು  ನಂತರ ಸದರಿಯವರು ಇಸ್ಪೀಟು ಆಟಕ್ಕೆ ಪಣವಾಗಿ ಕಟ್ಟಿ ಆಕಾಡದಲ್ಲಿದ್ದ 1600/- ನಗದು ಹಣವನ್ನು ಮತ್ತು 52 ಇಸ್ಪೀಟು ಎಲೆಗಳನ್ನು ಹಾಗೂ ಒಂದು ಪ್ಲಾಸ್ಟೀಕ್‌ ಚೀಲವನ್ನು  ಅಮಾನತ್ತು ಪಡಿಸಿಕೊಂಡ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಕೇಸು ನೊಂದಾಯಿಸಿರುತ್ತೆನೆ. ಆರೋಪಿಗಳಾದ ಷಣ್ಮೂಖಪ್ಪ ಹಾಗೂ ಇತರೆ 4 ಜನರನ್ನು ದಸ್ತಗಿರಿ ಮಾಡಿರುತ್ತೆ
ಗಂಡನಿಂದ ಕಿರುಕುಳ ಪ್ರಕರಣ
ಕಡೂರು ಪೊಲೀಸ್‌ ಠಾಣೆ ಮೊ.ಸಂ. 173/2013 – ಕಲಂ: 498(ಎ) 307 ಐಪಿಸಿ – ಪಿರ್ಯಾದುದಾರರಾದ ಶ್ರೀಮತಿ ಶೈಲಜಾ ಮಲ್ಲೇಶ್ವರ ಗ್ರಾಮದ ವಾಸಿ ಇವರು  ಈಗ್ಗೆ 15 ವರ್ಷಗಳ ಹಿಂದೆ  ಶಿವಯ್ಯ ರವರೊಂದಿಗೆ ಮದುವೆಯಾಗಿದ್ದು. 02 ಜನ ಗಂಡು ಮಕ್ಕಳಿದ್ದು. ಮದುವೆಯಾದಾಗನಿಂದಲೂ    ನನ್ನ  ಮೇಲೆ ಅನುಮಾನ ಪಟ್ಟು ಆಗಾಗ್ಗೆ ಜಗಳ ಮಾಡುತ್ತಿದ್ದನು.  ದೂರು ಕೊಟ್ಟಿದ್ದು ಠಾಣೆಯಲ್ಲಿ ವಿಚಾರಣೆ ಮಾಡಿ  ರಾಜಿ ಮಾಡಿ ಕಳುಹಿಸಿರುತ್ತಾರೆ.  ತನ್ನ  ಹೆಸರಿಗಿರುವ ಮನೆಯನ್ನು ನನ್ನ ಹೆಸರಿಗೆ ಬರೆದುಕೊಡು ಎಂದು ಕೇಳಿದರು ನಾನು ಏಕೇ ಬರೆದುಕೊಡಬೇಕು  ಎಂದು  ಕೇಳಿದ್ದಕ್ಕೆ, ಬಚ್ಚಲು ಮನೆಯಲ್ಲಿದ್ದ  ಸೀಮೇಎಣ್ಣೆ ಕ್ಯಾನ್‌ನ್ನು ತೆಗೆದುಕೊಂಡು ಡಬ್ಬಕ್ಕೆ ಸುರಿದುಕೊಂಡು  ನನ್ನ ಮೇಲೆ ಚೆಲ್ಲಿ ಬೆಂಕಿ ಹಚ್ಚಿದನು.  ಆಗ ನನ್ನ ಎರಡು ಕಾಲಗಳಿಗೆ  ಸುಟ್ಟ ಗಾಯವಾಯಿತು.  ತನ್ನ ಮೇಲೆ  ಹಿಂಸೆ ನೀಡಿ   ಕೊಲೆ  ಮಾಡಲು ಪ್ರಯತ್ನ ಮಾಡಿದ  ನನ್ನ ಗಂಡ ಶಿವಯ್ಯ ನ ಮೇಲೆ ಕಾನೂನು ಕ್ರಮ ಕೋರಿ ನೀಡಿದ ಹೇಳಿಕೆ ದೂರು ಇತ್ಯಾದಿ.

Wednesday, July 03, 2013

Daily Crimes Report Dated:02/07/2013


ಮನುಷ್ಯ ಕಾಣೆ
ಮೂಡಿಗೆರೆ  ಪೊಲೀಸ್‌ ಠಾಣೆ ಮೊ.ಸಂ. 103/2013 – ಕಲಂ: ಮನುಷ್ಯ ಕಾಣೆ – ಪಿರ್ಯಾದುದಾರರಾದ ಮನು ಮಾಕೋನಹಳ್ಳಿ ವಾಸಿ ಇವರ  ಹೆಂಡತಿ ಶ್ರೀಮತಿ ಅಮೃತವಲ್ಲಿ 18 ವರ್ಷ ರವರು ದಿನಾಂಕ 30-06-2013 ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಪಕ್ಕದಮನೆಯವರಿಗೆ ತಿಳಿಸಿ ಹೋದವಳು ಪುನಃ ಮನೆಗೆ ಬಾರದೆ ಇದ್ದು ಅವಳ ತಂದೆ ಮನೆ ಹಾಗೂ ಸಂಬಂದಿಕರುಗಳ ಮನೆಗಳಲ್ಲಿ ಹುಡುಕಿದರು ಸಿಕ್ಕದಿರುವುದಿಲ್ಲ ಅವಳಿಗೆ ಬೀಜುವಳ್ಳಿ ಅಂಬೇಡ್ಕರ್ ನಗರದ ವಾಸಿ ಧರ್ಮರವರ ಪರಿಚಯವಿದ್ದು ಅವರ ಜೊತೆ ಹೋಗಿರಬಹುದೆಂಬ ಸಂಶಯವಿರುತ್ತೆ ಆದ್ದರಿಂದ  ಅಮೃತವಲ್ಲಿರವರನ್ನು ಪತ್ತೆ ಮಾಡಿಕೊಡುವಂತೆ ಈ ದಿನ ಬಂದು ದೂರು ನೀಡಿದ್ದಾಗಿರುತ್ತೆ.
ಅಕ್ರಮ ಮದ್ಯ ವಶ  
ಆಲ್ದೂರು  ಪೊಲೀಸ್‌ ಠಾಣೆ ಮೊ.ಸಂ. 141/2013 – ಕಲಂ: 34 ಕೆ.ಇ. ಆಕ್ಟ್ – ಮಾಹಿತಿ ಬಂದ ಮೇರೆಗೆ ಪಿಎಸ್‌‌ಐ ಹಾಗೂ  ಸಿಬ್ಬಂದಿ ರವರುಗಳೊಂದಿಗೆ  ಕಡವಂತಿ ಗ್ರಾಮಕ್ಕೆ ಹೋಗಿ  ಪ್ರಕಾಶ್‌ ಮಾರ್ಟಿಸ್‌ ಎಂಬುವವರ ಅಂಗಡಿ ಮುಂದೆ ಜೀಪ್‌ ನಿಲ್ಲಿಸಿದ್ದು ಅಸಾಮಿಯು ಓಡಿಹೋಗಿದ್ದು ಅಂಗಡಿಯನ್ನು ಸಿಬ್ಬಂದಿಗಳೊಂದಿಗೆ ತಪಾಸಣೆ ಮಾಡಲಾಗಿ ಅಂಗಡಿಯ ಮೂಲೆಯಲ್ಲಿ ಒಂದು ರಟ್ಟಿನ ಬಾಕ್ಸ್ ಲ್ಲಿ 180  