Thursday, June 27, 2013

Daily Crimes Report Dated:26/06/2013


ಕೊಲೆ ಪ್ರಕರಣ
ತರೀಕೆರೆ ಪೊಲೀಸ್‌ ಠಾಣೆ ಮೊ.ಸಂ. 158/2013 – ಕಲಂ: 302 ಐಪಿಸಿ – ದಿನಾಂಕ 22/05/2013 ರಂದು ರಾತ್ರಿ ಸಮಯದಲ್ಲಿ ಕೃತ್ಯ ನಡೆದಿದ್ದು ಪಿರ್ಯಾದುದಾರರಾದ ಆರ್. ರಾಜಗೋಪಾಲ ಇವರ ಮಗಳಾದ ಲಕ್ಷ್ಮೀ @ ದೇವಿ ಬಾಯಿ ಇವಳನ್ನು ಈಗ್ಗೆ 20 ವರ್ಷಗಳ ಹಿಂದೆ ದಾರವಾಡ ಜಿಲ್ಲೆ  ಹೊಸಕಟ್ಟೆ ಗ್ರಾಮದ ವಾಸಿ ನೀಲಪ್ಪ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು  ಅವಳಿಗೆ ಎರಡು ಜನ ಹೆಣ್ಣ ಮಕ್ಕಳು ಇರುತ್ತಾರೆ.ಪಿರ್ಯಾದುದಾರರ ಮಗಳ ಗಂಡ ನೀಲಪ್ಪ ಈತನು ಈಗ್ಗೆ 17 ವರ್ಷಗಳ ಹಿಂದೆ ಮೃತ ಪಟ್ಟಿದ್ದು ನಂತರ ಬಾಂಬೆಗೆ  ಹೋಗಿ ಅಲ್ಲಿ ಅಜಯ ಎಂಬುವನೊಂದಿಗೆ ಮದುವೆಯಾಗಿ ಸಂಸಾರ ಮಾಡಿಕೊಂಡು ಅಲ್ಲಿಯೇ ವಾಸವಿದ್ದು ಆಗಾಗ್ಗೆ ನಮ್ಮ ಮನೆಗ ಬಂದು ಹೋಗುತ್ತಿರುತ್ತಾಳೆ. ಪಿರ್ಯಾದುದಾರರ ಮಗನಾದ ಲಿಂಗದಹಳ್ಳಿಯಲ್ಲಿ ವಾಸವಿರುವ ಶೇಖರ ನಾಯ್ಕ ಈತನ ಮನೆಗೆ ಈಗ್ಗೆ ಎರಡು ತಿಂಗಳ ಹಿಂದೆ ಬಂದು ವಾಸವಿದ್ದು  ಗಂಡ ದೂರವಾಣಿ ಮೂಲಕ ನಾನು ಬೀರೂರಿಗೆ ಬರುತ್ತೇನೆ ಬಾ ಎಂದು ಹೇಳಿದ್ದು ನಂತರ ಪಿರ್ಯಾದುದಾರರ ಮಗಳು ತನ್ನ ಮಕ್ಕಳಿಗೆ ಅಂಗಡಿಯಲ್ಲಿ ತಿಂಡಿ ತರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದವಳು ರಾತ್ರಿಯಾದರು ವಾಪಾಸ್ ಮನೆಗೆ ಬಂದಿರುವುದಿಲ್ಲ. ಕ್ಯಾಂಟಿನ್ ಪ್ರಕಾಶ ಎಂಬುವರು ಪಿರ್ಯಾದುದಾರರಿಗೆ ನಿನ್ನ ಮಗಳು ಹಳಿಯೂರು ರೈಲ್ಷೇ ಹಳಿಯ ಹತ್ತಿರ ಕೊಲೆಯಾಗಿರುವುದಾಗಿ ತಿಳಿಸಿದ ಮೇರೆಗೆ ಹೋಗಿ ನೋಡಿದಾಗ ಪಿರ್ಯಾದುದಾರರ ಮಗಳನ್ನು ಯಾರೋ ಯಾವುದೋ ಆಯುಧದಿಂದ ಕತ್ತನ್ನು ಕಡಿದು ಕೊಲೆ ಮಾಡಿರುತ್ತಾರೆ ಇತ್ಯಾದಿ.
