ಮೋಟಾರ್ ಸೈಕಲ್ ಕಳುವು
ನಗರ ಪೊಲೀಸ್ ಠಾಣೆ ಮೊ.ಸಂ- 105/2013 ಕಲಂ 379 ಐಪಿಸಿ– ದಿನಾಂಕ:18-04-2013 ರಂದು ಬೆಳಿಗ್ಗೆ 10-45 ಕ್ಕೆ ಉಮೇಶ್ ವಿಶೇಷ ಪೊಲೀಸ್ ಠಾಣೆ ರಾಮನಹಳ್ಳಿ ಇಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಇಲಾಖಾ ಬೈಕ್ ನಂ.ಕೆ-18 ಜಿ-766 ಕೆಂಪು ಬಣ್ಣದ್ದನ್ನು ದಿನಾಂಕ: 17-04-2013 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಮೋಟಾರ್ ಸೈಕಲ್ ನ್ನು ಐ ಜಿ ರಸ್ತೆಯ ಕೇರಳಾಪುರ ಹೋಟೆಲ್ ಮುಂಬಾಗ ನಿಲ್ಲಿಸಿ ಹೋಗಿದ್ದು ನಂತರ ಸ್ವಲ್ಪ ಸಮಯ ಬಿಟ್ಟು ಬಂದು ನೋಡಿದಾಗ ನಾನು ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ.ನಂತರ ಎಲ್ಲಾ ಕಡೆ ಹುಡುಕಾಡಿ ನಂತರ ನನ್ನ ಸ್ನೇಹಿತರಲ್ಲಿ ವಿಚಾರ ಮಾಡಲಾಗಿ ಎಲ್ಲೂ ಸಿಗದಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಕಳುವಾಗಿರುವ ಇಲಾಖಾ ಬೈಕ್ ನಂ ಕೆಎ-18 ಜಿ-766 ಕೆಂಪು ಬಣ್ಣದ ಬೈಕ್ ಆಗಿದ್ದು ಸದರಿ ಬೈಕ್ ನ ಇಂಜಿನ್ ನಂ DHGBPJ27107 ಮತ್ತು ಚಾರ್ಸಿ ನಂ D2DHDH22PC587148 ಆಗಿದ್ದು ಸದರಿ ಬೈಕ್ 2008 ರ ಮಾಡೆಲ್ ಆಗಿದ್ದು ಬೆಲೆ-49.000/- ರೂ ಆಗಿರುತ್ತೆ.ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೃಮ ಕೈಗೊಂಡಿರುತ್ತೆ.
ಅಪಘಾತದಲ್ಲಿ ಸಾವು
ತರೀಕೆರೆ ಪೊಲೀಸ್ ಠಾಣೆ ಮೊ.ಸಂ- 95/2013 ಕಲಂ 279 304(ಎ) ಐಪಿಸಿ ರೆ.ವಿ. 134(ಎ)(ಬಿ) ಐಎಂವಿ ಆಕ್ಟ್– ದಿನಾಂಕ:-18-04-2013 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಠಾಣಾ ಸರಹದ್ದಿನ ಹಾದಿಕೆರೆ ಗ್ರಾಮದಲ್ಲಿ ಪಿರ್ಯಾದಿ ಚಂದ್ರಪ್ಪ ಮಲ್ಲೇನಹಳ್ಳಿ ವಾಸಿ ಇವರ ಮಗ ಸಂಜಯ್ ಈತನು ಗ್ರಾಮದ ಹೈಸ್ಕೂಲ್ ಫೀಲ್ಡ್ ಬಳಿ ಆಟವಾಡಲು ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಸದರಿ ಗ್ರಾಮದ ಅನಂತ ಎಂಬುವವರು ಟ್ರಾಕ್ಟರ್ ನಂ ಕೆ.