ಎಂ ಎಲ್‌ ನ  28 CAPTAIN MARTINS Special WHISKY, ಕಂಪನಿಯ ಮದ್ಯದ ಕ್ವಾಟರ್‌ ಬಾಟಲಿಗಳು ಇದ್ದು ವಿಸ್ಕಿಯನ್ನು ಇಟ್ಟುಕೊಂಡಿರುವ ಬಗ್ಗೆ ಪರವಾನಗಿ ಇಲ್ಲದೆ ಇದ್ದು ಇವುಗಳನ್ನು ಮಾರಾಟ ಮಾಡಲು ತಂದು ದಾಸ್ತಾನು ಮಾಡಿರುವುದಾಗಿ ತಿಳಿದು ಬಂದ ಮೇರೆಗೆ ಅಂಗಡಿ ಮಾಲೀಕನ ಹೆಸರು ವಿಳಾಸವನ್ನು ವಿಚಾರ ಮಾಡಲಾಗಿ ಅಮಾನತ್‌ ಪಡಿಸಿಕೊಂಡು ಮಾಲಿನ ಬೆಲೆ – ಸುಮಾರು 1232-00  ರೂಗಳು.
ಅಕ್ರಮ ಮದ್ಯ ವಶ  
ಆಲ್ದೂರು  ಪೊಲೀಸ್‌ ಠಾಣೆ ಮೊ.ಸಂ. 142/2013 – ಕಲಂ: 34 ಕೆ.ಇ. ಆಕ್ಟ್ – ದಿನಾಂಕ 02/07/2013 ರಂದು 1800 ಗಂಟೆಯಲ್ಲಿ ಬನ್ನೂರು ಗ್ರಾಮದಲ್ಲಿ ಅಂಗಡಿಯನ್ನು ಸಿಬ್ಬಂದಿಗಳೊಂದಿಗೆ ತಪಾಸಣೆ ಮಾಡಲಾಗಿ ಅಂಗಡಿಯ ಮೂಲೆಯಲ್ಲಿ ಒಂದು ¥Áè¹ÖPï  aîzÀ°è 90  ಎಂ ಎಲ್‌ ನ  60 «AqÀìgï ಕಂಪನಿಯ ಮದ್ಯದ ¥ÁPÉÃmïUÀ¼ÀÄ EzÀÄÝ  ವಿಸ್ಕಿಯನ್ನು ElÄÖPÉÆ¼ÀÄîªÀ §UÉÎ ಪರವಾನಗಿ PÉüÀ¯ÁV, ¥ÀgÀªÁ£ÀV  ಇಲ್ಲದೆ ಇದ್ದು ಇವುಗಳನ್ನು ಮಾರಾಟ ಮಾಡಲು ತಂದು ದಾಸ್ತಾನು ಮಾಡಿರುವುದಾಗಿ ತಿಳಿದು ಬಂದ ಮೇರೆಗೆ WINDSOR , ಕಂಪನಿಯ 60 , 90 ಎಂ ಎಲ್ ನ ವಿಸ್ಕಿಯ ¥ÁPÉÃmïUÀ¼À£ÀÄß  ವಶಕ್ಕೆ ಪಡೆದುಕೊಂಡು ಅಮಾನತ್‌ ಪಡಿಸಿಕೊಂಡು ಮಾಲಿನ ಬೆಲೆ – ಸುಮಾರು 1935-00  ರೂಗಳು.  ಆರೋಪಿಯಾದ ಶಂಕರಪ್ಪ ಈತನನ್ನು ದಸ್ತಿಗಿರಿ ಮಾಡಿರುತ್ತೆ.