ಅಪಘಾತದಲ್ಲಿ ಸಾವು
ಲಿಂಗದಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 47/2013 – ಕಲಂ: 279 304(ಎ) ಐಪಿಸಿ – ಪಿರ್ಯಾದುದಾ ರರಾದ  ಆಕಾಶ್‌‌ ಮತ್ತು ಆತನ  ಸ್ನೇಹಿತರಾದ ಸಂಕೇಶ್ .ನರೇಶ್ ,ಸುಖೇಶ್ . ರವರೊಂದಿಗೆ  ಕೆಎ-20 ಎನ್-5238 ನೇ ಕಾರಿನಲ್ಲಿ ನಾವು ಹಾಗು ಕೆಎ-18 ಎನ್-3998 ನೇ ಕಾರಿನಲ್ಲಿ  ಗಣೇಶ್ ಶಿವಪ್ರಸಾದ್ . ಸೂರಜ್ ಹಾಗು ವಿನಾಯಕ ರವರೊಂದಿಗೆ  ಅತ್ತಿಗುಂಡಿಯಲ್ಲಿ ರಾತ್ರಿ ತಂಗಿದ್ದು  ಕೆಮ್ಮಣ್ಣುಗುಂಡಿಗೆ ಬಂದು  ಬೀರೂರಿಗೆ ವಾಪಸ್ ಬರುತ್ತಿರುವಾಗ ಕೆಎ-18 ಎನ್-3998 ನೇ ಕಾರನ್ನು ವಿನಾಯಕ ಚಾಲನೆ ಮಾಡುತ್ತಿದ್ದು ನಮ್ಮ ಮುಂದೆ ಕಾರು ಲಿಂಗದಹಳ್ಳಿ ಸಮೀಪ ಕಲ್ಲತ್ತಿಗಿರಿ ರಸ್ತೆಯಲ್ಲಿ ತನ್ನ ಕಾರನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಬಲ ಭಾಗದ ಮರಕ್ಕೆ ಡಿಕ್ಕಿ ಹೊಡೆಸಿದ್ದು  ಹೊಡೆಯಿಸಿದ ಪರಿಣಾಮ ವಿನಾಯಕ .ಗಣೇಶ್ .ಶಿವಪ್ರಸಾದ್ ಮತ್ತು  ಸೂರಜ್ . ಈ ನಾಲ್ಕು ಜನರಿಗೆ ತಲೆಗೆ ಮೈಕೈಗೆ ತೀವ್ರ ತರವಾದ ಗಾಯಗಳಾಗಿದ್ದು  ನಾವುಗಳು ಗಾಯಾಳುಗಳನ್ನು ಒಂದು ವಾಹನದಲ್ಲಿ ತರೀಕೆರೆ ಸರ್ಕಾರಿ  ಆಸ್ಪತ್ರೆಗೆ ಚಿಕಿತ್ಸೆ ಸೇರಿಸಿದ್ದು  ವೈದ್ಯರು ಗಾಯಾಳುಗಳನ್ನು ಪರೀಕ್ಷಿಸಿ  ವಿನಾಯಕ ಶಿವಪ್ರಸಾದ್. ರವರುಗಳು ಮೃತಪಟ್ಟಿರುವುದಾಗಿ  ತಿಳಿಸಿದರು

