ಅಪಘಾತದಲ್ಲಿ ಸಾವು
ಕಡೂರು ಪೊಲೀಸ್ ಠಾಣೆ ಮೊ.ಸಂ. 169/2013 – ಕಲಂ: 279 304(ಎ) ಐಪಿಸಿ – ದಿನಾಂಕ 24/06/2013
ರಂದು ಸೀಗೇಹಡ್ಲು ಕಡೆಯಿಂದ ಕಡೂರಿಗೆ
ಹೋಗಲು ಕೆ ಎ 18 ಎಲ್ 6166 ಟಿ,ವಿ,ಎಸ್ ಮೋಟಾರ್
ಸೈಕಲ್ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು
ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿ ಮಂಜಪ್ಪ ಇವರ ತಂದೆಗೆ ಡಿಕ್ಕಿ ಹೊಡೆಸಿದ ಪರಿಣಾಮ ಬಸವರಾಜಪ್ಪ @ ಬಸಪ್ಪ ರವರು ರಸ್ತೆಗೆ ಬಿದ್ದು
ತಲೆಯ ಭಾಗಕ್ಕೆ ಪೆಟ್ಟು ಬಿದ್ದು ರಕ್ತ ಗಾಯವಾಗಿ ಮೈ ಕೈ ಕಾಲಿಗೆ ತರಚಿದ ರಕ್ತ ಗಾಯವಾಗಿರುತ್ತೆ
ಕಡೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸುತ್ತಿದ್ದಾಗ ಮಾರ್ಗ ಮದ್ಯದಲ್ಲಿ ಬೆಳಿಗ್ಗೆ
11-30 ಗಂಟೆಗೆ ಮೃತ ಪಟ್ಟಿರುತ್ತಾರೆ,
ಮಟ್ಕಾ ಜೂಜಾಟ ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ. 152/2013 – ಕಲಂ: 78
ಕ್ಲಾಸ್(3) ಕೆಪಿ ಆಕ್ಟ್ – ಮಣಿಕಂಠ ಈತನು ದಿನಾಂಕ
24/06/2013 ರಂದು 1900 ಗಂಟೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ 1 ರೂ ಗೆ 8 ಮತ್ತು 10 ರೂಪಾಯಿಗೆ
80 ರೂಪಾಯಿ ಹೇಳುತ್ತಾ ಕೂಗಾಡುತ್ತಾ ಚೀಟಿಗಳಲ್ಲಿ ಅಂಕೆಗಳನ್ನು ನಮೂದು ಮಾಡುತ್ತಿದ್ದವನನ್ನು
ವಶಕ್ಕೆ ಪಡೆದು ಆತನ ಹತ್ತಿರ ಇದ್ದ ಮಟ್ಕಾಕ್ಕೆ ಬಳಸಿದ್ದ ವಸ್ತಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿರುತ್ತೆ.
ಅಪಹರಣ ಪ್ರಕರಣ
ಬಸವನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 123/2013 – ಕಲಂ: 363 ಐಪಿಸಿ – ಕುಮಾರಿ ಕಾವ್ಯ
ಬಿನ್ ಕಾಂತರಾಜು 14 ವರ್ಷ ನಿಡುವಳ್ಳಿ,
ಕಡೂರು ತಾಲ್ಲೂಕು ಇವಳನ್ನು ಚಿಕ್ಕಮಗಳೂರು ಬಾಲ
ಮಂದಿರದಿಂದ ನಮ್ಮ ಉಪ್ಪಳ್ಳಿಯ ಉಜ್ವಲ ಪುನರ್ವಸತಿ ಕೇಂದ್ರಕ್ಕೆ ಆಶ್ರಯಕ್ಕಾಗಿ ಕಳುಹಿಸಿದ್ದು ದಿನಾಂಕ 27-04-13 ರಿಂದ ನಮ್ಮಲ್ಲೇ ಆಶ್ರಯ
ಪಡೆಯುತ್ತಿದ್ದು, ದಿನಾಂಕ 16-06-13 ರ ಬೆಳಿಗ್ಗೆ 8-00 ಗಂಟೆಗೆ ನಮ್ಮ ಉಜ್ವಲ ಪುನರ್ವಸತಿ
ಕೇಂದ್ರದಿಂದ ತಪ್ಪಿಸಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಬೇಕೆಂದು ಇದ್ದದ್ದನ್ನು
ಸ್ವೀಕರಿಸಿ ಕುಮಾರಿ ಕಾವ್ಯ ಇವಳು ಅಪ್ರಾಪ್ತ
ವಯಸ್ಸಿನವಳಾಗಿದ್ದು ಯಾರೋಂದಿಗೆ ಹೋಗಿರಬಹುದೆಂದು
ಭಾವಿಸಿ ಕೇಸು ದಾಖಲಿಸಿರುತ್ತೆ
ಪತ್ತೆ ಮಾಡಿಕೊಡಬೇಕೆಂದು ಲತಾ ಪ್ರೊಜೆಕ್ಟ್ ಡೈರೆಕ್ಟರ್ ಇವರು ದೂರು ನೀಡಿರುವುದಾಗಿರುತ್ತೆ.