Friday, September 21, 2012

Daily Crimes Report dated:20/09/2012

ಜೂಜಾಟ ಪ್ರಕರಣ
ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ.132/2012 ಕಲಂ 87 ಕೆ.ಪಿ.ಆಕ್ಟ್ – ದಿನಾಂಕ 20/09/2012 ರಂದು 1645 ಗಂಟೆಯಲ್ಲಿ ಪಿಎಸ್‌‌ಐ ರವರು ಠಾಣೆಯಲ್ಲಿರುವಾಗ ಕುಮಾರಶೆಟ್ಟಿ  ರವರ ಬಾಬ್ತು ಖಾಲಿ ಜಾಗದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಸುಮಾರು ಜನರು ಹಣವನ್ನು ಪಣವನ್ನಾಗಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು ಹಿಡಿದು, ಮಹಜರ್ ಜರುಗಿಸಿ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ 3,410-00 ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳನ್ನು ಅಮಾನತ್ತುಪಡಿಸಿಕೊಂಡು ಹಾಗೂ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುತ್ತಾರೆ.   ಆರೋಪಿಗಳಾದ ಕಿಶೋರ್ ಹಾಗೂ ಇತರೆ 8 ಜನರನ್ನು ದಸ್ತಗಿರಿ ಮಾಡಿರುತ್ತೆ.
ಜೂಜಾಟ ಪ್ರಕರಣ
ಗೋಣಿಬೀಡು ಪೊಲೀಸ್ ಠಾಣೆ ಮೊ.ಸಂ.59/2012 ಕಲಂ 87 ಕೆ.ಪಿ.ಆಕ್ಟ್ – ದಿನಾಂಕ 20/09/2012 ರಂದು 1845 ಗಂಟೆಯಲ್ಲಿ ದೇವರುಂದ ಗ್ರಾಮದ ಬಸ್ ನಿಲ್ದಾಣದ ಓಣಿಯಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದವರನ್ನು  ಒಟ್ಟು 9 ಜನರನ್ನು  ಹಿಡಿದು  ಇವರುಗಳು ಇಸ್ಪೀಟ್ ಆಟ ಆಡಲು ಉಪಯೋಗಿಸುತ್ತಿದ್ದ ಒಟ್ಟು  4405/- ರೂ ಹಣವನ್ನು ಹಾಗೂ  52 ಇಸ್ಪೀಟ್ ಎಲೆಗಳನ್ನು ಮತ್ತು  ನೆಲಕ್ಕೆ ಹಾಸಿದ್ದ  ಸೋಪಿನ ಬಾಕ್ಸ್ ನ ಕವರ್ ರಟ್ಟುಗಳನ್ನು   ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತದೆ. ಆರೋಪಿಗಳಾದ ಬಸವರಾಜು ಹಾಗೂ ಇತರೆ 8 ಜನರನ್ನು ದಸ್ತಗಿರಿ ಮಾಡಿರುತ್ತೆ.
ಜೂಜಾಟ ಪ್ರಕರಣ
ಕಡೂರು ಪೊಲೀಸ್ ಠಾಣೆ ಮೊ.ಸಂ.185/2012 ಕಲಂ 87 ಕೆ.ಪಿ.ಆಕ್ಟ್ – ದಿನಾಂಕ 20/09/2012 ರಂದು 1700 ಗಂಟೆಯಲ್ಲಿ ಸಿಪಿಐ ರವರು ಕಛೇರಿಯಲ್ಲಿದ್ದಾಗ ಬಂದ ಖಚಿತ ಮಾಹಿತಿ ಮೇರೆಗೆ ಚಿಕ್ಕಂಗಳ ಗ್ರಾಮದ ಚಂದ್ರಪ್ಪನವರ ಅಡಿಕೆ ತೋಟದ ಮನೆ  ವರಾಂಡಾದಲ್ಲಿ ನೆಲದ ಮೇಲೆ ಬೆಡ್ ಶೀಟ್ ಹಾಸಿಕೊ0ಡು,ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು  ಇಸ್ಪೀಟ್  ಎಲೆಗಳನ್ನು ಬಳಸಿ ಒಳಗೆ ಹೊರಗೆ ಎ0ದು ಹೇಳುತ್ತಾ  ಅ0ದರ್ ಬಹಾರ್ ಇಸ್ಪೀಟ್  ಜೂಜಾಟ ಆಡುತ್ತಿದ್ದವರನ್ನು ಸುತ್ತುವರಿದು ದಾಳಿ ನಡೆಸಿ ಜೂಜಾಟ ಆಡುತ್ತಿದ್ದವರನ್ನು ಹಿಡಿದು ಕೊಂಡಿದ್ದು ಆಟಕ್ಕೆ ಪಣವಾಗಿಟ್ಟಿದ್ದ  ಒಟ್ಟು 3170-/- ರೂ ನಗದು ಹಣ ಹಾಗು ಇಸ್ಪೀಟ್  ಜೂಜಾಟ ಆಡಲು ಬಳಸಿದ್ದ 52 ಇಸ್ವೀಟ್ ಎಲೆಗಳನ್ನು ಮತ್ತು ಬೆಡ್ ಶೀಟ್ ನ್ನು ಮತ್ತು 4ಮೊಬೈಲ್ ಗಳನ್ನು ಮಹಜರ್ ಮೂಲಕ ವಶಪಡಿಸಿಕೊಂಡು  ,ಆರೋಪಿಗಳನ್ನು ವಸ್ತುಗಳೊಂದಿಗೆ ಠಾಣೆಗೆ ಬಂದು ಪ್ರಕರಣ ದಾಖಲಿಸುವಂತೆ ನೀಡಿದ ವರದಿ ಮೇರೆಗೆ ಈ ಪ್ರ,ವ,ವರದಿ ಇತ್ಯಾದಿ ಆರೋಪಿಗಳಾದ ಮಲ್ಲೇಶ ಹಾಗೂ ಇತರೆ 4 ಜನರನ್ನು ದಸ್ತಗಿರಿ ಮಾಡಿರುತ್ತೆ.
ಆಕಸ್ಮಿಕ ಗುಂಡು ತಗುಲಿ ಸಾವು
ಲಕ್ಕವಳ್ಳಿ ಪೊಲೀಸ್ ಠಾಣೆ ಮೊ.ಸಂ.61/2012 ಕಲಂ 304 ಐಪಿಸಿ ಜೊತೆಗೆ 3 7 5 ಆಯುಧ ಕಾಯ್ದ– ದಿನಾಂಕ 19/09/2012 ರಂದು 1900 ಗಂಟೆಯಿಂದ ದಿನಾಂಕ 20/09/2012 ರಂದು 0900 ಗಂಟೆಯ ಒಳಗೆ ಬಾಪೂಜಿ ಕ್ಯಾಂಪ್‌‌ ಗುಡ್ಡದಬೀರನಹಳ್ಳಿಯಲ್ಲಿ ಆರೋಪಿ ಮಂಜು ಈತನು ಕಾಡು ಹಂದಿ ಬಂದಿತೆಂದು ತಿಳಿದು, ತನ್ನ ಬಳಿ ಪರವಾನಗಿ ಇಲ್ಲದ ಅಕ್ರಮವಾಗಿ ಇಟ್ಟುಕೊಂಡಿದ್ದ ಬಂದೂಕಿನಿಂದ ಗುಂಡು ಹಾರಿಸಿದಾಗ ಆಕಸ್ಮಿಕವಾಗಿ ಆ ಗುಂಡು ಪಿರ್ಯಾದಿ ಜಯಮ್ಮ ಇವರ ಗಂಡ ಬಾಬು ರವರ ಪಕ್ಕೆಗೆ ತಗುಲಿ ಮೃತಪಟ್ಟಿರುತ್ತಾನೆ.

Wednesday, September 19, 2012

Daily Crimes Report Dated:18/09/2012

ಮೋಟಾರ್‌ ಸೈಕಲ್‌ ಕಳ್ಳತನ
ಬೀರೂರು ಪೊಲೀಸ್ ಠಾಣೆ ಮೊ.ಸಂ.111/2012 ಕಲಂ 379 ಐಪಿಸಿಃ – ದಿನಾಂಕ 16/05/2012 ರಂದು ಪಿರ್ಯಾದುದಾರರಾದ ಅಭಿಷೇಕ್‌ ಇವರು ಅಶೋಕನಗರದ ಬಾವಿಮನೆಯಲ್ಲಿ ತನ್ನ ಬಾಬ್ತು KA.18.S.3757ನೇ ನಂಬರಿನ ಹೀರೋಂಹೊಂಡಾ ಸ್ಪ್ಲಂಡರ್‌ಪ್ಲಸ್‌ ಮೋಟಾರ್ ಬೈಕನ್ನು ನಿಲ್ಲಿಸಿದ್ದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ,  ಇದರ ಅಂದಾಜು ಬೆಲೆ 30,000/- ಕಳ್ಳತನ ಮಾಡಿಕೊಂಡು ಹೋಗಿರುವ ಬೈಕನ್ನು ಇಲ್ಲಿಯವರೆಗೆ ಹುಡುಕಾಡಿದ್ದು ಎಲ್ಲಿಯೂ ಸಿಗದ್ದಿದ್ದರಿಂದ ಈ ದಿವಸ  ತಡವಾಗಿ ಪೊಲೀಸ್ ಠಾಣೆಗೆ ಬಂದು ಕ್ರಮ ಕೈಗೊಳ್ಳಲು  ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ,
ಹೆಂಗಸು ಕಾಣೆ
ಕಡೂರು ಪೊಲೀಸ್ ಠಾಣೆ ಮೊ.ಸಂ.184/2012 ಕಲಂ ಹೆಂಗಸು ಕಾಣೆಃ– ದಿನಾಂಕ 08/09/2012 ರಂದು ಪಿರ್ಯಾದುದಾರರಾದ ಅರ್ಮುಗಂ ಕಡೂರು ಟೌನ್‌ ವಾಸಿ ಇವರ  ಪತ್ನಿಯಾದ ಲತಾ ವಯಸ್ಸು 45 ಇವರು ಸಿ. ಪಿ.ಸಿ. ಕಾಲೋನಿ ಕಡೂರಿನಲ್ಲಿರುವ ತಮ್ಮ ಮನೆಯಿಂದ ಬೀರೂರು ರೈಲ್ವೆ ನಿಲ್ದಾಣದ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋರಟು ಹೋಗಿರುತ್ತಾರೆ. ಅದಿನಿಂದ ಇಂದಿನವರೆಗೂ ಪಿರ್ಯಾದಿ ಮತ್ತು ಸಂಬಂದಿಕರು ಸ್ನೇಹಿತರ ಮನೆಗಳಲ್ಲಿ ಹಾಗೂ ಬೇರೆ ಊರುಗಳಲ್ಲಿ ವಿಚಾರಿಸಿದಾಗ ಪಿರ್ಯಾದಿ ಪತ್ನಿ ಲತಾ ಎಲ್ಲಿಯೂ ಹೋಗಿರುವ ಬಗ್ಗೆ ಪತ್ತೆಯಾಗಿರುವುದಿಲ್ಲ.

Tuesday, September 18, 2012

Daily Crimes Report Dated:17/09/2012

ಅಪಘಾತದಲ್ಲಿ ಸಾವು
ಸಂಚಾರ ಪೊಲೀಸ್ ಠಾಣೆ ಮೊ.ಸಂ.106/2012 ಕಲಂ 279 304(ಎ) ಐಪಿಸಿಃ – ದಿನಾಂಕ 17/09/2012 ರಂದು 2030 ಗಂಟೆಯಲ್ಲಿ ಪಿರ್ಯಾದುದಾರರಾದ ಶಾರದಮ್ಮ ಇವರ ಗಂಡ ಗೋಪಾಲಶೆಟ್ಟಿ ರವರು ಫಡರಲ್ ಬ್ಯಾಂಕಿನ ಎ.ಟಿ.ಎಂ ನಲ್ಲಿ ಸೆಕ್ಯೂರಿಟಿ ಗಾರ್ಡ್ ಕರ್ತವ್ಯ ಮುಗಿಸಿಕೊಂಡು ತಮ್ಮ ಬಾಬ್ತು ಕೆಎ-18-ಜೆ-7974 ಟಿವಿಎಸ್ ಎಕ್ಸ್ಲ್ಎಲ್ ನಲ್ಲಿ ಮನೆಗೆ ಹೋಗಲು, ನಗರದ ಹಾಲೇನಹಳ್ಳಿ ಮಸೀದಿ ಹತ್ತಿರ ರಸ್ತೆಯಲ್ಲಿ ಹೋಗುತ್ತಿರುವಾಗ, ಎದುರಿನಿಂದ ಬಂದ ಕೆಎ-05-ಎಎ-2555 ಇನೋವಾ ಕಾರಿನ ಚಾಲಕ ಅತೀವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ್ದರಿಂದ, ಗೋಪಾಲಶೆಟ್ಟಿ ರವರು ಕೆಳಗೆ ಬಿದ್ದು ಟಿವಿಎಸ್ ಜಖಂಗೊಂಡು, ಗೋಪಾಲಶೆಟ್ಟಿ ರವರಿಗೆ ತೀವ್ರ ಸ್ವರೂಪದ ಪೆಟ್ಟಾಗಿ ಚಿಕಿತ್ಸೆಗಾಗಿ ಸರ್ಕಾರಿ ಎಂ. ಜಿ. ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಗೋಪಾಲಶೆಟ್ಟಿ ರವರು ಮೃತಪಟ್ಟಿರುತ್ತಾರೆ.
ಮನುಷ್ಯ ಕಾಣೆ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ.199/2012 ಕಲಂ ಮನುಷ್ಯ ಕಾಣೆಃ– ದಿನಾಂಕ 17/09/2012 ರಂದು ಕೋಟೆಕ್ಯಾಂಪ್‌ ತರೀಕೆರೆ ಪಟ್ಟಣದಿಂದ ಪಿರ್ಯಾದುದಾರರಾದ ನಸ್ರಿನಾಬಾನು ಇವರ ಪತಿ ಮಹಮದ್ ಜಿಯಾವುಲ್ಲಾ ರವರು ಹಾಲಿ ತರೀಕೆರೆ ನಗರದ ಪುರಸಭೆ ಸದಸ್ಯರಾಗಿದ್ದು ದಿನಾಂಕ:-20-09-2012 ರಂದು ತರೀಕೆರೆ ಪುರಸಭೆಯ ಅಧ್ಯಕ್ಷರ ಚುನಾವಣೆ ನಡೆಯಲಿದ್ದು ಕಾಂಗ್ರೇಸ್ ಪಕ್ಷದ ವತಿಯಿಂದಾ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪಧಿಸಲು ಅಧಿಕೃತ ಅಭ್ಯರ್ಥಿಯಾಗಿದ್ದು ಈ ದಿನ ದಿನಾಂಕ:-17-09-2012 ರಂದು ಬೆಳಿಗ್ಗೆ 9-30 ಗಂಟೆಯಿಂದಾ ಮಹಮದ್ ಜಿಯಾವುಲ್ಲಾ ರವರು ಕಾಣೆಯಾಗಿದ್ದು ಇದ್ದಕ್ಕಿದ್ದಂತೆ ಕಾಣೆಯಾಗಿರುವುದು ಬಹಳಷ್ಠು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು ಸದರಿಯವರನ್ನು ಪತ್ತೆಮಾಡಿಕೊಟ್ಟು ಚುನಾವಣೆಯಲ್ಲಿ ಸ್ಪರ್ದಿಸಲು ಅನುವುಮಾಡಿಕೊಡಲು ಕೋರಿದ್ದು, ಇತ್ಯಾದಿ