ಎ.18-ಟಿಎ.2515 ಇಂಜಿನ್ ಹಾಗು ಟ್ರೈಲರ್ ನಂ.ಕೆ.ಎ.18-ಟಿಎ.4220 ರಲ್ಲಿ ಎದುರುಗಡೆಯಿಂದಾ ಅಂದರೆ ಕೆರೆಕೋಡಿಯ ಕಡೆಯಿಂದಾ ಮಣ್ಣು ತುಂಬಿಕೊಂಡು ರಸ್ತೆಯ ತೀರ ಬಲಭಾಗಕ್ಕೆ ಟ್ರಾಕ್ಟರ್ ಅನ್ನು ಅತಿವೇಗ ಹಾಗು ಅಜಾಗರುಕತೆಯಿಂದಾ ಚಾಲನೆ ಮಾಡಿಕೊಂಡು ಬಂದು ಡಿಕ್ಕಿಹೊಡೆಸಿದ್ದು ಪರಿಣಾಮ ಪಿರ್ಯಾದಿ ಮಗನ ಎಡಕಾಲಿಗೆ ಮತ್ತು ಸೊಂಟದ ಬಾಗಕ್ಕೆ ತೀವ್ರ ತರ ಪೆಟ್ಟುಬಿದ್ದಿದ್ದು ಟ್ರಾಕ್ಟರ್ ಚಾಲಕ ಟ್ರಾಕ್ಟರ್ ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ನಂತರ ಸ್ಥಳದಲ್ಲಿ ಇದ್ದ ಗ್ರಾಮದ ಮಂಜುನಾಥ್ ಮತ್ತು ಪಿರ್ಯಾದಿ ಹೆಂಡತಿ ಸುಧಾ ರವರು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ಸಂಜಯ್ ನನ್ನು ಕರೆದುಕೊಂಡು ಬಂದಿದ್ದು ನಂತರ ವೈದ್ಯರ ಶಿಪಾರಸ್ಸಿನ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋದಂತಹ ಸಂದರ್ಬದಲ್ಲಿ ಸಂಜಯ್ ಮೃತಪಟ್ಟಿದ್ದು ಸದರಿ ಟ್ರಾಕ್ಟರ್ ಚಾಲಕ ಅನಂತನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿದೆ,
ಅಕ್ರಮ ಮದ್ಯ ವಶ
ಜಯಪುರ ಪೊಲೀಸ್ ಠಾಣೆ ಮೊ.ಸಂ- 46/2013 ಕಲಂ 34 ಕೆ.ಇ.ಆಕ್ಟ್– ದಿನಾಂಕ 18/04/2013 ರಂದು ರಾತ್ರಿ ಹೋಟೆಲ್ ಸವಿರುಚಿ ಎಂಬಲ್ಲಿಗೆ ರಾತ್ರಿ 8-45 ಗಂಟೆಗೆ ದಾಳಿ ಮಾಡಿದ್ದು ಹೋಟೆಲ್ ಕೌಂಟರ್ ನಲ್ಲಿದ್ದ ಆರೋಪಿ ವಿಷ್ಣುಮೂರ್ತಿ ಎಂಬಾತನು ನಮ್ಮನ್ನು ನೋಡಿ ಓಡಿಹೋಗಿದ್ದು ನಾವು ಕೌಂಟರ್ ಕೆಳಗಿನ ಟೇಬಲ್ ನ ಡ್ರಾ ದಲ್ಲಿ ನೋಡಲಾಗಿ 1] 90 ಮಿ.ಲೀ ನ ಓಲ್ಡ್ ಟವರನ್ ವಿಸ್ಕಿ ಎಂದು ಬರೆದಿರುವ ಮದ್ಯವಿರುವ 4 ಪ್ಲಾಸ್ಟಿಕ್ ಬಾಟಲಿ 2]90 ಮಿ.ಲೀ.ನ ಬ್ಯಾಗ್ ಪೈಪರ್ ಎಂದು ಬರೆದಿರುವ ಮದ್ಯವಿರುವ 4 ಪ್ಲಾಸ್ಟಿಕ್ ಬಾಟಲಿ 3]ಒರಿಜಿನಲ್ ಚಾಯ್ಸ್ ಎಂದು ಬರೆದಿರುವ 180 ಮಿ.ಲೀ ನ 6 ಗಾಜಿನ ಬಾಟಲಿಗಳಿದ್ದು 4] ಕಿಂಗ್ ಫಿಶರ್ ಸ್ಟ್ರಾಂಗ್ ಎಂದು ಬರೆದಿರುವ 330 ಮಿ.ಲೀ.ನ ಗಾಜಿನ ಬಾಟಲಿಯಲ್ಲಿದ್ದ 5 ಬೀರ್ 5] ಕಿಂಗ್ ಫಿಶರ್ ಸ್ಟ್ರಾಂಗ್ ಎಂದು ಬರೆದಿರುವ 650 ಮಿ.ಲೀ.ನ ಗಾಜಿನ ಬಾಟಲಿಯಲ್ಲಿದ್ದ 5 ಬೀರ್ ಹಾಗೂ 6] ಒಂದು ಗಾಜಿನ ಲೋಟ ದೊರೆತಿದ್ದು. ಸದರಿಯವುಗಳನ್ನು ಮಾರಾಟ ಮಾಡಲು ಸದರಿ ಹೋಟೆಲಿನಲ್ಲಿ ಪರವಾನಗಿ ಇಲ್ಲದಿದ್ದುದರಿಂದಸದರಿ ಮದ್ಯಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಆರೋಪಿ ವಿರುದ್ದ ಕಾನೂನು ಕ್ರಮಕ್ಕಾಗಿ ಮಾಲಿನೊಂದಿಗೆ ವರದಿ ಸಲ್ಲಿಸಿದ್ದರ ಮೇರೆಗೆ ಈ ಪ್ರ.ವ.ವರದಿ.
ಹುಡುಗಿ ಕಾಣೆ
ಲಕ್ಕವಳ್ಳಿ ಪೊಲೀಸ್ ಠಾಣೆ ಮೊ.ಸಂ- 40/2013 ಕಲಂ ಹುಡುಗಿ ಕಾಣೆ– ದಿನಾಂಕ 06/04/2013 ರಂದು ಕೆಸರುಕೊಪ್ಪ ಗ್ರಾಮದಿಂದ ಕುಮಾರಿ ಲಕ್ಷ್ಮಿ 21ವರ್ಷ ಇವಳು ಶಿವಮೊಗ್ಗದ ಮೆಡಿಕಲ್‌ಗೆ ಕೆಲಸಕ್ಕೆ ಹೋಗಿದ್ದು, ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು ಪತ್ತೆಮಾಡಿಕೊಡಬೇಕೆಂದು ರುದ್ರಪ್ಪ ಎಂಬುವರು ದೂರು ನೀಡಿರುವುದಾಗಿರುತ್ತೆ.
ಮನುಷ್ಯ ಕಾಣೆ
ಲಕ್ಕವಳ್ಳಿ ಪೊಲೀಸ್ ಠಾಣೆ ಮೊ.ಸಂ- 41/2013 ಕಲಂ ಹುಡುಗ ಕಾಣೆ– ದಿನಾಂಕ 11/04/2013 ರಂದು ಬೆಳಿಗ್ಗೆ ಕೋಟೆಶ್ ಬಿನ್ ಭದ್ರಪ್ಪ 20ವರ್ಷ ಡ್ರೈವರ್ ಕೆಲಸ ವಾಸ ಬಾವಿಕೆರೆ ಈತನು ಕೆಲಸಕ್ಕೆಂದು ಹೊರಗಡೆ ಹೋದವನು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾನೆ ಪತ್ತೆಮಾಡಿಕೊಡಬೇಕೆಂದು ನವೀನ್ ಎಂಬುವನು ದೂರು ನೀಡಿರುವುದಾಗಿರುತ್ತೆ.
ಮನುಷ್ಯ ಕಾಣೆ
ಕಡೂರು ಪೊಲೀಸ್ ಠಾಣೆ ಮೊ.ಸಂ- 131/2013 ಕಲಂ ಹುಡುಗ ಕಾಣೆ– ದಿನಾಂಕ 12/04/2013 ರಂದು ಅಂಬಿಕಾ ಬಿನ್ ರಮೇಶ್ 18 ವರ್ಷ ಎಸ್ ಬಿದರೆ ವಾಸಿ ಈತನು ಮನೆಯಿಂದ ಹೊರಗಡೆ ಹೋದವನು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾನೆ.ಪತ್ತೆಮಾಡಿಕೊಡಬೇಕೆಂದು ರಮೇಶ್ ಎಂಬುವರು ದೂರು ನೀಡಿರುವುದಾಗಿರುತ್ತೆ.
ಅಕ್ರಮ ಮದ್ಯ ವಶ
ಲಿಂಗದಹಳ್ಳಿ ಪೊಲೀಸ್ ಠಾಣೆ ಮೊ.ಸಂ- 28/2013 ಕಲಂ 34 ಕೆ.ಇ.ಆಕ್ಟ್ - ದಿನಾಂಕ 18/04/2013 ರಂದು 1130 ಗಂಟೆಯಲ್ಲಿ ಸಂತವೇರಿ ಗ್ರಾಮದಲ್ಲಿ ಆರೋಪಿ ಚಂದ್ರಪ್ಪ ಈತನು ಬ್ಯಾಗಿನಲ್ಲಿ ಮದ್ಯದ ಪೌಚ್ ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವುದು ಕಂಡು ಬಂದಿತು. ಪಂಚಾಯ್ತಿದಾರರ ಸಮಕ್ಷಮ ಸಿಬ್ಬಂದಿಗಳ ಸಹಾಯದಿಂದ ಹಿಡಿದು ಹೆಸರು ವಿಳಾಸ ಕೇಳಿದಾಗ ಚಂದ್ರಪ್ಪ ಬಿನ್ ಕೃಷ್ಣಪ್ಪ 75 ವರ್ಷ ಕೂಲಿ ಕೆಲಸ ಪರಿಶಿಷ್ಟ ಜನಾಂಗ ವಾಸ ಸಂತವೇರಿ ಲಿಂಗದಹಳ್ಳಿ ಹೋಬಳಿ ತರೀಕೆರೆ ತಾಲೋಕ್ ಎಂದು ತಿಳಿಸಿದನು ಬ್ಯಾಗಿನಲ್ಲಿದ್ದ ಮದ್ಯದ ಪೌಚ್ಗಳನ್ನು ಇಟ್ಟುಕೊಳ್ಳಲು ಹಾಗೂ ಮಾರಾಟ ಮಾಡಲು ಪರವಾನಿಗೆ ಇದೆಯೇ ಎಂದು ಪ್ರಶ್ನೀಸಿದಾಗ ತನ್ನಲ್ಲಿ ಇಲ್ಲವೆಂದು ತಿಳಿಸಿದನು ಬ್ಯಾಗಿನಲ್ಲಿದ್ದ ಮದ್ಯದ ಪೌಚ್ ಗಳನ್ನು ಕೆಳಗೆ ಸುರಿದು ಎಣಿಸಿ ನೋಡಲಾಗಿ 90 ML ನ ಒಟ್ಟು 50 CAPTAIN MARTIN’S SPECIAL WHISKY ಪೌಚ್ ಗಳು ಇದ್ದು ಇವುಗಳ ಅಂದಾಜು ಬೆಲೆ 1100/ ರೂ ಆಗಿರುತ್ತೆ.
ಎಲೆಕ್ಷನ್ ಬಹಿಷ್ಕರಿಸುವಂತೆ ಭಿತ್ತಿಪತ್ರ ಅಂಟಿಸಿ ಕರೆ
ಶೃಂಗೇರಿ ಪೊಲೀಸ್ ಠಾಣೆ ಮೊ.ಸಂ- 71/2013 ಕಲಂ 120(ಬಿ) 121 13 ಅನ್ ಲಾ ಪುಲ್ ಆಕ್ಟ್‌ವೀಟಿಸ್ ಆಕ್ಟ್ - ಪಿಐ ಶೃಂಗೇರಿ ಇವರಿಗೆ ಯಾರೋ ದೂರವಾಣಿಯ ಮುಖಾಂತರ ಮಾವಿನಕಟ್ಟೆ ಬಸ್ ಸ್ಟಾಪ್ ಹತ್ತಿರ ಶ್ರೀನಿವಾಸ ಗೌಡ ಇವರ ಅಂಗಡಿಯ ಮುಂಭಾಗದ ಗೋಡೆಯ ಮೇಲೆ ಹಾಗೂ ಮುಂಭಾಗದಲ್ಲಿ ನಕ್ಸಲ್ ಭಿತ್ತಿ ಪತ್ರಗಳನ್ನು ಅಂಟಿಸಿ ಬ್ಯಾನರ್ ಅನ್ನು ಕಟ್ಟಿರುತ್ತಾರೆ. ಎಂದು ದೂರವಾಣಿ ಕರೆ ಬಂದ ಮೇರೆಗೆ ಫಿರ್ಯಾದುದಾರರು ಕೂಡಲೆ ಸಿಬ್ಬಂದಿಗಳೊಂದಿಗೆ ಇಲಾಖೆ ಜೀಪ್ ನಂ. ಕೆ.ಎ.18 ಜಿ.891 ವಾಹನದಲ್ಲಿ ಚಾಲಕ ಮೊಬಿನ್ ಕುಮಾರ್ ರವರೊಂದಿಗೆ ಕೋಗೋಡು ಗ್ರಾಮದ ಮಾವಿನಕಟ್ಟೆ ಬಸ್ ಸ್ಟಾಪ್ ನ ಹತ್ತಿರ ಹೋಗಿ ನೋಡಲಾಗಿ ರಸ್ತೆಯ ಬಲಭಾಗದಲ್ಲಿರುವ ಶ್ರೀನಿವಾಸ ರವರ ಅಂಗಡಿಯ ಮುಂಭಾಗದ ಗೋಡೆಯ ಮೇಲೆ ನಾಲ್ಕು ಪೋಸ್ಟರ್ ಗಳನ್ನು ಮತ್ತು ಅಂಗಡಿಯ ಮುಂಬಾಗದ ಕಂಬಳಿಗೆ ಒಂದು ಬ್ಯಾನರ್ ಅನ್ನು ಕಟ್ಟಿದ್ದು,ತಲವಂತಿಕೊಡಿಗೆಯ ಕಡೆ ಹೋಗುವ ಟಾರು ರಸ್ತೆಯ ಬಲಭಾಗಕ್ಕೆ ಪಿಡಬ್ಲೂಡಿ ಇಲಾಖೆಯವರು ನಿಲ್ಲಿಸಿರುವ ನಾಮಪಲಕಕ್ಕೆ ನಕ್ಸಲೀಯರಿಗೆ ಸಂಬಂದಿಸಿದ ಬಿತ್ತಿಪತ್ರಗಳನ್ನು ಅಂಟಿಸಿರುವುದು ಕಂಡುಬಂದಿದ್ದು, ಈ ಕೃತ್ಯವನ್ನು ಶಂಕಿತ ನಕ್ಸಲೀಯರೋ, ನಕ್ಸಲ್ ಬೆಂಬಲಿಗರೋ ಅಥವಾ ದುಷ್ಕರ್ಮಿಗಳು ಮುಂಬರುವ ವಿಧಾನ ಸಭೆ ಚುನಾವಣೆ ಬಹಿಷ್ಕರಿಸುವಂತೆ, ಸಾರ್ವಜನಿಕರನ್ನು ನಕ್ಸಲ್ ಸಂಘಟನೆ ಕಡೆ ಸೆಳೆಯುವ ಉದ್ದೇಷದಿಂದ ವಿಧಿಬದ್ದ ಸರ್ಕಾರದ ವಿರುದ್ದ ಆಂತರಿಕ ಯುದ್ದದ ದುಷ್ಕೃತ್ಯವನ್ನು ಎಸಗುವ ಉದ್ದೇಶದಿಂದ ಹಾಗೂ ಕಾನೂನು ಬಾಹಿರ ಚಟುವಟಿಕೆಯನ್ನು ನಡೆಸುವ ಸಲುವಾಗಿ ಕರಪತ್ರ ಹಾಗೂ ಬ್ಯಾನರ್ ಅನ್ನು ಕಟ್ಟಿರುವುದು ಕಂಡುಬಂದಿದ್ದರಿಂದ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಮಹಜರ್ ಕ್ರಮ ಜರುಗಿಸಿ ಸದರಿ ಬಿತ್ತಿಪತ್ರ ಮತ್ತು ಬ್ಯಾನರ್ ಅನ್ನು ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲು ಮಾಡಿರುತ್ತೆ.