ಹುಡುಗಿ ಕಾಣೆ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.328/2012 ಕಲಂ ಹುಡುಗಿ ಕಾಣೆ– ಕುಮಾರಿ ಸ್ಟೀನಾ ಬಿನ್ ಅಂಬಿಕಾ 10 ವರ್ಷ ಇವಳು ದಿನಾಂಕ 03/10/2012ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆ ಬಿಟ್ಟು ಹೋಗಿದ್ದು ಪತ್ತೆ ಮಾಡಿಕೊಡಬೇಕೆಂದು ಆಕೆಯ ತಾಯಿ ಅಂಬಿಕಾ ಕಲ್ಲುದೊಡ್ಡಿ ವಾಸಿ ಇವರು ದೂರು ನೀಡಿರುವುದಾಗಿರುತ್ತೆ.
ಜೂಜಾಟ ಪ್ರಕರಣ
ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ.145/2012 ಕಲಂ 87 ಕೆ.ಪಿ.ಆಕ್ಟ್ – ದಿನಾಂಕ 26/10/2012 ರಂದು ಹೆಸ್ಗಲ್ ಬಳಿ ಪಿಎಸ್‌ಐ ರವರು ಗಸ್ತಿನಲ್ಲಿ ಇರುವಾಗ ಬಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಹೋಗಿ ನೋಡಲಾಗಿ ಆರೋಪಿಗಳಾದ ಮಂಜುನಾಥ ಹಾಗೂ ಇತರೆ 6ಜನರು ಸೇರಿಕೊಂಡು ಹಣವನ್ನು ಪಣವನ್ನಾಗಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು ಆರೋಪಿಗಳನ್ನು ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ 980-00 ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳನ್ನು ಸ್ಥಳದಲ್ಲಿ ಅಮಾನತ್ ಪಡಿಸಿಕೊಂಡು ಮೇರೆಗೆ ಈ ಪ್ರ.ವ.ವರದಿ.
ಜೂಜಾಟ ಪ್ರಕರಣ
ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ.14/2012 ಕಲಂ 87 ಕೆ.ಪಿ.ಆಕ್ಟ್ – ದಿನಾಂಕ 26/10/2012 ರಂದು 2300 ಗಂಟೆಯಲ್ಲಿ ಮಾಕೋನಹಳ್ಳಿ ಬಳಿ ಪಿಎಸ್‌ಐ ರವರು ಗಸ್ತಿನಲ್ಲಿ ಇರುವಾಗ ಬಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಹೋಗಿ ನೋಡಲಾಗಿ ಆರೋಪಿಗಳಾದ ವೆಂಕಟೇಶ ಹಾಗೂ ಇತರೆ 8ಜನರು ಸೇರಿಕೊಂಡು ಹಣವನ್ನು ಪಣವನ್ನಾಗಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು ಆರೋಪಿಗಳನ್ನು ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ 1140-00 ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳನ್ನು ಸ್ಥಳದಲ್ಲಿ ಅಮಾನತ್ ಪಡಿಸಿಕೊಂಡು ಮೇರೆಗೆ ಈ ಪ್ರ.ವ.ವರದಿ.
ಕಳುವು ಪ್ರಕರಣ
ಕಳಸ ಪೊಲೀಸ್ ಠಾಣೆ ಮೊ.ಸಂ.63/2012 ಕಲಂ 457 380 ಐಪಿಸಿ – ದಿನಾಂಕ 25/10/2012 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಪಿರ್ಯಾದಿ ಶ್ರೀಮತಿ ರತ್ನ ಕವನಹಳ್ಳ ಸೈಟ್ ಮನೆಯ ಬೀಗವನ್ನು ಹೊಡೆದು ಒಳ ಪ್ರವೇಶಿಸಿ ಬೀರುವನ್ನು ತೆಗೆದು ಬೀರುವಿನಲ್ಲಿದ್ದ 20ಗ್ರಾಂ ತೂಕದ ಮಾಂಗಲ್ಯದ ಸರವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ. ಬೆಲೆ 20000/- ರೂ ಗಳಾಗಿರುತ್ತೆ.
ಕಳುವು ಪ್ರಕರಣ
ಶೃಂಗೇರಿ ಪೊಲೀಸ್ ಠಾಣೆ ಮೊ.ಸಂ.99/2012 ಕಲಂ 379 ಐಪಿಸಿ – ದಿನಾಂಕ 26/10/2012 ರಂದು 0840 ಗಂಟೆಯಲ್ಲಿ ಪಿರ್ಯಾದುದಾರರಾದ ಸುಮಾ ಬೆಂಗಳೂರು ವಾಸಿ ಇವರು ಶಾರದಾಂಭ ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ ಹೋಗಿ, ಮರಳುವಾಗ ಪಿರ್ಯಾದಿಯ ಹತ್ತಿರ ಹ್ಯಾಂಡ್ ಬ್ಯಾಗ್ ನಲ್ಲಿದ್ದ ಪರ್ಸ್ ನ್ನು ಯಾರೋ ಕಳ್ಳರು ಕಳವು ಮಾಡಿ ಅದರಲ್ಲಿದ್ದ ಆಕ್ಸಿಸ್ ಬ್ಯಾಂಕ್ 2 ಎಟಿಎಂ ಕಾರ್ಡ್, ಪಾನ್ ಕಾರ್ಡ ಓಟರ್ ಐಡಿ ಕಾರ್ಡು, ಆಂದ್ರ ಬ್ಯಾಂಕ್ ಡೆಬಿಟ್ ಕಾರ್ಡು, ಮತ್ತು ನಗದು ಹಣ 5000/- ರೂ ಕಳುವು ಆಗಿರುತ್ತದೆ
ಮನುಷ್ಯ ಕಾಣೆ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ.222/2012 ಕಲಂ ಮನುಷ್ಯ ಕಾಣೆ – ಕೀರ್ತಿಕುಮಾರ್ 14 ವರ್ಷ ಹಳಿಯೂರು ವಾಸಿ ಇವರು ದಿನಾಂಕ 21/10/2012ರಂದು ಮನೆಯಿಂದ ಹೊರಗೆ ಹೋಗಿದ್ದು ನಂತರ ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ಪರಿಮಳ ಎಂಬುವರು ದೂರು ನೀಡಿರುವುದಾಗಿರುತ್ತೆ.
ಮನುಷ್ಯ ಕಾಣೆ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ.22/2012 ಕಲಂ ಮನುಷ್ಯ ಕಾಣೆ – ಪಿರ್ಯಾದಿ ರಾಜಪ್ಪ ಬೆಲೆನಹಳ್ಳಿ ವಾಸಿ ಇವರ ಅಣ್ಣನ ಮಗಳಾದ ಸವಿತ 17ವರ್ಷ ಇವಳು ಮನೆಯಲ್ಲಿ ಯಾರಿಗು ಹೇಳದೆ ಮನೆಯಿಂದ ಹೊರಗೆ ಹೋಗಿದ್ದು ನಂತರ ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ.