Sunday, February 02, 2014

Daily Crimes Report Dated:01-02/02/2014



ಅಕ್ರಮ ಮದ್ಯ ವಶ
ಬಸವನಹಳ್ಳಿ  ಪೊಲೀಸ್‌ ಠಾಣೆ ಮೊ.ಸಂ.27/2014 – ಕಲಂ:34 ಕೆ.ಇ. ಆಕ್ಟ್ – ದಿನಾಂಕ 01/02/2014 ರಂದು1730 ಗಂಟೆಯಲ್ಲಿ ಡಿಸಿಐಬಿ ಇನ್ಸ್ಪೆಕ್ಟರ್‌ ಮತ್ತು  ತಮ್ಮ ಸಿಬ್ಬಂದಿ ಮತ್ತು ಪಂಚಾಯಿತದಾರರೊಂದಿಗೆ ಸಂಜೆ ಉಪ್ಪಳ್ಳಿ ದರ್ಗಾ ಬಳಿ ಹೋಗಿ ಕಾಯುತ್ತಿದ್ದಾಗ ಎರಡು ಜನರು ಕೆಎ.18 ಕ್ಯೂ.1843 ಮೋಟಾರ್ ಸೈಕಲ್ಲಿನಲ್ಲಿ ಚಿಕ್ಕಮಗಳೂರು ಕಡೆಯಿಂದ ಬರುತ್ತಿದ್ದು ಪಿಐ ರವರು  ಅವರನ್ನು ತಡೆದು ಪರಿಶೀಲಿಸಲಾಗಿ  ಅವರು ಯಾವುದೇ ಪರವಾನಗಿ ಇಲ್ಲದೆ 180 ಎಂ.ಎಲ್. ಕ್ಯಾಪ್ಟನ್ ಮಾರ್ಟಿನ್ 30 ವಿಸ್ಕಿ ಬಾಟಲಿಗಳು, ಕ್ಯಾಪ್ಟನ್ ಮಾರ್ಟಿನ್ ವಿಸ್ಕಿಯ 90 ಎಂ.ಎಲ್.ನ 36 ಸ್ಯಾಚೆಟ್ ಗಳು ಇದ್ದು ರಟ್ಟಿನ ಬಾಕ್ಸಿನಲ್ಲಿ  330 ಎಂ.ಎಲ್.ನ  ಕಿಂಗ್ ಫೀಶರ ಬೀರ್ ಬಾಟಲಿಗಳಿರುವುದು ಕಂಡು ಬಂದ ಮೇರೆಗೆ ಅವರುಗಳನ್ನು ವಿಚಾರ ಮಾಡಲಾಗಿ  ಮಧ್ಯವನ್ನು ಉಪ್ಪಳ್ಳಿಯಲ್ಲಿ ಮಾರಾಟ ಮಾಡಲು ಅಕ್ಷಯ ಬಾರ್ ಮಾಲೀಕರಾದ ಗ್ಲಾಡ್ಸನ್ ಪಿಂಟೋರವರು ಕಳುಹಿಸಿಕೊಟ್ಟಿರುತ್ತಾರೆಂದು ತಿಳಿಸಿರುತ್ತಾರೆ.   ಆರೋಪಿಗಳಾದ ಯೂಸಪ್‌ ಹಾಗೂ ಗಂಗಾಧರ ಇವರನ್ನು ದಸ್ತಗಿರಿ ಮಾಡಿ  ಅವರ ವಶದಲ್ಲಿದ್ದ  3500ರೂ ಬೆಲೆಯ ಮಧ್ಯವನ್ನು  ಮಹಜರ್ ಮುಖೇನ ವಶಪಡಿಸಿಕೊಂಡಿರುತ್ತೆ.
ದೇವಸ್ಥಾನದ ವಿಗ್ರಹ ಕಳುವು ಪ್ರಕರಣ
ಗೋಣಿಬೀಡು  ಪೊಲೀಸ್‌ ಠಾಣೆ ಮೊ.ಸಂ.14/2014 – ಕಲಂ:454 457 380 ಐಪಿಸಿ – ಶ್ರೀ ಕ್ಷೇತ್ರ ಅಂಗಡಿಯ ಸಂಚಾಲಕರಾದ ಎ.ಎಸ್ ನಾಗರಾಜ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:01/02/2014 ರಂದು ಅಂಗಡಿ ಗ್ರಾಮದ ಜೈನ ಬಸದಿಯ 3 ತೀರ್ಥಂಕರ ವಿಗ್ರಹ ಹಾಗೂ ಒಂದು ನೇಮಿನಾಥ ವಿಗ್ರಹ ಕಳ್ಳತನವಾಗಿದೆ ಎಂದು ಬಸದಿಯ ಅರ್ಚಕರಾದ ಧರಣೇಂದ್ರಭಟ್ ರವರು ಪೋನ್ ಮುಖಾಂತರ ತಿಳಿಸಿದ ಮೇರೆಗೆ  ಹೋಗಿ ನೋಡಲಾಗಿ ಹೊಯ್ಸಳರ ಕಾಲದಲ್ಲಿ ಸ್ಥಾಪನೆಯಾದ ಸುಮಾರು 900 ವರ್ಷಗಳ ಪುರಾತನ ಕಾಲದ ತೀರ್ಥಂಕರ ಬಸದಿಯಲ್ಲಿದ್ದ 22 ನೇ ತೀರ್ಥಂಕರ ನೇಮಿನಾಥ ಸ್ವಾಮಿ, 23 ನೇ ತೀರ್ಥಂಕರ ಆದಿನಾಥ ಸ್ವಾಮಿ, 24 ನೇ ತೀರ್ಥಂಕರ  ಮಲ್ಲಿನಾಥ ಸ್ವಾಮಿ ವಿಗ್ರಹಗಳು, ಹಾಗೂ ಮಹಾವೀರ ಬಸದಿಯಲ್ಲಿದ್ದ ನೇಮಿನಾಥ ವಿಗ್ರಹ ಕಳ್ಳತನವಾಗಿರುತ್ತೆ.ದಿನಾಂಕ:29/01/2014 ರಂದು ಬುಧವಾರ ಬೆಳಿಗ್ಗೆ  ಅರ್ಚಕರು ಕೊನೆಯದಾಗಿ ನೋಡಿರುತ್ತಾರೆ.ಸದರಿ ದೇವಸ್ಥಾನದ ನಾಲ್ಕು ವಿಗ್ರಹಗಳನ್ನು ಗರ್ಭಗುಡಿಯ ಬಾಗಿಲು ತೆಗೆದು ಒಳನುಗ್ಗಿ  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಅವುಗಳ  ಅಂದಾಜು ಬೆಲೆ 70 ಲಕ್ಷ ರೂ ಗಳಾಗಿರುತ್ತೆ.

Saturday, February 01, 2014

Daily Crimes Report Dated:31-01/02/2013



ಮನುಷ್ಯ ಕಾಣೆ
ಬಸವನಹಳ್ಳಿ  ಪೊಲೀಸ್‌ ಠಾಣೆ ಮೊ.ಸಂ.26/2014 – ಕಲಂ:ಮನುಷ್ಯ ಕಾಣೆ – ಪಿರ್ಯಾದುದಾರರಾದ ಸಂಗೀತಾ ಬಸವನಹಳ್ಳಿ ವಾಸಿ ಇವರ ಮಗಳಾದ ಗಾಯಿತ್ರಿ 18 ವರ್ಷ  ಇವಳಿಗೆ ವಿಜಯಪುರ ಆದಿ ಬೂತಪ್ಪ ದೇವಸ್ಥಾನ ರಸ್ತೆಯ ವಾಸಿ ಲೋಕೇಶ್ ರವರ ಮಗಳಾದ ಐಶ್ವರ್ಯ 17 ವರ್ಷ  ಇಬ್ಬರೂ ಸ್ನೇಹಿತರಾಗಿದ್ದು ಅವಳೂ ಸಹ ಎಸ್.ಟಿ.ಜೆ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಓದುತ್ತಿದ್ದು ಇಬ್ಬರೂ ಒಬ್ಬರನ್ನು ಬಿಟ್ಟು ಒಬ್ಬರು ಇರದೇ ಇದ್ದು ಐಶ್ವರ್ಯ ಮನೆಯಲ್ಲಿ ನಾವು ಮನೆಬಿಟ್ಟು ಹೋಗುತ್ತಿದ್ದು ಹುಡುಕಬೇಡಿ ಎಂದು ಹೇಳಿ  ಪತ್ರ ಬರೆದಿಟ್ಟು ಕಾಣೆಯಾಗಿದ್ದು ಪತ್ತೆಮಾಡಿಕೊಡಿ ಎಂದು ನೀಡಿದ ದೂರನ್ನು ಸ್ವೀಕರಿಸಿ ಕೇಸು ದಾಖಲಿಸಿರುತ್ತೆ.
ಜೂಜಾಟ ಪ್ರಕರಣ
ಮೂಡಿಗೆರೆ  ಪೊಲೀಸ್‌ ಠಾಣೆ ಮೊ.ಸಂ.07/2014 – ಕಲಂ:87 ಕೆ.ಪಿ. ಆಕ್ಟ್ -  ದಿನಾಂಕ 31/01/2014 ರಂದು 1730 ಗಂಟೆಗೆ ಹಳೇಕೋಟೆ ಪ್ಲಾಂಟೇಷನ್‌ ಬಳಿ ಜೂಜಾಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಪಿಎಸ್‌ಐ ರವರು ಸ್ಥಳಕ್ಕೆ ಹೋಗಿ ನೋಡಲಾಗಿ ಆರೋಪಿಗಳು ಹಣವನ್ನು ಪಣವನ್ನಾಗಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದವರಲ್ಲಿ ಇಬ್ಬರನ್ನು ವಶಕ್ಕೆ ಪಡೆದು, ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ 2,450-00 ರೂ ನಗದು ಹಣ, 52 ಇಸ್ಪಿಟ್ ಎಲೆಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿಗಳಾದ ರಮೇಶ್‌ ಹಾಗೂ ಇತರೆ 7 ಜನರನ್ನು ದಸ್ತಗಿರಿ ಮಾಡಿರುತ್ತೆ.
ಕೊಲೆ ಪ್ರಕರಣ
ಹರಿಹರಪುರ  ಪೊಲೀಸ್‌ ಠಾಣೆ ಮೊ.ಸಂ.03/2014 – ಕಲಂ:302 ಐಪಿಸಿ -  ಪಿರ್ಯಾದುದಾರರಾದ ಶೋಭ ಚಿಕ್ಕಮಗಳೂರು ವಾಸಿ ಇವರು  ಮತ್ತು ದಿಲೀಪ್ ಕುಮಾರ್ ಪ್ರೀತಿಸಿ  ಮದುವೆಯಾಗಿ 13 ವರ್ಷಗಳಾಗಿದ್ದು ದಿನಾಂಕ29/01/2014 ರಂದು ಪೀರ್ಯಾದುದಾರರ ಗಂಡ ದಿಲೀಪ್ ಕುಮಾರ್  ಸ್ವಂತ ಊರಾದ  ಕೊಪ್ಪ ತಾಲ್ಲೂಕು ಭಂಡಿಗಡಿ  ಗ್ರಾಮಕ್ಕೆ ಹೋಗಿ ಬರುತ್ತೇನೆಂದು  ಹೇಳಿ  ಹೋದವರು ದಿನಾಂಖ 31/01/2014 ರಂದು ಪೀರ್ಯಾದುದಾರರು ಮನೆಯಲ್ಲಿದ್ದಾಗ  ರಾತ್ರಿ 10-00 ಗಂಟೆಗೆ  ತನ್ನ ಗಂಡನ ಅಕ್ಕ ಮಲ್ಲಿಕಾರವರು  ಪೋನ್ ಮಾಡಿ ದಿಲೀಪ್ ಕುಮಾರ್ ನನ್ನು  ಕಮ್ಮರಡಿಯಲ್ಲಿ ಯಾರೋ ಕೊಲೆ ಮಾಡಿರುತ್ತಾರೆ.ಎಂದು ವಿಚಾರ ತಿಳಿಸಿದ ಮೇರೆಗೆ  ಸಹ್ಯಾದ್ರಿ ಹೋಟೆಲ್ ನ ಆರ್ ಸಿ ಸಿ  ಮೇಲೆ ನೋಡಲಾಗಿ  ಪೀರ್ಯಾದುದಾರರ ಗಂಡ ಶವವಾಗಿ ಬಿದ್ದಿದ್ದು ಹರಿತವಾದ ಆಯುದದಿಂದ ತಲೆಯ  ಹಿಂಭಾಗದಲ್ಲಿ 3-4 ಕಡೆ  ಕೊಚ್ಚಿ ಯಾರೋ ಕೊಲೆ ಮಾಡಿರುತ್ತಾರೆ.
ಮನುಷ್ಯ ಕಾಣೆ
ಲಕ್ಕವಳ್ಳಿ  ಪೊಲೀಸ್‌ ಠಾಣೆ ಮೊ.ಸಂ.26/2014 – ಕಲಂ:ಮನುಷ್ಯ ಕಾಣೆ -  ಪಿರ್ಯಾದಿ ಲೋಕೇಶಪ್ಪ ಕರಕುಚ್ಚಿ ವಾಸಿ ಇವರ ಮಗ ಜಯರಾಜ ಈತನು ದಿನಾಂಕ 10/01/2014 ರಂದು ಕರಕುಚ್ಚಿ ಗ್ರಾಮದಿಂದ ಹೋದವನು ಮನಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾನೆ ಪತ್ತೆಮಾಡಿಕೊಡಬೇಕೆಂದು ದೂರು ನೀಡಿರುವುದಾಗಿರುತ್ತೆ.
ಮೋಟಾರ್‌ ಸೈಕಲ್‌ ಕಳ್ಳತನ
ಕಡೂರು ಪೊಲೀಸ್‌ ಠಾಣೆ ಮೊ.ಸಂ.31/2014 – ಕಲಂ:379 ಐಪಿಸಿ -ಪಿರ್ಯಾದುದಾರರಾದ ಸುಕುಮಾರ್‌ ಕಡೂರು ವಾಸಿ ಇವರ  ಬಾಬ್ತು ನಂ ಕೆಎ-18-ವಿ-7302 ರ   ಹೀರೊ ಹೊಂಡಾ ಸ್ಪ್ಲೆಂಡರ್ ಪ್ರೋ ಬೈಕ್ ನ್ನು ದಿನಾಂಕ 29/01/2014 ರಂದು ಮನೆಯ ಮುಂದೆ ನಿಲ್ಲಿಸಿದ್ದು ಬೆಳಗ್ಗೆ ಎದ್ದು.  ನೋಡಿದಾಗ ಮನೆ ಮುಂದೆ ನಿಲ್ಲಿಸಿದ ಬೈಕ್ ಇರಲಿಲ್ಲ. ಚೇತನನ ಸ್ನೇಹಿತರು ಯಾರಾದರೂ ತೆಗೆದುಕೊಂಡು ಹೋಗಿರಬಹುದೆಂದು ತಿಳಿದು ವಿಚಾರಿಸಿದ್ದು ಎಲ್ಲೂ  ಸಿಗದೆ ಇದ್ದ ಕಾರಣ ಈ ದಿನ ತಡವಾಗಿ,   ಹುಡುಕಿಕೊಡಲು ಕೋರಿ ನೀಡಿದ ದೂರು ಇತ್ಯಾದಿ.          

Thursday, January 30, 2014

Daily Crimes Report Dated:29-30/01/2014



ಕಳುವು ಪ್ರಕರಣ
ಬಸವನಹಳ್ಳಿ  ಪೊಲೀಸ್‌ ಠಾಣೆ ಮೊ.ಸಂ.24/2014 – ಕಲಂ:457 380 ಐಪಿಸಿ – ದಿನಾಂಕ 28/01/2014 ರಂದು ರಾತ್ರಿ ವೇಳೆಯಲ್ಲಿ ಉಪ್ಪಳ್ಳಿಯಲ್ಲಿರುವ ಪಿರ್ಯಾದುದಾರರಾದ ಶಾಹಿದ್‌ ಇವರ ಅಂಗಡಿಗೆ ಯಾರೋ ಕಳ್ಳರು ಅಂಗಡಿ ಬೀಗವನ್ನು ಒಡೆದು ಅಂಗಡಿಯಲ್ಲಿದ್ದ ಎರಡು ಫಾರ್ಮಿ ಮೋಬೈಲ್ ಪೋನ್ ಗಳು ಇದರ ಬೆಲೆ ಸುಮಾರು 3,000/ ರೂ ಗಳಾಗಿರುತ್ತೆ ಕ್ಯಾಶ್ ಟೇಬಲ್ ನಲ್ಲಿದ್ದ ಸುಮಾರು 2,500/ ರೂ ಗಳಷ್ಟು ಚಿಲ್ಲರೆ ಹಣ ವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಹಾಗೂ ನಮ್ಮ ಪಕ್ಕದ ಮನೆಯಲ್ಲಿ ವಾಸವಾಗಿರುವ ಮಂಜುಳ ಕೋಂ ಲೇ// ಕೃಷ್ಣಮೂರ್ತಿ ರವರ ಮನೆಯಲ್ಲೂ ಸಹ 2000/- ರೂ ನಗದು ಹಣ ಹಾಗೂ 05 ಗ್ರಾಂ ತೂಕದ ಒಂದುಜೊತೆ ಓಲೆ ಇವುಗಳ ಬೆಲೆ ಸುಮಾರು 9500/- ರೂ ಗಳಾಗಿರುತ್ತೆ  ವಸ್ತು ಗಳ ಬೆಲೆ ಒಟ್ಟು 17,000/-ಗಳಾಗಿರುತ್ತೆ.
ಜೂಜಾಟ ಪ್ರಕರಣ 
ಆಲ್ದೂರು ಪೊಲೀಸ್‌ ಠಾಣೆ ಮೊ.ಸಂ.17/2014 – ಕಲಂ:87 ಕೆ.ಪಿ ಆಕ್ಟ್ – ದಿನಾಂಕ 29/01/2014 ರಂದು 1730 ಗಂಟೆಯಲ್ಲಿ ಕೆಳಗೂರಿನ ಚಂದ್ರೇಗೌಡರಿಗೆ ಸೇರಿದ ಜಾಗದಲ್ಲಿ 10 ಜನರು  ಇಸ್ಪಿಟ್‌ ಎಲೆಗಳಿಂದ ಅಂದರ್‌ ಬಾಹರ್‌ ಎಂದು ಹೇಳಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪಿಟ್‌ ಜೂಜಾಟ ಅಡುತಿದ್ದವರನ್ನು ಪಿಎಸ್‌ಐ ಮತ್ತು ಸಿಬ್ಬಂದಿಗಳು ಪಂಚರೊಂದಿಗೆ ಸುತ್ತುವರಿದು ಹಿಡಿದು 52 ಇಸ್ಪಿಟ್‌ ಎಲೆಗಳು ಮತ್ತು 4900-00 ರೂ ಹಣವನ್ನು ಮತ್ತು  NOKIA ಎಂದು ಬರೆದಿರುವ 6 ಮೊಬೈಲ್‌ಗಳು, RELIANCE ಎಂದು ಬರೆದಿರುವ 1 ಮೊಬೈಲ್‌ನ್ನು ಮತ್ತು ಆರೋಪಿಗಳಾದ ಚಂದ್ರೇಗೌಡ ಹಾಗೂ ಇತರೆ 9 ಜನರನ್ನು ವಶಕ್ಕೆ ಪಡೆದು ಪ್ರಕರಣ  ದಾಖಲಿಸಿರುತ್ತೆ .
ಹುಡುಗ ಕಾಣೆ
ಕೊಪ್ಪ ಪೊಲೀಸ್‌ ಠಾಣೆ ಮೊ.ಸಂ.11/2014 – ಕಲಂ:ಹುಡುಗ ಕಾಣೆ – ದಿನಾಂಕ 02/01/2014 ರಂದು ಪಿರ್ಯಾದಿ ಸುಶಾಪಿಂಟೋ ಇವರು ದೂರು ನೀಡಿದ್ದು ತನ್ನ ಮಗ 17 ವರ್ಷದ ಲೋರೆನ್ಸ್ ಪಿಂಟೋ ಈತನು 10 ನೇ ತರಗತಿ ಓದುತ್ತಿದ್ದು ದಿನಾಂಕ:02-01-2014 ರಂದು ತಾನು ಅಂಗನವಾಡಿ ಕೆಲಸಕ್ಕೆ ಬೆಳಿಗ್ಗೆ 09-30 ಗಂಟೆಗೆ ಹೋಗಿ ಸಂಜೆ 4-00 ಗಂಟೆಗೆ ವಾಪಾಸ್ಸು ಮನೆಗೆ ಬಂದಿದ್ದು ತನ್ನ ಮನೆಯಲ್ಲಿದ್ದ ಮಗ ಲೋರೆನ್ಸ್ ಪಿಂಟೋ ಮನೆಯಿಂದ ಕಾಣೆಯಾಗಿರುತ್ತಾನೆಂದು ಈ ದಿನದವರೆಗೆ ವಾಪಾಸ್ಸು ಮನೆಗೆ ಬಂದಿಲ್ಲವೆಂದು ಇಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ.

Wednesday, January 29, 2014

Daily Crimes Report Dated:28-29/01/2014



ಮೋಟಾರ್ ಸೈಕಲ್ ಕಳ್ಳತನ
ನಗರ  ಪೊಲೀಸ್‌ ಠಾಣೆ ಮೊ.ಸಂ.8/2014 – ಕಲಂ:379 ಐಪಿಸಿ – ದಿನಾಂಕ 15/01/2014 ರಂದು 1515 ಗಂಟೆಯಲ್ಲಿ ಪಿರ್ಯಾದುದಾರರು ಪರಮೇಶ್ವರಪ್ಪ ಇವರು ಆರ್‌ಜಿ ರಸ್ತೆಯಲ್ಲಿ  ಹಿರೋಹೊಂಡ ಸ್ಲ್ಪೆಂಡರ್ ಕೆಎ 18 ಜೆ 1172 ದ್ವಿಚಕ್ರ ವಾಹನದಲ್ಲಿ ಹೋಗಿದ್ದು  ವಾಹನವನ್ನು ಕೆ .ಎಂ.ರಸ್ತೆಯ ಭರಣಿ ವೈನ್ಸ್  ಎದುರು ಭಾಗದಲ್ಲಿ  ನಿಲ್ಲಿಸಿ ಸಂತೆಗೆ ಹೋಗಿ ತರಕಾರಿ  ಖರೀದಿ ಮುಗಿಸಿಕೊಂಡು ಸಂಜೆ ಬಂದಾಗ ಪಿರ್ಯಾದಿಯ ವಾಹನವು ನಿಲ್ಲಿಸಿದ್ದ ಜಾಗದಲ್ಲಿ ಸ್ಥಳದಿಂದ ಕಾಣೆಯಾಗಿತ್ತು.
ಮನೆ ಕಳ್ಳತನ ಪ್ರಕರಣ 
ನಗರ  ಪೊಲೀಸ್‌ ಠಾಣೆ ಮೊ.ಸಂ.9/2014 – ಕಲಂ:454 457 380  ಐಪಿಸಿ – ಪಿರ್ಯಾದುದಾರರು ಶಾಂತರಾಮ ಪಾಯಸ್‌ ಕಾಂಪೌಂಡ್‌ ಕೆಳಭಾಗ ಇವರು ದಿನಾಂಕ 27/01/2014 ರಂದು ಸ್ವಂತ ಊರಾದ ಕುಂದಾಪುರಕ್ಕೆ ತೆರಳಿದ್ದು ದಿನಾಂಕ 28/01/2014 ರಂದು ಸಂಜೆ ಬಂದು ನೋಡಿದಾಗ ನಮ್ಮ ಮನೆಗೆ ಬಾಗಿಲ ಒಳ ಬಾಗದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಒಳಕ್ಕೆ ನುಗ್ಗಿ ಒಂದು ಬೆಳ್ಳಿಯ ಲೋಟವನ್ನು ಒಂದು ಗ್ರಾಂ.ಚಿನ್ನದಿಂದ ಮಾಡಿದ ಎರಡು ಜೊತೆ ಬಳೆ ಹಾಗೂ ಒಂದು ಗ್ರಾಂ ಚಿನ್ನದಿಂದ ಮಾಡಿದ ಒಂದು ಜೊತೆ ಕಿವಿಯ ಜುಮುಕಿಯನ್ನು ಕಳ್ಳತನ ಮಾಡಿರುತ್ತಾರೆ ಹಾಗೆಯೇ.ನಮ್ಮ ದೇವರ ಕೋಣೆಯಲ್ಲಿ ಇಟ್ಟಿದ್ದ ಸುಮಾರು ಮುಕ್ಕಾಲು ಅಡಿ ಎತ್ತರದ ಹುಂಡಿಯಲ್ಲಿ ಹಾಕಿದ್ದ ಸುಮಾರು 40.000/- ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಒಟ್ಟು ಕಳುವಾದ ವಸ್ತುಗಳ ಒಟ್ಟು ಮೌಲ್ಯ 48.000/- ರೂ ಆಗಿರುತ್ತೆ.
ಮನೆ ಕಳ್ಳತನ ಪ್ರಕರಣ 
ಬಸವನಹಳ್ಳಿ  ಪೊಲೀಸ್‌ ಠಾಣೆ ಮೊ.ಸಂ.21/2014 – ಕಲಂ:454 457 380  ಐಪಿಸಿ – ಪಿರ್ಯಾದಿ ಪೆಟ್ರೋಲ್ ಬಂಕಿನ ಒಳಗೆ  ಊಟ ಮಾಡುತ್ತಿದ್ದಾಗ ಕೆಎ.46 ಇ.4165 ಡಿಸ್ಕವರ್ ಮೋಟಾರ್ ಸೈಕಲ್ಲಿನಲ್ಲಿ ಮೂರು ಜನ ಅಪರಿಚಿತರು ಬಂದು ಪೆಟ್ರೋಲ್ ಹಾಕುವಂತೆ ಹೇಳಿ ತಳ್ಳಿದಾಗ ಪಿರ್ಯಾದುದಾರರು ಬಾಗಿಲು ತೆಗೆದಿರುತ್ತಾರೆ.  ಆಗ  ಅವರುಗಳು ಪಿರ್ಯಾದಿ ಮತ್ತು ಅವರೊಂದಿಗೆ ಇದ್ದ ರುದ್ರೇಶ ರವರ ಮೇಲೆ ಕೈಗಳಿಂದ ಹಲ್ಲೆ ನಡೆಸಿ ಟೇಬಲ್ ಮೇಲಿದ್ದ 18000ರೂ ನಗದು ಹಣವನ್ನು ತೆಗೆದುಕೊಂಡಿರುತ್ತಾರೆ. ಹಣವನ್ನು ಪಿರ್ಯಾದಿ ಮತ್ತು ರುದ್ರೇಶ್ ವಾಪಸು ತೆಗೆದುಕೊಂಡಾಗ ಮೂರು ಜನ ಅಪರಿಚಿತರು ಹಣವನ್ನು ಕಿತ್ತುಕೊಂಡು ಬಂಕಿನ ಒಳಗೆ ಇಟ್ಟಿದ್ದ ಡೀಸಲ್  ತುಂಬಿಸಿದ್ದ 35 ಲೀಟರ್ ಕ್ಯಾನನ್ನು ತೆಗೆದುಕೊಂಡು ಹೋಗಿರುತ್ತಾರೆ  ಇತ್ಯಾದಿ
ಮೋಟಾರ್ ಸೈಕಲ್ ಕಳ್ಳತನ
ಮೂಡಿಗೆರೆ ಪೊಲೀಸ್‌ ಠಾಣೆ ಮೊ.ಸಂ. 06/2014 – ಕಲಂ:379 ಐಪಿಸಿ – ಪಿರ್ಯಾದಿ ಸಿಲ್ವನ್‌ ಡಿಸೋಜ ಅತ್ತಿಗೆರೆ ಗ್ರಾಮ ವಾಸಿ ಇವರು ದಿನಾಂಕ 27/01/2014 ರಂದು ಪಿರ್ಯಾದಿ ಗೆಳೆಯ ಮಂಗಳೂರು ತಾಲ್ಲೂಕು ಬಡಗು ಮಿಜಾರ್ ಗ್ರಾಮದ ಕುಮಾರ್ ರವರ ಬಾಬ್ತು ಮೋಟಾರ್ ಸೈಕಲ್ ನಂಬರ್ ಕೆ,ಎ- 19, ಆರ್-6974 ಸಂಖ್ಯೆಯ ಕೇಸರಿ ಪಟ್ಟಿ ಇರುವ ಕಪ್ಪು ಬಣ್ಣದ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕನ್ನು ಅತಿಥಿ ಲಾಡ್ಜ್ ನ ಹೊರಬಾಗದಲ್ಲಿ ಸದರಿ ಬೈಕನ್ನು ನಿಲ್ಲಿಸಿ, ಬೆಳಿಗ್ಗೆ ಎದ್ದು, ನೋಡಲಾಗಿ ಬೈಕ್ ಅಲ್ಲಿ ಇರಲಿಲ್ಲ. ಪತ್ತೆ ಮಾಡಿಕೊಡಲು ಕೋರಿ.
ಜೂಜಾಟ ಪ್ರಕರಣ
ಬೀರೂರು  ಪೊಲೀಸ್‌ ಠಾಣೆ ಮೊ.ಸಂ. 12/2014 – ಕಲಂ:87 ಕೆಪಿ ಆಕ್ಟ್-   ದಿನಾಂಕ 28/01/2014 ರಂದು 1820 ಗಂಟೆಯಲ್ಲಿ ಸಿಪಿಐ ಬೀರೂರು ಇವರು ಕಛೇರಿಯಲ್ಲಿರುವಾಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅಮೃತ್‌ಮಹಲ್‌ ಬಳಿ ಸಿಬ್ಬಂದಿಗಳೊಂದಿಗೆ ಹೋಗಿ ನೋಡಲಾಗಿ 5-6 ಜನರು ವೃತ್ತಕಾರವಾಗಿ ಕುಳಿತುಕೊಂಡು ಅಂದರ್ ಬಾಹರ್ ಜೂಜಾಟ ಆಡುತ್ತಿದ್ದು, ಪೊಲೀಸ್‌ರವರನ್ನು ನೋಡಿ ಓಡಿಹೋಗಲು ಪ್ರಯತ್ನಿಸಿದರವರನ್ನು ಹಿಡಿದು ಅವರು ಆಟಕ್ಕೆ ಉಪಯೋಗಿಸಿದ ಚಾಪೆ  ಅಖಾಡಕ್ಕೆ ಬಳಸಿದ ಹಣ 2870/- ರೂ ಮತ್ತು 52 ಇಸ್ಪೀಟು ಎಲೆಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿಗಳಾದ ಮುದಿಯಪ್ಪ ಹಾಗು ಇತರೆ 5 ಜನರನ್ನು ದಸ್ತಗಿರಿ ಮಾಡಿರುತ್ತೆ
ಅಪಘಾತದಲ್ಲಿ ಸಾವು
ಕುದುರೆಮುಖ  ಪೊಲೀಸ್‌ ಠಾಣೆ ಮೊ.ಸಂ. 03/2014 – ಕಲಂ:279 304(ಎ) ಐಪಿಸಿ ರೆ.ವಿ 134(ಎ)(ಬಿ) ಐಎಂವಿ ಆಕ್ಟ್ - ದಿನಾಂಕ:-29.01.2014 ರಂದು ಬೆಳಿಗ್ಗೆ 07.30 ಗಂಟೆಗೆ  ಡಿ ಎನ್ . ಉಮಾಶಂಕರ್ ತುಮಕೂರು ನಗರ  ಇವರು  ದೂರು ನೀಡಿದ್ದು ಇವರ ತಮ್ಮನಾದ  ಡಿ .ಎನ್. ವೇದಾಂತ  ಬಿನ್ ನಾರಾಯಣಚಾರ್ 19 ವರ್ಷ  2 ನೇ ಬಿ ಇ ವಿಧ್ಯಾರ್ಥಿ  ವಾಸ  ಎಸ್ ಎಸ್ ಪುರಂ ತುಮಕೂರು ನಗರ   ಈತನು ತನ್ನ ಸ್ನೇಹಿತನಾದ  ಕೆ.ಎನ್ ಸಂತೋಷ ಬಿನ್ ಲೇ|| ನರಸಿಯಪ್ಪ  21 ವರ್ಷ ವಾಸ ತುಮಕೂರು ನಗರ ಈತನೊಂದಿಗೆ ಕೆಎ-06 ಇಕೆ-4549 ಅಪಾಚಿ ಆರ್ ಟಿ ಆರ್ 160 ಟಿ ವಿ ಎಸ್ ಬೈಕ್ ನಲ್ಲಿ ಹೊರನಾಡು ಮತ್ತು ಉಡುಪಿ ನೋಡಲೆಂದು ದಿನಾಂಕ:-25.01.2014 ರಂದು ಬಂದು ಹೊರನಾಡಿನಲ್ಲಿ  ದೇವರ ದರ್ಶನ ಮಾಡಿಕೊಂಡು ನಂತರ ಉಡುಪಿಗೆ ಹೋಗಲೆಂದು ದಿನಾಂಕ:-25.01.2014 ರಂದು ಮಧ್ಯಾಹ್ನ 14.00 ಗಂಟೆಯ ಸಮಯದಲ್ಲಿ ಕಳಸ- ಕುದುರೆಮುಖ ರಸ್ತೆಯ ನಲ್ಲೀಬೀಡು ಎಸ್ ತಿರುವಿನಲ್ಲಿ  ಬರುತ್ತಿರುವಾಗ ಬೈಕ್ ಚಾಲನೆ ಮಾಡುತಿದ್ದ  ಕೆ ಎನ್ ಸಂತೋಷನು  ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದಾ ಚಲಾಯಿಸಿದ್ದರ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ  ರಸ್ತೆಗೆ ಬಿದ್ದ ಪರಿಣಾಮ ಬೈಕ್ ನ ಹಿಂಬಂದಿ ಕುಳಿತಿದ್ದ  ಪಿರ್ಯಾದುದಾರರ ತಮ್ಮ ಡಿ.ಎನ್ ವೇದಾಂತನಿಗೆ ಎಡಕಾಲು ಮುರಿದು. ಮೈ ಕೈಗೆ ಪೆಟ್ಟಾಗಿದ್ದು  ತಕ್ಷಣ 108  ಅಂಬ್ಯುಲೆನ್ಸ್ ನಲ್ಲಿ ಮಣಿಪಾಲ್ ಕೆ ಎಂ ಸಿ ಆಸ್ಪತ್ರಗೆ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:-28.01.2014 ರಂದು 17.20 ಗಂಟೆಗೆ ಮೃತಪಟ್ಟಿರುತ್ತಾರೆ  ಈ ಅಪಘಾತದಲ್ಲಿ ಬೈಕ್ ಚಲಾಯಿಸುತಿದ್ದ ಕೆ ಎನ್ ಸಂತೋಷನಿಗೂ ಸಹ ಸಣ್ಣ ಪುಟ್ಟ ಗಾಯಗಳಾಗಿದ್ದು ಸಂತೋಷನು ಬೈಕನ್ನು ಸ್ಥಳದಿಂದ ತೆಗೆದುಕೊಂಡು ಹೋಗಿರುತ್ತಾನೆ