ಪೊಲೀಸರ ಮೇಲೆ ಹಲ್ಲೆ ಪ್ರಕರಣ
ಆಲ್ದೂರು ಪೊಲೀಸ್ ಠಾಣೆ ಮೊ.ಸಂ. 192/2013 – ಕಲಂ: 143 147 333 153(ಎ) 307 149 ಐಪಿಸಿ – ಪಿರ್ಯಾದುದಾರರಾದ ಮಂಜಪ್ಪ ಸಿಪಿಸಿ. 141 ಆದ ನಾನು ಆಲ್ದೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ; 15/9/2013 ರಂದು ಆಲ್ದೂರು ಸಾರ್ವಜನಿಕ ಗಣಪತಿ ವಿಸರ್ಜನಾ ಬಂದೋಬಸ್ತ್ ಕರ್ತವ್ಯಕ್ಕೆ ನೇಮಕವಾಗಿದ್ದು ಆಲ್ದೂರು ಮುಖ್ಯ ರಸ್ತೆಯಲ್ಲಿರುವ ಜಾಮೀಯಾ ಮಸೀದಿ ಮುಂಬಾಗ ಕರ್ತವ್ಯ ನಿರ್ವಹಿಸುತ್ತಿದ್ದು ರಾತ್ರಿ ಸುಮಾರು 12.30 ಗಂಟೆ ಸಮಯದಲ್ಲಿ ಗಣಪತಿ ಮೆರವಣಿಗೆಯು ಸಾಗುತ್ತಿರುವಾಗ್ಗೆ ಚಿಕ್ಕಮಾಗರವಳ್ಳಿ ಕ್ರಾಸ್ ಕಡೆಯಿಂದ ಆಟೋ ನಂ;ಕೆಎ.18 ಎ 1421 ಆಟೋದಲ್ಲಿ ಸುಮಾರು 08 ಜನ ಬಂದು ಆಟೋದಿಂದ ಇಳಿದು ಮೆರವಣಿಗೆಯಲ್ಲಿ ಸೇರಿಕೊಂಡು ಮಸೀದಿ ಮುಂಭಾಗದಲ್ಲಿ ಪಟಾಕಿ ಹಚ್ಚಲು ಪ್ರಯತ್ನಿಸಿದ್ದು ನಾನು ಮತ್ತು ಮೆರವಣಿಗೆ ಬಂದೋಬಸ್ತ್
ಕರ್ತವ್ಯದಲ್ಲಿದ್ದ ಇತರೆ ಪೊಲೀಸರು ಅವರುಗಳನ್ನು ತಡೆಯಲು ಮುಂದೆ ಹೋದಾಗ ಆ ಎಲ್ಲಾ ಅಸಾಮಿಗಳು
ಪೊಲೀಸರಾದ ನಾವು ಕರ್ತವ್ಯ ನಿರ್ವಹಿಸದಂತೆ ಬೆದರಿಸಿ ತಡೆಯುವ ಸಲುವಾಗಿ ನಮ್ಮ ಮೇಲೆ ಅವರುಗಳು ಅವರ
ಹತ್ತಿರ ಇದ್ದ ಶಿಲೆ ಕಲ್ಲುಗಳಿಂದ ನಮ್ಮ ಮೇಲೆ ಹಲ್ಲೆ ನಡೆಸಿದ್ದು ಮತ್ತು ನಮ್ಮನ್ನು ತೀವ್ರ ಗಾಯಗೊಳಿಸಿ, ಕೊಲ್ಲುವ ಪ್ರಯುತ್ನ ಮಾಡಿದರು. ಅವರುಗಳು ಈ ಹಲ್ಲೆ ಮಾಡಿದ್ದರಿಂದ
ನನ್ನ ತಲೆಗೆ ತೀವ್ರ ಸ್ವರೂಪದ ಗಾಯವಾಗಿ, ರಕ್ತ ಸುರಿಯತೊಡಗಿತು. ನಮ್ಮ ಜೊತೆಯಿದ್ದ
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎ.ಹೆಚ್.ಸಿ. 22 ಚಂದ್ರೇಗೌಡ ಇವರಿಗೆ ಬಲಕೈಗೆ ಪೆಟ್ಟು ಬಿದ್ದು ರಕ್ತ ಸುರಿಯತೊಡಗಿತು. ಅಷ್ಠರಲ್ಲಿಯೆ ಬಂದೋಬಸ್ತ್
