Tuesday, August 13, 2013

Daily Crimes Report Dated:12/08/2013


ಕಳೂವು ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ. 161/2013 ಕಲಂ; 454 380  ಐಪಿಸಿ  –  ಪಿರ್ಯಾದುದಾರರು  ಕೃಷ್ಣಮೂರ್ತಿ ಅರ್ಚಕರು ಮುತ್ತಿನಮ್ಮ ದೇವಸ್ಥಾನ ಶಂಕರಪುರ ಇವರು ಸುಮಾರು 20 ವರ್ಷಗಳಿಂದ ಶಂಕರಪುರ ಬಡಾವಣೆಯ ಶ್ರೀಮುತ್ತಿನಮ್ಮ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 12/08/2013 ರಂದು ಬಂದು ನೋಡಿದಾಗ ಸದರಿ ದೇವಸ್ಥಾನದ ಭೂತನಾಥ ದೇವರಿಗೆ ಅಳವಡಿಸಿದ್ದ ಬೆಳ್ಳಿ ಮೀಸೆ,ದೀಪಗಳು,ಕರ್ಪೂರದ ತಟ್ಟೆ ಕಳುವಾಗಿತ್ತು,ಈ ಬಗ್ಗೆ ಸ್ಥಳಿಯರನ್ನು ವಿಚಾರಿಸಲಾಗಿ ಸದರಿಯವರು ಕಳ್ಳತನಮಾಡಿಕೊಂಡು ಹೋಗಿರುವುದಾಗಿ ತಿಳಿಸಿದ್ದು,ಸದರಿ ಎಲ್ಲಾ ಕಳುವಾದ ವಸ್ತುಗಳ ಬೆಲೆ 4.000/- ರೂ ಗೂ ಮೇಲ್ಪಟ್ಟಿರುತ್ತೆ.
ಮಟ್ಕಾ ಜೂಜಾಟ ಪ್ರಕರಣ 
ಬಸವನಹಳ್ಳಿ  ಪೊಲೀಸ್ ಠಾಣೆ ಮೊ.ಸಂ. 145/2013 ಕಲಂ; 78 ಕ್ಲಾಸ್‌‌(3) ಕೆಪಿ ಆಕ್ಟ್ –  ದಿನಾಂಕ 12/08/2013 ರಂದು 1345 ಗಂಟೆಯಲ್ಲಿ ಕೆ.ಇ.ಬಿ ಸರ್ಕಲ್ ಬಳಿಯ ಅಟೋ ನಿಲ್ದಾಣದ ಬಳಿ  ಯಾರೋ ಇಬ್ಬರು  ಆಸಾಮಿಗಳು  ಮಟ್ಕಾ ಜೂಜಾಟ ಆಡುತ್ತಿದ್ದರೆ ಎಂದು  ಬಂದ ಖಚಿತ ವರ್ತಮಾನದ  ಮೇರೆಗೆ  ಪಿಎಸ್‌ಐ ರವರು ದಾಳಿ ನಡೆಸಿ ಯಾವುದೇ ಪರವಾನಿಗೆ  ಇಲ್ಲದೇ ಮಟ್ಕಾ ಜೂಜಾಟ  ಆಡುತ್ತಿದ್ದ 1 ನೇ ಆರೋಪಿ ಪರಮೇಶ ಈತನ ಬಳಿ 1 ಮಟ್ಕಾ ಚೀಟಿ ನಗದು 3200/- ಒಂದು ಪೇನ್ನು  ಮತ್ತು 2 ನೇ ಆರೋಪಿ ರಮೇಶ ಈತನ ಬಳಿ  ಒಂದು ಮಟ್ಕಾ ಚೀಟಿ  ನಗದು 325/- ಮತ್ತು 1 ಪೆನ್ನು  ಒಟ್ಟು  ಎರಡು ಮಟ್ಕಾ ಚೀಟಿ ನಗದು 3525/- ಮತ್ತು 2 ಪೆನ್ನುಗಳನ್ನು  ವಶಕ್ಕೆ  ಪಡೆದಿದ್ದು ಕೇಸು ದಾಖಲಿಸಿರುತ್ತೆ.
ಜುಜಾಟ ಪ್ರಕರಣ 
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 299/2013 ಕಲಂ; 87 ಕೆಪಿ ಆಕ್ಟ್ –  ದಿನಾಂಕ 12/08/2013 ರಂದು 1700 ಗಂಟೆಯಲ್ಲಿ ಡಿಸಿಐಬಿ ಇನ್ಸ್‌ಪೆಕ್ಟರ್‌ ನೇತೃತ್ವದಲ್ಲಿ ಮಲ್ಲೇನಹಳ್ಳಿ ಗ್ರಾಮದ  ಮೆಸ್ಕಾಂ ಇಲಾಖೆಗೆ ಸೇರಿದ ವಸತಿ ಗೃಹಗಳ ಮುಂಭಾಗದ ಬಸವನಮರದ ಕೆಳಗಡೆ ಅಕ್ರಮವಾಗಿ ಹಣವನ್ನು ಪಣವಾಗಿ ಇಟ್ಟು ಅಂದರ್ ಬಾಹರ್ ಇಸ್ಪೀಟ್ ಜೂಜಾಡುತ್ತಿದ್ದ 11 ಜನ ಆರೋಪಿತರುಗಳನ್ನು ಹಿಡಿದುಕೊಂಡು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು. ಒಂದು ಪ್ಲಾಸ್ಟಿಕ್ ಚೀಲಾ ಮತ್ತು 2455-00 ರೂ ಹಣವನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದು ಮುಂದಿನ ಕ್ರಮದ ಬಗ್ಗೆ ಠಾಣೆಗೆ ಹಾಜರುಪಡಿಸಿದ ಮೇರೆಗೆ ಪ್ರ.ವ.ವರದಿ ಸಲ್ಲಿಸಿದೆ. ಆರೋಪಿಗಳಾದ ಚಂದ್ರಶೇಖರ ಹಾಗೂ ಇತರೆ 10 ಜನರನ್ನು ದಸ್ತಗಿರಿ ಮಾಡಿರುತ್ತೆ   
ಕಳುವು ಪ್ರಕರಣ
ಗೋಣಿಬೀಡು  ಪೊಲೀಸ್ ಠಾಣೆ ಮೊ.ಸಂ. 94/2013 ಕಲಂ; 457 380 ಐಪಿಸಿ –  ದಿನಾಂಕ 10/08/2013 ರಂದು ರಾತ್ರಿ ವೇಳೆಯಲ್ಲಿ ಕಳ್ಳತನವಾಗಿದ್ದು ಜನ್ನಾಪುರದಲ್ಲಿ ಗೊಡನ್ ನಲ್ಲಿದ್ದ ಬಿಯರನ್ನು ಪಿರ್ಯಾದುದಾರರಾದ ರವಿ ಇವರು ತೆಗೆದುಕೊಳ್ಳಲು ಹೋದಾಗ ಗೊಡನ್ನಿನ ಬೀಗವನ್ನು ರಾತ್ರಿ ಯಾರೋ ಕಳ್ಳರು ಕಬ್ಬಿಣದ ರಾಡಿನಿಂದ ಬೀಗವನ್ನು ಹೊಡೆದಿರುವುದು ಕಂಡು ಬಂದು ದಾಸ್ತಾನು ಪರಿಶೀಲಿಸಿದಾಗ 650 ಎಂಎಲ್ ನ 300 ಬಾಟಲಿಗಳು ಯು ಬಿ ಸ್ಟ್ರಾಂಗ್ ಬಿಯರ್, ಯುಬಿ ಬಿಯರ್, ನಾಕ್ ಔಟ್ ಬಿಯರ್, ಕಿಂಗ್ ಫಿಶರ್, ಕಿಂಗ್ ಫಿಶರ್ ಸ್ಟ್ರಾಂಗ್, 330 ಎಂ ಎಲ್ ನ 72 ಬಾಟಲಿ ಆರ್ ಸಿ ಪಿಂಟ್ ಬಿಯರ್ ಒಟ್ಟು ಬೆಲೆ 23844 ರೂ ಆಗಿದ್ದು, ಇವುಗಳನ್ನು ಯಾರೋ ಕಳ್ಳರು ಬೀಗ ಮುರಿದು ಕಳವು ಮಾಡಿಕೊಂಡು ಹೋಗಿದ್ದು ಕಂಪನಿಯ ಮ್ಯಾನೇಜರ್ ರವರಿಗೆ ತಿಳಿಸಿ ಈ ದಿನ ದೂರು ನೀಡಿದ್ದು ಕಳ್ಳತನ ಮಾಡಿದ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಿ ಮಾಲು ಪತ್ತೆ ಮಾಡಿ ಕೊಡಬೇಕಾಗಿ ಎಂದು ಕೋರಿದ್ದಾಗಿರುತ್ತದೆ.