Tuesday, July 02, 2013

Daily Crimes Report Dated:01/07/2013


ಮಟ್ಕಾ ಜೂಜಾಟ ಪ್ರಕರಣ
ಬಸವನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 129/2013 – ಕಲಂ: 78 ಕ್ಲಾಸ್‌‌(3) ಕೆಪಿ ಆಕ್ಟ್  – ಯಾರೋ ಒಬ್ಬ ಆಸಾಮಿ ಕೆ.ಎಂ. ರಸ್ತೆಯ ತಿರುವಿನ  ಡಾ: ರಾಜ್ ರಸ್ತೆಯ ಬೀಡಾ ಅಂಗಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜೂಜಾಟ ಆಡುತ್ತಿದ್ದಾನೆ  ಎಂದು ಬಂದ ಖಚಿತ ವರ್ತಮಾನದ ಮೇರೆಗೆ   ಪಿಎಸ್‌‌ಐ ಮತ್ತು  ಸಿಬ್ಬಂದಿ ಹಾಗೂ ಪಂಚರೊಂದಿಗೆ 16-15  ಗಂಟೆಯ ಸಮಯಕ್ಕೆ    ದಾಳಿ ನಡೆಸಿ ಆರೋಪಿಯಾದ ತಿಮ್ಮಣ್ಣ ಚಿಕ್ಕಮಗಳೂರು ವಾಸಿ ಇವರು ಸಾರ್ವಜನಿಕರ  ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೆ   ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಚೂಜಾಟ ಆಡುತ್ತಿದ್ದವನನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದು  ಆತನ ಬಳಿ ಇದ್ದ ಒಂದು ಮಟ್ಕಾ ಚೀಟಿ,  ಒಂದು ಪೆನ್ನು, ನಗದು ಮತ್ತು ನಗದು 850/- ರೂಗಳನ್ನು  ಅಮಾನತ್ತು ಪಡಿಸಿಕೊಂಡಿರುತ್ತೆ. 
ಮೋಟಾರ್‌ ಸೈಕಲ್‌ ಕಳುವು
ಸಖರಾಯಪಟ್ಟಣ  ಪೊಲೀಸ್‌ ಠಾಣೆ ಮೊ.ಸಂ. 63/2013 – ಕಲಂ: 379 ಐಪಿಸಿ  – ಪಿರ್ಯಾದುದಾರರಾದ ಅನಿಲ್‌ಕುಮಾರ್‌ ಇವರು ದಿನಾಂಕ 18-04-2013 ರಂದು ಬೆಳಿಗ್ಗೆ  10-00 ಗಂಟೆಯಲ್ಲಿ  ಚಿಕ್ಕಮಗಳೂರಿಗೆ ಹೋಗುವ ಕೆಲಸ ಇದ್ದದರಿಂದ ಸದರಿ ಬೈಕನ್ನು  ಸಖರಾಯಪಟ್ಟಣದ ಹಳೆಬಸ್ ನಿಲ್ದಾಣದ ಹತ್ತಿರ ಇರುವ ಭಗವಾನ್  ಎಂಬುವರ ವಾಸದ ಮನೆಯ ಮುಂದೆ ರಸ್ತೆ ಬದಿಯಲ್ಲಿ ನಿಲ್ಲಿಸಿ  ಹೋಗಿದ್ದು . ನಂತರ  ರಾತ್ರಿ 11-30 ಗಂಟೆಗೆ ವಾಪಾಸ್ಸು ಬಂದು ನೋಡಿದಾಗ  ನಿಲ್ಲಿಸಿ ಹೋಗಿದ್ದ ಬೈಕ್ ಇರಲಿಲ್ಲ  ಸದರಿ ಬೈಕು ಯಾರೋ ಪರಿಚಯದವರೋ ಅಥವಾ ಸ್ನೇಹಿತರೋ ತೆಗೆದುಕೊಂಡು ಹೋಗಿರಬಹುದು ಎಂದು  ತಿಳಿದುಬೈಕಿನ ಪತ್ತೆಯ ಸಖರಾಯಪಟ್ಟಣ ಮತ್ತು ಕಡೂರು ಚಿಕ್ಕಮಗಳೂರು ಕಡೆ ಹೋಗಿ  ಸ್ನೇಹಿತರನ್ನು ವಿಚಾರ ಮಾಢಲಾಗಿ ಬೈಕಿನ ಪತ್ತೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ.  ಸದರಿ ಬೈಕ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು  ಹೋಗಿರುತ್ತಾರೆ. ಕಳವು ಮಾಡಿಕೊಂಡು ಹೋಗಿರುವ ಬೈಕಿನ  ಮಾಡೆಲ್ .2003 ಇಂಜಿನ್ ನಂ. 0018E18950 ಚಾರ್ಸಿ ನಂ. 00D20F19747 ಅಗಿದ್ದು ಸದರಿ ಬೈಕಿನ ಬೆಲೆ  20,000-00 ಸಾವಿರ ರೂಗಳಾಗಿರುತ್ತದೆ  ಕಳವು ಮಾಡಿಕೊಂಡುಹೋಗಿರುವ ಬೈಕನ್ನು ಪತ್ತೆ ಮಾಡಿಕೊಡಬೇಕೆಂದು  ಕೋರಿದ್ದಾಗಿರುತ್ತೆ