ಕರ್ತವ್ಯದಲ್ಲಿದ್ದ ಸಿಬ್ಬಂದಿಗಳಾದ ಎಪಿಸಿ. 99 ಮಾಲತೇಶ, ಎಪಿಸಿ. 101, ಸಂತೋಷ್, ಎಪಿಸಿ.179. ಮಂಜುನಾಥ, ಎಪಿಸಿ. 157. ರಿಯಾಜ್. ಸಿಪಿಸಿ. 188 ನಿಂಗೇಗೌಡ, ಸಿಪಿಸಿ. 345 ನವೀನ ಸಿ.ಬಿ. ಸಿಪಿಸಿ. 352 ಮಹೇಶ ಕೆ.ಬಿ. ಸಿ.ಹೆಚ್.ಸಿ. 249 ಬಸವರಾಜಪ್ಪ ರವರುಗಳು ಕೂಡಲೇ ಅವರುಗಳನ್ನು ಹಿಡಿದುಕೊಂಡಿದ್ದು 05 ಜನ ಅಸಾಮಿಗಳು ಸಿಕ್ಕಿದ್ದು ಸದರಿಯವರುಗಳು 1] ಆಟೋ ಚಾಲಕ ಲೋಕೇಶ 2] ರಾಕೇಶ 3] ಶ್ರೀಕಾಂತ 4] ಮಂಜುನಾಥ @ ತುಡುಕೂರು ಮಂಜ 5] ಮಧು ಆಗಿರುತ್ತದೆ, ಇನ್ನೂಳಿದ ಮೂವರೂಗಳಾದ 1]ಕೃಷ್ಣ, 2] ಮನು ಕುಮಾರ 3] ಟೈಲರ್ ಮಂಜ ಓಡಿ ಹೋಗಿದ್ದು ಅವರುಗಳನ್ನು ನಾನು ಗುರುತಿಸುವೆ, ನಂತರ ತಕ್ಷಣ ನಮ್ಮನ್ನು ಅಲ್ಲಿಯೇ ಬಂದೋಬಸ್ತ್ ಕರ್ತವ್ಯದಲ್ಲಿದ್ದ
ಇಲಾಖಾ ಜೀಪ್ ನಂ;ಕೆಎ.18 ಜಿ.743 ರಲ್ಲಿ ಆಲ್ದೂರು ಸರ್ಕಾರಿ ಆಸ್ಪತ್ರೆಗೆ ಪ್ರಥಮ
ಚಿಕಿತ್ಸೆಗೆ ಕರೆದುಕೊಂಡು ಬಂದು ಸೇರಿಸಿದರು. ನಂತರ ನಾನು ಠಾಣೆಗೆ ಬಂದು ದೂರು ನೀಡಿದ್ದು ಹಿಂದೂ ಗಣಪತಿ ಮೆರವಣಿಗೆ ಮತ್ತು ವಿಸರ್ಜನಾ ಕಾರ್ಯಕ್ರಮದಲ್ಲಿ ಮತೀಯ ಗಲಭೆ ಉಂಟುಮಾಡುವ ಉದ್ದೇಶದಿಂದ ಮಸೀದಿಯ ಮುಂದೆ ಗಲಾಟೆ ಮಾಡಿ ಕೋಮು-ಗಲಭೆ, ಮತ್ತು ಶಾಂತಿ ಭಂಗವನ್ನುಂಟು ಉಂಟುಮಾಡಲು ಹಾಗೂ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಉಂಟು ಮಾಡಿ
ನಮ್ಮಗಳನ್ನು ಕೊಲೆ ಮಾಡುವ ಉದ್ದೇಶ ಹೊಂದಿರುವ ಆರೋಪಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಠಾಣೆಗೆ ಬಂದು ದೂರು ಕೊಟ್ಟಿರುತ್ತೆನೆ.
