ದಲಿತರ ಮೇಲೆ ದೌರ್ಜನ್ಯ ಪ್ರಕರಣ
ಗೋಣಿಬೀಡು ಪೊಲೀಸ್ ಠಾಣೆ ಮೊ.ಸಂ. 83/2012 ಕಲಂ 326 323 506 ಐಪಿಸಿ ಜೊತೆಗೆ 3 ಕ್ಲಾಸ್(1)(10)ಎಸ್‌ಸಿಎಸ್‌ಟಿ ಆಕ್ಟ್ - ಪಿರ್ಯಾದಿ ಪರಮೇಶ ನೀಡಿದ ಹೇಳಿಕೆ ದೂರಿನ ಸಾರಾಂಶವೇನೇಂದರೆ ದಿನಾಂಕ 24/11/2012 ರಂದು ಬೆಟ್ಟದಮನೆಯ ಗ್ರಾಮದಲ್ಲಿ ತನ್ನ ಹೆಂಡತಿ ಅಶ್ವಿನಿ ಮನೆಯೊಳಗೆ ಅಳುತ್ತ ಕುಳಿತಿದ್ದಳು ಕೇಳಿದ್ದಕ್ಕೆ ನಮ್ಮೂರಿನ ವಾಸಿ ಸಂತೋಷ ಎಂಬುವವನು ನಮ್ಮ ಮನೆಯ ಹತ್ತಿರ ಬಂದು ನನ್ನ ಹೆಂಡತಿ ಅಶ್ವಿನಿಯನ್ನು ಹೊರಗೆ ಬಾ ಎಂದು ಕರೆದು 100ರೂ ಕೊಡುತ್ತೇನೆಂದು ಮಲಗಲು ಬಾ ಎಂದು ಕರೆದು ಹಾಗೂ ಈಗ್ಗೆ 4 ತಿಂಗಳಿನಿಂದ ಇದೇ ರೀತಿ ತೊಂದರೆ ಕೊಡುತ್ತಿದ್ದಾನೆಂದು ಹೇಳಿದ್ದ ನಾನು ಸಂತೋಷನ ಮನೆಯ ಹತ್ತಿರ ಹೋದಾಗ ಸಂತೋಷ ಅವರ ತಂದೆ ಮಂಜುನಾಥ ತಾಯಿ ಪುಟ್ಟಮ್ಮ ಮತ್ತು ಸ್ನೇಹಿತನಾದ ಕುಮಾರ ಇದ್ದರು ನಾನು ಸಂತೋಷನಿಗೆ ಏಕೆ ನನ್ನ ಹೆಂಡತಿ ಅಶ್ವಿನಿಗೆ 100ರೂ ಕೊಡುತ್ತೇನೆ ಮಲಗಲು ಬಾ ಎಂದು ಕರೆದೆ ತಲೆ ಸರಿ ಇಲ್ಲವೆ ಎಂದು ಕೇಳಿದ್ದಕ್ಕೆ ಎಲ್ಲರೂ ಏನೋ ಹೊಲೆಯ ಮಾದಿಗ ಸೂಳೆ ಮಗನೇ ನಮ್ಮ ಮನೆಯ ಹತ್ತಿರ ನಿನ್ನ ಹೆಂಡತಿ ವಿಚಾರ ಕೇಳಲು ಬಂದಿದೀಯಾ ಎಂದು ಹೇಳಿದವರೆ ಕೊರಳಪಟ್ಟಿ ಹಿಡಿದು ಕೆಳಗೆ ಬಿಳಿಸಿ ಕಲ್ಲಿನಿಂದ ನನ್ನ ಎಡದೆ ಕಣ್ಣೆಗೆ ಹೊಡೆದ ಕೈಯಿಂದ ಮೈಕೈಗೆ ಗುದ್ದಿ ಇಷ್ಟಕ್ಕೆ ನಿನ್ನನ್ನು ಬಿಡುವುದಿಲ್ಲವೆಂದು ನಿನ್ನನ್ನು ಮತ್ತು ನಿನ್ನ ಹೆಂಡತಿ ಮಕ್ಕಳನ್ನು ಕೊಲೆ ಮಾಡುತ್ತೇವೆಂದು ಬೆದರಿಕೆ ಹಾಕಿರುತ್ತಾರೆ.