Monday, September 17, 2012

Daily Crimes Report Dated:16/09/2012

ಜೂಜಾಟ ಪ್ರಕರಣ
ಲಿಂಗದಹಳ್ಳಿ ಪೊಲೀಸ್ ಠಾಣೆ ಮೊ.ಸಂ.52/2012 ಕಲಂ 87 ಕೆ.ಪಿ.ಆಕ್ಟ್‌ – ದಿನಾಂಕ 16/09/2012 ರಂದು ಬೆಳಿಗ್ಗೆ 1010 ಗಂಟೆಯಲ್ಲಿ ಹುಲಿತಿಮ್ಮಾಪುರ ಗ್ರಾಮದ ಸರ್ಕಾರಿ ಗೋಮಾಳದಲ್ಲಿ 8ಜನರು ಬಿಳಿ ಪ್ಲಾಸ್ಟಿಕ್ ಟಾರ್ಪಲ್ ಹಾಸಿ ಕೊಂಡು ದುಂಡಾಗಿ ಕುಳಿತು ಪಂಚರನ್ನಾಗಿ ಬರಮಾಡಿಕೊಂಡು ಹಾಳೂರು ಇಸ್ಪೀಟ್ ಎಲೆಗಳ ಸಹಾಯದಿಂದ ಒಳಗೆ ಹೊರಗೆ ಎಂದು ಜೂಜಾಟ ಆಡುತ್ತಿದ್ದು ಕಂಡು ಬಂದಿತು ಪಂಚರ ಸಮಕ್ಷಮ ಸಿಬ್ಬಂದಿ ಯವರೊಂದಿಗೆ ಸುತ್ತು ವರೆದು ಜೂಜಾಟ ಆಡುತ್ತಿದ್ದವರನ್ನು ಹಿಡಿಯಲು ಹೋದಾಗ ಓಡಲು ಪ್ರಯತ್ನ ಪಟ್ಟವರನ್ನು ಹಿಡಿಯುವಾಗ್ಗೆ  ಒಬ್ಬ ಆಸಾಮಿ ಪರಾರಿಯಾಗಿದ್ದು ಉಳಿದ 7ಜನರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಸಂತೋಷ ಹುಲಿತಿಮ್ಮಾಪುರ ಎಂದು ತಿಳಿಸಿದ್ದು ಇವರುಗಳು ಜೂಜಾಟ ಆಡಲು ಬಳಸಿದ್ದ  ಬಿಳಿ ಹಳೆ ಪ್ಲಾಸ್ಟಿಕ್ ಟಾರ್ಪಲ್ ಅದರ ಮೇಲೆ ಇದ್ದ 52 ಇಸ್ಪೀಟ್ ಎಲೆಗಳು ಹಾಗೂ 860/- ರೂ ನಗದು ಹಣವನ್ನು 10-30 ಗಂಟೆಯಿಂದ 11-30  ಗಂಟೆವರೆಗೆ ಬರೆದ ಮಹಜರನಲ್ಲಿ ಅಮಾನತ್ತು ಪಡಿಸಿ ಕೊಂಡು ಕಾನೂನು ಬಾಹಿರವಾಗಿ ಜೂಜಾಟ ವಾಡುತ್ತಿದ್ದ 7 ಜನರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ 11.45 ಗಂಟೆಗೆ ಆರೋಪಿಗಳು ವಿರುದ್ದ ಸರ್ಕಾರದ ಪರವಾಗಿ ಕೇಸು ದಾಖಲಿಸಿರುತ್ತೆ.

Sunday, September 16, 2012

Daily Crimes Report Dated:15/09/2012

ಮೋಟಾರ್‌ ಸೈಕಲ್‌ ಕಳ್ಳತನ
ನಗರ ಪೊಲೀಸ್ ಠಾಣೆ ಮೊ.ಸಂ.149/2012 ಕಲಂ 379 ಐಪಿಸಿ – ದಿನಾಂಕ 07/08/2012 ರಂದು 0830 ಗಂಟೆಯಲ್ಲಿ ಐಜಿ ರಸ್ತೆಯ ಸಿಟಿ ವೈನ್ಸ್‌‌ ಹತ್ತಿರ ಪಿರ್ಯಾದುದಾರರಾದ ಚಂದ್ರಶೇಖರ ವಿಜಯಪುರ ವಾಸಿ ಇವರು ಕ್ರಕ್ಸ್ ಬೈಕ್ ನಂ ಕೆಎ 18- ಜೆ  6102  ನ್ನು ರಾತ್ರಿ ನಿಲ್ಲಿಸಿ ಹೋಗಿದ್ದು,  ರಾತ್ರಿ ವಾಪಸ್ ಬಂದು ನೋಡಿದಾಗ, ಬೈಕ್ ಇರಲಿಲ್ಲ, ಇದರ ಅಂದಾಜು ಬೆಲೆ 30.000/- ಆಗಿರುತ್ತೆ.
ಹಣ ಕಳುವು
ಬಸವನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 78/2012 ಕಲಂ 379 ಐಪಿಸಿ – ದಿನಾಂಕ 15/09/2012 ರಂದು 1100 ಗಂಟೆಯಲ್ಲಿ ನಗರದ ಸಿಂಡಿಕೇಟ್‌ ಬ್ಯಾಂಕ್‌ ಬಳಿ ಪಿರ್ಯಾದುದಾರರಾದ ಇವರುಸಿಂಡಿಕೇಟ್ ಬ್ಯಾಂಕಿನಿಂದ 36,000-00 ರೂ ನಗದು ಹಣವನ್ನು ಡ್ರಾ ಮಾಡಿಕೊಂಡು ತನ್ನ ಬ್ಯಾಗಿನಲ್ಲಿ ಹಾಕಿಕೊಂಡು ತನ್ನ ಬಾಬ್ತು ಟಿ ವಿಎಸ್,ಎಕ್ಸಎಲ್ ನ ಬೈಕಿ  ಕೊಂಡಿಗೆ ಸಿಕ್ಕಿಸಿ ಹಿಂದುಗಡೆ ಅಡ್ಡ ನಿಂತಿದ್ದ ಬೈಕನ್ನು ಬೇರೆ ಕಡೆಗೆ ನಿಲ್ಲಿಸಿ ವಾಪಾಸ್ ಬಂದು ನೋಡಲಾಗಿ ಸದರಿ ಬ್ಯಾಗ್ ಕಾಣಿಸದೇ ಇದ್ದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಇತ್ಯಾದಿ.
ಜೂಜಾಟ ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ. 196/2012 ಕಲಂ 87 ಕೆ.ಪಿ.ಆಕ್ಟ್– ದಿನಾಂಕ 15/09/2012 ರಂದು 1800 ಗಂಟೆಯಲ್ಲಿ ಬಾಪೂಜಿ ಕಾಲೋನಿ ಬಳಿ ಜೂಜಾಟ ಆಡುತ್ತಿರುವ ಬಗ್ಗೆ ಪಿಎಸ್‌‌ಐ ರವರು ಠಾಣೆಯಲ್ಲಿರುವಾಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ಹೋದಾಗ, ಆರೋಪಿಗಳು ಹೆಂಚಿನ ತುಂಡಿನ ಮೇಲೆ 1 ರೂ ನ [ ನ್ಯಾಣ್ಯಗಳನ್ನು ಇಟ್ಟುಕೊಂಡು ತೂರೆಬಿಲ್ಲೆ ಜೂಜಾಟ ವಾಡುತ್ತಿದ್ದವರನ್ನು ಸಿಬ್ಬಂದಿಗಳ ಸಹಾಯ ದಿಂದ ವಶಕ್ಕೆ ಪಡೆದು ಕೃತ್ಯಕ್ಕೆ ಉಪಯೋಗಿಸಿದ ಒಂದು ಹೆಂಚಿನ ತುಂಡು, 1440/- ರೂ ನಗದು ಹಾಗೂ 1 ರೂ ನ 2 ನಾಣ್ಯಗಳನ್ನು ವಶಪಡಿಸಿಕೊಂಡು ಠಾಣೆಗೆ ಬಂದು ವರದಿ ನೀಡಿದ್ದಾಗಿದೆ. ಆರೋಪಿಗಳು ಓಡಿ ಹೋಗಿರುವುದಾಗಿರುತ್ತೆ.

Saturday, September 15, 2012

Daily Crimes Report Dated:14/09/2012

ದಲಿತರ ಮೇಲೆ ದೌರ್ಜನ್ಯ ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ.195/2012 ಕಲಂ 341 504 324 323 34 ಐಪಿಸಿ 3 ಕ್ಲಾಸ್‌‌(1)(10)ಎಸ್‌‌ಸಿಎಸ್‌‌ಟಿ – ದಿನಾಂಕ 13/09/2012 ರಂದು 2300 ಗಂಟೆಯಲ್ಲಿ ಅಮೃತಾಪುರ ಪಿರ್ಯಾದಿ ಚಂದ್ರನಾಯ್ಕಿ ಇವರಿಗೆ ಆರೋಪಿಗಳಾದ ಜಯಣ್ಣ ಹಾಗೂ ಇತರೆ 3 ಜನರು  ಶಕ್ರನಾಯ್ಕ ರವರ ಮಗ ರಾಜಾನಾಯ್ಕ ಎಂಬುವರನ್ನು ಹೊಡೆದು ಸಾಯಿಸಿದ ಬಗ್ಗೆ ಪೊಲಿಸ್ ಠಾಣೆಗೆ ದೂರು ನೀಡಿದ್ದೀಯ ಎಂದು ಪಿರ್ಯಾದಿಗೆ ಗ್ರಾಮದ ಬಸ್ ನಿಲ್ದಾಣದ ಬಳಿ ದಾರಿಯಲ್ಲಿ ಅಡ್ಡಗಟ್ಟಿ ಅವಾಚ್ಯಶಬ್ದಗಳಿಂದ ಬೈದು ಯಾವಾಗಲೂ ನಮ್ಮ ಜಾತಿಯ ವಿರುದ್ದ ಬರುತ್ತೀಯ ಎಂದು ಸುಕಾಲಿ ಸೂಳೆಮಗನೆ ಎಂದು ಜಾತಿಯನ್ನು ಹಿಯಾಳಿಸಿ ಪಿರ್ಯಾದಿಗೆ ದೊಣ್ಣೆಗಳಿಂದ ಕೈಗಳಿಂದ ಹೊಡೆದು ದೌರ್ಜನ್ಯವೆಸಗಿರುತ್ತಾರೆ ಇತ್ಯಾದಿ.
ಕಳುವು ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.300/2012 ಕಲಂ 379 ಐಪಿಸಿ  – ದಿನಾಂಕ 13/09/2012 ರಂದು ರಾತ್ರಿ ವೇಳೆಯಲ್ಲಿ ಪಿರ್ಯಾದುದಾರರಾದ ಪ್ರಕಾಶ್‌ ನರಿಗುಡ್ಡನಹಳ್ಳಿ ವಾಸಿ ಇವರ ಬಾಬ್ತು ಕೆಎ-18- 5764 ಕ್ಯಾಂಟರ್ ಗೂಡ್ಸ್ ವಾಹನವನ್ನು ಮನೆಯ ಹತ್ತಿರ ನಿಲ್ಲಿಸಿದ್ದು  ಬೆಳಗ್ಗೆ 06-00 ಗಂಟೆಯಲ್ಲಿ ನೋಡಲಾಗಿ  ವಾಹನದಲ್ಲಿದ್ದ ಬ್ಯಾಟರಿ. ಜಾಕ್ ಮತ್ತು  ಲಿವರ್ ಗಳನ್ನು ಯಾರೋ ಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಬೆಲೆ ` ರೂ 8000/- ಗಳಾಗಿರುತ್ತೆ.

Friday, September 14, 2012

Daily Crimes Report Dated:13/09/2012

ಹುಡುಗಿ ಕಾಣೆ
ಗ್ರಾಮಾಂತರ ಪೊಲೀಸ್ ಠಾಣೆ 298/2012 ಕಲಂ  ಹುಡುಗಿ ಕಾಣೆಃ- ದಿನಾಂಖ 11/09/2012 ರಂದು ರಾಂಪುರದಿಂದ ಪಿರ್ಯಾದುದಾರರಾದ ಪ್ರಶಾಂತ ಇವರ ತಂಗಿ ಕು. ಶ್ರೀದೇವಿ. 20 ವರ್ಷ. ಈಕೆಯು ಕೂಲಿ ಕೆಲಸದಿಂದ ಮನೆಗೆ ಬಂದು ಮನೆಯಲ್ಲಿದ್ದ ಎರಡು ಬಂಗಾರದ ಬೈನ್. ಒಂದು ಜೊತೆ ಓಲೆ. 30 ಸಾವಿರ ನಗದು ಹಣ ತೆಗೆದುಕೊಂಡು ಮನೆ ಬಿಟ್ಟು ಎಲ್ಲಿಯೋ ಹೋಗಿರುತ್ತಾಳೆ. ಇವಳ ಚಹರೆ ಗುರುತು. ಎತ್ತರ 5 1/2 ಅಡಿ, ಕಪ್ಪು ಮೈಬಣ್ಣ. ಬಿಳಿ ಚೂಡಿದಾರ್ ಧರಿಸಿರುತ್ತಾಳೆ. ಕನ್ನಡ. ತಮಿಳು ಮಾಡನಾಡುತ್ತಾಳೆ. ಎಡದೇ ಕಾಲು ಎಬ್ಬೆರಳಿನಲ್ಲಿ ಹಳೆ ಗಾಯದ ಗುರುತು ಇರುತ್ತೆ. ಸಂಬಂದಿಕರ ನೆಂಟರಿಷ್ಟರ ಮನೆಗಳಲ್ಲಿ ಇದುವರೆವಿಗೂ ಹುಡುಕಿದ್ದು ಪತ್ತೆಯಾಗಿರುವುದಿಲ್ಲ. 
ಕೊಲೆ ಪ್ರಕರಣ
ತರೀಕೆರೆ ಪೊಲೀಸ್ ಠಾಣೆ 194/2012 ಕಲಂ  302 ಐಪಿಸಿಃ- ದಿನಾಂಕ 13/09/2012 ರಂದು ಅಮೃತಾಪುರದಲ್ಲಿ ಪಿರ್ಯಾದಿ ಶ್ರೀಮತಿ ಸವಿತಾ ಇವರ ಗಂಡ ರಾಜಾನಾಯ್ಕ ಅಮೃತಾಪುರ ಗ್ರಾಮದ ಚಂದ್ರಮೌಳಿ ರವರ ತೋಟಕ್ಕೆ ಕೆಲಸಕ್ಕೆ ಹೋಗಿದ್ದು  ಆರೋಪಿ ರಾಜ ಪಿರ್ಯಾದಿ ಮನೆಗೆ ಬಂದು ಪಿರ್ಯಾದಿ ಗಂಡನನ್ನು ಕೇಳಿದ್ದು ಅದಕ್ಕೆ ಪಿರ್ಯಾದಿ ತನ್ನ ಗಂಡ ಚಂದ್ರಮೌಳಿ ರವರ ತೋಟಕ್ಕೆ ಕೆಲಸಕ್ಕೆ ಹೋದ ವಿಚಾರತಿಳಿಸಿದ್ದು ಆಗ ಆರೋಪಿಯು ಸೂಳೆಮಗ ನನ್ನ ಹತ್ತಿರ ಹಣ ಪಡೆದು ಕೆಲಸಕ್ಕೆ ಬರುತ್ತೇನೆ ಎಂದು ಬೇರೆಯವರ ತೋಟಕ್ಕೆ ಕೆಲಸಕ್ಕೆ ಹೋಗಿರುತ್ತಾನೆ ಅವನಿಗೆ ಸರಿಯಾಗಿ ಬುದ್ದಿಕಲಿಸುತ್ತೇನೆ ಎಂದು ಎಂದು ಹೇಳಿ ಚಂದ್ರಮೌಳಿರವರ ತೋಟಕ್ಕೆ ಹೋಗಿ ರಾಜಾನಾಯ್ಕನಿಗೆ  ಸ್ಥಳದಲ್ಲೇ  ಹೊಡೆದು ಆರೋಪಿಯು ಬೈಕಿನಲ್ಲಿ ತನ್ನ ತೋಟಕ್ಕೆ ರಾಜಾನಾಯ್ಕನನ್ನು ಕರೆದುಕೊಂಡು ಬಂದು ಮುಖಕ್ಕೆ,ಮರ್ಮಾಂಗಕ್ಕೆ ತೀವ್ರರೀತಿಯಲ್ಲಿ ಪೆಟ್ಟಾಗುವಂತೆ ಹೊಡೆದು ಸಾಯಿಸಿ ಅಡಿಕೆ ಮರಕ್ಕೆ ನೇತುಹಾಕಿದ್ದಾಗಿದೆ.