Wednesday, June 26, 2013

Daily Crimes Report Dated:25/06/2013


ಮನುಷ್ಯ ಕಾಣೆ
ಆಲ್ದೂರು ಪೊಲೀಸ್‌ ಠಾಣೆ ಮೊ.ಸಂ. 138/2013 – ಕಲಂ: ಮನುಷ್ಯ ಕಾಣೆ   – ಪಿರ್ಯದಿ ಅಣ್ಣೇಗೌಡ ವಿಜಯಪುರ ವಾಸಿ ಇವರ ಭಾವ ಮಲ್ಲೇಶ್‌‌ ಇವರು ದಿನಾಂಕ 15/06/2013 ರಂದು ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ
ವರದಕ್ಷಿಣೆ ಕಿರುಕುಳ ಸಾವು
ಸಿಂಗಟಗೆರೆ ಪೊಲೀಸ್‌ ಠಾಣೆ ಮೊ.ಸಂ. 39/2013 – ಕಲಂ: 302 304(ಬಿ) 34 ಐಪಿಸಿ    – ಪಿರ್ಯಾದುದಾರರಾದ ಸುನಿಲ್‌ನಾಯ್ಕ ಗುತ್ತಿಗಟ್ಟೆ ವಾಸಿ ಇವರು ತಂಗಿಯಾದ ಸುಮಿತ್ರಾಬಾಯಿ 21 ವರ್ಷ ವರನ್ನು  ರಾಮನಹಳ್ಳಿತಾಂಡ್ಯ ವಾಸಿ ತಾವರನಾಯ್ಕ ರವರ ಮಗನಾದ ನವೀನ್ ಕುಮಾರ್ ಇವರಿಗೆ ದಿನಾಂಕ  22 08-2012 ರಂದು ಮದುವೆ ಮಾಡಿಕೊಟ್ಟಿದ್ದು ಈ ಸಮಯದಲ್ಲಿ 50.000/- ರೂ ನಗದು  ಮತ್ತು ಒಂದು ಬಂಗಾರದ ಕೊರಳ  ಸರವನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟು ಮದುವೆ ಮಾಡಿಸಿದ್ದು ಆದರೂ ಸದರಿ ನವೀನ್ ಕುಮಾರ್ ಇವನು ಪದೇ ಪದೇ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದು ದಿನಾಂಕ 24-06-2013 ರಂದು ಅವಳು ಪಿರ್ಯಾದಿಗೆ  ದೂರವಾಣಿ ಮುಖಾಂತರ ತಿಳಿಸಿದ್ದೆನೇಂದರೆ ಈ ದಿನ ನವೀನ್ ಕುಮಾರ್ ಮತ್ತು ಆತನ  ತಂದೆ ತಾವರನಾಯ್ಕ,  ಗಂಡನ ಅಕ್ಕ  ಅನ್ನಪೂರ್ಣ ಬಾಯಿ ಮತ್ತು ಅತ್ತೆ ನಾಗೀಬಾಯಿ ಇವರೆಲ್ಲಾ ಸೇರಿ ತನಗೆ ತವರುಮನೆಗೆ ಹೋಗಿ ವರದಕ್ಷಿಣೆ ತರುವಂತೆ ಪೀಡಿಸಿ ಹಿಂಸೆ ನೀಡುತ್ತಿದ್ದಾರೆಂದು ತಿಳಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಪಕ್ಕದ ಮನೆಯವರು ಪೋನ್ ಮಾಡಿ ಪಿರ್ಯಾದಿಯ  ತಂಗಿ ಸತ್ತಿರುವ ವಿಷಯವನ್ನು ಹೇಳಿರುತ್ತಾರೆ. ಪಿರ್ಯಾದಿ  ಮತ್ತು ಅವರ ಊರಿನಿಂದ ಕೆಲವರು ಬಂದು ಈ ದಿನ  ದಿನಾಂಕ 25-06-2013 ರಂದು ಹೆಣವನ್ನು ನೋಡಿದಾಗ ಹೆಣದ ಮೇಲೆ ಅಲ್ಲಲ್ಲಿ ಗಾಯಗಳಿರುವುದು  ಕಂಡುಬಂದಿರುತ್ತೆ. ಇದರಿಂದ ಮೇಲ್ಕಂಡವರು ಪಿರ್ಯಾದಿಯ  ತಂಗಿಯನ್ನು ಹೊಡೆದು ಸಾಯಿಸಿ ನೇಣು ಹಾಕಿರುತ್ತಾರೆ