ಮನುಷ್ಯ ಕಾಣೆ
ಗ್ರಾಮಾಂತರ ಪೊಲೀಸ್
ಠಾಣೆ ಮೊ.ಸಂ. 272/2013 – ಕಲಂ: 279 337 304(ಎ) ಐಪಿಸಿ - ಪಿರ್ಯಾದುದಾರರಾದ ರಮೇಶ
ಹಿರೇಮಗಳೂರು ವಾಸಿ ಇವರ ಎರಡನೇ ಮಗಳು ಲಾವಣ್ಯ 17.5 ವರ್ಷ ಇವಳು ದಿನಾಂಕ 11/07/2013 ರಂದು ಬೆಳಿಗ್ಗೆ ಚಿಕ್ಕಮಗಳೂರಿನ
ವಿಜಯಪುರದಲ್ಲಿರುವ ಸರ್ಕಾರಿ ಐಟಿಐ ಕಾಲೇಜ್ ಗೆ ಈಗ್ಗೆ
ಒಂದುವಾರದ ಹಿಂದೆ ಪ್ರಥಮ ವರ್ಷದ ಎಲೆಕ್ರ್ಟಾನಿಕ್ಸ್ ವಿಷಯಕ್ಕೆ
ಸಂಬಂದಿಸಿದಂತೆ ಸೇರಿಸಿದ್ದು ಇನ್ನೂ ಶಾಲೆ ಪ್ರಾರಂಭ ವಾಗಿರಲಿಲ್ಲ. ಹೀಗಿರುವಾಗ
ದಿನಾಂಕ 11-07-13 ರಂದು ಬೆಳಗ್ಗೆ ಸುಮಾರು 9-00 ಗಂಟೆ ಸಮಯದಲ್ಲಿ ಲಾವಣ್ಯ ಕಾಲೇಜ್ ಹೋಗುತ್ತೇನೆಂದು ಮನೆಯಲ್ಲಿ ಅವರ
ಅಮ್ಮನಿಗೆ ಹೇಳಿ ಬ್ಯಾಗ್ ತೆಗೆದು ಕೊಂಡು
ಹೋಗಿದ್ದು ಇಲ್ಲಿಯವರೆವಿಗೂ ಬಂದಿರುವುದಿಲ್ಲ ಅವಳ
ಮೊಬೈಲ್ ನಂ ಗೆ ಕರೆ ಮಾಡಿದರೆ ಅದು ಸ್ವಿಚ್ ಆಪ್ ಬರುತಿದ್ದು ನೆಂಟರಿಷ್ಟರ , ಸಂಬಂದಿಕರ ಹಾಗೂ ಅವಳ ಸ್ನೇಹಿತರ ಮನೆಗಳಲ್ಲಿ ಹಾಗೂ ಎಲ್ಲಾ ಕಡೆಹುಡುಕಾಡ ಲಾಗಿ ಇದುವರೆವಿಗೂ
ಪತ್ತೆಯಾಗಿರುವುದಿಲ್ಲಾ ಇತ್ಯಾದಿ.
ಕುರಿ ಕಳುವು
ತರೀಕೆರೆ ಪೊಲೀಸ್ ಠಾಣೆ ಮೊ.ಸಂ.
182/2013
– ಕಲಂ: 457 380 ಐಪಿಸಿ - ಯಾರೋ ಕಳ್ಳರು ದಿನಾಂಕ 17/07/2013 ರಂದರು ರಾತ್ರಿ ವೇಳೆಯಲ್ಲಿ
ಪಿರ್ಯಾದುದಾರರಾದ ತಿಮ್ಮಯ್ಯ ಕಣಿವೆ ವಾಸಿ ಇವರ ಮನೆಯ ದನದ ಕೊಟ್ಟಿಗೆಯಲ್ಲಿಟ್ಟಿದ್ದ ಏಣಿಯನ್ನು ಬಳಸಿಕೊಂಡು ಕುರಿ ಕೂಡುವ ಮನೆಗೆ ಹಾಕಿದ್ದ ಹೆಂಚುಗಳನ್ನು ತೆಗೆದು ಅದರ ಮೂಲಕ ಒಳಗೆ ಪ್ರವೇಶ ಮಾಡಿ ಬಾಗಿಲಿಗೆ ಒಳಗಡೆಯಿಂದ ಹಾಕಿದ್ದ ಚೀಲಕವನ್ನು ತೆಗೆದು 22 ಕುರಿಗಳನ್ನು ಬಾಗಿಲಿನ ಮೂಲಕ ಕಳವು ಮಾಡಿ ಯಾವುದೋ ವಾಹನದಲ್ಲಿ ತುಂಬಿಕೊಂಡು ಹೋಗಿರುತ್ತಾರೆ.. ಅವುಗಳ ಅಂದಾಜು ಬೆಲೆ ಸುಮಾರು 70000/- ರೂಗಳು ಆಗಿರುತ್ತವೆ. ಆದ್ದರಿಂದ ಕುರಿಗಳನ್ನು ಪತ್ತೆ ಮಾಡಿಕೊಡಲು ಕೋರಿದೆ.
