ಕಳುವು ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ.157/2012 ಕಲಂ 379 ಐಪಿಸಿ:– ದಿನಾಂಕ 04/10/2012 ರಂದು ಪಿರ್ಯಾದುದಾರರಾದ ಮಹೇಶ್ ಹಾರನಹಳ್ಳಿ ವಾಸಿ ಇವರು 1215 ಗಂಟೆಯಲ್ಲಿ ಮಾರುತಿ-800 ಕಾರು ನಂ:ಕೆಎ-36,ಪಿ-0303 ನ್ನು ಹೊಂದಿದ್ದು, ಊಟಕ್ಕೆಂದು ಎಂಜಿ ರಸ್ತೆಯ ಮಯೂರ ಹೋಟೆಲಿನ ಹಿಂಭಾಗದಲ್ಲಿ ಕಾರನ್ನು ನಿಲ್ಲಿಸಿzÀÄÝ ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ಕಾರಿನಲ್ಲಿ ನೋಕಿಯಾ ಮೊಬೈಲ್ ಇದ್ದು, ಅದರ ಐಎಂಇಐ ನಂ: 4045010563836 ಆಗಿದ್ದು, ಅದರ ಸಿಮ್ ನಂಬರ್ 9880769330 ಆಗಿರುತ್ತೆ. ಕಾರು 2000 ಮಾಡೆಲ್ ನ ಬಿಳಿಯ ಬಣ್ಣದ್ದಾಗಿದ್ದು, ಅದರ ಇಂಜಿನ್ ನಂ: 3319455, ಚಾಸಿಸ್ ನಂ: 2312079 ಆಗಿರುತ್ತೆ. ಇದರ ಅಂದಾಜು ಬೆಲೆ 47.000/- ರೂ.ಗಳಾಗಬಹುದು.
ಕೊಲೆ ಪ್ರಕರಣ
ಗೋಣಿಬೀಡು ಪೊಲೀಸ್ ಠಾಣೆ ಮೊ.ಸಂ.65/2012 ಕಲಂ 302 ಐಪಿಸಿ:– ದಿನಾಂಕ 12/10/2012 ರಂದು ಶ್ರೀಮತಿ ಓಮಿ ಬಾಯಿ ಕೋಂ ಸುರೇಶ ಕಮ್ಮರಗೋಡು ಎಸ್ಟೇಟ್‌ರವರು ಠಾಣೆಗೆ ಹಾಜರಾಗಿ ಲಿಖಿತ ದೂರಿನ ಸಾರಾಂಶವೇನೇಂದರೆ, ನನಗೆ ಜ್ವರ ಇದ್ದುದ್ದರಿಂದ ನಾನು ಎಸ್ಟೇಟಿಗೆ ಕೂಲಿಕೆಲಸಕ್ಕೆ ಹೋಗಿರಲಿಲ್ಲ ನನ್ನ ಗಂಡ ಸುರೇಶನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು ಹೇಳಿದಾಗ ಸುರೇಶನು ನನ್ನ ಬಳಿ ಹಣವಿಲ್ಲವೆಂದು ಹೇಳಿ ಜಗಳ ತೆಗೆದು ನೀನು ಯಾವಾಗಲೂ ಆರೋಗ್ಯ ಸರಿಯಿಲ್ಲ ಎಂದು ಹೇಳುತ್ತ ಇರುತ್ತೀಯಾ ಎಂದು ಹೇಳಿ ಮನೆಯೊಳಗೆ ಇದ್ದ ಕತ್ತಿಯನ್ನು ತೆಗೆದುಕೊಂಡು ನೀನು ದಿನ ಖಾಯಿಲೆ ಎಂದು ಹೇಳುತ್ತ ಇರುವುದ್ದಕ್ಕಿಂತ ಸಾಯುವುದೇ ಒಳ್ಳೆಯದು ಎಂದು ಹೇಳಿ ನನಗೆ ಕತ್ತಿಯಿಂದ ಕಡಿಯಲು ಬಂದಾಗ ನಾನು ತಪ್ಪಿಸಿಕೊಳಬೆಕೆನ್ನುವಷ್ಟರಲ್ಲಿ ನನ್ನ ಗಂಡ ಕಡಿದ ಪೆಟ್ಟು ನನ್ನ ಬಲಭಗದ ಹೆಗಲ ಮೇಲೆ ಎತ್ತಿಕೊಂಡಿದ್ದ ಮಗು ಶ್ವೇತಾಳ ಬಲ ಕುತ್ತಿಗೆಗೆ ಕತ್ತಿಯ ಪೆಟ್ಟು ಬಿದ್ದು ರಕ್ತ ಹೊರ ಚಿಮ್ಮಿದಾಗ ನನಗೆ ತಲೆ ಸುತ್ತು ಬಂದು ನಾನು ಕೆಳಗೆ ಬೀಳುವಾಗ ನನ್ನ ತಲೆ ಗೋಡೆಗೋ ಅಥವಾ ಬಾಗಿಲಿಗೋ ತಾಗಿ ನೋವಾಗಿರುತ್ತದೆ. ಆ ಸಮಯದಲ್ಲಿ ನಾನು ಕೂಗಿಕೊಂಡ ಶಬ್ದಕ್ಕೆ ಹೊರಗಡೆ ಇದ್ದ ಬೋಜಾನಾಯ್ಕ ಮತ್ತು ಶಂಕರಣ್ಣ ಓಡಿ ಬಂದರು ನನ್ನ ಗಂಡನನ್ನು ಹಿಡಿದುಕೊಂಡರು.ನನ್ನ ಮಗು ಶ್ವೇತಾಳನ್ನು ಕೊಲೆ ಮಾಡಿದ ನನ್ನ ಗಂಡ ಸುರೇಶನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾಗಿರುತ್ತದೆ.
ಸುಲಿಗೆ ಪ್ರಕರಣ
ಬಣಕಲ್ ಪೊಲೀಸ್ ಠಾಣೆ ಮೊ.ಸಂ.99/2012 ಕಲಂ 392 ಐಪಿಸಿ:– ದಿನಾಂಕ 11/10/2012 ರಂದು 2130 ಗಂಟೆಯಲ್ಲಿ ಪಿರ್ಯಾದುದಾರರಾದ ಪ್ರದೀಪಶೆಟ್ಟಿ ಉಡುಪಿ ವಾಸಿ ಇವರು ತಮ್ಮ ಸ್ನೇಹಿತರಾದ ಸಂತೋಷ, ಆನಂದ, ಉಮೇಶ ರವರೊಂದಿಗೆ ಸೇರಿ ಸಂತೋಷ ರವರ ಬಾಬ್ತು ಕಾರ್ ನಂಬರ್ ಕೆಎ-20-ಬಿ-973 ರ ಬೊಲೆರೋ ವಾಹನದಲ್ಲಿ ಚಿಕ್ಕಮಗಳೂರಿನ ತನ್ನ ಅಣ್ಣನವರ ಮನೆಗೆ ಹೋಗಲು ಕೊಟ್ಟಿಗೆಹಾರ ಮಾರ್ಗವಾಗಿ ಬಂದಿದ್ದು. ಕೊಟ್ಟಿಗೆಹಾರದಲ್ಲಿ ಊಟ ಮಾಡಲು ಸದರಿ ವಾಹನವನ್ನು ನಿಲ್ಲಿಸಿಕೊಂಡು ಎಲ್ಲರೂ ಸುದರ್ಶನ ಬಾರ್ & ರೆಸ್ ಟೋರೆಂಟ್ ಗೆ ಹೋದೆವು. ಊಟ ಮುಗಿಸಿ ಹೊರಗೆ ಬಂದಾಗ ಯಾರೋ ನಾಲ್ಕು ಜನ ಸ್ಥಳಿಯರು ವಿನಾ ಕಾರಣ ನಮ್ಮೊಂದಿಗೆ ಜಗಳ ತೆಗೆದು ಕೈಯಿಂದ ನಮ್ಮ ನಾಲ್ಕು ಜನರಿಗೂ ಮೈ ಕೈಗೆ ಹೊಡೆದು ನೋವುಂಟು ಮಾಡಿದ್ದಲ್ಲದೆ ಆ ನಾಲ್ಕು ಜನರಲ್ಲಿ ಒಬ್ಬನೂ ನನ್ನ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಹಾಗೂ ಕಿಸೆಯಲ್ಲಿದ್ದ 6000/-ರೂ ಗಳನ್ನು ಬಲತ್ಕಾರವಾಗಿ ಕಸಿದು ಕೊಂಡಿರುತ್ತಾರೆ. ಕೊರಳಿನಲ್ಲಿದ್ದ ಚಿನ್ನದ ಸರ ಸುಮಾರು 60 ಗ್ರಾಂ ಆಗಬಹುದು ಅದರ ಅಂದಾಜು ಬೆಲೆ 2 ಲಕ್ಷ ರೂಗಳು ಆಗುತ್ತದೆ. ಸದರಿ ನಾಲ್ಕು ಜನ ಅಸಾಮಿಗಳು ನಮಗೆ ಹೊಡೆದು ನನ್ನ ಕೊರಳಿನಲ್ಲಿದ್ದ ಚಿನ್ನದ ಸರ ಹಾಗೂ 6000/- ರೂ ಗಳನ್ನು ಕಿತ್ತುಕೊಂಡು ನಂತರ ಅಲ್ಲಿಂದ ಓಡಿ ಹೋಗಿರುತ್ತಾರೆ. ನಂತರ ನಾವು ಅಲ್ಲಿಯೇ ಸ್ವಲ್ಪ ಹೊತ್ತು ಇದ್ದು ಕೊಟ್ಟಿಗೆಹಾರ ಗ್ರಾಮಸ್ಥರಲ್ಲಿ ವಿಚಾರ ಮಾಡಲಾಗಿ ಅವರುಗಳು 1) ಕೊಡೇಬೈಲ್ ವಾಸಿ ಪಾಪು 2) ಪೂರ್ಣೆಶ, ಹಾಂದಿ ವಾಸಿ 3) ಸಚಿನ್ ಬಿ.ಹೊಸಳ್ಳಿ ವಾಸಿ 4) ದಿಲೀಪ ಬಣಕಲ್ ವಾಸಿ ಎಂದು ತಿಳಿಸಿದರು. ಇತ್ಯಾದಿ.
ಅಪಘಾತದಲ್ಲಿ ಸಾವು
ತರೀಕೆರೆ ಪೊಲೀಸ್ ಠಾಣೆ ಮೊ.ಸಂ.211/2012 ಕಲಂ 279 337 304(ಎ) ಐಪಿಸಿ:– ದಿನಾಂಕ 11/10/2012 ರಂದು 2315 ಗಂಟೆಯಲ್ಲಿ ತರೀಕೆರೆ ನಗರದ ಗಣಪತಿ ಪೆಂಡಾಲ್ ಮುಂಭಾಗದಲ್ಲಿ ಆರೋಪಿ ಭರತ್ GJ.-3, AX-19 ನೇ ಬಸ್ಸನ್ನು ಅತಿವೇಗ ಮತ್ತು ಅಜಾಗರುಕತೆಯಿಂದಾ ಚಾಲನೆಮಾಡಿಕೊಂಡು ಬಂದು ಎದುರುಗಡೆಯಿಂದಾ ಬಂದ ಆಟೋ ನಂ ಕೆ.ಎ.14-4621 ನೇ ಆಟೋಕ್ಕೆ ಅಪಘಾತ ಪಡಿಸಿದ ಪರಿಣಾಮ ಆಟೋ ಮುಂಬಾಗ ಪೂರ್ಣ ಜಖಂಗೊಂಡು ಆಟೋವನ್ನು ಚಾಲನೆಮಾಡುತ್ತಿದ್ದ ಮತಿಕ್ ರವರಿಗೆ ಬಲಗೈ ಬೆರಳು ಬಲದೇ ಕಣ್ಣಿನ ಪಕ್ಕೆಗೆ ಪೆಟ್ಟುಬಿದಿದ್ದು ಆಟೋದಲ್ಲಿ ಪ್ರಯಾಣಿಸುತ್ತಿದ್ದ ನೌಷದ್ ಗೆ ಬಲದೇ ತೊಡೆ ಮಂಡಿಯ ಕೆಳಬಾಗ ತಲೆಗೆ ಗದ್ದಕ್ಕೆ ಹಾಗು ಸರದಾರ್ ಅಹಮದ್ ಖಾನ್ ರವರಿಗೆ ಬೆನ್ನಿಗೆ ಎದೆಗೆ ಕೈ ಕಾಲು ಗಳಿಗೆ ಪೆಟ್ಟುಬಿದ್ದು ರಕ್ತಗಾಯ ವಾಗಿರುತ್ತದೆ, £Ë±Ázï 30 ªÀµÀð aQvÉì ¥sÀ®PÁjAiÀiÁUÀzÉà ªÀÄÈvÀ ¥ÀnÖgÀÄvÁÛ£É.