Monday, August 12, 2013

Daily Crimes Report Dated:11/08/2013


ಮೋಸ ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 295/2013 ಕಲಂ; 417 420 ಐಪಿಸಿ  –  ಆಪಾದಿತನಾದ ರಘುಮೂರ್ತಿ ಬೀರನಹಳ್ಳಿ ವಾಸಿ ಈತನು  ಪಿರ್ಯಾದಿ ಲಕ್ಷ್ಮಿ ಬೆಳವಾಡಿ ಗ್ರಾಮದ ವಾಸಿ ಇವರನ್ನು ಈಗ್ಗೆ ಎರಡು ವರ್ಷಗಳ ಹಿಂದೆ ಪ್ರೀತಿಸಿ ಸಖರಾಯಪಟ್ಟಣದ ಚೌಡಮ್ಮ ದೇವಸ್ಥಾನದಲ್ಲಿ  ತಾಳಿ ಕಟ್ಟಿ ಮುಂದೆ ಪಿರ್ಯಾದಿಯನ್ನು ಶಾತ್ರೋಕ್ತವಾಗಿ ಮದುವೆ ಮಾಡಿ ಕೊಳ್ಳುವುದಾಗಿ ಪಿರ್ಯಾದಿಯೊಂದಿಗೆ ಪ್ರೀತಿಯಿಂದ ದೈಹಿಕ ಸಂಪರ್ಕ ಇಟ್ಟುಕೊಂಡು ನಂತರ ಆಪಾದಿತನು ಅವರ ಊರಾದ ಬೀರನಹಳ್ಳಿಗೆ ಹೋಗಿ ಇದ್ದು ಆಗ - ಈಗ ಕರೆದುಕೊಂಡು ಹೋಗುತ್ತೇನೆಂಧು ನಮ್ಮ ತಂದೆ ತಾಯಿ ಒಪ್ಪಿಸಬೇಕು ಎಂಧು ಪೋನ್ ಮಾಡಿ ಹೇಳುತ್ತಿದ್ದು ಈಗ ಬೇರೆ ಹುಡುಗಿಯನ್ನು ಮದುವೆ ಆಗುವುದಾಗಿ ತಿಳಿದಿದ್ದು ನನಗೆ ವಂಚಿಸಿ ನನ್ನನ್ನು ಮದುವೆಯಾಗದೆ ಮೋಸ ಮಾಡಿರುತ್ತಾರೆ.

ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 297/2013 ಕಲಂ; 363 ಐಪಿಸಿ  –  ಪಿರ್ಯಾದುದಾರರಾದ ದರ್ಮೆಗೌಡ ಹಳುವಳ್ಳಿ ಗ್ರಾಮದ ವಾಸಿ ಇವರ  ಮಗಳಾದ ಸುಮಾರು 16 ವರ್ಷ ಅಪ್ರಾಪ್ತ  ವಯಸ್ಸಿನ ಹುಡುಗಿಯನ್ನು ದಿನಾಂಕ: 10-08-2013 ರಂದು ಸಂಜೆ 4-30 ಗಂಟೆಯಿಂದ 6-30 ಗಂಟೆಯ ಅವಧಿಯಲ್ಲಿ ಮನೆಯಿಂದ  ಕಾಣೆಯಾಗಿದ್ದು,  ಸದರಿಯವಳನ್ನು ಉಮೇಶ @ ಸೋಮೇಶ ಎಂಬುವನು ಆತನ ಸ್ನೇಹಿತ ಷಣ್ಮುಗ ಎಂಬುವನ ಸಹಾಯದಿಂದ  ಅಪಹರಿಸಿಕೊಂಡು ಹೋಗಿರುವುದಾಗಿ ತಿಳಿದುಬಂದಿರುತ್ತದೆ.

Sunday, August 11, 2013

Daily Crimes Report Dated:10/08/2013


ಅಪಘಾತದಲ್ಲಿ ಸಾವು
ಕಡೂರು ಪೊಲೀಸ್ ಠಾಣೆ ಮೊ.ಸಂ. 194/2013 ಕಲಂ; 279 337 304(ಎ) ಐಪಿಸಿ  –  ಫಿರ್ಯಾದಿಯಾದ ಕೆ,ಬಿ ಚಂದ್ರಶೇಖರ್ ರವರು ನೀಡಿದ ಲಿಖಿತ ದೂರಿನ ಸಾರಂಶವೇನೆಂದರೆ ನಿನ್ನೆ ದಿನ ದಿನಾಂಕ 09/08/2013 ರಂದು ಸಂಜೆ  06-45 ಗಂಟೆಯಲ್ಲಿ ಫಿರ್ಯಾದಿಯು ಕಡೂರು ಟೌನ್ ಕೊಠಾರಿ ಟಿಂಬರ್ ಸಾಮಿಲ್ ಎದುರು ಎನ್.ಹೆಚ್ 206 ರಸ್ತೆಯಲ್ಲಿ  ಮಸಾಲಾ ಡಾಬಾ ಕಡೆಗೆ ತನ್ನ ಮೋಟಾರ್ ಬೈಕಿನಲ್ಲಿ  ಹೋಗುತ್ತಿದ್ದಾಗ ತನ್ನ ಮುಂದೆ ಬಜಾಜ್ ಪಲ್ಸರ್ ಬೈಕಿನಲ್ಲಿ ಇಬ್ಬರು ಹೋಗುತ್ತಿದ್ದು ಅವರ ಎದುರಿನಿಂದ ಟಾಟಾ ನ್ಯಾನೋ ಕಾರ್ ನಂಬರ್ ಕೆ ಎ 41 ಪಿ 8113 ರ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಫಿರ್ಯಾದಿ ಮುಂದೆ ರಸ್ತೆ ಎಡಬದಿಯಲ್ಲಿ ಹೋಗುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ನೇಹಾಲ್ ಎಸ್ ದೇವಾಂಗ ನಿಗೆ ತಲೆಯ ಬಾಗಕ್ಕೆ ರಕ್ತ ಗಾಯ ಆಗಿರುತ್ತೆ, ಅನುರೂಪನಿಗೆ ಮೈ  ಕೈ ಗೆ ಪೆಟ್ಟಾಗಿರುತ್ತೆ, ಇಬ್ಬರನ್ನು ಚಿಕಿತ್ಸೆಗಾಗಿ ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಹೆಚ್ಚಿನ ಚಿಕಿತ್ಸೆ ಬಗ್ಗೆ  ವೈದ್ಯರು ಸೂಚಿಸಿದ ಮೇರೆಗೆ ಶಿವಮೊಗ್ಗ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲು ಮಾಡಿದ್ದು  ನೇಹಾಲ್ ಎಸ್ ದೇವಾಂಗನು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸುಮಾರು 09-30 ಗಂಟೆಯಲ್ಲಿ ಮೃತ ಪಟ್ಟಿರುತ್ತಾನೆ, ಅಪಘಾತ ಮಾಡಿ ನೇಹಾಲ್ ಎಸ್ ದೇವಾಂಗನ ಸಾವಿಗೆ ಕಾರಣನಾದ ಟಾ ಟಾ ನ್ಯಾನೋ  ಮೇಲೆ ಕಾನೂನು ರೀತ್ಯ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ವರದಿ ದಾಖಲು ಮಾಡಿರುತ್ತೆ.

Friday, August 09, 2013

Daily Crimes Report Dated:08/08/2013


ದಲಿತರ ಮೇಲೆ ದೌರ್ಜನ್ಯ ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ. 158/2013 ಕಲಂ; 323 324 504 506 ಐಪಿಸಿ ರೆವಿ 34 ಐಪಿಸಿ ಜೊತೆಗೆ 3(1)(10)ಎಸ್‌ಸಿಎಸ್‌ಟಿ ಆಕ್ಟ್   –  ¦AiÀiÁ𢠠ರವಿಚಂದ್ರನ್‌ ಮಾರ್ಕೆಟ್‌ ರೋಡ್‌ ವಾಸಿ ಇವರು ªÀÄvÀÄÛ DgÉÆÃ¦ ¨ÁUÀåªÀÄä Ln¹ PÀA¥À¤AiÀİè PÉ®¸À ªÀiÁrPÉÆArzÀÄÝ ¨ÁUÀåªÀÄä ¦AiÀiÁðzÀÄzÁgÀgÀ ºÀwÛgÀ 30-35 ¸Á«gÀ ºÀtªÀ£ÀÄß ¥ÀqÉ¢zÀÄÝ  ¨ÁUÀåªÀÄä JA f gÀ¸ÉÛAiÀİègÀĪÀ ¥ÁªÀÄð¹AiÀİè PÉ®¸À ªÀiÁqÀÄwÛzÀÄÝ ºÉZï r J¥ï ¹ ¨ÁåAPï ºÀwÛgÀ §¤ß ºÀt PÉÆqÀÄvÉÛÃ£É JAzÀÄ ºÉýzÀÄÝ CzÉà jÃw ಪಿರ್ಯಾದುದಾರರು  ºÉZï r J¥ï ¹ ¨ÁåAPï UÉÃmï ºÀwÛgÀ ¤AwzÁÝUÀ ¨ÁUÀåªÀÄä£À ºÀwÛgÀ ZÀað¹zÁUÀ  ¨ÁUÀåªÀÄägÀ vÀAV PÁAZÀ£ÀgÀªÀgÀÄ ºÀt PÉÆqÀÄvÉÛÃ£É vÀr J£ÀÄßvÁÛ vÀ¼ÀÄîwÛzÀÄÝ ¨ÁUÀåªÀÄä PÉʬÄAzÀ UÀÄ¢ÝgÀÄvÁÛ¼É £ÀAvÀgÀ ªÀÄUÀ zÀ±Àð£ï ºÁUÀÆ E£ÉÆß§â ºÀÄqÀÄUÀ£À£ÀÄß UÉ ¥ÉÆÃ£ï ªÀiÁr PÀgɹPÉÆA¢zÀÄÝ zÀ±Àð£ï gÁqï ¤AzÀ vÀ¯É ªÀÄÄR vÉÆqÉUÉ ºÉÆqÉ¢zÀÄÝ eÉÆvÉAiÀİèzÀÝ ªÀåQÛ «PÉmï ¤AzÀ ºÉÆqÉ¢gÀÄvÁÛ£É CªÁZÀå ±À§ÝUÀ½AzÀ ¨ÉÊzÀÄ PÉÆ¯É ¨ÉzÀjPÉ ºÁQgÀÄvÁÛgÉ

