ಕಳುವು ಪ್ರಕರಣ
ಕೊಪ್ಪ ಪೊಲೀಸ್ ಠಾಣೆ ಮೊ.ಸಂ- 12/2013 ಕಲಂ 457 380 ಐಪಿಸಿ – ನವೀನ್ ಕುಮಾರ್ ಬಿನ್ ಎಸ್ ಎಂ ಕೃಷ್ಣಮೂರ್ತಿ ಅನ್ನಫೂರ್ಣ ಸೇಲ್ಸ್ ಅಂಡ್ ಸರ್ವಿಸ್ ಮೇಲಿನಪೇಟೆ ಕೊಪ್ ಟೌನ್ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಸಾರಾಂಶವೆನೆಂಧರೆ ದಿನಾಂಕ 24/01/2013 ರಂದು ರಾತ್ರಿ ಅವರ ಭಾಫ್ತು ಅನ್ನಪೂರ್ಣ ಸೇಲ್ಸ್ ಅಂಡ್ ಸರ್ವಿಸ್ ನಲ್ಲಿ ರಾತ್ರಿಯ ವೇಳೆ ಯಾರೋ ಕಳ್ಳರು ಗ್ಯಾರೇಜಿನ ಹಿಂಬಾಗದ ಕಿಟಕಿಯನ್ನು ಹೊಡೆದು ಒಳ ಪ್ರವೇಶಿಸಿ ಒಳಗಡೆ ಇದ್ದ ಸಿ.ಸಿ ಟಿ.ವಿ ಮತ್ತು ಅದರ ಡಿವಿಆರ್ ರೆಕಾರ್ಡರ್ ಅನ್ನು ಕಳ್ಳತನಮಾಡಿಕೊಂಡು ಹೋಗಿರುತ್ತಾರೆಂದು ಇದರ ಒಟ್ಟು ಬೆಲೆ 20,000 /- ರೂಗಳಾಗಬಹುದೆಂದು ಪತ್ತೆಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ.
ಕಳುವು ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ- 17/2013 ಕಲಂ 379 ಐಪಿಸಿ – ದಿನಾಂಕ 17/12/2012 ರಂದು ಈ ಕೃತ್ಯ ನಡೆದಿದ್ದು, ಪಿರ್ಯಾದಿ ರುದ್ರೇಶ್ ಉಡಾವೆ ಗ್ರಾಮ ಇವರ ಬಾಬ್ತು ಟ್ರಾಕ್ಟರ್ ಹಾಗು ಇತರೆ 2 ಟ್ರಾಕ್ಟರ್ ಮತ್ತು ಜೆ.ಸಿ.ಬಿ ಯಂತ್ರಗಳನ್ನು ನಿಲ್ಲಿಸಿಕೊಂಡು ಸದರಿ ಟ್ರಾಕ್ಟರ್ ಚಾಲಕ ಬಸವರಾಜು ಹಾಗು ಇತರೆ ಟ್ರಾಕ್ಟರ್ ಚಾಲಕರುಗಳು ರಾತ್ರಿ ಮಲಗಿದ್ದು ಪಿರ್ಯಾದಿ ತಮ್ಮನಾದ ಬಸವರಾಜು ರವರು ಮಲವಿಸರ್ಜನೆಗೆಂದು ಹೋಗಿ ಬಂದಾಗ ಟ್ರಾಕ್ಟರ್ ಇದ್ದು ಅಂದು ಬೆಳಿಗ್ಗೆ 6-00 ಗಂಟೆಗೆ ಬೆಟ್ಟದಹಳ್ಳಿ ಗ್ರಾಮದ ವಾಸಿ ರಾಜಪ್ಪ ರವರು ಜೆ.ಸಿ.ಬಿ ಕೆಲಸ ಇದೆ ಎಂದು ಎಬ್ಬಿಸಿದಾಗ ಮೂರು ಟ್ರಾಕ್ಟರ್ ಗಳಲ್ಲಿ ಪಿರ್ಯಾದಿ ಬಾಬ್ತು ಕೆ.ಎ.18-4253 ಟ್ರಾಕ್ಟರ್ ಮತ್ತು ಅದರಲ್ಲಿ ಇದ್ದ ಡಬಲ್ ನೇಗಿಲು ಇರಲಿಲ್ಲ ಆಗ ಪಿರ್ಯಾದಿ ತಮ್ಮ ಬಸವರಾಜು ಗಾಬರಿಗೊಂಡು ಸುತ್ತಾ ಮುತ್ತಾ ಹುಡುಕಾಡಿ ಸುತ್ತಾಮುತ್ತಾ ಗ್ರಾಮಗಳಲ್ಲಿ ಹಾಗು ನೆಂಟರಮನೆಗಳಲ್ಲಿ ಹುಡುಕಾಡಿದ್ದು ಸಿಗದೇ EzÀÄÝ ಪತ್ತೆಯಾಗಿರುವುದಿಲ್ಲಾ ಇದರ ಬೆಲೆ ಸುಮಾರು 5,00,000-00 ರೂ ಆಗಿರುತ್ತೆ.