ಅಪಘಾತದಲ್ಲಿ ಸಾವು
ತರೀಕೆರೆ ಪೊಲೀಸ್ ಠಾಣೆ ಮೊ.ಸಂ.213/2012 ಕಲಂ 279 304(ಎ) ಐಪಿಸಿ:– ದಿನಾಂಕ 12/10/2012 ರಂದು 1725 ಗಂಟೆಯಲ್ಲಿ ತರೀಕೆರೆಯ ಎಲ್‌ಐಸಿ ಕಛೇರಿ ಮುಂಭಾಗದ ಎನ್‌ಹೆಚ್ 206ರ ಡಿ.ರಮೇಶ್ ಬಿನ್ ಕೊಂಡಲ್ ರಾವ್ ಕೆ.ಎ.14-ಯು.2914 ಸಿಟಿ 100 ಬೈಕಿನಲ್ಲಿ ರಸ್ತೆಯ ಎಡಭಾಗದಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದಾ ಕೆ.ಎ.51-ಎಂಬಿ.5935ನೇ ಮಾರತಿ ಸ್ವಿಪ್ಟ್ ಕಾರನ್ನು ಅದರ ಚಾಲಕ ಅತಿವೇಗ ಹಾಗು ಅಜಾಗರುಕತೆಯಿಂದಾ ಚಾಲನೆಮಾಡಿಕೊಂಡು ಬಂದು ಬೈಕ್ ಸವಾರನಿಗೆ ಅಪಘಾತ ಮಾಡಿದ ಪರಿಣಾಮ ತಲೆಗೆ ಕಿವಿಗೆ ಹಾಗು ಮೈ ಕೈಗೆ ತೀವ್ರತರ ಪೆಟ್ಟು ಬಿದ್ದು ರಕ್ತಸ್ರಾವ ವಾಗಿದ್ದು ಕಾರ್ ಚಾಲಕನು ಕಾರನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ ಪಿರ್ಯಾದುದಾರರು ಪೊಲೀಸ್ ನವರಿಗೆ ತಿಳಿಸಿ ಪೆಟ್ಟು ಬಿದ್ದ ರಮೇಶ್ ರವರನ್ನು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮೃತಪಟ್ಟಿದ್ದಾಗಿದೆ.
ಕಳುವು ಪ್ರಕರಣ
ಕಡೂರು ಪೊಲೀಸ್ ಠಾಣೆ ಮೊ.ಸಂ.206/2012 ಕಲಂ 380 ಐಪಿಸಿ:– ದಿನಾಂಕ 12/10/2012 ರಂದು ಪಿರ್ಯಾದಿ ಕೃಷ್ಣಮೂರ್ತಿ ಕಡೂರು ಟೌನ್ ವಾಸಿ ಇವರು ದೂರು ನೀಡಿದ್ದು, ದಿನಾಂಕ 10/10/2012ರಂದು ಎಸ್‌ಜಿಕೆ ಜ್ಯೂಯಲರಿ ಶಾಪ್‌ನಲ್ಲಿ ಪಿರ್ಯಾದಿಯವರು ಸ್ಟಾಕ್ ಚಕ್ ಮಾಡಿದಾಗ ಸ್ಟಾಕ್‌ನಲ್ಲಿ 21 ಗ್ರಾಂ ತೂಕದ ಚಿನ್ನದ ಸರ ಕಾಣೆಯಾಗಿದ್ದು, ಸಿಸಿ ಕ್ರಾಮಾರದಲ್ಲಿ ಪರಿಶೀಲಿಸಿದಾಗ ವ್ಯಾಪರ ಮಾಡಲು ಬಂದಿದ್ದ ಒಂದು ಬಂಜಾರು ಹೆಂಗಸು ಯಾರಿಗೂ ಗೊತ್ತಾಗದ ಹಾಗೆ ಸದರಿ ಚಿನ್ನದ ಸರವನ್ನು ಕಳ್ಳತನ ಮಾಡಿರುವುದು ಸಿಸಿ ಕ್ಯಾಮರಾದಲ್ಲಿ ಕಂಡುಬಂದಿದ್ದು, ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ.