Friday, October 04, 2013

Daily Crimes Report Dated:03/10/2013


ಮನುಷ್ಯ ಕಾಣೆ
ತರೀಕೆರೆ ಪೊಲೀಸ್‌ ಠಾಣೆ ಮೊ.ಸಂ. 235/2013 – ಕಲಂ: ಮನುಷ್ಯ ಕಾಣೆ – ದಿನಾಂಕ 06-09-2013 ರಂದು ಪಿರ್ಯಾದುದಾರರು ಶ್ರೀಮತಿ ಮಂಜುಳ ಗಂಟೆಕಣಿವೆ ವಾಸಿ ಇವರು ಬಟ್ಟೆ ತೊಳೆಯಲೆಂದು ಚಾನೆಲ್ ಹತ್ತಿರ ಬೆಳಿಗ್ಗೆ 8-00 ಗಂಟೆಗೆ ಹೋದವರು ವಾಪಾಸ್ಸು 10-00 ಗಂಟೆಗೆ ಮನೆಗೆ ಬಂದು ನೋಡಿದಾಗ ಪಿರ್ಯಾದುದಾರರ ಗಂಡ ವಿಜಯಕುಮಾರ 30 ವರ್ಷ ಇವರು ಮನೆಯಲ್ಲಿ ಕಂಡುಬಂದಿರದೇ ಇದ್ದು, ಸ್ನೇಹಿತರ ಪರಿಚಯಸ್ತರ ಮನೆಗೆ ಹೋಗಿರಬಹುದೆಂದು ಸ್ವಲ್ಪ ಹೊತ್ತು ಕಾದು ಸಂಬಂಧಿಕರ ಪರಿಚಯಸ್ತರ ಮನೆಯಲ್ಲಿ ಹುಡುಕಾಡಿದರೂ ಸಿಗದೇ ಇದ್ದುದರಿಂದ ದೂರು ನೀಡಿರುವುದಾ ಗಿರುತ್ತೆ.