Tuesday, August 06, 2013

Daily Crimes Report Dated:05/08/2013


ಅಪಘಾತದಲ್ಲಿ ಸಾವು
ಆಲ್ದೂರು  ಪೊಲೀಸ್ ಠಾಣೆ ಮೊ.ಸಂ. 170/2013 ಕಲಂ; 279 337 304(ಎ) ಐಪಿಸಿ  –  ದಿನಾಂಕ- 06/08/2013  ರಂದು ಬೆಳಿಗ್ಗೆ 00.30  ಗಂಟೆಗೆ ಪಿರ್ಯಾದುದಾರರಾದ ಸುನಿಲ್‌ಕುಮಾರ್‌ ಹಾನ್‌ಬಾಳ್‌ ವಾಸಿ ಇವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೇಂದರೆ,  ದಿ:- 05/06/2013 ರಂದು ರಾತ್ರಿ 21.30 ಗಂಟೆಗೆ ಬೂತನ ಕಾಡು ಸಮೀಪ ತನ್ನ ಅಕ್ಕನ ಮಗ ಮಿಥುನ ತನ್ನ ಅಕ್ಕನ ಕಾರು ನಂಬರ್‌ ಕೆಎ-18 ಪಿ-344 ಕಾರನ್ನು ಅತಿವೇಗ ಹಾಗೂ ಅಜಾಕರೂಕತೆಯಿಂದ ಚಾಲನೆ ಮಾಡಿ ಕಾರನ್ನು ರಸ್ತೆಯ ಪಕ್ಕದ ಮರಕ್ಕೆ ಡಿಕ್ಕಿ ಹೊಡೆಸಿದ್ದು ಚಾಲನೆ ಮಾಡುತಿದ್ದ ಮಿಥುನ ಮೃತಪಟ್ಟು , ಕಾರಿನಲ್ಲಿ ಜೊತೆ ಯಲ್ಲಿ ಇದ್ದ ಮುರುಗೇಶನಿಗೆ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗಿರುತ್ತಾರೆ ಇತ್ಯಾದಿ,                

Monday, August 05, 2013

Daily Crimes Report Dated:04/08/2013


ಮೋಟಾರ್‌ ಸೈಕಲ್ ಕಳುವು
ನಗರ  ಪೊಲೀಸ್ ಠಾಣೆ ಮೊ.ಸಂ. 156/2013 ಕಲಂ; 379 ಐಪಿಸಿ  –  ದಿನಾಂಕ-04-08-2013.ರಂದು ಸಮಯ 19-00 ಗಂಟೆಗೆ ಪಿರ್ಯಾದುದಾರರಾದ ವಸಂತರಾಜ್‌ಅರಸ್‌ ತೇಗೂರು ವಾಸಿ ಇವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ.ನಾನು ಸುಮಾರು 14 ವರ್ಷದಿಂದ ನಗರ ಸಭೆಯಲ್ಲಿ ವಾಟರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ನಾನು ನಮ್ಮ ಊರಿನಿಂದ ಓಡಾಡಿಕೊಂಡಿರಲು ಅಕ್ಟೋಬರ್ 2007 ರಲ್ಲಿ ಒಂದು ಬಜಾಜ್ ಪ್ಲಾಟೀನಾ ಬೈಕ್ ನಂ. ಕೆಎ-18 ಆರ್-0289 ನ್ನು ಕೊಂಡುಕೊಂಡು ಅದರಲ್ಲೇ ಓಡಾಡಿಕೊಂಡು ಇದ್ದು ದಿನಾಂಕ:09-04-2013 ರಂದು ಸಂಜೆ 7-45 ರ ಸಮಯದಲ್ಲಿ ನಮ್ಮ ಊರಿನಿಂದ ಚಿಕ್ಕಮಗಳೂರು ನಗರಕ್ಕೆ ಕರ್ತವ್ಯ ನಿರ್ವಹಿಸಲು ನನ್ನ  ಮಗನೊಂದಿಗೆ ಬಂದು ಚಿಕ್ಕಮಗಳೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಬಾಗದಲ್ಲಿರುವ ನಿಲ್ಲಿಸಿ ಕಾಫಿ ಕುಡಿದು ನಂತರ ಸಮಯ 8-30 ಕ್ಕೆ ಬಂದು ನೋಡಿದಾಗ ನಾನು ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ ನಂತರ ನಾನು ಎಲ್ಲಾ ಕಡೆ ಹುಡುಕಾಡಿ ಠಾಣೆಗೆ ಬಂದು ದೂರು ನೀಡರುತ್ತೇನೆ
ಮೋಟಾರ್‌ ಸೈಕಲ್ ಕಳುವು
ನಗರ  ಪೊಲೀಸ್ ಠಾಣೆ ಮೊ.ಸಂ. 157/2013 ಕಲಂ; 379 ಐಪಿಸಿ  –  ದಿನಾಂಕ:04-08-2013 ರಂದು ಸಂಜೆ 6-00 ಗಂಟೆಗೆ ಪಿರ್ಯಾದುದಾರರಾದ ಉಮೇಶ್‌‌ ಮುಗುಳುವಳ್ಳಿ ವಾಸಿ ಇವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಒಂದು ಬಜಾಜ್ ಡಿಸ್ಕವರ್ -125 ಸಿಸಿ. ಬೈಕನ್ನು ಇಟ್ಟುಕೊಂಡಿದ್ದೇನು. ನಾನು ದಿನಾಂಕ/22/03/2013 ರಂದು ಮದ್ಯಾಹ್ನ 3-30  ಗಂಟೆಗೆ ಊರಿನಿಂದ ಬೈಕಿನಲ್ಲಿ ಬಂದು ನನ್ನ ಕೆಲಸ ಮುಗಿಸಿ ನಂತರ ಮನೆಗೆ ದಿನಸಿ ಖರೀದಿಸಲು ಬೈಕನ್ನುಸಮಯ ಸಂಜೆ 6-30 ಕ್ಕೆ  ಚಿಕ್ಕಮಗಳೂರು ನಗರದ ಅಜಾದ್ ಪಾರ್ಕ್ ಸರ್ಕಲ್ ನಲ್ಲಿ ರುವ ಗಣೇಶ್ ಬೇಕರಿ ಮುಂಬಾಗ ನಿಲ್ಲಿಸಿ ದಿನಸಿ ಖರೀದಿಸಿ ಸಂಜೆ 6-45 ಕ್ಕೆ ವಾಪಸ್ಸು ಬಂದು ನೋಡಿದಾಗ ನನ್ನ ಬೈಕ್ ಇರಲಿಲ್ಲ.ನಂತರ ನಾನು ಎಲ್ಲಾ ಕಡೆ ಹುಡುಕಾಡಿ ಈ ದಿನ  ಠಾಣೆಗೆ ಬಂದು ದೂರು ನೀಡರುತ್ತೇನೆ.  ನನ್ನ ಬೈಕ್ ಬಜಾಜ್ ಡಿಸ್ಕವರ್ 125 ಸಿಸಿ.ಯ ಕಪ್ಪು ಮತ್ತು ಕೆಂಪು ಬಣ್ಣದ್ದಾಗಿದ್ದು ಕೆಎ-01. ಇ.ಎಫ್-5801 ನೊಂದಣಿ ಸಂಖ್ಯೆ ಇದ್ದು  ಬೈಕನ್ನು ಪತ್ತೆಮಾಡಿ ಕೊಡಬೇಕೆಂದು ನೀಡಿದ               
ಜೂಜಾಟ ಪ್ರಕರಣ
ಲಕ್ಕವಳ್ಳಿ   ಪೊಲೀಸ್ ಠಾಣೆ ಮೊ.ಸಂ. 55/2013 ಕಲಂ; 87 ಕೆ.ಪಿ.ಆಕ್ಟ್   –  ದಿನಾಂಕ 04-08-2013 ರಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷರವರಿಗೆ ರಂಗೇನಹಳ್ಳಿ ಬಳಿ ಅಕ್ರಮವಾಗಿ ಜೂಜಾಟವಾಡುತ್ತಿರುವ ಬಗ್ಗೆ  ಮಾಹಿತಿ ಮೇರೆಗೆ ಅವರ ಅದೇಶದಂತೆ ದಿನಾಂಕ 04-08-2013 ರಂದು 14.00 ಗಂಟೆಗೆ ಚಿಕ್ಕಮಗಳೂರಿನಿಂದ ಪಿಐ ಡಿಸಿಐಬಿ ಹಾಗೂ ಡಿ.ಸಿ.ಆರ್.ಬಿ ಪೊಲೀಸ್ ನಿರೀಕ್ಷಕರಾದ ಶ್ರೀಯಶವಂತ್ ಮಲ್ಯ ಮತ್ತು ಸಿಬ್ಬಂದಿಗಳಾದ ಆರ್.ರಮೇಶ್ ನಾಯ್ಡು ಎ.ಎಸ್.ಐ. ಸಣ್ಣತಿಮ್ಮಪ್ಪ ಹೆಚ್ ಸಿ 160, ಸುಬ್ಬರಾಜು ಹೆಚ್,ಸಿ 80. ಪಾಂಡುರಂಗ ಹೆಚ್.ಸಿ 187. ಧರ್ಮರಾಜು ಹೆಚ್,ಸಿ 237.  ನಾಗರಾಜು ಪಿಸಿ 146 ರವರೊಂದಿಗೆ ಹೊರಟು ಸಂಜೆ 16.00 ಗಂಟೆಗೆ ರಂಗೇನಹಳ್ಳಿ ತಲುಪಿ ಪಂಚರಾಗಿ ಸಹಕರಿಸಲು ಕೋರಿದ್ದು ಅವರು ಒಪ್ಪಿಕೊಂಡ ಮೇರೆಗೆ ರಂಗೇನಹಳ್ಳಿ ಅಣ್ಣೋಜಿರಾವ್ ರವರ ತೆಂಗಿನ ತೋಟದ ಹತ್ತಿರ 10 ರಿಂದ 12 ಜನರು ಸುತ್ತುವರೆದುಕೊಂಡು ಒಳಗೆ ಹೊರಗೆ ಅಂತ ಹಣವನ್ನು ಪಣವನ್ನಾಗಿ ಕಟ್ಟಿಕೊಂಡು ಇಸ್ಪೀಟ್ ಎಲೆಗಳಿಂದ ಜೂಜಾಡುತ್ತಿರುವುದು ಕಂಡುಬಂದಿತು. ಪಿರ್ಯಾದುದಾರರು ಮತ್ತು  ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸುತ್ತುವರೆದು ದಾಳಿ ಮಾಡಲಾಗಿ. ಸದರಿಯವರುಗಳನ್ನು ಹಿಡಿದು ಕೊಂಡಿದ್ದು, ಸ್ಥಳದಿಂದ ಬಾವಿಕೆರೆಯ ದಾದಾ ಪೀರ್ ಮತ್ತು ಇತರೆ 4 ರಿಂದ 5 ಜನರು ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ, ಜೂಜಾಟವನ್ನು ಆಡಲು ಉಪಯೋಗಿಸಿದ್ದ 52 ಇಸ್ಪೀಟ್ ಎಲೆ ಹಾಗೂ ಅಕಾಡದಲ್ಲಿದ್ದ 12.835 ರೂ ನಗದು ಹಣ, ನೆಲಕ್ಕೆ ಹಾಸಿದ್ದ 3 ಪ್ಲಾಸ್ಟಿಕ್ ಚೀಲಗಳನ್ನು ಸ್ವಾಧಿನಕ್ಕೆ ತೆಗೆದುಕೊಂಡು ಠಾಣೆಗೆ ಹಾಜರ್ಪಡಿಸಿ ಸದರಿ ಮೇಲ್ಕಂಡ ಆರೋಪಿತರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಲಿಖಿತ ವರದಿ ನೀಡಿದ್ದರ ಮೇರೆಗೆ ಕೇಸು ದಾಖಲಿಸಿರುತ್ತದೆ. ಆರೋಪಿಗಳಾದ ಸೋಮಣ್ಣ  ಹಾಗೂ ಇತರೆ 5 ಜನರನ್ನು ದಸ್ತಗಿರಿ ಮಾಡಿರುತ್ತೆ.
 ಜೂಜಾಟ ಪ್ರಕರಣ
ಯಗಟಿ  ಪೊಲೀಸ್ ಠಾಣೆ ಮೊ.ಸಂ. 84/2013 ಕಲಂ; 87 ಕೆ.ಪಿ.ಆಕ್ಟ್   – ದಿನಾಂಕ 04-08-2013 ರಂದು 15-30 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಠಾಣಾ ಸರಹದ್ದಿನ ಚೌಳಹಿರಿಯೂರು ಗ್ರಾಮದ ಸಮೀಪ ಗೀತಾನಂದರವರ ತೋಟದ ಪಕ್ಕದಲ್ಲಿರುವ ಶ್ರೀಲಕ್ಷ್ಮೀ ದೇವಾಸ್ಥಾನದ ಬಳಿ 8-10  ಜನ ಅಸಾಮಿಗಳು  ಹಣವನ್ನು ಪಣವಾಗಿಟ್ಟುಕೊಂಡು ಅಂದರ್‌ ಬಾಹರ್ ಜೂಜಾಟ ಆಡಿತ್ತಿರುತ್ತಾರೆಂದು ದೂರವಾಣಿ ಮೂಲಕ ಖಚಿತ ಮಾಹಿತಿ ಬಂದಿದ್ದು ಸಿಬ್ಬಂದಿಗಳಾದ, ರವರುಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಮೇಲಾಧಿಕಾರಿಯಾದ ವೃತ್ತನಿರೀಕ್ಷಕರವರಿಗೆ ಮಾಹಿತಿ ತಿಳಿಸಿ ಮೇಲ್ಕಂಡ ಸ್ಥಳಕ್ಕೆ ತಲುಪಿದ್ದು ಅಷ್ಟರಲ್ಲಿ ಸ್ಥಳಕ್ಕೆ ಬಿರೂರು ವೃತ್ತ ನಿರೀಕ್ಷಕರಾದ ಶ್ರೀ ಮಂಜಪ್ಪ ರವರು ಬಂದಿದ್ದು ಜೂಜಾಟವಾಡುತ್ತಿರುವುದು ಕಂಡು ಬಂದಿದ್ದು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ಸುತ್ತುವರಿದು ಜೂಜಾಡುತ್ತಿದ್ದ ಅಸಾಮಿಗಳನ್ನು ಹಿಡಿದುಕೊಂಡಿದ್ದು ಸದರಿಯವರು ಇಸ್ಪೀಟು ಆಟಕ್ಕೆ ಪಣವಾಗಿ ಕಟ್ಟಿ ಆಕಾಡದಲ್ಲಿದ್ದ 10.035/- ರೂ ನಗದು ಹಣವನ್ನು ಮತ್ತು ಸ್ಥಳದಲ್ಲಿದ್ದ 52 ಇಸ್ಪೀಟು ಎಲೆಗಳನ್ನು ಅಮಾನತ್ತು ಪಡಿಸಿಕೊಂಡ ಆರೋಪಿಗಳಾದ ಶಿವಲಿಂಗಯ್ಯ ಹಾಗೂ ಇತರೆ 10 ಜನರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿರುತ್ತೆ.

