ಮೋಟಾರ್ ಸೈಕಲ್ ಕಳುವು
ನಗರ ಪೊಲೀಸ್
ಠಾಣೆ ಮೊ.ಸಂ. 186/2013 – ಕಲಂ: 379 ಐಪಿಸಿ – ಪಿರ್ಯಾದುದಾರು ಮಹೇಶ್ ಚಿಕ್ಕಮಗಳೂರು ಟೌನ್
ವಾಸಿ ಇವರು ದಿನಾಂಕ:04-09-2013 ರಂದು ಬೆಳಿಗ್ಗೆ 9-30 ಗಂಟೆಗೆ ಐ.ಡಿ.ಎಸ್.ಜಿ ಕಾಲೇಜಿನ ಬೈಕ್ ನಿಲ್ಲಿಸುವ
ಸ್ಥಳದಲ್ಲಿ ತನ್ನ ಬಾಬ್ತು ಹೀರೋಹೋಂಡಾ ಸ್ಲ್ಪೆಂಡರ್ ಪ್ರೋ ಬೈಕ್ ನಂ ಕೆಎ-18 ವಿ-5254 ಕಪ್ಪು ಬಣ್ಣದ
ಬೈಕನ್ನು ನಿಲ್ಲಿಸಿ ಉಪನ್ಯಾಸ ಮುಗಿಸಿ ನಂತರ ಮದ್ಯಾಹ್ನ 12-30 ಗಂಟೆಗೆ ವಾಪಸ್ ಬಂದು ನೋಡಿದಾಗ ಬೈಕ್
ಇರಲಿಲ್ಲ.ಸದರಿಯವರು ಇಲ್ಲಿಯವರೆಗೂ ಎಲ್ಲಾ ಕಡೆ ಹುಡುಕಾಡಿ ಈ ದಿನ ಠಾಣೆಗೆ ಬಂದು ದೂರು ನೀಡಿದ್ದು
ಬೈಕ್ ನ ಅಂದಾಜು ಬೆಲೆ 36.846/- ರೂ ಆಗಿದ್ದು ಇತ್ಯಾದಿ.
ಸ್ಕೂಟಿ ಕಳುವು
ನಗರ ಪೊಲೀಸ್ ಠಾಣೆ ಮೊ.ಸಂ. 187/2013 – ಕಲಂ: 379 ಐಪಿಸಿ – ಪಿರ್ಯಾದುದಾರರು
ಕೃಷ್ಣವೇಣಿ ಚಿಕ್ಕಮಗಳೂರು ಟೌನ್ ವಾಸಿ ಇವರು ದಿ:08-09-2013 ರಂದು ಸುಮಾರು ರಾತ್ರಿ 21-15 ಗಂಟೆಗೆ
ಗೌರಿ –ಗಣೇಶ ಹಬ್ಬದ ಪ್ರಯುಕ್ತ ಸಾಮಾನುಗಳ ಖರೀದಿಗಾಗಿ ಎಂ. ಜಿ. ರಸ್ತೆಯ
ನಾಗಪ್ಪ ಹೊಟೇಲ್ ಎದುರುಗಡೆ ನಿಲ್ಲಿಸಿ,ಅಂಗಡಿ ಸಾಮಾನುಗಳನ್ನು ಖರೀದಿಸಿ 21-45 ಗಂಟೆಗೆ ವಾಪಾಸ್ ಬಂದು
ನೋಡಲಾಗಿ. ಸ್ಕೂಟಿ ಅಲ್ಲಿ ಕಾಣಲಿಲ್ಲ, ಗಾಬರಿಯಾಗಿ
ನಾವು ನನ್ನ ಸಂಬಂಧಿಕರು ಮತ್ತು ಪರಿಚಯಸ್ಥರಲ್ಲಿ ವಿಚಾರಿಸಲಾಗಿ ಯಾರು ನನ್ನ ಸ್ಕೂಟಿ ತೆಗದುಕೊಂಡು
ಹೋಗಿರುವುದಿಲ್ಲವೆಂದು ತಿಳಿಸಿದ್ದು, ನಮ್ಮ ಸ್ಕೂಟಿಯನ್ನು
ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಸದರಿ ಸ್ಕೂಟಿಯ ಅಂದಾಜು ಬೆಲೆ 30.000/- ರೂ ಆಗಿದ್ದು ಇತ್ಯಾದಿ.