ಅಪಘಾತದಲ್ಲಿ ಸಾವು
ಹರಿಹರಪುರ ಪೊಲೀಸ್ ಠಾಣೆ ಮೊ.ಸಂ.
49/2013
– ಕಲಂ: 279 337 304(ಎ) ಐಪಿಸಿ - ಕೆ.ಕೆ.ಬಿ
ಬಸ್ ಗೂ ಮತ್ತು ಸ್ಯಾಂಟ್ರೋ ಕಾರ್ ಗೂ ದಿನಾಂಕ
18/07/2013 ರಂದು 1635 ಗಂಟೆಯಲ್ಲಿ ಹೆಗ್ಗಾರ್ ಬಸ್‌ಸ್ಟಾಪ್ ಬಳಿ ಅಪಘಾತವಾಗಿ ಕಾರ್ ನಲ್ಲಿದ್ದವರಿಗೆ ತುಂಬಾ ಪೆಟ್ಟಾಗಿದ್ದು ನಂತರ ಹೆಸರು ತಿಳಿಯಲಾಗಿ ಮೋಹನ , ಯಶಸ್ವಿನಿ, ಅಂಬಿಕಾ,
ಲತಾ, ಚಂದನ್ ಹಾಗೂ ಮಗು ಸಮನ್ವಿಕಾ
ರವರಿಗೆ ಪೆಟ್ಟಾಗಿದ್ದು, ಕಾರ್ ನ ಮುಂಭಾಗ ಪೂರ್ಣ ಜಖಂ ಗೊಂಡಿರುತ್ತೆ. ಸ್ಯಾಂಟ್ರೋ ಕಾರ್
ನಂ ಕೆ.ಎ 01 ಎಮ್ ಸಿ 3001 ಚಾಲಕ ಮೋಹನ್ ಹಾಗೂ ಕೆ.ಎ 18 ಬಿ 2121 ಕೆ.ಕೆ.ಬಿ ಬಸ್ ಉಡುಪಿ ಕಡೆಯಿಂದ
ಬರುತ್ತಿದ್ದು, ಪಿರ್ಯಾದುದಾರರಾದ ಚಂದ್ರಶೇಖರ್ ಹಾಗೂ ಅಜೀಜ್ ಸೇರಿ ಗಾಯಗೊಂಡ ಮಗುವನ್ನು ಹರಿಹರಪುರ
ಆಸ್ಪತ್ರೆಗ ಕರೆದುಕೊಂಡು ಬಂದು ವೈದ್ಯರಿಗೆ
ತೋರಿಸಿದಾಗ ಮಗು ಮೃತಪಟ್ಟಿರುತ್ತೆಂದು ತಿಳಿಸಿದರು,. ಕಾರ್ ನ ಚಾಲಕ ಮೋಹನ್ ಕಾರ್ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿಕೊಂಡು ಬಂದು ಬಸ್ ಗೆ ಡಿಕ್ಕಿ ಹೊಡೆಸಿದ್ದರಿಂದ ಈ
ಅಪಘಾತ ಸಂಭವಿಸಿರುತ್ತೆ.
ಮನುಷ್ಯ ಕಾಣೆ
ಎನ್‌ಆರ್‌ಪುರ ಪೊಲೀಸ್
ಠಾಣೆ ಮೊ.ಸಂ. 114/2013
– ಕಲಂ: ಮನುಷ್ಯ ಕಾಣೆ - ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಲ್ಲಿ ವಿಷ್ಣುತೇಜ, 14 ವರ್ಷ9 £Éà vÀgÀUÀw. ºÁ° ªÁ¸À ©.¹.JA ºÁ¸ÉÖïï .