ಅಪಘಾತದಲ್ಲಿ ಸಾವು
ಬೀರೂರು ಪೊಲೀಸ್ ಠಾಣೆ ಮೊ.ಸಂ. 121/2013 – ಕಲಂ: 279 337
304(ಎ) ಐಪಿಸಿ ಮತ್ತು 134 (ಎ)(ಬಿ) ಐಎಂವಿ
ಆಕ್ಟ್ – ಪಿರ್ಯಾದಿ ನಾಗರಾಜು
ವಿದ್ಯಾನಗರ ವಾಸಿ ಇವರ ತಂದೆ
ಶಿವಣ್ಣ ರವರು ದಿನಾಂಕ 15/09/2013 ರಂದು 1700 ಗಂಟೆಗೆ ಕಾರನ್ನು ಚಾಲನೆ ಮಾಡಿಕೊಂಡು ಬೀರೂರು ತರೀಕೆರೆ
ಮದ್ಯದ ಎನ್.ಹೆಚ್. 206 ರಸ್ತೆಯ ಕೋರನಹಳ್ಳಿ ಗೇಟ್ ಹತ್ತಿರ ಕಾರನ್ನು ಚಾಲನೆ ಮಾಡಿಕೊಂಡು ಬರುತ್ತಿರುವಾಗ ತರೀಕೆರೆ
ಕಡೆಯಿಂದ ಬಂದ ಕೆಎ 14 ಎ 7370 ನಂಬರಿನ
ಐಷರ್ ಲಾರಿಯ ಚಾಲಕ ಲಾರಿಯನ್ನು ಅಜಾಗರೂಕತೆಯಿಂದ ಲಾರಿಯನ್ನು ಚಲಿಸಿಕೊಂಡು ಬಂದು ಪಿರ್ಯಾದಿಯ ತಂದೆ ಚಾಲನೆ ಮಾಡಿಕೊಂಡು
ಬರುತ್ತಿದ್ದ ಕೆಎ 02 ಎಂಡಿ 3323 ನಂಬರಿನ
ಮಾರುತಿ ಸ್ವೀಪ್ಟ್ ಡಿಸೈರ್ ಕಾರಿಗೆ ಡಿಕ್ಕಿ
ಹೊಡೆಸಿದ ಪರಿಣಾಮ ಪಿರ್ಯಾದಿಯ ತಂದೆ ಮತ್ತು
ಕಾರಿನ ಮಾಲೀಕ ಗಜೇಂದ್ರನ್ ರವರಿಗೆ ತಲೆಗೆ, ಕಾಲುಗಳಿಗೆ, ಮೈಕೈ, ಮುಖಕ್ಕೆ ಬಲವಾದ ಪೆಟ್ಟು ಬಿದ್ದು ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು,
ಗಜೇಂದ್ರನ್ ರವರ ಹೆಂಡತಿ ಬೀನಾರವರಿಗೆ ತಲೆಗೆ, ಮುಖಕ್ಕೆ, ಕೈಕಾಲುಗಳಿಗೆ ಪೆಟ್ಟು ಬಿದ್ದಿದ್ದು ಅವರನ್ನು
ಶಿವಮೊಗ್ಗ ನಂಜಪ್ಪ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿರುವ ವಿಚಾರ ತಿಳಿದಿರುತ್ತೆ, ಈ
ಅಪಘಾತ ಮಾಡಿದ ಕೆಎ 14 ಎ 7370 ನಂಬರಿನ ಐಷರ್ ಲಾರಿಯ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು
ಪರಾರಿಯಾಗಿದ್ದು ಈತನ ಮೇಲೆ ಕಾನೂನು ರೀತ್ಯಾ
ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.