Thursday, October 03, 2013

Daily Crimes Report Dated:02/10/2013


ಮಟ್ಕಾ ಜೂಜಾಟ ಪ್ರಕರಣ
ಬಸವನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 167/2013 – ಕಲಂ: 78 ಕ್ಲಾಸ್‌‌(3) ಕೆಪಿ ಆಕ್ಟ್ – ದಿನಾಂಕ 02/10/2013 ರಂದು 1515 ಗಂಟೆಯಲ್ಲಿ ಬಸವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಜೂಜಾಟ ಆಡುತ್ತಿದ್ದ ದಿವಾಕರ ಕೆಂಪನಹಳ್ಳಿ ವಾಸಿ ಈತನನ್ನು ಪಿಎಸ್‌ಐ ರವರು ಸಿಬ್ಬಂದಿಗಳ ಸಹಾಯದಿಂದ ಹಿಡಿದು  ಆತನ ಬಳಿ ಇದ್ದ 03 ಮಟ್ಕಾ ಚೀಟಿ,  ಒಂದು ಪೆನ್ನು, ಒಂದು ನೋಕಿಯಾ ಮೊಬೈಲ್ ಹಾಗು ನಗದು 10.940/- ರೂಗಳನ್ನು  ಅಮಾನತ್ತು ಪಡಿಸಿಕೊಂಡಿರುತ್ತೆ.
ಅಪಘಾತದಲ್ಲಿ ಸಾವು  
ತರೀಕೆರೆ ಪೊಲೀಸ್‌ ಠಾಣೆ ಮೊ.ಸಂ. 234/2013 – ಕಲಂ:279 337 304(ಎ) ಐಪಿಸಿ – ಪಿರ್ಯಾದುದಾರಾದ ಗೌಸ್‌ಪೀರ್‌ ಭದ್ರಾವತಿ ವಾಸಿ ಶಿವಕುಮಾರ ರವರ ಎಂ.ಸಿ.ಹಳ್ಳಿ ಹಳ್ಳಿಯಲ್ಲಿರುವ ಅಡಿಕೆ ತೋಟವನ್ನು ಚೇಣಿಗೆ ಮಾಡಿಕೊಂಡಿದ್ದು, ಈ ಅಡಿಕೆ ಚೇಣಿ ಕೆಲಸಕ್ಕೆ ದಂದೂರು ವಾಸಿ ಶ್ರೀಮತಿ. ರಂಗಮ್ಮ ಹಾಗೂ ಇತರರನ್ನು ಕೆಲಸಕ್ಕೆ ಬಂದಿದ್ದರು.  ಈ ದಿವಸ ಕೆಲಸ ಮುಗಿದ ನಂತರ ದಿನಾಂಕ 02/10/2013 ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ ಶ್ರೀಮತಿ. ರಂಗಮ್ಮರವರು ಎಂ.ಸಿ. ಹಳ್ಳಿಯ ಎನ್.ಹೆಚ್.-206 ರಸ್ತೆಯ ಬದಿಯಲ್ಲಿ ನಿಂತಿರುವಾಗ್ಗೆ ತರೀಕೆರೆ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ ಅನ್ನು ಅದರ ಚಾಲಕನು ಅತಿವೇಗ, ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದವನೇ ರಸ್ತೆಯ ಎಡ ಬದಿಯಲ್ಲಿ ನಿಂತಿದ್ದ ಶ್ರೀಮತಿ ರಂಗಮ್ಮರವರಿಗೆ ಡಿಕ್ಕಿ ಹೊಡೆಸಿ ಅಪಘಾರಪಡಿಸಿದ ಪರಿಣಾಮ ಅವರ ಮುಖಕ್ಕೆ, ಹಣೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಯಿತು. ಅಪಘಾತಪಡಿಸಿದ ಬಸ್ಸಿನ ನಂಬರ್ ನೋಡಲಾಗಿ ಕೆ.ಎ.-42/ಎಫ್.-248 ಆಗಿದ್ದು, ಅದರ ಚಾಲಕನು ಅಪಘಾತಪಡಿಸಿ, ಬಸ್ಸನ್ನು ಅಲ್ಲಿಯೇ ಬಿಟ್ಟು ಓಡಿ ಹೋದನು.  ಗಾಯಗೊಂಡ ರಂಗಮ್ಮರವರನ್ನು ಕೂಡಲೇ ಶಿವು, ರಾಮಣ್ಣ, ಕುಭೇರ ರವರುಗಳು ಖಾಸಗಿ ವಾಹನದಲ್ಲಿ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು.ನಂತರ ಆಸ್ಪತ್ರೆಗೆ ಕರೆದುಕೊಂಡು ಹೋದವರ ಪೈಕಿ ಶಿವ ಎಂಬುವರು ದೂರವಾಣಿ ಮೂಲಕ ನನಗೆ ಕರೆ ಮಾಡಿ ರಾತ್ರಿ 8-15 ಗಂಟೆಗೆ ರಂಗಮ್ಮಳು ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆಂದು ತಿಳಿಸಿದರು.