£À.gÁ.¥ÀÄgÀ. ¸ÀéAvÀ HgÀÄ ªÀÄÄvÀÄÛUÀzÀºÀ½î, zÉÆqÀØeÁ® (CAZÉ) ¨ÉAUÀ¼ÀÆgÀÄ
UÁæªÀiÁAvÀgÀ. ಮತ್ತು ವಿನಾಯಕ,14 ವರ್ಷ 9 £Éà vÀgÀUÀw. ±ÀgÁªÀw £ÀUÀgÀ,
²ªÀªÉÆUÀÎ ಇವರಿಬ್ಬರೂ ದಿನಾಂಕ;15/07/2013 ರಂದು ಎಂದಿನಂತೆ ಬೆಳಿಗ್ಗೆ 09:15 ಗಂಟೆಗೆ ಶಾಲೆಗೆ ಹೋದವರು, ಶಾಲೆಗೂ ಹೋಗದೇ, ನಮ್ಮ ನಿಲಯಕ್ಕೂ ವಾಪಸ್ ಬಾರದೆ ಇದ್ದು ಈ ಬಗ್ಗೆ ಅವರ ತಂದೆ ತಾಯಿ ಹಾಗೂ ಸಂಬಂಧಿಕರುಗಳನ್ನು ವಿಚಾರಿಸಲಾಗಿ ಈ ವರೆಗೂ ಪತ್ತೆಯಾಗಿರುವುದಿಲ್ಲ ಪತ್ತೆ
ಮಾಡಿಕೊಡಬೇಕೆಂದು ದರ್ಮರಾಜ್ ಬಿಸಿಎಂ ಹಾಸ್ಟೆಲ್ ಮೇಲ್ವಿಚಾರಕರು ಎನ್‌ಆರ್‌ಪುರ ಇವರು ದೂರು ನೀಡಿರುವುದಾಗಿರುತ್ತೆ.
ಅನಾಮದೇಯ ಹೆಂಗಸಿನ ಶವ ಪತ್ತೆ
ಬೀರೂರು ಪೊಲೀಸ್ ಠಾಣೆ ಯುಡಿಆರ್ ಸಂಖ್ಯೆ 16/2013 174(ಸಿ) ಸಿಆರ್‌ಪಿಸಿ - ಪಿರ್ಯಾದಿ ಹರೀಶ್ ಬೀರೂರು ಟೌನ್ ವಾಸಿ ಇವರು ದಿನಾಂಕ;- 18-07-2013 ರಂದು ಬೆಳಿಗ್ಗೆ 09-00
ಗಂಟೆಯಲ್ಲಿ ಪ್ರತಿ ನಿತ್ಯದಂತೆ ಬೀರೂರು ಬಾರ್ಕಿನ ಕೆರೆಯ ಹತ್ತಿರವಿರುವ ನಮ್ಮ ಜಮೀನಿಗೆ ಹೋಗುತ್ತಿದ್ದಾಗ ಬಾರ್ಕಿನ ಕೆರೆಯ ನೀರಿನಲ್ಲಿ
ಒಂದು ಹೆಂಗಸಿನ ಶವ ನೀರಿನಲ್ಲಿ ಮಕಾಡೆಯಾಗಿ ತೇಲುತ್ತಿತ್ತು, ಹತ್ತಿರ ಹೋಗಿ ನೋಡಲಾಗಿ ಸುಮಾರು 45
ರಿಂದ 50 ವರ್ಷ ಪ್ರಾಯದ ಹೆಂಗಸಿನ ಶವವಾಗಿರುತ್ತೆ, ಈಕೆಯು ಯಾವ ಕಾರಣಕ್ಕಾಗಿ ನೀರಿನಲ್ಲಿ ಬಿದ್ದು
ಮೃತಪಟ್ಟಿರುತ್ತಾಳೆಯೋ ಗೊತ್ತಿರುವುದಿಲ್ಲ, ಮೃತಳ ಹೆಸರು ವಿಳಾಸ ಗೊತ್ತಿರುವುದಿಲ್ಲ, ಮೃತಳು
ಸುಮಾರು 5-6 ದಿನಗಳ ಹಿಂದೆಯೇ ನೀರಿನಲ್ಲಿ ಬಿದ್ದು ಮೃತ ಪಟ್ಟಂತೆ ಕಂಡುಬಂದಿರುತ್ತೆ, ಮೃತಳ ಮೈಮೇಲೆ ಒಂದು ನೀಲಿ ಬಣ್ಣದ
ಸ್ವಟ್ಟರ್, ಹಸಿರು ಬಣ್ಣದ ಜಾಕೀಟು, ಕಲ್ಲು ನೀಲಿ ಬಣ್ಣದ ಒಳಲಂಗ,ಗುಲಾಬಿ ಬಣ್ಣದ ಮದ್ಯೆ ಬಿಳಿ
ಹೂಗಳಿರುವ ಸೀರೆ, ಇರುವುದು ಕಂಡುಬಂದಿರುತ್ತೆ