ಮನುಷ್ಯ ಕಾಣೆ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 309/2013 ಕಲಂ; ಹೆಂಗಸು
ಮತ್ತು ಮಗು ಕಾಣೆ – ಪಿರ್ಯಾದುದಾರರಾದ ಯೋಗೀಶ್
ಇವರು ತನ್ನ ಹೆಂಡತಿ ಶ್ರೀಮತಿ ಆಶಾ ಇವರನ್ನು ಜೊತೆಯಲ್ಲಿ
ಕರೆದುಕೊಂಡು ದೇವಗೊಂಡನಹಳ್ಳಿ ತನ್ನ ತಮ್ಮನ ಮದುವೆಗೆ ಹೋಗಿದ್ದು ದಿ: 15-08-2013 ರಂದು ಮದುವೆ
ಮುಗಿದ ಮೇಲೆ ಪಿರ್ಯಾದುದಾರರು ಹಿಂತಿರುಗಿ ಸಕರಾಯಪಟ್ಟಣಕ್ಕೆ ಬಂದಿದ್ದು ನಂತರ ತನ್ನ ಹೆಂಡತಿ
ಆಶಾ ಮತ್ತು ಮಗ ಕಿಶನ್ ರವರನ್ನು ಕಳುಹಿಸುವಂತೆ
ತನ್ನ ಮನೆಯಲ್ಲಿ ಹೇಳಿ ಬಂದಿದ್ದು ಅವರು ದಿನಾಂಕ: 19-08-2013 ರಂದು ಮದ್ಯಾಹ್ನ 3-00 ಗಂಟೆಯ
ಸಮಯದಲ್ಲಿ ದೇವಗೊಂಡನಹಳ್ಳಿಯಿಂದ
ಸಕರಾಯಪಟ್ಟಣಕ್ಕೆ ಹೋಗುವುದಾಗಿ ಆಶಾ 26 ವರ್ಷ ತನ್ನ ಮಗ ಕಿಶನ್ 6 ವರ್ಷ ಇವನೊಂದಿಗೆ ಹೊರಟಿದ್ದು
ಆದರೆ ಸಕರಾಯಪಟ್ಟಣಕ್ಕೆ ಬಾರದೆ, ತನ್ನ
ಸ್ವಂತ ಊರಾದ ಗಂಗಬಸವನಹಳ್ಳೀಗೂ ಹೋಗದೆ ತಾಯಿ ಮತ್ತು ಮಗ ಕಾಣೆಯಾಗಿರುತ್ತಾರೆ.
ಅಕ್ರಮ ಮದ್ಯ ವಶ
ಎನ್‌ಆರ್‌ಪುರ ಪೊಲೀಸ್ ಠಾಣೆ ಮೊ.ಸಂ. 128/2013 ಕಲಂ; 15 34 ಕೆ.ಇ.
ಆಕ್ಟ್ – ಫಿರ್ಯಾದುದಾರರಾದ ಪ್ರೊಬೆಷನರಿ ಡಿವೈಎಸ್‌ಪಿ ರವರಿಗೆ ಬಂದ ಖಚಿತ ಮಾಹಿತಿಯಂತೆ ವರ್ಕಟೆ ಗ್ರಾಮದ ರಂಗ ಮಂದಿರದ ಬಳಿ
ಹಂದೂರು ಗ್ರಾಮದ ವಾಸಿಗಳಾದ 1) ಸಂತೋಷ
2) ಅಣ್ಣಪ್ಪ ಎಂಬುವರುಗಳು ಬಿ.ಹೆಚ್ ಕೈಮರದ ಸೂರ್ಯೋದಯ
ವೈನ್ ಶಾಪ್‌ನ ಶಂಕರ ಎಂಬುವರಿಂದ ಪಡೆದ ಯಾವುದೇ ಪರವಾನಗಿ
ಇಲ್ಲದ 90 ಎಂ.ಎಲ್‌ನ 55 ಮದ್ಯದ 3 ACES WHISKY ಪೌಚ್‌ಗಳನ್ನು ಅಕ್ರಮವಾಗಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದವರ
ಮೇಲೆ ದಾಳಿ ಮಾಡಿ ಹಿಡಿದು ಅವರುಗಳ ಬಳಿ ಮದ್ಯ ಮಾರಾಟದ ಸಂಬಂಧ ಇದ್ದ ಒಟ್ಟು 4360/- ರೂ ನಗದು,
ಹಾಗು 55 ‘3 ACES WHISKY ‘ ಪೌಚ್‌ಗನ್ನು ವಶಪಡಿಸಿಕೊಂಡಿದ್ದು, ಮದ್ಯದ ಅಂದಾಜು ಬೆಲೆ
1126.95/-ರೂಗಳಾಗಿದ್ದು. ಆ ಮೇರೆಗೆ ಕ್ರಮ ಕೈಗೊಂಡಿರುತ್ತೆ.
ಕಳ್ಳತನದ ಮೋಟಾರ್ ಸೈಕಲ್ ವಶ
ಯಗಟಿ
ಪೊಲೀಸ್ ಠಾಣೆ ಮೊ.ಸಂ. 86/2013 ಕಲಂ;
41 ಕ್ಲಾಸ್(ಡಿ) 102 ಸಿಆರ್‌ಪಿಸಿ ಜೊತೆಗೆ 379 ಐಪಿಸಿ – ದಿನಾಂಕ 22/08/2013 ರಂದು ಪಿಎಸ್‌ಐ ರವರು ಯಗಟಿ
ಗ್ರಾಮದ ಕಡೆ ಗಸ್ತು ಮಾಡಿಕೊಂಡು ಬರುತಿದ್ದಾಗ, ಚೌಳಹಿರಿಯೂರು ಕ್ರಾಸ್ ಹತ್ತಿರ ಒಬ್ಬ ಆಸಾಮಿಯು
ಮೋಟಾರ್ ಸೈಕಲ್ಲನ್ನು ನಿಲ್ಲಿಸಿಕೊಂಡು ನಿಂತಿದ್ದು, ಸದರಿ ಆಸಾಮಿಯ ಹತ್ತಿರ ಜೀಪನ್ನು ನಿಲ್ಲಿಸಿ
ಆಸಾಮಿಯನ್ನು ಹೆಸರು ವಿಳಾಸ ಕೇಳಲಾಗಿ ಸದರಿಯವನು ನನ್ನ ಹೆಸರು ರೇವಣ್ಣ ಎಂದು ತಿಳಿಸಿದ್ದು, ನಂತರ
ಸದರಿಯವನ ಬಳಿ ಇದ್ದ ಕೆ.ಎ 18 ಎಲ್ 2324 ನೇ ನಂಬರಿನ
ಬಜಾಜ್ ಸಿಟಿ 100 ಮೋಟಾರ್ ಸೈಕಲ್ಲಿನ ಬಗ್ಗೆ ಕೇಳಲಾಗಿ ತಡವರಿಸುತ್ತ ಅನುಮಾನ ಬರುವಂತೆ
ನಡೆದು ಕೊಂಡಿದ್ದರಿಂದ ಸದರಿಯವನನ್ನು ಕೂಲಂಕುಶವಾಶಗಿ ವಿಚಾರಣೆ ನಡೆಸಿದಾಗ, ಇವನು ಈಗ್ಗೆ 2
ತಿಂಗಳ ಹಿಂದೆ ರಾತ್ರಿ ವೇಳೆಯಲ್ಲಿ ಚಿಕ್ಕಮಗಳೂರು ಸಮೀಪದ ಮೂಡಿಗೆರೆ ರಸ್ತೆಯಲ್ಲಿರುವ ಸಿರಿಗುಂದ
ಗ್ರಾಮದ ಪ್ರಣವ್ ಟ್ರಾನ್ಸ್‌ಪೋರ್ಟ್ ಮುಂದೆ ನಿಲ್ಲಿಸಿದ್ದನ್ನು ಕಳ್ಳತನ ಮಾಡಿಕೊಂಡು ಬಂದು
ಈವರೆಗೂ ನಾನೇ ಉಪಯೋಗಿಸುತ್ತಿದ್ದು ಖರ್ಚಿಗೆ ಹಣ ಇಲ್ಲದೇ ಇದ್ದುದ್ದರಿಂದ ಈ ಮೋಟಾರ್
ಸೈಕಲ್ಲನ್ನು ಯಾರಿಗಾದರು ಬೀರೂರು ಅಥವಾ ಕಡೂರಿನಲ್ಲಿ ಮಾರಾಟ ಮಾಡೋಣವೆಂದು ತೆಗೆದುಕೊಂಡು ಹೋಗಲು
ಬಂದು ಇಲ್ಲಿ ನಿಂತಿರುವುದಾಗಿ ನುಡಿದಿದ್ದರಿಂದ ಮೋಟಾರ್ ಸೈಕಲ್ಲನ್ನು ಅಮಾನತ್ತು ಪಡಿಸಿಕೊಂಡು
& ಆಸಾಮಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಿರುತ್ತೇನೆ