Monday, July 01, 2013

Daily Crimes Report Dated:29/06/2013


ಕಳುವು ಪ್ರಕರಣ  
ನಗರ ಪೊಲೀಸ್‌ ಠಾಣೆ ಮೊ.ಸಂ. 140/2013 – ಕಲಂ: 454 457 380  ಐಪಿಸಿ – ಪಿರ್ಯಾದುದಾರರು ಫರಾಜ್‌ ನಸೀಮ್‌ ಬಾರ್‌ಲೈನ್‌ ರಸ್ತೆ ವಾಸಿ ಇವರು ದಿನಾಂಕ 29/06/2013 ರಂದು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ 30/06/2013 ರಂದು ಮನೆಗೆ ಹೋಗಿ ನೋಡಿದಾಗ ಹಿಂಬಾಗದ ಬಾಗಿಲಿನ ಹತ್ತಿರ ಬಂದು ನೋಡಿದಾಗ ಯಾರೋ ಕಳ್ಳರು ಹಿಂದುಗಡೆ ಇರುವ ಶೌಚಾಲಯದ ಬಾಗಿಲನ್ನು ಯಾವುದೋ ಅಯುದದಿಂದ ಮೀಟಿ ಮುರಿದು ಮನೆಯ ಓಳಗಡೆ ಪ್ರವೇಶ ಮಾಡಿ ಮೇಲ್ಛಾವಣಿಯಲ್ಲಿರುವ  ತನ್ನ ಮತ್ತು ತನ್ನ ಅಣ್ಣ ಸಿರಾಜ್ ಅಹಮ್ಮದ್ ರವರ ಬೆಡ್ ರೂಮಿನಲ್ಲಿದ್ದ  ಡ್ರಾಯರ್ ನಲ್ಲಿ ಇಟ್ಟಿದ್ದ ಗಾಡ್ರೇಜ್ ಮತ್ತು ಅಲ್ಮೇರಾದ ಬೀಗದ ಕೀಯನ್ನು ತೆಗೆದುಕೊಂಡು. ಗಾಡ್ರೆಜ್‌ ಬೀರುವನ್ನು ತೆಗೆದು ಒಳಗಡೆ ಇದ್ದ ಚಿನ್ನಾಭರಣಗಣ್ನು ಕಳ್ಳತನ ಮಾಡಿದ್ದು,  ಕಳ್ಳತನವಾಗಿರುವ ಚಿನ್ನಾಭರಣಗಳ  ಒಟ್ಟು ಬೆಲೆ 12.88..000/-. ಹಾಗೂ ಬೆಳ್ಳಿಯ ವಸ್ತುಗಳ ಬೆಲೆ 10.000/- ರೂ ನಗದು ಹಣ ಒಟ್ಟು 6.00.000/- ರೂ  . ಇತ್ಯಾದಿ
ಜೂಜಾಟ ಪ್ರಕರಣ
ಅಜ್ಜಂಪುರ ಪೊಲೀಸ್‌ ಠಾಣೆ ಮೊ.ಸಂ. 138/2013 – ಕಲಂ: 87 ಕೆ.ಪಿ ಆಕ್ಟ್  – ದಿನಾಂಕ 30/06/2013 ರಂದು 1530 ಗಂಟೆಯಲ್ಲಿ ಪಿಎಸ್‌‌ಐ ರವರು ಕಲ್ಲೇನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಹಿಂಬಾಗದ ಖಾಲಿ ಜಾಗದಲ್ಲಿ  ನೋಡಲಾಗಿ ಸುಮಾರು ಜನಗಳು ವೃತ್ತಾಕಾರದಲ್ಲಿ ಕುಳಿತು  ಹಣವನ್ನು ಪಣವಾಗಿಟ್ಟುಕೊಂಡು “ಅಂದರ್-ಬಾಹರ್” ಎಂಬ ಇಸ್ಪೀಟ್ ಆಟವನ್ನು ಕಾನೂನು ಬಾಹಿರವಾಗಿ ಆಡುತ್ತಿರುವುದು ಖಚಿತಗೊಂಡು, ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ನೆಲದ ಮೇಲೆ ಬಿಳಿ ಬಣ್ಣದ ಪ್ಲಾಸ್ಟಿಕ್ ಶೀಟನ್ನು ಹಾಸಿ 52 ಇಸ್ಟೀಟ್ ಎಲೆಗಳು ಹಾಗೂ ನಗದು ಹಣ 190/- ರೂಗಳು ಅಖಾಡದಲ್ಲಿ ಇದ್ದು, ವಶಪಡಿಸಿಕೊಂಡ ಒಟ್ಟು ನಗದು ಹಣ 1190/-ರೂಗಳನ್ನು ಮತ್ತು 3 ಮೊಬೈಲ್,ಮತ್ತು 2 ಮೋಟರು ಸೈಕಲು ಹಾಗೂ 52 ಇಸ್ಪೀಟ್ ಎಲೆಗಳನ್ನು, ವಶಕ್ಕೆ ತೆಗೆದುಕೊಂಡು ಆರೋಪಿಗಳಾದ ಸುರೇಶ ಹಾಗೂ ಇತರೆ 3 ಜನರನ್ನು ದಸ್ತಗಿರಿ ಮಾಡಿ ಕೇಸು ದಾಖಲಿಸಿರುತ್ತೇನೆ