ಕಳುವು ಪ್ರಕರಣ
ನಗರ ಪೊಲೀಸ್ ಠಾಣೆ 183/12 PÀ®A: 454 380 ಐಪಿಸಿ – ದಿನಾಂಕ 15/12/2012 ರಂದು 1145 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಸೀತಮ್ಮ ಕೋಟೆ ವಾಸಿ ಇವರ ಮನೆಗೆ ಯಾರೋ ಕಳ್ಳರು ಕಿಟಕಿಯಲ್ಲಿ ಇಟ್ಟಿದ್ದ ಬಾಗಿಲ ಬೀಗವನ್ನು ತೆಗೆದುಕೊಂಡು ಅದರಿಂದ ಮನೆಯ ಬಾಗಿಲ ಬೀಗವನ್ನು ತೆಗೆದು ಮನೆಯ ಓಳಗಡೆ ಪ್ರವೇಶಿಸಿ ಮನೆಯ ಒಳಗಡೆ ನನ್ನ ಮತ್ತು ತಾರಾಳ ರೂಮಿನಲ್ಲಿದ್ದ ಬೀರುಗಳನ್ನು ತೆರೆದು ಅದರಲ್ಲಿದ್ದ ಕೀಗಳಿಂದ ಕ್ಯಾಷ್ ಡ್ರಾದ ಬೀಗವನ್ನು ತೆರೆದು,ನನ್ನ ಬೀರುವಿನಲ್ಲಿದ್ದ ಎರಡು ಚಿನ್ನದ ಬಂಗಾರದ ಬಳೆಗಳು-30ಗ್ರಾಂ,45000-00ರೂಗಳು, ಜೊತೆ ಚಿನ್ನದ ಲಕ್ಷ್ಮೀ ಓಲೆ-5ಗ್ರಾಂ,6500-00 ರೂ.ಗಳು, ಒಂದು ಜೊತೆ ಹವಳ ಇರುವ ಚಿನ್ನದ ಓಲೆ-3ಗ್ರಾಂ,4500-00 ರೂ.ಗಳು, ಒಂದು ಜೊತೆ ಚಿನ್ನದ ಬಟನ್ಸ್ ಓಲೆ-4ಗ್ರಾಂ,6000-00ರೂ.ಗಳು, ಒಂದು 3 ಬಿಳಿ ಹರಳಿನ ಚಿನ್ನದ ಉಂಗುರ-4ಗ್ರಾಂ,6000-00 ರೂ.ಗಳು, ಒಂದು ಬಿಳಿ ಹರಳಿನ ಚಿನ್ನದ ಉಂಗುರ-3ಗ್ರಾಂ,4000-00 ರೂ.ಗಳು, ಒಂದು ಚಿನ್ನದ ಪ್ಲೈನ್ ಉಂಗುರ-2 ಗ್ರಾಂ,3000-00 ರೂ.ಗಳು, ಒಂದು ಕರಿಮಣಿಸರ,ಅದರಲ್ಲಿ 4ಗ್ರಾಂನ 52 ಬಂಗಾರದ ಗುಂಡುಗಳು, 4500-00 ರೂಗಳು ಮತ್ತು ತಾರಾಳ ಬೀರುವಿನಲ್ಲಿದ್ದ 12 ಗ್ರಾಂನ ಒಂದು ಬಂಗಾರದ ಸರ, 15500-00 ರೂ.ಗಳು ಹಾಗೂ 4000/-ರೂ ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು,ಎಲ್ಲಾ ಸೇರಿ ಒಟ್ಟು ಸುಮಾರು 99,000/-ರೂ ಗಳಾಗಿದ್ದು ಪತ್ತೆಮಾಡಿ ಕೊಡ ಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ,ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.
ಹುಡುಗಿ ಕಾಣೆ
ಎನ್‌ಆರ್‌ಪುರ ಪೊಲೀಸ್ ಠಾಣೆ 145/12 PÀ®A: ಹುಡುಗಿ ಕಾಣೆ – ದಿನಾಂಕ 12/12/2012 ರಂದು ಪಿರ್ಯಾದುದಾರರಾದ ಶ್ರೀಮತಿ ಹಸಿನಾ ಹಿಳುವಳ್ಳಿ ಗ್ರಾಮದ ವಾಸಿ ಇವರತಂಗಿ 18ವರ್ಷ ಪ್ರಾಯದ ಕು/ ಅಪ್ಸಾನಾ ಇವಳು ಪ್ರತಿದಿನ ಕಂಪ್ಯೂಟರ್ ತರಗತಿಗೆ ಹೋಗುತ್ತಿದ್ದು, ಅದರಂತೆ ದಿನಾಂಕ: 12/12/2012 ರಂದು ಬೆಳಿಗ್ಗೆ 11:30 ಗಂಟೆ ಸಮಯದಲ್ಲಿ ಕಂಪ್ಯೂಟರ್ ಕ್ಲಾಸ್ಗೆ ಹೋಗುವುದಾಗಿ ಹೇಳಿ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ.ಈ ಬಗ್ಗೆ ಸಂಬಂಧಿಕರ ಮನೆಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