Sunday, August 04, 2013

Daily Crimes Report Dated:03/08/2013


ಮೋಟಾರ್‌ ಸೈಕಲ್ ಕಳುವು
ನಗರ  ಪೊಲೀಸ್ ಠಾಣೆ ಮೊ.ಸಂ. 154/2013 ಕಲಂ; 379 ಐಪಿಸಿ  –  ಪಿರ್ಯದುದಾರರಾದ ಇಮ್ರಾನ್‌ ಅಯ್ಯಪ್ಪನಗರ ವಾಸಿ ಇವರು  ನೀಡಿದ ದೂರಿನ  ಸಾರಾಂಶವೆನೆಂದರೆ ದಿನಾಂಕ 15/06/2013 ರಂದು 2030 ಗಂಟೆಯಲ್ಲಿ ಐಜಿ ರಸ್ತೆಯಲ್ಲಿ ¦gÁ墨Á§ÄÛ  ಕೆಎ-15. ಎಲ್-7158   ಬಜಾಜ್ ಕಂಪನಿಯ ಡಿಸ್ಕವರ್  ಬೈಕ್  ಐ.ಜಿ ರಸ್ತೆಯಲ್ಲಿ   ರುವ ಉಷಾ ಬಾರ್ ಪಕ್ಕದಲ್ಲಿರುವ ಖಾನ್ ರೇಡಿಯೇಟರ್ ಅಂಗಡಿ  ಎದುರುಗಡೆ ನಿಲ್ಲಿಸಿ ºÉÆÃVzÀÄÝ §AzÀÄ £ÉÆÃqÀ¯ÁV ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ   (ಬೈಕ್ ನ ಅಂದಾಜು ಬೆಲೆ 27.000)
ಮೋಟಾರ್‌ ಸೈಕಲ್ ಕಳುವು
ನಗರ  ಪೊಲೀಸ್ ಠಾಣೆ ಮೊ.ಸಂ. 155/2013 ಕಲಂ; 379 ಐಪಿಸಿ  –  ಪಿರ್ಯಾದುದಾರರಾದ ಲಕ್ಷ್ಮಣಗೌಡ ಮೂಗ್ತಿಹಳ್ಳಿ ವಾಸಿ ಇವರು  ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 27/04/2013 ರಂದು. ಜಿಲ್ಲಾ ಆಟದ ಮೈದಾನದಲ್ಲಿ ನಡೆಯುತ್ತಿದ್ದ ಸೋನಿಯಾ ಗಾಂಧಿ ಬಾಷಣ ಕಾರ್ಯಕ್ರಮಕ್ಕೆ ಬಜಾಜ್ ಸಿಟಿ-100 ಬೈಕನ್ನು ತೆಗೆದುಕೊಂಡು ಹೋಗಿದ್ದು ಒಂದು ಗಂಟೆ ಬಳಿಕ ಬಂದು ನೋಡಿದಾಗ ನನ್ನ ಬೈಕ್ ಇರಲಿಲ್ಲ ನನ್ನ ಸ್ನೇಹಿತರೋ ಇಲ್ಲಾ ಬೇರೆ ಯಾರಾದರೂ ತೆಗೆದುಕೊಂಡು ಹೋಗಿರಬೇಕೆಂದು ಬಾವಿಸಿ ಹುಡುಕಾಡಿದರು ನನ್ನ ಬೈಕ್ ಪತ್ತೆಯಾಗಿರುವುದಿಲ್ಲಾ (ಅಂದಾಜು ಬೆಲೆ 16.000/- ರೂ )

