ಕಳುವು ಪ್ರಕರಣ
ಯಗಟಿ ಪೊಲೀಸ್ ಠಾಣೆ ಮೊ.ಸಂ. 95/2013 – ಕಲಂ: 457 380 ಐಪಿಸಿ – ಫಿರ್ಯಾದಿ ವೆಂಕಟೇಶ್
ಖಜಾಂಚಿ ವೀರಾಂಜನೇಯ ದೇವಸ್ಥಾನ ಯಗಟಿ ಇವರು ಕೊಟ್ಟ ಲಿಖೀತ ದೂರಿನ ಸಾರಾಂಶವೇನೆಂದರೆ ಶ್ರೀ
ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಒಳಗೂ ಹೊರಗೂ ಸ್ವಚ್ಚ ಕಾರ್ಯ ಮಾಡುವ ಶ್ರೀಮತಿ ರಂಗಮ್ಮರವರು
ವೈ.ಎನ್ ನಾಗರಾಜುರವರ ಮನೆಯಿಂದ ಬೀಗದ ಕೀಯನ್ನು ತೆಗೆದುಕೊಂಡು ಬಂದು ಸ್ವಚ್ಚ ಕಾರ್ಯ ಮಾಡಲು
ಹೋದಾಗ ಯಾರೋ ಕಳ್ಳರು ದೇವಸ್ಥಾನದ ಮುಂಭಾಗಿಲಿನ ಕದದ ಬೀಗವನ್ನು ಹೊಡೆದು ಹಾಕಿ ದೇವಸ್ಥಾನದ ಒಳಗೆ
ಹೋಗಿ ದೇವಸ್ಥಾನದ ಒಳಗೆ ಇದ್ದ ಕಾಣಿಕೆ ಹುಂಡಿ ಪೆಟ್ಟಿಗೆಯ ಬೀಗ ಹೊಡೆದು 18,000/- ರಿಂದ 19,000/- ರೂಗಳಷ್ಟು
ಹಣವನ್ನು ತೆಗೆದುಕೊಂಡು ಹೋಗಿರುತ್ತಾರೆ. ಪತ್ತೆಮಾಡಿಕೊಡಬೇಕೆಂದು
ದೂರು ನೀಡಿರುವುದಾಗಿರುತ್ತೆ.
ಅಪಘಾತದಲ್ಲಿ ಸಾವು
ಕಡೂರು ಪೊಲೀಸ್ ಠಾಣೆ ಮೊ.ಸಂ. 228/2013 – ಕಲಂ: 279
304(ಎ) ಐಪಿಸಿ – ಫೀರ್ಯಾದಿ ಶ್ರೀಮತಿ ನಾಗರತ್ನ ಇವರ ಗಂಡ ಜಗದೀಶ್ವರಪ್ಪ ರವರು ಹಿರೋಹೊಂಡಾ ಮೋಟಾರ್
ಸೈಕಲ್ ನಂಬರ್ ಕೆ ಎ 18 ಕ್ಯೂ 6099 ರಲ್ಲಿ ದಿನಾಂಕ
06/10/2013 ರಂದು 1130 ಗಂಟೆಯಲ್ಲಿ ಬಿಸಲೇಹಳ್ಳಿ ಕಡೆಗೆ
ಹೋಗುತ್ತಿದ್ದಾಗ ಸರಸ್ವತಿಪುರ ಗೇಟ್ ನ
ಶನೇಶ್ವರ ದೇವಸ್ಥಾನ ಸಮೀಪ ಮೋಟಾರ್ ಸೈಕಲ್ ನ ಚಕ್ರ ಪಂಕ್ಚರ್ ಆಗಿ ಮೋಟಾರ್ ಸೈಕಲ್ ನಿಯಂತ್ರಣ
ತಪ್ಪಿ ಜಗದೀಶ್ವರಪ್ಪ ರವರು ಬೈಕ್
ಸಮೇತ ರಸ್ತೆಗೆ ಬಿದ್ದಾಗ ಅವರ ತಲೆಯ ಭಾಗಕ್ಕೆ,
ಭುಜಕ್ಕೆ , ಕಾಲಿಗೆ ಪೆಟ್ಟು ಬಿದ್ದು
ರಕ್ತ ಗಾಯವಾಗಿರುತ್ತೆ, ಬೈಕ್ ಜಖಂಗೊಂಡಿರುತ್ತೆ,
ಹೆಚ್ಚಿನ ಚಿಕಿತ್ಸೆ ಶಿವಮೊಗ್ಗ ನಾರಾಯಣ ಹೃದಯಾಲಯಕ್ಕೆ ದಾಖಲು ಮಾಡಿ ಚಿಕಿತ್ಸೆ
ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆ.
ಜೂಜಾಟ ಪ್ರಕರಣ
ಸಿಂಗಟಗೆರೆ ಪೊಲೀಸ್ ಠಾಣೆ ಮೊ.ಸಂ. 51/2013 – ಕಲಂ: 87 ಕೆ.ಪಿ.ಆಕ್ಟ್ – ಪಿಎಸ್‌ಐ ರವರು ಠಾಣೆಯಲ್ಲಿರುವಾಗ್ಗೆ
ಇಸ್ಪೀಟು ಜೂಜಾಟ ಆಡುತ್ತಿದ್ದಾರೆ, ಎಂದು ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಗಳಾದ ಪಿಸಿ 253.ಮಹೇಶ್ವರಪ್ಪ. ಪಿಸಿ
ಪಿ.ಸಿ. 173 ರಾಜ್ ಕುಮಾರ, ಪಿ.ಸಿ. 624 ಮಹಮದ್ ಇಲಿಯಾಸ್, ಹಾಗೂ ಪಿ.ಸಿ. 627
ಅಶೋಕ, ಪಿಸಿ 534 ರೇಣೂಕಮೂರ್ತಿ ಪಿ.ಸಿ 533 ಸೋಮೇಗೌಡ
ಪಿಸಿ 536 ಜಯಣ್ಣ, ಇವರುಗಳ ಜೊತೆಯಲ್ಲಿ ಬಾತ್ಮಿದಾರರು ನೀಡಿದ ಮಾಹಿತಿ ಆದರಿಸಿ ಒಳಗೆ –
ಹೊರೆಗೆ ಎಂದು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟು ಜೂಜಾಟ ಆಡುತ್ತಿರುವುದನ್ನು ಖಚಿತ
ಪಡಿಸಿಕೊಂಡು, ಪಿ ಎಸ್ ಐ ರವರು ಮತ್ತು
ಸಿಬ್ಬಂದಿಗಳು, ದಾಳಿ ಮಾಡಿ ಹ್ಯಾರಲಘಟ್ಟ ವಾಸಿಗಳು ಎಂದು ನುಡಿದಿದ್ದು, ಇವರುಗಳು ನೆಲದ ಮೇಲೆ ಇಸ್ಪೀಟು ಆಡಲು
ಒಂದು ಹರಿದಿರುವ ಟಾರ್ ಪಾಲ್ ಹಾಸಿದ್ದು, ಇಸ್ಪೀಟು
ಎಲೆಗಳು ಬಿದ್ದಿದ್ದು, ಸಮಕ್ಷಮ ಮಹಜರ್ ಜರುಗಿಸಿ, 52 ಇಸ್ಪೀಟು ಎಲೆಗಳು, ಒಂದು ಹರಿದಿರುವ
ಟಾರ್ ಪಾಲ್ ಹಾಗೂ 1700/-ರೂ. ನಗದು ಹಣವನ್ನು
ಪಂಚಾಯಿತಿದಾರರ ಸಮಕ್ಷಮ ಅಮಾನತ್ತು ಪಡಿಸಿಕೊಂಡು, ಆರೋಪಿತರುಗಳನ್ನು ವಶಕ್ಕೆ ಪಡೆದುಕೊಂಡು ಕೇಸು ದಾಖಲಿಸಿರುತ್ತೆ. ಆರೋಪಿಗಳಾದ ಜಗದೀಶ್ ಹಾಗು ಇತರೆ 9 ಜನರನ್ನು ದಸ್ತಗಿರಿ
ಮಾಡಿರುತ್ತೆ.