Tuesday, October 01, 2013

Daily Crimes Report Dated:30/09/2013


ಮನುಷ್ಯ ಕಾಣೆ
ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 356/2013 – ಕಲಂ: ಮನುಷ್ಯ ಕಾಣೆ – ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಮಗಳೂರು ತಾಲ್ಲೋಕ್ ಅಂಬಳೆ ಹೋಬಳಿ ಬಾಣಾವರ ಗ್ರಾಮದಲ್ಲಿ ಪಿರ್ಯಾದುದಾರರಾದ ನಾಗೇಶ್‌ ಇವರ ಮಗ ನಿತಿನ್.ಬಿ.ಎನ್..17 ವರ್ಷ, ಈತನು ದಿನಾಂಕ;28-09-2013 ರಂದು ಬೆಳಗ್ಗೆ 08-00 ಗಂಟೆಯಲ್ಲಿ ಶನಿವಾರ ದಿವಸ ಚಿಕ್ಕಮಗಳೂರು ಟಿ,ಎಂ.ಎಸ್  ಕಾಲೇಜಿಗೆ ಹೋಗುವುದಾಗಿ ಹೇಳಿ ಹೋದವನು ಇದುವರೆಗೂ ಮನೆಗೆ ವಾಪಸ್ ಬಂದಿರುವುದಿಲ್ಲಾ, ನೆಂಟರ ಮನೆಯಲ್ಲಿ, ಸ್ನೇಹಿತರ ಮನೆಯಲ್ಲಿ ಹುಡುಕಲಾಗಿ ಸಿಕ್ಕಿರುವುದಿಲ್ಲಾ ಕಾಣೆಯಾದ ನಿತಿನ್.ಬಿ.ಎನ್ ರವರನ್ನು ಹುಡುಕಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ,ವ ವರದಿ.
ವರದಕ್ಷಿಣೆ ಕಿರುಕುಳ ಸಾವು  
ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 357/2013 – ಕಲಂ: 302 498(ಎ) 304(ಬಿ) ಐಪಿಸಿ – ದಿನಾಂಕ 30/09/2013 ರಂದು 1200 ಗಂಟೆಯಲ್ಲಿ ಚಿಕ್ಕಮಗಳೂರು ಪಟ್ಟಣದ ಹೌಸಿಂಗ್‌ ಬೋರ್ಡ್‌ ನಲ್ಲಿ ವಾಸವಾಗಿರುವ ಪ್ರಶಾಂತ್ ರಾಜ್ ರವರ ಹೆಂಡತಿ ಪುಷ್ಪ ನೇಣುಹಾಕಿಕೊಂಡು ಮೃತಪಟ್ಟಿದ್ದಾಗಿ  ಬಂದ ಸುದ್ದಿ ಅನ್ವಯ ಪಿರ್ಯಾದುದಾರರಾದ ಶ್ರೀಮತಿ ಕಮಲಮ್ಮ ಇವರು ಬಂದು ನೋಡಲಾಗಿ ಪಿರ್ಯಾದುದಾರರ ಅಳಿಯ ಆರೋಪಿ ಪ್ರಶಾಂತ್ ರಾಜ್ ರವರ ವಾಸದ ಮನೆಯ ಹಿಂದಿನ ಬಚ್ಚಲುಮನೆಯಲ್ಲಿ ಅಳವಡಿಸದ  ಕಬ್ಬಿಣದ ಪೈಪಿಗೆ ಪಿರ್ಯಾದಿ ಮಗಳು ಪುಷ್ಪ ನೇಣಿನಲ್ಲಿ ನೇತಾಡುತ್ತ ಮೃತಪಟ್ಟಿದ್ದು ಈ ಬಗ್ಗೆ ಪಿರ್ಯಾದುದಾರರು ಮೃತಳ ಗಂಡ ಪ್ರಶಾಂತ ರಾಜು, ಅತ್ತೆ ಕಮಲಮ್ಮ, ಮಾವ ಜವರರಾಜು, ರವರ ಮಗಳು ಸುಜಾತ, ಹಾಗೂ ಅಳಿಯ ವೆಂಕಟಾಚಲರಾಜು, ಮೊಮ್ಮಗಳು ಕಾವ್ಯ, ರವರು ಸೇರಿ ಯಾವುದೋ ರೀತಿಯಲ್ಲಿ ವರದಕ್ಷಿಣೆ ತಂದಿಲ್ಲವೆಂಬ ಕಾರಣಕ್ಕ ಈ ಹಿಂದಿನಿಂದಲೂ ಆಗಾಗ್ಗೆ ಕಿರುಕುಳ ನೀಡುತ್ತಿದ್ದು ಈ ದಿನ ಇವರುಗಳು ಸೇರಿ ಯಾವುದೋ ರೀತಿಯಲ್ಲಿ ಕೊಲೆ ಮಾಡಿ ನೇಣು ಬಿಗಿದು ನೇತು ಹಾಕಿರುತ್ತಾರೆ  ಇತ್ಯಾದಿ.