ದಲಿತರ ಮೇಲೆ ದೌರ್ಜನ್ಯ ಪ್ರಕರಣ
ಕಡೂರು ಪೊಲೀಸ್ ಠಾಣೆ ಮೊ.ಸಂ- 19/2013 ಕಲಂ 143 147 447 504 323 354 149 ಐಪಿಸಿ ಜೊತೆಗೆ 3 ಕ್ಲಾಸ್(1)(10)(11)ಎಸ್‌ಸಿಎಸ್‌ಟಿ ಆಕ್ಟ್ –ದಿನಾಂಕ 25/01/2013ರಂದು ಎಮ್ಮೆದೊಡ್ಡಿಯಲ್ಲಿ ಪಿರ್ಯಾದುದಾರರಾದ ಷರೀಪ್ @ಬಾಬಣ್ಣ ರವರ ತೋಟದ ಜಮೀನಿನಲ್ಲಿ ಟಮೋಟಕ್ಕೆ ದಾರ ಕಟ್ಟುತ್ತಿದ್ದು. ಪಿರ್ಯಾದಿಯ ಅಣ್ಣ ರವಿ ರವರು ಷರೀಪ್ ರವರ ಬೋರಿನಿಂದ ಟಮೊಟೋಗೆ ನೀರು ಬಿಡುತ್ತಿದ್ದಾಗ ಕಡೂರಿನ ವಾಸಿಗಳಾದ ಲಾಯರ್ ಶಿವಶಂಕರಪ್ಪ, ಚಡ್ಡಿಬಸಣ್ಣ ಹಾಗೂ ಇತರೆ 05 ರಿಂದ 06 ಜನರು ಗುಂಪುಕಟ್ಟಿಕೊಂಡು, ಪಿರ್ಯಾದಿ ಮತ್ತು ಇತರರು ಕೆಲಸ ಮಾಡುತ್ತಿದ್ದ ಷರೀಫ ರವರ ಜಮೀನಿಗೆ ಅಕ್ರಮವಾಗಿ ನುಗ್ಗಿ ನೀವು ಕಾಲುವೆಯಿಂದ ನೀರು ಬಿಡುತ್ತಿದ್ದೀರಿ ಎಂದು ಹೇಳೀ ಪೈಪ್ ಕೀಳಲು ಹೋದರು. ಆಗ ನಾವೆಲ್ಲರೂ ನಾವು ಕಾಲುವೆ ಯಿಂದ ನೀರು ಬಿಡುತ್ತಿಲ್ಲ. ಬೋರ್ ನಿಂದ ನೀರು ಬಿಡುತ್ತಿದ್ದೇವೆಂದು ಹೇಳಿದರೂ ಸಹ ಬಾಯಿಗೆ ಬಂದಂತೆ ತಾಯನಕ್ಯಾಯ, ಮಾದಿಗ ಸೂಳೆ ಮಕ್ಕಳಾ ಎಂದು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ರವಿಗೆ ಕೈಯಿಂದ ಹೊಡೆದು, ಬಿಡಿಸಲು ಹೋದ ಹೆಂಗಸರನ್ನು ಎಳೆದು ಬೀಳಿಸಿ ಹಲ್ಲೆ ಮಾಡಿದ್ದು. ಪಿರ್ಯಾದಿಯವರು 08 ತಿಂಗಳ ಗರ್ಭಿಣಿಯಾಗಿದ್ದು ಅವರನ್ನು ದೂಡಿ ಬೀಳಿಸಿದ್ದರಿಂದ ಹೊಟ್ಟೆಗೆ ಪೆಟ್ಟು ಬಿದ್ದಿದ್ದು. ಇತ್ಯಾದಿ.....