ದಲಿತರ ಮೇಲೆ ದೌರ್ಜನ್ಯ ಪ್ರಕರಣ
ಸಖರಾಯಪಟ್ಟಣ ಪೊಲೀಸ್ ಠಾಣೆ ಮೊ.ಸಂ. 109/2012 ಕಲಂ 307 323 504 34 ಐಪಿಸಿ 3(2)(5) ಎಸ್‌ಸಿಎಸ್‌ಟಿ ಆಕ್ಟ್ - ಫಿರ್ಯಾದಿ ಕರಿಯಪ್ಪ ಸರ್ಪನಹಳ್ಳಿ ಗ್ರಾಮ ಇವರ ಹೇಳಿಕೆಯ ಸಾರಾಂಶವೇನೆಂದರೆ, ತಾನು ಸಿದ್ದೇಗೌಡ ಎಂಬುವರ ಟ್ರ್ಯಾಕ್ಟರ್ ನಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದೆ ಈಗ್ಗೇ 10 ದಿವಸದ ಹಿಂದೆ ಟ್ರ್ಯಾಕ್ಟರ್ ಮಾಲೀಕರಾದ ಸಿದ್ದೇಗೌಡ ನೀನು ಟ್ರ್ಯಾಕ್ಟರನ್ನು ಜೋರಾಗಿ ಓಡಿಸುತ್ತೀಯಾ ಆದ್ದರಿಂದ ನೀನು ಕೆಲಸಕ್ಕೆ ಬರುವುದು ಬೇಡ ಎಂದು ಹೇಳಿ ಕೆಲಸ ಬಿಡಿಸಿದ್ದರು. ಪ್ರಕಾಶ, ಸಿದ್ದೇಗೌಡ ಮತ್ತು ಮಧು ಮೂರು ಜನರು ನನಗೆ ಆ ಸೂಳೇಮಗನನ್ನು ಟ್ರ್ಯಾಕ್ಟರ್ ಗೆ ಹತ್ತಿಸಿದ ಮೇಲೆ ನಮಗೆ ಏಳಿಗೆಯಿಲ್ಲ. ಹೊಲಯ ಸೂಳೇಮಗ ಎಂದು ಬೈಯುತ್ತಿದ್ದರಂತೆ ನಾನು ನಮ್ಮ ಊರಿನ ಕೊಲ್ಲಾಪುರದಮ್ಮ ದೇವಸ್ಥಾನದ ಕಡೆಗೆ ನಡೆದುಕೊಂಡು ಹೋಗುತ್ತಿದ್ದೆ. ಆಗ ದಾರಿಯಲ್ಲಿ ಸಿದ್ದೇಗೌಡ ನನಗೆ ಸಿಕ್ಕಿ ಬಾ ಇಲ್ಲಿ ಎಂದು ಕರೆದ ಆಗ ಏನು ಕೇಳೋಣವೆಂದು ನಾನು ಅವರ ಜೊತೆಯಲ್ಲಿ ಹೋದೆ. ಮೂರು ಜನರು ಸೇರಿಕೊಂಡು ನನ್ನ ಬಾಯಿಯನ್ನು ಮುಚ್ಚಿ ಹಿಡಿದುಕೊಂಡರು ಸಿದ್ದೇಗೌಡ ಕೈಯಿಂದ ನನ್ನ ಕಪಾಳಕ್ಕೆ ಹೊಡೆದ. ಮೂರು ಜನರು ಸೇರಿಕೊಂಡು ನನ್ನ ಕೊಲೆ ಮಾಡುವ ಉದ್ದೇಶದಿಂದ ಅವರು ತಂದಿದ್ದ ಒಂದು ಸೀರೆಯಿಂದ ನನ್ನ ಕುತ್ತಿಗೆಗೆ ಸುತ್ತಿ ಬಿಗಿದರು. ನಂತರ ಅಲ್ಲಿಯೇ ಇದ್ದ ಹಾಳು ಮನೆಯ ಒಳಗೆ ಎಳೆದುಕೊಂಡು ಹೋಗಿ ಅದೇ ಸೀರೆಯಿಂದ ಮನೆಯ ಒಳಗಡೆ ಇರುವ ಮೇಲ್ಭಾಗದ ತೀರಿಗೆ ನನ್ನ ಕುತ್ತಿಗೆಗೆ ನೇಣು ಹಾಕಿ ನೇತಾಕಿದರು. ಆ ನಂತರ ಅವರು ಮೂರು ಜನರು ನಮ್ಮ ಮನೆಯ ಬಾಗಿಲು ಹಾಕಿಕೊಂಡು ಅಲ್ಲಿಂದ ಹೊರಟು ಹೋದರು.ನನಗೆ ಪ್ರಜ್ಞೆ ತಪ್ಪಿ ಹೋಯಿತು.ನನಗೆ ಪ್ರಜ್ಞೆ ಬಂದಾಗ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆಂದು ಗೊತ್ತಾಯಿತು. ನಾನು ಸಿದ್ದೇಗೌಡರ ಟ್ರ್ಯಾಕ್ಟರ್ ನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಏಳಿಗೆಯಾಗಲಿಲ್ಲವೆಂದು ಅದೇ ಉದ್ದೇಶದಲ್ಲಿ ನನ್ನನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದ ಅವರು ಮೂರು ಜನರು ಸೇರಿಕೊಂಡು ನನ್ನ ಕುತ್ತಿಗೆ ಸೀರೆಯಿಂದ ನೇಣುಹಾಕಿ ಕೊಲೆ ಮಾಡಲು ಪ್ರಯತ್ನಪಟ್ಟಿರುತ್ತಾರೆ.
ಗಂಡಸು ಕಾಣೆ
ಕಡೂರು ಪೊಲೀಸ್ ಠಾಣೆ ಮೊ.ಸಂ. 230/2012 ಕಲಂ ಮನುಷ್ಯ ಕಾಣೆ - ದಿನಾಂಕ 13/12/2012 ರಂದು ಪಿರ್ಯಾದಿ ಶ್ರೀಮತಿ ಸಿದ್ದಿರಾಮಕ್ಕ ಬಂಟಿನಹಳ್ಳಿ ವಾಸಿ ಇವರ ಮಗನಾದ ಬಿ.ಎನ್. ಗಂಗಾಧರ 23 ವರ್ಷ ಈತನು ತಮ್ಮ ಮನೆಯಿಂದ ಹೇಳದೆ, ಕೇಳದೆ ಹೋದವನು ವಾಪಸ್ ಮನೆಗೆ ಬಾರದೆ ಇದ್ದು. ಸಂಬಂದಿಕರು ಸ್ನೇಹಿತರ ಮನೆಗಳಲ್ಲಿ ಹಾಗೂ ಬೇರೆ ಊರುಗಳಲ್ಲಿ ವಿಚಾರಿಸಿ ನಂತರ ತಡವಾಗಿ ಮನೆಗೆ ಬರಬಹುದೆಂದು ಕಾದಿದ್ದು. ಈ ದಿನ ತಡವಾಗಿ ದೂರು ನೀಡುತ್ತಿದ್ದು. ಹುಡುಕಿ ಕೊಡಲು ಕೋರಿ ನೀಡಿದ ದೂರು ಇತ್ಯಾದಿ.
ಅಪಘಾತದಲ್ಲಿ ಸಾವು
ಅಜ್ಜಂಫುರ ಪೊಲೀಸ್ ಠಾಣೆ ಮೊ.ಸಂ. 154/2012 ಕಲಂ 279 304(ಎ) ಐಪಿಸಿ- ಫಿರ್ಯಾದಿ ಧನಂಜಯ ಹೊಸಳ್ಳಿ ವಾಸಿ ಈತನು ಮತ್ತು ಲಕ್ಷ್ಮಣನು ಕೆಎ 18 6165 ಬೈಕಿನಲ್ಲಿ ಸೊಕ್ಕೆಗೆ ಬಂದವರು ಶಾನುಭೋಗನಹಳ್ಳಿ ಗೇಟಿನ ಹತ್ತಿರದ ಕಿತ್ತೂರು ಚನ್ನಮ್ಮ ವಸತಿ ಶಾಲೆ ಹತ್ತಿರದ ಗುಡಿಸಲು ಹೋಟೆಲಿನ ಹತ್ತಿರ ಫಿರ್ಯಾದಿ ಬೈಕಿಳಿದು, ಹೋಟಲಿನ ಹತ್ತಿರಕ್ಕೆ ಹೋಗುತ್ತಾ ಬೈಕಿನ ಮೇಲೆ ಕುಳಿತಿದ್ದ ದೇವರಾಜುನಿಗೆ ತರೀಕೆರೆ ಕಡೆಯಿಂದ ಬಂದ ಕೆ ಎ 18 ಟಿ 6686+6687 ಟ್ರಾಕ್ಟರ್ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕಿಗೆ ಗುದ್ದಿಸಿ ಅಪಘಾತ ಮಾಡಿದ್ದರ ಪರಿಣಾಮ ಕೆ ಎಲ್ ದೇವರಾಜು ಬಿನ್ ಲಕ್ಷ್ಮಣ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.
