Friday, December 20, 2013

Daily Crimes Report Dated:19/12/2013



ಮಟ್ಕಾ ಜೂಜಾಟ ಪ್ರಕರಣ
ನಗರ ಪೊಲೀಸ್‌ ಠಾಣೆ ಮೊ.ಸಂ.231/2013 – ಕಲಂ: 78 ಕ್ಲಾಸ್‌(3) ಕೆಪಿ ಆಕ್ಟ್ – ದಿನಾಂಕ 19/12/2013 ರಂದು 1815 ಗಂಟೆಯಲ್ಲಿ  ಆರೋಪಿ ಬಾಬು ಟಿಪ್ಪು ನಗರ ವಾಸಿ ಈತನು ªÀÄlPÁ dÆeÁl DqÀÄwÛgÀĪÀÅzÀÄ PÀAqÀħA¢zÀÝjAzÀ DgÉÆÃ¦AiÀÄ£ÀÄß  »rzÀÄ ¸ÀzÀj D¸Á«ÄAiÀÄ §½ EzÀÝ MAzÀÄ ªÀÄlPÁ aÃn ºÁUÀÆ DvÀ£À §½ EzÀÝ 3490/- ºÀt ºÁUÀÆ MAzÀÄ ¯Éqï ¥É£ÀߣÀÄß ªÀ±ÀPÉÌ ¥ÀqÉzÀÄPÉÆAqÀÄ  oÁuÉUÀ ºÁdgÀÄ ¥Àr¹zÀ ªÉÄÃgÉUÉ ¥ÀæPÀgÀt zÁR°¹gÀÄvÉÛ.ಈ ಬಗ್ಗೆ ಪಿಸಿ ಯುವರಾಜ್‌ ಇವರು ಠಾಣೆಗೆ ಹಾಜರ್‌ ಪಡಿಸಿರುವುದಾಗಿರುತ್ತೆ.
ಜೂಜಾಟ ಪ್ರಕರಣ
ಬಸವನಹಳ್ಳಿ  ಪೊಲೀಸ್‌ ಠಾಣೆ ಮೊ.ಸಂ.200/2013 – ಕಲಂ: 87 ಕೆಪಿ ಆಕ್ಟ್   – ದಿನಾಂಕ 19/12/2013 ರಂದು 0030 ಗಂಟೆಯಲ್ಲಿ ಕೆಂಪನಹಳ್ಳಿ ಬಳಿ ಯಾರೋ ಆಸಾಮಿಗಳು ಆಂಬರ್ ಬಾಹರ್ ಇಸ್ವೀಟ್ ಜೂಜಾಡವನ್ನು ಆಡುತ್ತಿದ್ದಾರೆ ಎಂದು ಬಂದ ಖಚಿತ ವರ್ತಮಾನದ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಆರೋಪಿಗಳಲ್ಲಿ ಕ್ರಮ ಸಂಖ್ಯೆ 07 ರಿಂದ 09 ರವರೆಗಿನ ಆರೋಪಿಗಳು ನಮ್ಮನ್ನು ನೋಡಿ ಓಡಿಹೋಗಿದ್ದ ಉಳಿದ ಆರೋಫಿಗಳು ವಿದ್ಯುತ್ ಬೆಳಕಿನ ಸಹಾಯದಿಂದ ಯಾವುದೇ ಪರವಾನಗಿ ಇಲ್ಲದೇ ಹಣವನ್ನು ಪಣವಾಗಿಟ್ಟು ಆಂದರ್ ಬಾಹರ್ ಇಸ್ವೀಟ್ ಆಡುತ್ತಿದ್ದು ಕಂಡುಬಂದಿದ್ದು ಸ್ಥಳದಲ್ಲಿ ದೊರೆತ 4100/- ರೂ ನಗದು ಹಣ 52 ಇಸ್ವೀಟ್ ಎಲೆಗಳನ್ನು ಮತ್ತು ಒಂದು ಪ್ಲಾಸ್ಢಿಕ್ ಚೀಲವನ್ನು ಆಮಾನತ್ತು ಪಡಿಸಿಕೊಂಡಿರುತ್ತಾರೆ. ಪಿಎಸ್‌ಐ ರವರು ದಾಳಿ ನೆಡೆಸಿ ಆರೋಪಿಗಳಾದ ಗಜ ಹಾಗೂ ಇತರೆ 5 ಜನ ಆರೋಪಿಗಳನ್ನು ದಸ್ತಗಿರಿ ಮಾಡಿರುವುದಾಗಿರುತ್ತೆ.
ಬಿಸಿಯೂಟದ ಸಿಲಿಂಡರ್‌ ಕಳುವು
ಮೂಡಿಗೆರೆ  ಪೊಲೀಸ್‌ ಠಾಣೆ ಮೊ.ಸಂ.170/2013 – ಕಲಂ: 454 457 380 ಐಪಿಸಿ – ಬಿಳಗುಳದ ಡಾ// ಬಿ .ಆರ್ .ಅಂಬೇಡ್ಕರ್ ಪೌಢಶಾಲೆ  ಯಲ್ಲಿ  ಬಿಸಿಯೂಟದ ಒಂದು ಕೋಣೆಯಲ್ಲಿ ಎರಡು ಹೆಚ್.ಪಿ ಸಿಲಿಂಡರ್ ಗಳಲ್ಲಿ ಒಂದು ಸಿಲಿಂಡರ್ ನ್ನು ಯಾರೋ  ಕಳ್ಳರು ಕದ್ದೋಯ್ದಿರುತ್ತಾರೆ. ಕಾಣೆಯಾದ ಹೆಚ್ .ಪಿ ಸಿಲಿಂಡರ್ ನ ಬೆಲೆ 1700/- ರೂಗಳಾಗಿರುತ್ತದೆ. ದಿನಾಂಕ;14-12-2013 ರಿಂದ ದಿನಾಂಕ;16-12-2013 ರ ಯಾವುದೋ ಸಮಯದಲ್ಲಿ ಕಳ್ಳತನವಾಗಿರುತ್ತದೆ. ಸಿಲಿಂಡರ್ ಮತ್ತು ಕಳ್ಳತನ ಮಾಡಿದವರನ್ನು ಪತ್ತೆ ಮಾಡಿಕೊಡಲು ಕೋರಿ ಹಿತ್ತಲಮನಿ ಮುಖ್ಯಶಿಕ್ಷಕರು ದೂರು ನೀಡಿರುವುದಾಗಿರುತ್ತೆ.
ಹೆಂಗಸು ಕಾಣೆ
ತರೀಕೆರೆ  ಪೊಲೀಸ್‌ ಠಾಣೆ ಮೊ.ಸಂ.292/2013 – ಕಲಂ: ಹೆಂಗಸು ಕಾಣೆ – ಪಿರ್ಯಾದುದಾರರಾದ ವೆಂಕಟೇಶ್‌ ಕೋಟೆಕ್ಯಾಂಪ್‌ ವಾಸಿ ಇವರ  ಹೆಂಡತಿಯಾದ 22 ವರ್ಷ ಪ್ರಾಯದ ಬಿ.ಆರ್.ಲಾವಣ್ಯ ರವರು ದಿನಾಂಕ:-13-12-2013 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಅವರ ತಾಯಿಜೊತೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಇದ್ದು ಲಾವಣ್ಯ ದರಿಸಿದ್ದ ಬಂಗಾರದ ಓಲೆ ಹಾಗು ಬೆಳ್ಳಿ ಕಾಲು ಚೈನುಗಳನ್ನು ಪಿರ್ಯಾದುದಾರರ ಮನೆಯಲ್ಲಿ ಬಿಚ್ಚಿಟ್ಟು ಮನೆಯಿಂದಾ ಹೋಗಿದ್ದು ವಾಪಸ್ಸು ಬಂದಿರುವುದಲ್ಲಾ ಎಲ್ಲಾ ಕಡೆ ಹುಡುಕಿದರು ಸಿಕ್ಕರುವುದಿಲ್ಲಾ ಪತ್ತೆ ಮಾಡಿಕೊಡಲು ಕೋರಿ.
ಮಟ್ಕಾ ಜೂಜಾಟ ಪ್ರಕರಣ  
ಲಕ್ಕವಳ್ಳಿ ಪೊಲೀಸ್‌ ಠಾಣೆ ಮೊ.ಸಂ. 90/2013 – ಕಲಂ: 78 ಕ್ಲಾಸ್‌(3) ಕೆಪಿ ಆಕ್ಟ್ – ದಿನಾಂಕ 19/12/2013 ರಂದು 1600 ಗಂಟೆಯಲ್ಲಿ ಆರೋಪಿ ಪುಟ್ಟಸ್ವಾಮಿ ಬಾವಿಕೆರೆ ವಾಸಿ ಈತನು ªÀÄlPÁ dÆeÁl DqÀÄwÛgÀĪÀÅzÀÄ PÀAqÀħA¢zÀÝjAzÀ DgÉÆÃ¦AiÀÄ£ÀÄß »rzÀÄ ¸ÀzÀj D¸Á«ÄAiÀÄ §½ EzÀÝ MAzÀÄ ªÀÄlPÁ aÃn ºÁUÀÆ DvÀ£À §½ EzÀÝ 700/- ºÀt ºÁUÀÆ MAzÀÄ ¨Á¯ï ¥É£ÀߣÀÄß ªÀ±ÀPÉÌ ¥ÀqÉzÀÄPÉÆAqÀÄ  oÁuÉUÀ ºÁdgÀÄ ¥Àr¹zÀ ªÉÄÃgÉUÉ ¥ÀæPÀgÀt zÁR°¹gÀÄvÉÛ. ಪಿಸಿ ಪ್ರಕಾಶ್‌ ರವರು ಆರೋಪಿಯನ್ನು ದಸ್ತಗಿರಿ ಮಾಡಿರುವುದಾಗಿರುತ್ತೆ.

Wednesday, December 18, 2013

Daily Crimes Report Dated:17/12/2013



ಕಳುವು ಪ್ರಕರಣ
ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.452/2013 – ಕಲಂ: 454 380 ಐಪಿಸಿ – ಪಿರ್ಯಾದುದಾರರು ಲೋಕೇಶ್ ಕೈಮರ ವಾಸಿ ಇವರು ದಿನಾಂಕ 16/12/2013 ರಂದು ಕೂಲಿ ಕೆಲಸಕ್ಕೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾಗ ಮನೆಯ ಹಿಂದಿನ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ  ತೆಗೆದು ಒಳ ಪ್ರವೇಶಿಸಿ ಮನೆಯ ಒಳಗೆ ಮುಂದಿನ ಹಾಲ್ ನಲ್ಲಿ ಗಾಡ್ರೇಜ್ ಬೀರುವಿನಲ್ಲಿದ್ದ  ಸುಮಾರು 16 ಗ್ರಾಂ ತೂಕದ ಒಂದು ಚಿನ್ನದ ಸರ, 2 ½ ಗ್ರಾಂ ತೂಕದ ಒಂದು ಉಂಗುರ, ಹಾಗೂ 2 ಗ್ರಾಂ ತೂಕದ ಇನ್ನೊಂದು ಉಂಗುರ ಹಾಗೂ 5.000/- ರೂ ನಗದು ಹಣವನ್ನು ಕಳ್ಳತನ ಮಾಡಿದ್ದು  ಮೇಲ್ಕಂಡ ಎಲ್ಲಾ ವಸ್ತುಗಳ ಒಟ್ಟು ಅಂದಾಜು ಬೆಲೆ ಸುಮಾರು  20.000/- ರೂಗಳಾಗಬಹುದು.
ಮನುಷ್ಯ ಕಾಣೆ
ಕೊಪ್ಪ ಪೊಲೀಸ್‌ ಠಾಣೆ ಮೊ.ಸಂ.133/2013 – ಕಲಂ: ಮನುಷ್ಯ ಕಾಣೆ  – ಪಿರ್ಯಾದುದಾರರಾದ ಶ್ರೀಮತಿ ಮುತ್ತು ಮುತ್ತಿನಕೊಪ್ಪ ಗ್ರಾಮದ ವಾಸಿ ಇವರ ಮಗನಾದ ಸುಬ್ರಹ್ಮಣ್ಯ 20 ವರ್ಷ ಈತನು ಆತನ ಚಿಕ್ಕಮ್ಮನ ಮನೆ ಕೊಪ್ಪ ತಾಲ್ಲೂಕು ಹರಂದೂರು ಗ್ರಾಮದ ಸಣ್ಣಕೆರೆಗೆ ಕೂಲಿ ಕೆಲಸಕ್ಕಾಗಿ ಬಂದಿದ್ದವನು ದಿನಾಂಕ 02/12/2013 ರಂದು ಆತನ ತಂದೆಗೆ ಆರೋಗ್ಯ ಸರಿಯಿಲ್ಲದೆ ಇದ್ದುದರಿಂದ ದೂರವಾಣಿಗಳ ಸಂಪರ್ಕದಲ್ಲಿದ್ದವನು ಆ ದಿನ ಪಿರ್ಯಾದಿಯ ತಂದೆ ಮರಣಹೊಂದಿದ್ದರು ಸಹ ತನ್ನ ಮಗ ಸುಬ್ರಹ್ಮಣ್ಯನು ಆ ದಿನ ಕೊಪ್ಪದಿಂದ ಮನೆಗೆ ಬರದೆ ಇದ್ದು  ನಂತರ ಪೋನ್ ಸಂಪರ್ಕಕ್ಕೂ ಸಿಗದೆ  ಕಾಣೆಯಾಗಿರುತ್ತಾನೆ.

Tuesday, December 17, 2013

Daily Crimes Report Dated:16/12/2013



ದತ್ತಜಯಂತಿ ಸಂಬಂದ ಪ್ರಕರಣ
ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.450/2013 – ಕಲಂ: 143.147.332.353.188 153 (A).295.120 (B)427. R/W 149  IPC  &  2  KPDP ACT-1981  – ದಿನಾಂಕ:16-12-2013 ರಂದು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ  ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ, ಇನಾಂ ದತ್ತಾತ್ರೇಯ ಪೀಠದಲ್ಲಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಹಾಗೂ ಸಂಘ ಪರಿವಾರದವರು ದತ್ತಜಯಂತಿ ಕಾರ್ಯಕ್ರಮದ ಸಮಾರಂಭ ಏರ್ಪಡಿಸಿದ್ದು, ಸದರಿ ಕಾರ್ಯಕ್ರಮಕ್ಕಾಗಿ ಘನ ಸುಪ್ರಿಂ ಕೋರ್ಟನ ನಿರ್ಧೇಶನಗಳನ್ನು ಪಾಲಿಸುವ ಸಲುವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿಕೊಂಡಿದ್ದು, ಈ ವೇಳೆ ಚಿಕ್ಕಮಗಳೂರು ವಾಸಿ ಸಂತೋಷ್ ಕೋಟ್ಯಾನ್, ಆಲ್ದೂರು ವಾಸಿಗಳಾದ ತುಡುಕೂರು ಮಂಜ, ರಾಕೇಶ್ ಮತ್ತು ಇತರೇ 30 ರಿಂದ 40 ಜನ ಭಜರಂಗದಳದದ ಕಾರ್ಯಕರ್ತರುಗಳ ಗುಂಪು ಪೂರ್ವಯೋಜಿತವಾಗಿ ಷ್ಯಡಂತ್ರ ಹೂಡಿ, ಅಡ್ಡಪಲ್ಲಕ್ಕಿಯನ್ನು ದತ್ತಪೀಠಕ್ಕೆ ತಂದು ದತ್ತಪೀಠದ ಉತ್ತರ ದಿಕ್ಕಿನಲ್ಲಿರುವ ಗೇಟೆಗೆ ಇರುವ ತಂತಿಯ ಬೇಲಿಯನ್ನು ಬೇದಿಸಲು ಹೋದಾಗ ಸಮವಸ್ತ್ರದಲ್ಲಿದ್ದ ಪೊಲೀಸರು ತಡೆದರೂ ಸಹ ಅವರನ್ನು ತಳ್ಳಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ನಂತರ ಒಳಗೆ ನುಗ್ಗಿ ಮುಸ್ಲಿಂ ಸಮುದಾಯದ ಘೋರಿಗಳ ಮೇಲೆ ದ್ವಜವನ್ನು ಹಾರಿಸಲು ಪ್ರಯತ್ನಿಸಿದ್ದಲ್ಲದೆ ಮತೀಯ ಬಾವನೆಗಳಿಗೆ ಧಕ್ಕೆ ಬರುವಂತೆ ರಾಮ ಬಂದ ಆನೆಯ ಮೇಲೆ ಅಲ್ಲಾ ಬಂದ ಹಂದಿಯ ಮೇಲೆ ಎಂದು ಇತರೇ ಘೋಷಣೆಗಳನ್ನು ಕೂಗಿ, ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದರಿಂದ ಪೊಲೀಸರು ಆತ್ಮ ರಕ್ಷಣೆಗಾಗಿ ಲಘು ಲಾಠಿ ಪ್ರಹಾರ ನಡೆಸಿದ್ದು, ಈ ಘಟನೆಯಲ್ಲಿ ಕರ್ತವ್ಯದಲ್ಲಿದ್ದ ಸುದರ್ಶನ್, ಸಿಪಿಐ, ಹಿರಿಯೂರು, ಬಸವೇಗೌಡ, ಎಎಸ್ಐ, ಕಳಸ ಠಾಣೆ ಇವರಿಗೆ ಪೆಟ್ಟಾಗಿದ್ದು, ಆರೋಪಿಗಳು ಕಲ್ಲು ತೂರಿದ್ದರಿಂದ ಆಸ್ಪತ್ರೆಯ ಮೇಲ್ಚಾವಣೆ ಮೇಲೆ ಕಲ್ಲು ಬಿದ್ದು ಹಾಸ್ಪರ್ ಶೀಟ್ ಸಹ ಜಖಂಗೊಂಡಿರುತ್ತದೆ, ಹಾಗೂ ಆರೋಪಿತರುಗಳು ಸುಪ್ರಿಂಕೋರ್ಟ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ ಇತ್ಯಾದಿ.
 ದತ್ತಜಯಂತಿ ಸಂಬಂದ ಪ್ರಕರಣ
ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.451/2013 – ಕಲಂ: 143.147.353 120(ಬಿ) 188 149 IPC  – ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ದತ್ತಪೀಠದಲ್ಲಿ ದಿನಾಂಕ;14-12-2013 ರಿಂದ 16-12-2013 ರವರೆಗೆ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಹಾಗೂ ಇತರೆ ಸಂಘ ಪರಿವಾರದವರು ಪ್ರತೀತಿಯಂತೆ ದತ್ತ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸದರಿ ದತ್ತ ಜಯಂತಿ ಸಮಾರಂಭದ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ದತ್ತಪೀಠದಲ್ಲಿ ಸುಪ್ರೀಂಕೋರ್ಟಿನ ನಿರ್ದೇಶನಗಳನ್ನು ಪಾಲಿಸುವ ಸಲುವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು, ಕೊನೆ ದಿನದ ಕಾರ್ಯಕ್ರಮ ದಿನಾಂಕ;16-12-2013 ರಂದು ಇದ್ದು ಸದರಿ ದಿನದಂದು ಮದ್ಯಾಹ್ನ ಸುಮಾರು 03-00 ಗಂಟೆಗೆ ಶ್ರೀಕಾಂತ, ದಯಾನಂದ ಇತರೆ 8 ರಿಂದ 10 ಜನರು ಪೂರ್ವಾರ್ಜಿತವಾಗಿ  ಷಡ್ಯಂತರ ರೂಪಿಸಿಕೊಂಡು ದತ್ತಪೀಠದ ಮುಂಭಾಗ ಮೈನ್ ಗೇಟಿನ ಎದುರಿನಲ್ಲಿರುವ ಪೊಲೀಸ್ ಹೊರ ಠಾಣೆಯ ಪಕ್ಕದಲ್ಲಿದಲ್ಲಿರುವ ವೈರ್ ಲೆಸ್ ಟವರ್ ನ್ನು ಏರಿ ದ್ವಜವನ್ನು ಕಟ್ಟಲು ಪ್ರಯತ್ನಿಸಿದರು ಇದನ್ನು ತಡೆಯಲು ಹೋದ ಪೊಲೀಸ್ ನವರಿಗೆ ತಳ್ಳಿ ಸಮವಸ್ತ್ರದಲ್ಲಿದ್ದ ಪೊಲೀಸ್ ರ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೈದು ಕಟ್ಟಲು ಪ್ರಯತ್ನಿಸಿದಾಗ ಅಲ್ಲಿ ಎದುರು ಗಡೆ ಪೀಠದ ಮುಖ್ಯ ಗೇಟಿನಲ್ಲಿ ಇದ್ದ ನಾನು ಸಹ ಸೇರಿಕೊಂಡು ಸಿಬ್ಬಂದಿಗಳೊಂದಿಗೆ ಲಘು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಲಾಯಿತು. ಸುಪ್ರೀಂ ಕೋರ್ಟಿನ ಆದೇಶವನ್ನು ಉಲ್ಲಂಘಿಸಿ ಪೊಲೀಸ್ ನವರ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ, ಸದರಿ ಐಡಿ ಪೀಠದ ಹೊರ ಠಾಣೆಯ ಬಳಿ ಕರ್ತವ್ಯದಲ್ಲಿ ಎ.ಎಸ್,ಐ ಮಹೇಶ್ ಹಾಗೂ ಇತರೆ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

Sunday, December 15, 2013

Daily Crimes Report Dated:14/12/2013



ಕಳುವು ಪ್ರಕರಣ
ಮೂಡಿಗೆರೆ ಪೊಲೀಸ್‌ ಠಾಣೆ ಮೊ.ಸಂ.166/2013 – ಕಲಂ: 457 380  ಐಪಿಸಿ  – ದಿನಾಂಕ:30-11-13 ರಿಂದ 10-12-13 ರ ಮಧ್ಯದ ಅವಧಿಯಲ್ಲಿ ಮೂಡಿಗೆರೆ ಪೊಲೀಸ್ ಠಾಣಾ ಸರಹದ್ದಿನ ಮುತ್ತಿಗೆಪುರ ಗ್ರಾಮದಲ್ಲಿರುವ ಮುದ್ರೆಮನೆ ಕಾಫಿ ಕ್ಯೂರರ್ಸ್ ನಲ್ಲಿರುವ ಗೋಡೋನ್ ಗಳ ಪೈಕಿ ಒಂದರಲ್ಲಿ ಐ.ಸಿ.ಐ.ಸಿ.ಐ ಬ್ಯಾಂಕ್ ಚಿಕ್ಕಮಗಳೂರು ರವರು ಕಾಫಿ ಬೀಜವನ್ನು ಶೇಖರಣೆ ಮಾಡುತ್ತಿದ್ದು, ಸದರಿ ಗೋಡೋನ್ ಗೆ ಭದ್ರತಾ ಸಿಬ್ಬಂದಿಯಾಗಿ ನೇಮಕ ಮಾಡಿದ್ದ ಆರೋಪಿ ಮಂಜುನಾಥ ಈತನು ಮುದ್ರೆಮನೆ ಕಾಫಿ ಕ್ಯೂರರ್ಸ್ ಗೆ ಸೇರಿದ ಗೋಡೋನ್ ಗೆ ರಾತ್ರಿ ವೇಳೆಯಲ್ಲಿ ಪ್ರವೇಶಿಸಿ ಸದರಿ ಗೋಡೋನ್ ನಲ್ಲಿದ್ದ 15,000-00 ರೂ ಮೌಲ್ಯದ ಸುಮಾರು 100 ಕೆ.ಜಿ. ಕಾಫಿ ಬೀಜವನ್ನು ಕಳುವು ಮಾಡಿಕೊಂಡು ಹೋಗಿರುತ್ತಾನೆ ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಉಮೇಶ್‌ ಮ್ಯಾನೇಜರ್‌ ಮುದ್ರೆಮನೆ ಕಾಫಿ ಕೂರರ್ಸ್ ಇವರು ದೂರು ನೀಡಿದ್ದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.