Saturday, August 03, 2013

Daily Crimes Report Dated:02/08/2013


ಅಕ್ರಮ ಮದ್ಯ ವಶ

ಬಸವನಹಳ್ಳಿ  ಪೊಲೀಸ್ ಠಾಣೆ ಮೊ.ಸಂ. 143/2013 ಕಲಂ; 34 ಕೆಇ. ಆಕ್ಟ್  –  ದಿನಾಂಕ 02/08/2013 ರಂದು 0430 ಗಂಟೆಯಲ್ಲಿ ಚಿಕ್ಕಮಗಳೂರು -ಲಿಂಗದಹಳ್ಳಿ ರಸ್ತೆಯ ಮುಸ್ಲೀಂ  ಸ್ಮಶಾನದ ಬಳಿ  ಯಾರೋ ಒಬ್ಬ ಆಸಾಮಿಯು ಮದ್ಯ ತುಂಬಿರುವ ಚೀಲವನ್ನು  ಇಟ್ಟುಕೊಂಡಿರುವ ಬಗ್ಗೆ  ಮಾಹಿತಿ ಬಂದಿದ್ದು ಪಿಐ ಡಿಸಿಐಬಿ ಹಾಗೂ  ಸಿಬ್ಬಂದಿಗಳು ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ನೋಡಲಾಗಿ  ಒಬ್ಬ ವ್ಯಕ್ತಿಯು  ನಮ್ಮನ್ನು  ನೋಡಿ ಓಡಲು ಪ್ರಯತ್ನಿಸಿದವನನ್ನು ಹಿಡಿದು. ವಿಚಾರಿಸಲಾಗಿ  ಮದ್ಯದ ಬಾಕ್ಸ್ ಗಳು ಇವೆ ಎಂದು ತಿಳಿಸಿದ್ದು. ಇವುಗಳನ್ನು ದಾಸರಹಳ್ಳಿ ಕೈಮರ ಗ್ರಾಮಸ್ಥರಿಗೆ ಮಾರಟ ಮಾಡಲು  ತೆಗೆದುಕೊಂಡು ಹೋಗಲು ವಾಹನಕ್ಕಾಗಿ  ಯುತ್ತಿರುವುದಾಗಿ ತಿಳಿಸಿದ್ದು ,ರಟ್ಟಿನ ಬಾಕ್ಸ್ ನಲ್ಲಿ 90 ಎಂ ಎಲ್ ನ 96 ಪ್ಯಾಕೇಟ್ ಗಳು ಇದ್ದು  ಒಟ್ಟು  672 ಮದ್ಯದ  90 ಎಂ ಎಲ್ ನ ಮದ್ಯದ  ಕ್ಯಾಪ್ಟ ನ್ ಪಾರ್ಟಿನ್ಸ್ ವಿಸ್ಕಿಯ  ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮದ ಬಗ್ಗೆ  ಮಹಜರ್ , ಮಾಲು ಮತ್ತು ಆರೋಪಿಯನ್ನು ವರದಿಯೊಂದಿಗೆ ಠಾಣೆಗೆ ತಂದು ಹಾಜರು ಪಡಿಸಿದ್ದನ್ನು ಸ್ವೀಕರಿಸಿ ಕೇಸು ದಾಖಲಿಸಿರುತ್ತೆ .ಅದಾಜು ಬೆಲೆ 15.224/- ರೂಗಳು ಆರೋಫಿ ಸುನೀಲ್‌ ಕುಮಾ್‌‌ ನನ್ನು ದಸ್ತಗಿರಿ ಮಾಡಿರುತ್ತೆ
ಅಪಹರಣ ಪ್ರಕರಣ
ಮೂಡಿಗೆರೆ  ಪೊಲೀಸ್ ಠಾಣೆ ಮೊ.ಸಂ. 115/2013 ಕಲಂ; 363 ಐಪಿಸಿ  – ದಿನಾಂಖ 28/07/2013 ರಂದು  ಪಿರ್ಯಾದುದಾರರಾದ ರಘು ಮುಗ್ರವಳ್ಳಿ ವಾಸಿ ಇವರು  ಕೂಲಿ ಕೆಲಸಕ್ಕೆ ಹೋಗಿದ್ದು ಸಂಜೆ 4-00 ಗಂಟೆಗೆ ಮನೆಗೆ ವಾಪಾಸ್ ಬಂದು ನೋಡಿದಾಗ ಪಿರ್ಯಾದುದಾರರ 16 ವರ್ಷದ ಮಗಳು  ಮನೆಯಲ್ಲಿ ಇರಲಿಲ್ಲ ಅಕ್ಕಪಕ್ಕದ ಮನೆಯವರನ್ನು ವಿಚಾರ ಮಾಡಿದಾಗ ಪಕ್ಕದ ಮನೆಯ ಪೂವಪ್ಪರವರ 14 ವರ್ಷದ  ಮಗಳು ಇವಳೂ ಕೂಡ ಮನೆಯಲ್ಲಿ ಇರುವುದಿಲ್ಲ ಇಬ್ಬರನ್ನು ಯಾರೋ ಅಪರಿಚಿತ ವ್ಯಕ್ತಿ ಅಪರಹರಿಸಿಕೊಂಡು ಹೋಗಿರುವ ಅನುಮಾನ ಇರುತ್ತದೆ, ಪತ್ತೆ ಮಾಡಿ ಕೊಡಬೇಕಾಗಿ ಕೋರಿಕೆ

Friday, August 02, 2013

Daily Crimes Report Dated:01/08/2013


ಕಳುವು ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 282/2013 ಕಲಂ; 457 380 ಐಪಿಸಿ –  ದಿನಾಂಕ 30/07/2013 ರಂದು ರಾತ್ರಿ ವೇಳೆಯಲ್ಲಿ  ಯಾರೋ ಕಳ್ಳರು ಕೆಸವಿನಮನೆಯ  ಅಂಗನವಾಡಿ ಕೇಂದ್ರದ ಮುಂಭಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಒಳಗೆ  ಪ್ರವೇಶಿಸಿ ಒಳಗಡೆ ಇದ್ದ 115 ಕೆ ಜಿ ಅಕ್ಕಿ, 100 ಕೆ ಜಿ  ಗೋಧಿ ,ಒಂದು ಇಂಡಿಯನ್ ಗ್ಯಾಸ್ ಸಿಲಿಂಡರ್  ಹಾಗೂ ಒಂದು ಸ್ಟವ್ ಅನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.ಕಳವಾದ ವಸ್ತುಗಳ ಅಂದಾಜುಬೆಲೆ 4600/- ರೂಗಳಾಗಬಹುದು ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಯಶೋದ ಅಂಗನವಾಡಿ ಟೀಚರ್‌ ಇವರು ದೂರು ನೀಡಿರುವುದಾಗಿರುತ್ತೆ.
ಮನುಷ್ಯ ಕಾಣೆ
ತರೀಕೆರೆ  ಪೊಲೀಸ್ ಠಾಣೆ ಮೊ.ಸಂ. 193/2013 ಕಲಂ; ಮನುಷ್ಯ ಕಾಣೆ  –  ಪಿರ್ಯಾದುದಾರರಾದ    ಗುರುಮೂರ್ತಿ ತರೀಕೆರೆ ಟೌನ್‌ ವಾಸಿ ಇವರ  80 ವರ್ಷ ಪ್ರಾಯದ ತಿಮ್ಮಣ್ಣ ಬಿನ್ ಹನುಮಂತಪ್ಪ ರವರು ದಿನಾಂಖ 16/07/2013 ರಂದು ಪಿರ್ಯಾದುದಾರರ ಮನೆಯಿಂದಾ ಹೊರಗೆ ಹೋದವರು ವಾಪಸ್ಸು ಮನೆಗೆ ಬಂದಿರುವುದಿಲ್ಲಾ ಎಲ್ಲಾ ಕಡೆ ಹುಡುಕಿದ್ದು ಪತ್ತೆಯಾಗಿರುವುದಿಲ್ಲಾ ಪತ್ತೆಮಾಡಿ ಕೊಡಬೇಕಾಗಿ ಕೋರಿಕೆ.

Thursday, August 01, 2013

Daily Crimes Report Dated:31/07/2013


ಜೂಜಾಟ ಪ್ರಕರಣ
ಬಸವನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 142/2013 ಕಲಂ; 87 ಕೆ.ಪಿ.ಆಕ್ಟ್    –  ದಿನಾಂಖ 31/07/2013 ರಂದು 2210 ಗಂಟೆಯಲ್ಲಿ  ಪಿಎಸ್‌‌ಐ ರವರಿಗೆ  ಬಂದ ಖಚಿತ ವರ್ತಮಾನದ ಮೇರೆಗೆ ಅರವಿಂದನಗರದಲ್ಲಿ  ಹೋಗಿ ನೋಡಲಾಗಿ  ಆರೋಪಿಗಳು ವಿದ್ಯುತ್ ಬೆಳಕಿನ ಸಹಾಯದಿಂದ ಯಾವುದೇ ಪರವಾನಗಿ ಇಲ್ಲದೇ  ಅಂದರ್ ಬಾಹರ್ ಇಸ್ಪೀಟ್ ಜೂಜಾಟ  ಆಡುತ್ತಿದ್ದುದು ಕಂಡು ಬಂದಿದ್ದು  ಸ್ಥಳದಲ್ಲಿ ದೊರೆತ 1780/- ನಗದು ಹಣ, 52 ಇಸ್ಪೀಟ್ ಎಲೆಗಳು, ಮತ್ತು ಒಂದು ಪ್ಲಾಸ್ಟೀಕ್ ಚೀಲವನ್ನು  ಅಮಾನತ್ತುಪಡಿಸಿಕೊಂಡಿರುತ್ತೆ. ಆರೋಪಿಗಳಾದ ಮಧು ಹಾಗೂ ಇತರೆ 7 ಜನರನ್ನು ಬಂಧಿಸಿರುತ್ತೆ.
ಕಳುವು ಪ್ರಕರಣ
ಕಳಸ ಪೊಲೀಸ್ ಠಾಣೆ ಮೊ.ಸಂ. 79/2013 ಕಲಂ; 380 ಐಪಿಸಿ  –   ಕಳಸದಲ್ಲಿ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ನಿರ್ಮಾಣ  ಮಾಡಲು ಗುತ್ತಿಗೆ ಪಡೆದುಕೊಂಡು ¦gÁå¢ ಸುರೇಶ್‌ ಕುಮಾರ್‌ ಕಾರ್ಯಪಾಲಕ ಇಂಜನಿಯರ್‌ ಇವರು  PÀA¥À¤AiÀÄ ªÀw¬ÄAzÀ ಕೆಲಸ ನಿರ್ವಹಿಸುತ್ತಿದ್ದು ಸದರಿ ಕಟ್ಟಡದ ರೂಂಗಳಿಗೆ ಅಳವಡಿಸಿದ 2*2 ಅಳತೆಯ ಸುಮಾರು 240 ವಿಟ್ರಿಫೈಡ್ ಟೈಲ್ಸ್‌ ತುಂಡುಗಳನ್ನುAiÀiÁgÉÆÃ ಕಳ್ಳರು ದಿನಾಂಖ 05/06/2013 ರಿಂದ 16/07/2013 ರ ಮದ್ಯದ ಅವಧಿಯಲ್ಲಿ PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ CAzÁdÄ ¨É¯É75.000/-ರೂ ಆಗಿರುತ್ತದೆ