ಅಪಘಾತದಲ್ಲಿ ಸಾವು
ತರೀಕೆರೆ ಪೊಲೀಸ್ ಠಾಣೆ ಮೊ.ಸಂ. /2012 ಕಲಂ 279 338 304(ಎ) ಐಪಿಸಿ- ಪಿರ್ಯಾದುದಾರರಾದ ಗುಂಡಪ್ಪ ಇವರ ಬೈಕಿನ ಮುಂದೆ ಅವರ ಗ್ರಾಮದ ಕೃಷ್ಣ ಬಿನ್ ಚಂದ್ರಪ್ಪ ಈತನು ತನ್ನ ಬಾಬ್ತು ಟಿ.ವಿ.ಎಸ್. ನಂ.ಕೆ.ಎ.18-.ವಿ.3967 ರ ಬೈಕಿನಲ್ಲಿ ಹಿಂಬದಿ ಸೀಟಿನಲ್ಲಿ ಅವರ ಗ್ರಾಮದ ಮಣಿಕಂಠ ಬಿನ್ ನಾಗರಾಜ ರವರನ್ನು ಕೂರಿಸಿಕೊಂಡು ನಂದಿಹೊಸಳ್ಳಿ ಗ್ರಾಮಕ್ಕೆ ರಸ್ತೆಯ ಎಡಬಾಗದಲ್ಲಿ ಬೈಕಿನಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದಾ ಟ್ರಾಕ್ಟರ್ ಚಾಲಕನು ಅತಿವೇಗ ಹಾಗು ಅಜಾಗರುಕತೆಯಿಂದಾ ಚಾಲನೆ ಮಾಡಿಕೊಂಡು ಬಂದು ಟಿ.ವಿ.ಎಸ್.ಬೈಕಿಗೆ ಅಪಘಾತ ಮಾಡಿದ ಪರಿಣಾಮ ಬೈಕ್ ನಲ್ಲಿ ಇದ್ದವರು ಬೈಕ್ ಸಮೇತ ಕೆಳಕ್ಕೆ ಬಿದ್ದರು ಆಗ ಪಿರ್ಯಾದುದಾರರು ಬಿದ್ದವರನ್ನು ಉಪಚರಿಸಿ ನೋಡಲಾಗಿ ಕೃಷ್ಣ ಎಂಬುವನಿಗೆ ಮುಖಕ್ಕೆ ತಲೆಗೆ ತೀವ್ರ ತರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ,ಟಿ.ವಿ.ಎಸ್..ಬೈಕಿನ ಹಿಂಬದಿ ಕುಳಿತಿದ್ದ ಮಣಿಕಂಠ ರವರಿಗೆ ಬಲಕಾಲಿನ ತೊಡೆಗೆ ತೀವ್ರ ತರ ಪೆಟ್ಟು ಬಿದ್ದು ಮೂಳೆಮುರಿದಿದ್ದು ಬಲಕಣ್ಣಿನಬಳಿ ಹಾಗು ಮೈ ಕೈಗೆ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ ನಂತರ ಗಾಯಾಳುವನ್ನು 108 ಅಂಬುಲೆನ್ಸ್ ವಾಹನದಲ್ಲಿ ತರೀಕೆರೆ ಸರ್ಕಾರಿ ಆಸ್ಪತ್ರಗೆ ಕಳಸಿ ಮೃತನನ್ನು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ತಂದು ಹಾಕಿದ್ದು ಅಪಘಾತ ಮಾಡಿದ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ಕ್ರಮ ಕೋರಿ,
ಹುಡುಗಿ ಕಾಣೆ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ.242/2012ಕಲಂ ಹುಡುಗಿ ಕಾಣೆ -ಪಿರ್ಯಾದುದಾರಾದ ಇಮ್ರಾನ್‌ಖಾನ್ ಕೋಡಿಕ್ಯಾಂಪ್ ವಾಸಿ ಇವರ ನಾದಿನಿ 15 ವರ್ಷ ಪ್ರಾಯದ ತಮನ್ನಾ ಫೀರ್ದೂಸ್ ರವರು ಹಳಿಯೂರು ಗ್ರಾಮದಲ್ಲಿ 10 ನೇ ತರಗತಿ ಓದುತಿದ್ದು ದಿನಾಂಕ:-21-11-2012 ರಂದು ಬುಧುವಾರ ಬೆಳಿಗ್ಗೆ ತರೀಕೆರೆ ನಗರದ ನನ್ನ ಮನೆಯಿಂದಾ ಶಾಲೆಗೆ ಹೋದವಳು ಮನೆಗೆ ವಾಪಸ್ಸು ಬರದೇ ಎಲ್ಲಿಯೋ ಹೋಗಿದ್ದು ಕಾಣೆಯಾಗಿರುತ್ತಾಳೆ ತಮನ್ನಾ ಫೀರ್ದೂಸ್ ರವರನ್ನು ನೆಂಟರ ಮನೆ ಸಂಬಂದಿಕರ ಮನೆಯಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲಾ ಪತ್ತೆ ಮಾಡಿಕೊಡಲು ಕೋರಿರುತ್ತಾರೆ, ತಮನ್ನಾ ಫೀರ್ದೂಸ್ ರವರು ಆಂದ್ರ ಮೂಲದ ಲಾರಿ ಚಾಲಕ ಮತ್ತು ಕ್ಷೀನರ್ ರವರೊಂದಿಗೆ ಹೋಗಿರುವ ಬಗ್ಗೆ ಅನುಮಾನವಿದ್ದು ಪತ್ತೆ ಮಾಡಿಕೊಡಲು ಕೋರಿ,