Thursday, September 13, 2012

Daily Crimes Report Dated:12/09/2012

ಅಪಘಾತದಲ್ಲಿ ಸಾವು
ಎನ್‌ಆರ್‌ಪುರ ಪೊಲೀಸ್ ಠಾಣೆ ಮೊ.ಸಂ.120/2012 ಕಲಂ 279 337 :- ದಿನಾಂಕ 12/09/2012 ರಂದು 0900  ಫಿರ್ಯಾದುದಾರರಾದ ರವಿಚಂದ್ರ ಹಾಗೂ ಸುರೇಶ ಇಬ್ಬರು ಹೀರೋ ಸ್ಪ್ಲೆಂಡರ್‌ಪ್ರೋ ಬೈಕಿನ್ನು  ಸುರೇಶನು ಓಡಿಸುತ್ತಿದ್ದು, ಎದುರುಗಡೆಯಿಂದ ಬಂದ ಗೂಡ್ಸ್‌ ಆಟೋ ಚಾಲಕ  ತನ್ನ ಬಾಬ್ತು ಗೂಡ್ಸ್‌‌ಆಟೋವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಬೈಕಿಗೆ ಡಿಕ್ಕಿಹೊಡೆಸಿ ಪರಿಣಾಮ, ಸುರೇಶನ ಮುಖಕ್ಕೆ  ಪೆಟ್ಟುಬಿದ್ದು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.
ಮೋಟಾರ್‌ ಸೈಕಲ್‌ ಕಳುವು

ಬೀರೂರು ಪೊಲೀಸ್ ಠಾಣೆ ಮೊ.ಸಂ.108/2012 ಕಲಂ 379 ಐಪಿಸಿ;- ದಿ:10-01-2012 ರಂದು ರಾತ್ರಿ ಪಿರ್ಯಾದುದಾರರಾದ ಲೋಕೇಶಪ್ಪ ಇವರು ತನ್ನ ಬಾಬ್ತು KA 18/K 972 ಹೀರೋಂಹೊಂಡಾ ಪ್ಯಾಷನ್  ಮೋಟಾರ್ ಬೈಕನ್ನು ಮನೆಯ ಮುಂದಿನ ಬಾಗಿಲಿನ ಹತ್ತಿರ ನಿಲ್ಲಿಸಿದ್ದನ್ನು ರಾತ್ರಿ ಯಾರೋ ಕಳ್ಳಲು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಪತ್ತೆಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ.

ಅಕ್ರಮ ಮದ್ಯ ವಶ

ಸಖರಾಯಪಟ್ಟಣ ಪೊಲೀಸ್ ಠಾಣೆ 89/2012 ಕಲಂ 34 ಕೆ.ಇ.ಆಕ್ಟ್ಃ- ದಿನಾಂಕ 12/09/2012 ರಂದು 0900 ಗಂಟೆಗೆ ಖಚಿತ ವರ್ತಮಾನದ ಮೇರೆಗೆ ಬಾಳೇನಹಳ್ಳಿ ಗ್ರಾಮಕ್ಕೆ ಹೋಗಿ ಇಬ್ಬರು ಅಸಾಮಿಗಳು  ಹಿಡಿದುಕೊಂಡು ವಿಚಾರಿಸಲಾಗಿ ಮದ್ಯ ತುಂಬಿದ 180 ಎಂ ಎಲ್ ನ   ಕ್ವಾರ್ಟರ್ ಬಾಟಲಿಗಳು ಇದ್ದವು     24 ಸ್ಯಾಶೆಟ್ ಗಳು  ಇದ್ದವು   ಒಟ್ಟು 14 ಕ್ವಾರ್ಟರ್ ಬಾಟಲಿಗಳು ಮಾರಾಟ ಮಾಡಲು ಇಟ್ಟುಕೊಂಡಿರುವುದಾಗಿ ತಿಳಿಸಿರುತ್ತಾರೆ.  ಮಧ್ಯದ ಅಂದಾಜು  ಬೆಲೆ  1200 ರೂಗಳಾಗಬಹುದು. ಆರೋಪಿಗಳ ಹೆಸರು  ನಾರಾಯಣಶೆಟ್ಟಿ ಮತ್ತು ಕೆಂಚಶೆಟ್ಟಿ ಎಂಬುದಾಗಿರುತ್ತೆ.