ಲಾರಿ ಕಳುವು
ಕಡೂರು ಪೊಲೀಸ್‌ ಠಾಣೆ ಮೊ.ಸಂ. 224/2013 – ಕಲಂ: 379 ಐಪಿಸಿ – ದಿನಾಂಕ 28/09/2013 ರಂದು ರಾತ್ರಿ ಪಿರ್ಯಾದುದಾರರಾದ ತನವೀರ್‌ ಅಹಮದ್‌ ಕಡೂರು ವಾಸಿ ಇವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಲಾರಿಯನ್ನು ಯಾರೋ ಕಳ್ಳರು ತೆಗೆದುಕೊಂಡು ಹೋಗಿದ್ದು. ಯಾರೋ ಲಾರಿಯನ್ನು ತೆಗೆದುಕೊಂಡು ಹೋಗಿರಬಹುದೆಂದು ತಿಳಿದು ಎಲ್ಲರನ್ನೂ ವಿಚಾರ ಮಾಡಿ ಎಲ್ಲಾ ಕಡೆ ಹುಡುಕಿದರೂ ಲಾರಿ ಸಿಗದೆ ಇದ್ದು ಲಾರಿಯನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ  ಲಾರಿ ನಂ ಕೆ.ಎ.18-8049 ಇಂಜಿನ್ ನಂ 697TC55DUZ837391 ಚಾಸಿಸ್ ನಂ 37334DUZ718155. ಆಗಿದ್ದು ಇದರ ಬೆಲೆ ಸುಮಾರು 6,50,000/-[ಆರು ಲಕ್ಷದ ಐವತ್ತು ಸಾವಿರ ] ರೂಗಳಾಗಿರುತ್ತೆ. ಸದರಿ ಲಾರಿಯನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ದೂರು ಇತ್ಯಾದಿ.  
ಸಿಲಿಂಡರ್‌ ಕಳುವು
ತರೀಕೆರೆ ಪೊಲೀಸ್‌ ಠಾಣೆ ಮೊ.ಸಂ. 230/2013 – ಕಲಂ: 454 457 380 ಐಪಿಸಿ – ದಿನಾಂಕ 28/09/2013 ರಂದು ಮೇದಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಅಕ್ಷರ ದಾಸೋಹದ ಬಿಸಿಯೂಟ ಯೋಜನೆಗೆ ಎರಡು ಗ್ಯಾಸ್‌ ಸಿಲೆಂಡರ್‌ಗಳನ್ನು ವಿತರಿಸಿದ್ದು ಅದರ ಖಾತೆ ಸಂಖ್ಯೆ 56975273 ಆಗಿದ್ದು ಅವುಗಳು ಭಾರತ್ ಗ್ಯಾಸ್‌ ಕಂಪನಿ ಸಿಲೆಂಡರ್‌ಗಳಾಗಿರುತ್ತವೆ. ಶಾಲೆಯ ಅಡುಗೆ ಕೋಣೆಯಲ್ಲಿಟ್ಟು ಬೀಗ ಹಾಕಿಕೊಂಡು ಹೋಗಿದ್ದು ಮಾರನೇ ದಿವಸ ಬಂದು ನೋಡಿದಾಗ ಶಾಲೆಯ ಅಡುಗೆ ಕೋಣೆಯ ಬೀಗವನ್ನು ಮುರಿದು ಅಡುಗೆ ಕೋಣೆಯಲ್ಲಿಟ್ಟ ಎರಡು ಅಡುಗೆ ಗ್ಯಾಸ್‌ ಸಿಲೆಂಡರ್‌ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅವುಗಳ ಬೆಲೆ ಸುಮಾರು 3000/- ರೂ ಗಳಾಗಿರುತ್ತದೆ. ಪತ್ತೆಮಾಡಿಕೊಡಬೇಕೆಂದು ಉಮೇಶ್‌ ಮುಖ್ಯ ಶಿಕ್ಷಕರು ಮೇದಿಹಳ್ಳಿ ಇವರು ದೂರು ನೀಡಿರುವುದಾಗಿರುತ್ತೆ.